Saturday, January 18, 2014

ಹೊಸನಗರ ಡೈಮಂಡ್ ಜೆಸಿ ನೂತನ ಪದಾಧಿಕಾರಿಗಳ ಪದಗ್ರಹಣ


ಸಮಾಜ ಪರಿವರ್ತನೆಗೆ ಯುವ ನಾಯಕತ್ವ ಅಗತ್ಯ : ನವೀನ್ ಲಾಯ್ಡ್ ಮಿಸ್ಕತ್
ಹೊಸನಗರ: ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆಯಾಗಲು ಯುವ ನಾಯಕತ್ವ ಅಗತ್ಯ. ಜೆಸಿ ಎಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ನಾಯಕರು ಮತ್ತು ಉದ್ಯಮಿಗಳನ್ನು ತಯಾರು ಮಾಡುತ್ತಿದೆ ಎಂದು ಜೇಸಿ ವಲಯ 14 ಪೂರ್ವ ವಲಯಾಧ್ಯಕ್ಷ ಹಾಗೂ ಗ್ರೀನ್ ಬಯೋಟೆಕ್ ಇಂಡಿಯಾ ಲಿ, ವ್ಯವಸ್ಥಾಪಕ ನಿರ್ದೇಶಕ ನವೀನ್ ಲಾಯ್ಡ್ ಮಿಸ್ಕತ್ ಹೇಳಿದರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಡೈಮಂಡ್ ಜೇಸೀಸ್ ನೂತನ ಅಧ್ಯಕ್ಷ ನಾರಾಯಣ ಎಂ.ಕಾನುಮನೆಯವರಿಗೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ 18ರಿಂದ 40 ವಯೋಮಾನದವರಿಗೆ ವ್ಯಕ್ತಿತ್ವ ವಿಕಸನಕ್ಕಾಗಿಯೇ ಇರುವ ಏಕೈಕ ಅಂತಾರಾಷ್ಟ್ರೀಯ ಸಂಸ್ಥೆ ಜೆಸಿಐ ಆಗಿದೆ. ಸಂಸ್ಥೆ ಮೂಲಕ ಗುರುತಿಸಿಕೊಂಡ ಅನೇಕರು ಜಾಗತಿಕ ನಾಯಕರಾಗಿ ಬೆಳೆದ ಉದಾಹರಣೆಯಿದೆ. ತನ್ನ ಸದಸ್ಯರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡುವುದು ಮಾತ್ರವಲ್ಲದೆ ಅನೇಕ ತರಬೇತುದಾರರನ್ನೂ ಹುಟ್ಟು ಹಾಕುತ್ತಿದೆ. ಇಂದು ಕಾಪರ್ೋರೇಟ್ ವಲಯದಲ್ಲಿ ಜೆಸಿಐ ಮಾನ್ಯತೆ ಪಡೆದ ತರಬೇತುದಾರರಿಗೆ ಉತ್ತಮ ಅವಕಾಶವಿದೆ. ಇದನ್ನು ಸಂಸ್ಥೆಯ ಸದಸ್ಯರು ಉಪಯೋಗಿಸಿಕೊಳ್ಳಬೇಕು ಎಂದರು.
ವಿನಾಯಕ ಅರೆಮನೆ ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷರಾದ ರಾಜೇಶ್ ಕೀಳಂಬಿ, ಕರಿಬಸವರಾಜ ಬಾದಾಮಿ, ಪೂರ್ವ ರಾಷ್ಟ್ರೀಯ ನಿರ್ದೇಶಕ ಎಲ್.ಕೆ.ಮುರಳೀಧರ್, ಸಂತೋಷ್ ಎಚ್.ಆರ್, ಪೂರ್ಣೇಶ್ ತೊಗರೆ, ಗಣಪತಿಭಟ್ ಎಸ್.ಎನ್. ಮತ್ತಿತರರಿದ್ದರು.

ಫೋಟೊ ಮಾಹಿತಿ: ಹೊಸನಗರದಲ್ಲಿ ನಡೆದ ಸಮಾರಂಭದಲ್ಲಿ ನಾರಾಯಣ ಎಂ.ಕಾನುಮನೆ ಡೈಮಂಡ್ ಜೇಸೀಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

No comments:

Post a Comment