ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಕುಲಾಲ್ ಅಧ್ಯಕ್ಷತೆ
ಬಿದನೂರು:ಸಕಾ೯ರದ ಯಾವುದೆ
ಸೌಲಭ್ಯಗಳು ಜನರಿಗೆ
ತಲುಪುವಲ್ಲಿ ಮತ್ತು ಸಮಪ೯ಕ ಅನುಷ್ಠಾನಗೊಂಡಲ್ಲಿ ಮಾತ್ರ ಯೋಜನೆಗಳು ಸಾಥ೯ಕಗೊಳ್ಳುತ್ತವೆ. ಈ ಹಿನ್ನಲೆಯಲ್ಲಿ ಜನರಿಗೆ ಸೌಲಭ್ಯ
ತಲುಪಿಸುವ ಕಾಳಜಿ
ತೋರಬೇಕಿದೆ ಎಂದು
ಜಿಪಂ ಸದಸ್ಯೆ
ಜ್ಯೋತಿ ಚಂದ್ರಮೌಳಿ
ಹೇಳಿದರು.
ಕೋಡೂರು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಜ್ಯೋತಿ ಚಂದ್ರಮೌಳಿ ಸೈಕಲ್ ವಿತರಿಸಿದರು. |
ಹೊಸನಗರ ತಾಲೂಕಿನ ಕೊಡೂರು ಸಕಾ೯ರಿ
ಪ್ರೌಢಶಾಲೆಯ ಮಕ್ಕಳಿಗೆ ಸೈಕಲ್ ವಿತರಿಸಿದ ಅವರು,
ಯಾರು ಕೂಡ
ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಸಕಾ೯ರ
ಹಲವು ಯೋಜನೆ
ರೂಪಿಸಿದೆ. ಇದನ್ನು
ಸದುಪಯೋಗ ಪಡೆದುಕೊಳ್ಳುವ
ಕೆಲಸ ಜನರಿಂದ
ಆಗಬೇಕು ಎಂದರು.
ಶಾಲಾಭಿವೖದ್ಧಿ ಸಮಿತಿ ಅಧ್ಯಕ್ಷ
ರಮೇಶ ಕುಲಾಲ್
ವಹಿಸಿದ್ದರು.
ತಾಪಂ ಸದಸ್ಯ ಕುನ್ನೂರು
ಮಂಜಪ್ಪ, ಗ್ರಾಪಂ
ಅಧ್ಯಕ್ಷ ಕೖಷ್ಣ
ಬಿ.ಶೆಟ್ಟಿ,
ಸದಸ್ಯರಾದ ಕೊಡೂರು
ಚಂದ್ರಮೌಳಿ, ಪುಟ್ಟಪ್ಪ, ಗುರುಮೂತಿ೯, ಕರಿಗೆರಸು ಜಯಂತ್,
ಲೋಹಿತ್, ಗಿರಿಜಮ್ಮ
ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಪ್ರಾಥಿ೯ಸಿದರು. ಮುಖ್ಯಶಿಕ್ಷಕ ಮಂಜಪ್ಪ
ಸ್ವಾಗತಿಸಿದರು. ಶೇಖರಪ್ಪ ವಂದಿಸಿ, ಲಕ್ಷ್ಮಣ ನಿರೂಪಿಸಿದರು.
.............................
ಇಂದು ಪ್ರತಿಭಟನೆ
ಹೊಸನಗರ: ತಾಲೂಕಿನ ಪಟಗುಪ್ಪಾ
ಸೇತುವೆ ಮತ್ತು
ರಸ್ತೆ ಕಾಮಗಾರಿ
ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಶನಿವಾರ
ಪ್ರತಿಭಟನಾ ಮೆರವಣಿಗೆ
ನಡೆಸಲಾಗುವುದು ಎಂದು ಹೋರಾಟ ಸಮಿತಿ ತಿಳಿಸಿದೆ.
ಪಟಗುಪ್ಪಾ ಸೇತುವೆ ಮಂಜೂರಾಗಿ
ವರ್ಷಗಳೇ ಕಳೆದಿದ್ದರೂ
ಕಾಮಗಾರಿ ಮಾತ್ರ
ಕುಂಠುತ್ತಿದೆ. ಪಟಗುಪ್ಪಾಗೆ ತೆರಳುವ ರಸ್ತೆ ಮಂಜೂರಾಗಿದ್ದರೂ
ಗುತ್ತಿಗೆದಾರರು ಇನ್ನೂ ಕಾಮಗಾರಿ ಆರಂಭಿಸಿಲ್ಲ. ಈ
ಬಗ್ಗೆ ಅಧಿಕಾರಿಗಳು
ಮತ್ತು ಜನಪ್ರತಿನಿಧಿಗಳ
ಕಣ್ಣು ತೆರೆಸಲು
ಕಾಳಿಕಾಪುರದಿಂದ ಪಟ್ಟಣದ ವರೆಗೂ ಪ್ರತಿಭಟನಾ ಮೆರವಣಿಗೆ
ನಡೆಸಲಾಗುವುದು.
ಜೇನಿಗ್ರಾಮ ಪಂಚಾಯ್ತಿಯ ಗ್ರಮಸ್ಥರು
ಮತ್ತು ಪ್ರಮುಖರು
ಈ ಪ್ರತಿಭಟನೆಯಲ್ಲಿ
ಭಾಗವಹಿಸಲಿದ್ದು ಸಕಾ೯ರ ಕೂಡಲೇ ಸ್ಪಂದಿಸದಿದ್ದರೆ ಹೋರಾಟ
ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
good....ravi
ReplyDelete