Wednesday, May 28, 2014

"ಅರಣ್ಯ ಸಂಪತ್ತು ವೖದ್ಧಿಸಿದರೆ ದೇಶ ಸಮೖದ್ಧಿ" - ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಮತ


ಪರಿಸರ ಜಾಗೖತಿ ಬಗ್ಗೆ ಚಕ್ರವಾಕ ಸುಬ್ರಹ್ಮಣ್ಯ ಉಪನ್ಯಾಸ ನೀಡಿದರು.

ಹೊಸನಗರ:ಅರಣ್ಯ ಸಂಪತ್ತು, ವನ್ಯಜೀವಿಗಳು ಹೇರಳವಾದರೆ ಮಾತ್ರ ನಮ್ಮ ದೇಶ ಸಮೖದ್ಧಿಗೊಳ್ಳುತ್ತದೆ ಮಾತ್ರವಲ್ಲ ಉತ್ತಮ ವಾತಾವರಣದ ಬದುಕು ಸಾಧ್ಯ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.
  ತಾಲೂಕಿನ ಕಿಳಂದೂರು ಗ್ರಾಮ ಅರಣ್ಯ ಸಮಿತಿ ಕಾಯ೯ಕ್ರಮದಲ್ಲಿ ಉಪನ್ಯಾಸ ನೀಡಿ, ಇಂದು ವಾತಾವರಣದಲ್ಲಿ ಅಸಮತೋಲನ ಎದ್ದು ಕಾಣುತ್ತಿದೆ ಇದರ ಪರಿಣಾಮ ಅಕಾಲಿಕ ಮಳೆ, ಉಷ್ಣಾಂಶ ತೀವ್ರತೆ ಕಂಡು ಬರುತ್ತಿದೆ. ಕಾಡಿನ ನಿರಂತರ ನಾಶವೆ ಇದಕ್ಕೆಲ್ಲ ಮೂಲ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗೖತಿ ಅಗತ್ಯ: ಪರಿಸರದ ಮೇಲೆ ಆಗುತ್ತಿರುವ ನಿರಂತರ ದೌಜ೯ನ್ಯದಿಂದಾಗಿ ಬದುಕು ದಿಕ್ಕುಪಾಲಾಗುತ್ತಿದೆ ಬಗ್ಗೆ ಎಚ್ಚರ ಅಗತ್ಯ. ಕಾಡಿನ ನಾಶದಿಂದಾಗಿ ಅಂತಜ೯ಲ ಪಾತಾಳ ಸೇರುತ್ತಿದ್ದು ಕುಡಿಯುವ ನೀರಿನ ಬವಣೆ ವಿಪರೀತವಾಗುತ್ತಿದೆ. ಇವೆಲ್ಲ ನಾವೆ ತಂದುಕೊಂಡ ಆಪತ್ತು ಇನ್ನು ಮೇಲಾದರು ಬಗ್ಗೆ ಜಾಗೖತಿ ಕಾಯ೯ ಮಾಡದಿದ್ದಲ್ಲಿ ನಮ್ಮನ್ನು ಯಾರು ರಕ್ಷಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಉಪವಲಯ ಅರಣ್ಯಾಧಿಕಾರಿ ಮಧುಕರ್ ರಿಂದ ಮಾಹಿತಿ
ಗ್ರಾಮಸ್ತರ ಸಹಭಾಗಿತ್ವ:
ಉಪವಲಯ ಅರಣ್ಯಾಧಿಕಾರಿ ಮಧುಕರ್, ಅರಣ್ಯ ಸಂರಕ್ಷಣೆಗೆ ಸಂರಕ್ಷಣೆಗೆ ಎಷ್ಟೆ ಕಾನೂನು ತಂದರು ಗ್ರಾಮಸ್ಥರ ಸಹಭಾಗಿತ್ವ ಇಲ್ಲದೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ 2004ರಲ್ಲಿ ಗ್ರಾಮ ಅರಣ್ಯ ಸಮಿತಿ ಚಾಲನೆಗೆ ಬಂದಿದ್ದು ಇದರ ಜವಾಬ್ದಾರಿಯನ್ನು ಗ್ರಾಮಸ್ತರು ಅರಿಯಬೇಕಿದೆ.
ಗ್ರಾ.ಅ.ಸಮಿತಿ ಅಧ್ಯಕ್ಷ ಶಂಕ್ರಪ್ಪಗೌಡರ ಮಾತು
ಅರಣ್ಯ ಸಮಿತಿಯಿಂದ ಬೆಳೆಸಲಾದ ನಡುತೋಪಿನಿಂದ ಬರುವ ಆದಾಯದಲ್ಲಿ ಶೇ.50 ರಷ್ಟು ಅರಣ್ಯ ಸಮಿತಿಗೆ ದೊರಕುತ್ತಿದ್ದು, ಇದರಿಂದ ಅರಣ್ಯ ಅಭಿವೖದ್ಧಿ ಮತ್ತು ಗ್ರಾಮದ ಅಭಿವೖದ್ಧಿ ಕಾಯ೯ ಮಾಡಲು ಸಹಕಾರಿಯಾಗಿದೆ. ನಿಟ್ಟಿನಲ್ಲಿ ಗ್ರಾಮಸ್ತರು ಸಮಿತಿಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಪಸಕ್ತ ಕಿಳಂದೂರು ಅರಣ್ಯ ಸಮಿತಿಗೆ ರು.1.5 ಲಕ್ಷ ಹಣ ಬಂದಿದ್ದು ಗ್ರಾಮದ ಅಭಿವೖದ್ಧಿಗೆ ಬಳಸಬಹುದಾಗಿದೆ ಎಂದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ವೈ.ಶಂಕರಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕರಿಮನೆ ಗ್ರಾಪಂ ಉಪಾಧ್ಯಕ್ಷ ಎನ್.ವೈ.ಸುರೇಶ್ ಕಾಯ೯ಕ್ರಮ ಉದ್ಘಾಟಿಸಿದರು.
ಗ್ರಾಪಂ ಸದಸ್ಯ ಹೆಚ್.ಜಿ.ದೇವೇಂದ್ರ, ವನಜಾ ಚನ್ನಪ್ಪಗೌಡ, ಎಂ.ಎನ್.ಕಾಂತಪ್ಪ, ವಿ.ಡಿ.ದಿನೇಶ್, ಗ್ರಾಮದ ಪ್ರಮುಖರು, ಸ್ವಸಹಾಯ ಸಂಘದ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Tuesday, May 27, 2014

ರಾಮಯ್ಯ ಸ್ಮರಣಾರ್ಥ ಆರೋಗ್ಯ ಶಿಬಿರ ಮತ್ತು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆ : ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ



ರಾಮಯ್ಯ ಸ್ಮರಣಾಥ೯ ಉಚಿತ ಹೖದಯ ರೋಗ ತಪಾಸಣಾ ಶಿಬಿರ



ನಗರ ಚೇತನಾ ಬಳಗ ಯುವಕರರಿಂದ ಜನೋಪಯೋಗಿ ಕಾರ್ಯಕ್ರಮ
ಹೊಸನಗರ: ಇತ್ತೀಚೆಗೆ ನಿಧನರಾದ ಎಪಿಎಂಸಿ ಸದಸ್ಯ ರಾಮಯ್ಯ ಸ್ನರಣಾಥ೯ ನಗರ ಚೇತನ ಬಳಗದ ವತಿಯಿಂದ ಉಚಿತವಾಗಿ ಹೖದಯ ಸಂಬಂಧಿ ರೋಗದ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು.
ನಗರ ಸಂಯುಕ್ತ ಸಕಾ೯ರಿ ಆಸ್ಪತ್ರೆ ಆವರಣದಲ್ಲಿ ನಡೆದ ಶಿಬಿರದಲ್ಲಿ ಮಂಗಳೂರು ಇಂಡಿಯನ್ ಆಸ್ಪತ್ರೆಯ ಖ್ಯಾತ ವೈದ್ಯರು ಶಿಭಿರಾಥಿ೯ಗಳ ಹೖದಯ ತಪಾಸಣೆ ಕೈಗೊಂಡರು. ಸುಮಾರು 200ಕ್ಕು ಹೆಚ್ಚು ಶಿಬಿರರಾಥಿ೯ಗಳು ಭಾಗವಹಿಸಿದ್ದು ಅದರಲ್ಲಿ ಮುಂದಿನ ಚಿಕಿತ್ಸೆಗಾಗಿ 30 ಶಿಬಿರಾಥಿ೯ಗಳನ್ನು ಗುರುತಿಸಲಾಯಿತು.
ಮೌನಾಚರಣೆ:
ಇದಕ್ಕು ಮುಂಚಿತವಾಗಿ ಅಗಲಿದ ರಾಮಯ್ಯರಿಗೆ 1 ನಿಮಿಷ ಮೌನಾಚರಣೆ ಮಾಡುವುದರ ಮೂಲಕ ಗೌರವಾಪ೯ಣೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಚೇತನ ಬಳಗದ ನಿದೇ೯ಶಕ ವಿಕ್ರಮ್, ಬಡವರು, ಕೂಲಿಕಾಮಿ೯ಕರ ಆರೋಗ್ಯ ಸಮಸ್ಯೆಗೆ ತುತಾ೯ಗಿ ಸ್ಪಂದಿಸುತ್ತಿದ್ದ ರಾಮಯ್ಯ ಸ್ತರಣಾಥ೯ವಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ಜನೋಪಯೋಗಿ ಇಂತಹ ಕಾಯ೯ಕ್ರಮಗಳ ಸದುಪಯೋಗವನ್ನು ಎಲ್ಲರು ಪಡೆಯಲು ಮುಂದಾಗಬೇಕು ಎಂದರು.
ಬಸ್ ವ್ಯವಸ್ಥೆ:
ಮುಂದಿನ ಚಿಕಿತ್ಸೆಗೆ ಗುರುತಿಸಲಾದ 30 ಜನರಿಗೆ ಮಂಗಳೂರು ಇಂಡಿಯನ್ ಆಸ್ಪತ್ರೆಗೆ ಹೋಗಿಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು ಮೇ.30 ಭಾನುವಾರ ಬೆಳಿಗ್ಗೆ 10 ಗಂಟೆ ನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಶಿಬಿರಾಥಿ೯ಗಳು ಸೌಲಭ್ಯ ಪಡೆದುಕೊಳ್ಳಲು ವಿಕ್ರಮ್ ಮನವಿ ಮಾಡಿದರು.
ಚೇತನಾ ಬಳಗದ ಅನಂತ ಕಂಚುಗಾರ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಇಂಡಿಯನ್ ಆಸ್ಪತ್ರೆಯ ಡಾ.ನಾಗನಾಥ್, ಡಾ.ಸಫ್ರಾಜ್ ನವಾಜ್, ಡಾ.ತೇಜಸ್ವಿ ನಗರ, ಡಾ.ಯಜ್ಞಶ್ರೀ ನಾಗನಾಥ್, ಚೇತನಾ ಬಳಗದ ನಿದೇ೯ಶಕರಾದ ಅಶೋಕದಾಸ್, ಗುರುರಾಜ್ ಶೇಟ್, ವಿಜಯ ಎಸ್. ಪ್ರಸಾದ್ ವಿ ಕಿಣಿ, ಪ್ರದೀಪಗೌಡ ಮತ್ತು ಮಂಗಳೂರು ಇಂಡಿಯನ್ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಬಡರೈತ ಕೂಲಿಕಾಮಿ೯ಕರಿಗೆ ಅಗತ್ಯ ಮಾಹಿತಿ ನೀಡಿ


ನಗರದಲ್ಲಿ ಸಿಂಡಿಕೇಟೆ ಬ್ಯಾಂಕ್ ಗ್ರಾಹಕರ ಸಭೆ
ಹೊಸನಗರ:ರಾಷ್ಟ್ರೀಕೖತ ಬ್ಯಾಂಕಿನ ಸೇವಾಸೌಲಭ್ಯದ ಬಗ್ಗೆ ಮತ್ತು ಬಡರೈತ ಕೂಲಿಕಾಮಿ೯ಕರು ಬ್ಯಾಂಕ್ ನ್ನು ಬಳಸಿಕೊಳ್ಳುವ ಸಲುವಾಗಿ ಅಗತ್ಯ ಮಾಹಿತಿ ನೀಡುವ ಅಗತ್ಯವಿದೆ ಎಂದು ಗ್ರಾಹಕ ದೇವಗಂಗೆ ಶಿವರಾಮ ಮನವಿ ಮಾಡಿದರು.
ತಾಲೂಕಿನ ನಗರದಲ್ಲಿ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಯಾವುದೆ ಬ್ಯಾಂಕ್ ಕಾಳಜಿಯುಕ್ತ ಸೇವೆ ನೀಡಿದರೆ ಇಡೀ ಗ್ರಾಮವನ್ನು ಅಭಿವೖದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು.
ಸಭೆಯಲ್ಲಿ ಶಿವರಾಮ್ ಮಾತನಾಡಿದರು.
ಮುಖ್ಯಅತಿಥಿ ದೇವಗಂಗೆ ಚಂದ್ರಶೇಖರ ಶೆಟ್ಟಿ, ಸಾಕಷ್ಟು ಬಡರೈತರು ಮತ್ತು ಕೂಲಿಕಾಮಿ೯ಕರು ಸಾಲವನ್ನು ಕಟ್ಟಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಒನ್ ಟೈಂ ಸೆಟ್ಲಮೆಂಟ್ ಆಧಾರದಲ್ಲಿ ಅವರಿಗೆ ಸೂಕ್ತ ರಿಯಾಯಿತಿ ನೀಡಿ ಮತ್ತೆ ಬ್ಯಾಂಕ್ ವ್ಯವಹಾರಕ್ಕೆ ಅನುವು ಮಾಡಿಕೊಡಬೇಕು. ಸಮಸ್ಯೆ ಬಗ್ಗೆ ಬ್ಯಾಂಕಿ ಉನ್ನತಾಧಿಕಾರಿಗಳಲ್ಲಿ ತಿಳಿಸಿ ಪರಿಹಾರಕ್ಕೆ ಯತ್ನಿಸುವಂತೆ ಮನವಿ ಮಾಡಿದರು.
ಸಿಂಡಿಕೇಟ್ ಬ್ಯಾಂಕಿನ ಸಹಾಯಕ ಪ್ರಬಂಧಕ ಅಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಗಣಪತಿ, ಗ್ರಾಪಂ ಸದಸ್ಯ ನಾಗೇಶ್, ಶಂಕಣ್ಣ ಚಿಕ್ಕಪೇಟೆ, ರಮಾನಂದ್, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬ್ಯಾಂಕಿನ ಶ್ರೀನಿವಾಸ್ ನಿರೂಪಿಸಿದರು. ಸುಲತಾ ಬ್ಯಾಂಕಿನ ಸೌಲಭ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ವಂದಿಸಿದರು.

Friday, May 23, 2014

ರಾಮಯ್ಯ ಸ್ಮರಣಾಥ೯ ತುತು೯ ಚಿಕಿತ್ಸಾ ಘಟಕ ಸ್ಥಾಪನೆ ;;ಸಚಿವ ಕಿಮ್ಮನೆ ರತ್ನಾಕರರಿಂದ ರು.10 ಲಕ್ಷ ನೆರವು



ನಗರದ ಮಾಣಿಕ್ಯ ರಾಮಯ್ಯರಿಗೆ ಭಾವಪೂರ್ಣ ನುಡಿನಮನ
ನಗರ ರಾಮಯ್ಯರ ಭಾವಚಿತ್ರಕ್ಕೆ ಹೂವು ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹೊಸನಗರ:ಇತ್ತೀಚೆಗೆ ನಿಧನ ಹೊಂದಿದ ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್ (ರಾಮಯ್ಯ) ಸ್ಮರಣಾಥ೯ ನಗರದಲ್ಲಿ ತುತು೯ ಚಿಕಿತ್ಸಾ ಘಟಕ ಸ್ಥಾಪನೆ ಉದ್ದೇಶಿಸಲಾಗಿದ್ದು ಸಚಿವ ಕಿಮ್ಮನೆ ರತ್ನಾಕರ್ ರು.10 ಲಕ್ಷ ನೆರವು ನೀಡಿದ್ದಾರೆ.
ತುರ್ತು ಚಿಕಿತ್ಸಾ ಘಟಕಕ್ಕೆ ರು.10 ಲಕ್ಷ ನೆರವು
ಅವರ ಪರವಾಗಿ ನಗರದಲ್ಲಿ ಶುಕ್ರವಾರ ನಡೆದ ರಾಮಯ್ಯರಿಗೆ ಸಾವ೯ಜನಿಕ ನುಡಿನಮನ ಕಾಯ೯ಕ್ರಮಕ್ಕೆ ಆಗಮಿಸಿದ್ದ ಸಚಿವ ಕಿಮ್ಮನೆ ಸಹೋದರರಾದ ಗೋಪಾಲಕೖಷ್ಣ, ದೇವದಾಸ್ ರಾಮಯ್ಯರ ತಾಯಿ ಜಯಲಕ್ಷ್ಮಿ ಎಸ್.ರಾವ್ ರವರಿಗೆ ನೆರವಿನ ನಗದು ನೀಡಿದರು.
ರಾಮಯ್ಯ ಅಧ್ಯಕ್ಷತೆಯಲ್ಲಿ ಈ ಹಿಂದೆ ಅಸ್ತಿತ್ವಕ್ಕೆ ಬಂದ ಬಿದನೂರು ಸಾಂಸ್ಕೖತಿಕ ವೇದಿಕೆಗೆ ಹಣ ವಗಾ೯ಯಿಸಲಾಗಿದ್ದು ಆ ಮೂಲಕವೆ ಘಟಕದ ಸ್ಥಾಪನೆ ಕಾಯ೯ ನಡೆಯಲಿದೆ.
ನುಡಿನಮನ:
ಇದಕ್ಕು ಮುನ್ನ ಗುಜರಿಪೇಟೆ ಕಲಾಭವನದಲ್ಲಿ ನಡೆದ ನುಡಿನಮನ ಕಾಯ೯ಕ್ರಮದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್ ರಾಮಯ್ಯ ಭಾವಚಿತ್ರಕ್ಕೆ ಹೂವು ಹಾಕುವುದರ ಮೂಲಕ ಭಾವಪೂಣ೯ ಶ್ರದ್ಧಾಂಜಲಿ ಸಲ್ಲಿಸಲಾಯಿತು ಬಳಿಕ 2 ನಿಮಿಷಗಳ ಮೌನ ಆಚರಸುವುದರೊಂದಿಗೆ ರಾಮಯ್ಯ ಆತ್ಮಕ್ಕೆ ಶಾಂತಿ ಕೋರಲಾಯಿತು.
ನಂತರ ಮಾತನಾಡಿದ ಸ್ವಾಮಿರಾವ್, ಊರಿನ ಬಗ್ಗೆ ಕಳಕಳಿ ಹೊಂದಿದ್ದ ರಾಮಯ್ಯ ನಗರದ ಆಸ್ತಿಯಾಗಿದ್ದರು. ಕೂಲಿಕಾಮಿ೯ಕರು, ಬಡರೈತರು ಮತ್ತು ದುಬ೯ಲವಗ೯ದವರ ಪಾಲಿಗೆ ಆಪತ್ಬಾಂಧವರಾಗಿದ್ದ ಅವರು ಜನರ ಎಲ್ಲಾ ಸಂಕಷ್ಟಗಳಿಗು ಸ್ಪಂದಿಸುತ್ತಿದ್ದರು ಎಂದರು. ರಾಮಯ್ಯ ಕುಟುಂಬವೇ ಬಹಳ ಹಿಂದಿನಿಂದ ಜನರ ಏಳಿಗೆಯ ಬಗ್ಗೆ ಚಿಂತಿಸುತ್ತ ಬಂದಿದ್ದು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿತ್ತು. ಚಿಕ್ಕವಯಸ್ಸಿನಲ್ಲೆ ರಾಮಯ್ಯ ನಿಧನರಾಗಿರುವುದು ನಗರ ಹೋಬಳಿಯ ಪಾಲಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಸತೀಶಗೌಡ, ರಾಮಯ್ಯ ಯಾವುದೆ ಪಕ್ಷದಲ್ಲಿದ್ದರೂ ಎಲ್ಲ ಪಕ್ಷಗಳಲ್ಲು ಅವರ ಅಭಿಮಾನಿಗಳಿದ್ದರು. ಸಹಕಾರ ಕೋರಿ ಬಂದವರ ಪಕ್ಷ ಯಾವುದು ಯಾವ ಜಾತಿ ಎಂದು ನೋಡದ ಅವರು ಎಲ್ಲ ರೀತಿ ಸಹಕಾರ ನೀಡುತ್ತಿದ್ದುದು ಅವರ ದೊಡ್ಡಗುಣವಾಗಿತ್ತು ಎಂದರು.
ರಾಮಯ್ಯ ಸಹೋದರ ಕೖಷ್ಣ ಕಾಮತ್, ತಮ್ಮ ರಾಮಿ ಜನರ ಬಗ್ಗೆ ಊರಿನ ಬಗ್ಗೆ ಅತೀವ ಕಾಳಜಿ ಹೊಂದಿದ್ದು ಅವನ ಆಶಯ ಈಡೇರಿಸುವ ನಿಟ್ಟಿನಲ್ಲಿ ಕಾಯೋ೯ನ್ಮುಖನಾಗಲಿದ್ದು ಎಲ್ಲರ ಸಹಕಾರ ಕೋರಿದರು.
ಮುಸ್ಲೀಂ ಧಮ೯ಗುರು ಶಾಹುಲ್ ಹಮೀದ್, ತೀಥ೯ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಹೊಸನಗರದ ಅಧ್ಯಕ್ಷ ಪಟೇಲ ಗರುಡಪ್ಪಗೌಡ, ಎಪಿಎಂಸಿ ಅಧ್ಯಕ್ಷ ಅನಂತರಾವ್ ಗುಬ್ಬಿಗ, ಆಪ್ಕೋಸ್ ಸದಸ್ಯ ಕಲ್ಯಾಣಪ್ಪಗೌಡ, ನಗರ ಘಟಕದ ಅಧ್ಯಕ್ಷ ದೇವಗಂಗೆ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ಪ್ರಕಾಶ್ ರಾವ್, ಚಂದ್ರಶೇಖರ ಉಡುಪ, ಪ್ರಮುಖರಾದ ಅಮ್ರಪಾಲಿ ಸುರೇಶ್, ಕೆಳಕೆರೆ ದಿವಾಕರ್, ಸಂದೀಪ್, ನವೀನ್, ರಾಮಯ್ಯ ತಾಯಿ ಜಯಲಕ್ಷ್ಮಿ ಎಸ್ ರಾವ್, ಸಹೋದರ ಅಜಯ ಕಾಮತ್, ಪತ್ನಿ ರಾಧಿಕಾ ರಾಮಯ್ಯ, ವಿವಿಧ ಸಂಘಟನೆಗಳ ಪ್ರತಿನಿಧಿಗಳು ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ಯಡೂರು ರಾಜಾರಾಂ ಸ್ವಾಗತಿಸಿದರು. ಸಿ.ವಿ.ಪಾಂಡುರಂಗರಾವ್ ನಿರೂಪಿಸಿದರು. ಗೋಪಾಲಶೆಟ್ಟಿ ವಂದಿಸಿದರು.

ಫೋಟೋ23khos1
23khos2 ರಾಮಯ್ಯ ಸ್ತರಣಾಥ೯ ತುತು೯ ಚಿಕಿತ್ಸಾ ಘಟಕ ಸ್ಥಾಪನೆಗೆ ಸಚಿವ ಕಿಮ್ಮನೆ ನೀಡಿದ ರು.10 ಲಕ್ಷ ನೆರವನ್ನು ಅವರ ಸಹೋದರರು ಜಯಲಕ್ಷ್ಮಿ ರಾವ್ ಗೆ ನೀಡಿದರು.

Saturday, May 17, 2014

ಅಗಲಿದ ನಮ್ಮೂರ ಚೇತನ ಸಿ.ರಾಮಚಂದ್ರರಾವ್ ರವರಿಗೆ 'ಸಾರ್ವಜನಿಕ ನುಡಿ ನಮನ'


ಬಿದನೂರು: 2014 ಮೇ 11ನೇ ಭಾನುವಾರ ನಮ್ಮೂರ ಪಾಲಿಗೆ ದುರಂತ ದಿನ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಬಡವ ಬಲ್ಲಿದ, ದೊಡ್ಡವರು ಸಣ್ಣವರು, ಅಷ್ಟೆ ಏಕೆ ಜಾತಿ ಮತ ತಾರತಮ್ಯವಿಲ್ಲದೆ ಸಹಾಯ ಹಸ್ತ ಚಾಚಿ ಬಂದವರಿಗೆ ನೈತಿಕ ಶಕ್ತಿ ಜೊತೆ ಆರ್ಥಿಕ ಶಕ್ತಿ ನೀಡಿ ಅವರ ಕಣ್ಣೀರು ಒರೆಸುತ್ತಿದ್ದ ಮಹಾಚೇತನ ಅಂತ್ಯ ಕಂಡ ದಿನ ಅದು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರೊಂದಿಗೆ ರಾಮಯ್ಯ
 ಎರಡು ವರ್ಷದ ಹಿಂದೆ ಬೀಕರ ಅತಿವೃಷ್ಠಿಗೆ ತುತ್ತಾದಗಲೂ ಜನ ಇಷ್ಟೊಂದು ಬೇಸರಗೊಂಡಿರಲಿಲ್ಲ. ಕಣ್ಣೀರು ಹರಿಸಿರಲಿಲ್ಲ. ಆದರೆ ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್, ಎಲ್ಲರ ಪ್ರೀತಿಯ ರಾಮಯ್ಯ ಇನ್ನಿಲ್ಲ ಎಂಬ ಕೆಟ್ಟ ಸುದ್ದಿ ಬರಸಿಡಿಲಿನಂತೆ ಎರಗುತ್ತಿದ್ದಂತೆ ನಿಂತಲ್ಲೆ ಆತ್ಮಸ್ಥೈರ್ಯ ಕುಸಿದು ಬಿದ್ದ ಜನರಿಗೆ ಲೆಕ್ಕವಿಲ್ಲ. ನಗರದ ಆಶಾಗೋಪುರವೇ ಕಳಚಿತು ಎಂದು ಉದ್ಘರಿಸಿ ಆತಂಕದ ಕಂದಕಕ್ಕೆ ಬಿದ್ದದ್ದು ಅದೆಷ್ಟೋ ಜನ.
ಹಿರಿಯ ಸಹೋದರ ಕೃಷ್ಣ ಕಾಮತ್ ಜೊತೆ
ಯಾರದರೂ ಸತ್ತರೆ ಅಳುವುದಕ್ಕೂ ಮನೆಯಲ್ಲಿ ಜನವಿಲ್ಲ ಎಂಬಷ್ಟು ಯಾಂತ್ರಿಕ ಬದುಕಿಗೆ ಒಗ್ಗಿಕೊಂಡ ಇಂತಹ ಸಂದರ್ಭದಲ್ಲಿ ಸಣ್ಣಮಕ್ಕಳಿಂದ ಹಿಡಿದು ವಯೋವೃದ್ಧರ ವರಗೆ, ಎಲ್ಲಾ ವರ್ಗದ ಜನತೆ ರಾಮಯ್ಯರ ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಬಂದು ಕಣ್ಣೀರಿಡುತ್ತಿದ್ದ ದೃಶ್ಯ ರಾಮಯ್ಯ ವ್ಯಕ್ತಿತ್ವ ಏನು ನಮ್ಮೂರಿಗೆ ಎಷ್ಟು ಅಗತ್ಯವಾಗಿದ್ದರು ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು.
ಎಪಿಎಂಸಿ ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ, ಬಿದನೂರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ, ಮಾರಿಕಾಂಬ ದೇವಸ್ಥಾನ ಸಮಿತಿಯ ಕೋಶಾಧ್ಯಕ್ಷರಾಗಿ ಮತ್ತು ಹಲವು ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದ ಅವರಿಗೆ ತಮ್ಮ ಬದ್ಧತೆ ಎಷ್ಟಿತ್ತು ಎಂದರೆ ಆಯಾಯ ಸಂಸ್ಥೆಗಳ ಬೆಳವಣಿಗೆ ಮತ್ತು ಕಾರ್ಯವೈಖರಿಯೇ ಸಾಕ್ಷಿ. ಖ್ಯಾತ ಯಕ್ಷಗಾನ ಕಲಾವಿದ ನಗರ ಜಗನ್ನಾಥ ಶೆಟ್ಟಿಯವರ ಸಂಸ್ಮರಣೆಯಾಗಿ ಆಂಬುಲೆನ್ಸ್ ತರಬೇಕು ಎಂಬ ಅವರ ಆಶಯ ಇಂದು ಈಡೇರುವ ಹಂತದಲ್ಲಿದೆ. ಆದರೆ ಈ ಹೊತ್ತಿನಲ್ಲಿ ಅವರೇ ನಮ್ಮೊಂದಿಗಿಲ್ಲ ಎಂಬ ಕೊರತೆ ನಮ್ಮನ್ನು ಕಾಡುತ್ತಲೇ ಇದೆ.
ಕಾಗೋಡು ತಿಮ್ಮಪ್ಪ ಜೊತೆ
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಇದನ್ನು ಬಳಸಿಕೊಂಡು ತಮ್ಮದೇ ಕನಸಿನ ನಗರ ನಿರ್ಮಾಣದ ಆಶಯ ಹೊಂದಿದ್ದರು ಮಾತ್ರವಲ್ಲ ಹಂತಹಂತವಾಗಿ ಚಾಲನೆ ನೀಡಿದ್ದರು.
ಮಾಸ್ತಿಕಟ್ಟೆ ಟೀಂನೊಂದಿಗೆ ಬೆಂಗಳೂರು ಶಕ್ತಿಭವನದಲ್ಲಿ
ಇನ್ನು ಆರೋಗ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಯಾವುದೇ ರೀತಿಯ ಸಹಾಯ ಕೇಳಿ ಬಂದವರಿಗೆ ಆಸರೆಯಾಗಿ ನಿಂತವರು ರಾಮಯ್ಯ. ಎಲ್ಲಾ ಕ್ಷೇತ್ರಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ಯಾವುದೇ ಸಮಸ್ಯೆಗೂ ಪರಿಹಾರದ ದಾರಿ ಹುಡುಕುವಲ್ಲಿ ಯಶಸ್ವಿಯಾಗಿದ್ದ ಅವರು ಬಹುತೇಕರ ಪಾಲಿಗೆ ಆಪತ್ಪಾಂಧವ ಎನಿಸಿದ್ದರು.
ಉತ್ತಮರ ಒಡನಾಟ, ಅಧಿಕಾರ ಯಾವುದೇ ಇದ್ದರೂ ಸ್ವಂತಕ್ಕಾಗಿ ಯಾವತ್ತು ಬಳಸಿಕೊಳ್ಳದ ರಾಮಯ್ಯ  ಜನತೆಯ ಹಿತಚಿಂತನೆಯಲ್ಲೆ ತಮ್ಮನ್ನು ಸಮರ್ಪಿಸಿಕೊಂಡಿದ್ದು ಮಾತ್ರ ಸುಳ್ಳಲ್ಲ. ಹಾಗಾಗಿಯೇ ಇವರು ಯಾವ ಪಕ್ಷದಲ್ಲಿದ್ದರೂ ಎಲ್ಲರ ಪ್ರೀತಿ ಗೌರವ ಗಳಸಿದ್ದರು.
ಒಟ್ಟಿನಲ್ಲಿ ಇತಿಹಾಸದ ಪುಟದಲ್ಲಿ ಮತ್ತು ಜನತಂತ್ರ ವ್ಯವಸ್ಥೆಯಲ್ಲಿ ತ್ಯಾಗಕ್ಕಾಗಿ ಎಲ್ಲವನ್ನು ಕಳೆದುಕೊಂಡ ನಗರ ಹೋಬಳಿಯ ಪುನರುಜ್ಜೀವನದ ಆಶಯ ಹೊಂದಿದ್ದವರ ಪಾಲಿಗೆ ರಾಮಯ್ಯ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿದ್ದರು.
ನಗರದ ಸುವರ್ಣ ಸಂಭ್ರಮದಲ್ಲಿ
ನಮ್ಮೂರಿಗಾಗಿ ಮತ್ತು ನಮ್ಮವರಿಗಾಗಿ ತನ್ನದೆ ಚಿಂತನೆ ಹರಿಸಿ, ಸಹಾಯ ನೀಡಿ, ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದ ರಾಮಯ್ಯ ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ರಾಮಯ್ಯ ದೈಹಿಕವಾಗಿ ನಮ್ಮ ಜೊತೆ ಇರದಿರಬಹುದು ಆದರೆ ಅವರ ಸೇವೆ, ಸಹಕಾರ, ಸಹಾಯ, ಸಾಮ್ಯತೆ ಎಲ್ಲವೂ ನಮ್ಮ ಮನೆಮನದಲ್ಲಿ ಗಟ್ಟಿಯಾಗಿದೆ. ಜನರಗಾಗಿ ಮಿಡಿಯುತ್ತಿದ್ದ ರಾಮಯ್ಯನವರ ಹೆಸರನ್ನು ಶಾಶ್ವತವಾಗಿಸುವ ಕೆಲಸವಾಗಬೇಕಿದೆ ಆದರೆ ಅದಕ್ಕೂ ಮುನ್ನ ಅಗಲಿದ ಮಹಾಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕಾಗಿದೆ.
ಅಮ್ಮ ಜಯಲಕ್ಷ್ಮಿರಾವ್, ಅಣ್ಣ ಅಜಯ್ ಪತ್ನಿ ರಾಧಿಕಾ ಜೊತೆ
ದಿನಾಂಕ ಮೇ.23 2014ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಗುಜರಿಪೇಟೆ ಕಲಾಭವನದಲ್ಲಿ ಅಗಲಿದ ಚೇತನ ಸಿ.ರಾಮಚಂದ್ರರಾವ್ ನಮ್ಮ ರಾಮಯ್ಯರಿಗೆ ಸಾರ್ವಜನಿಕವಾಗಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿರಲಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ನಗರ ಹೋಬಳಿಯ ಗ್ರಾಮಸ್ತರು ಕೋರಿದ್ದಾರೆ.
ಎಲ್ಲರೂ... ಬನ್ನಿ
ಅವರ ಸೇವೆಯನ್ನು ನೆನೆಯೋಣ
ಅವರಿಗೆ ಭಾವಪೂರ್ಣ ನಮನ ಸಲ್ಲಿಸೋಣ
ಆ ಮೂಲಕ ಅವರ ಕುಟುಂಬಕ್ಕೆ ಮತ್ತು ನಮ್ಮೆಲ್ಲರಿಗೂ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲು ದೇವರಲ್ಲಿ ಪಾರ್ಥಿಸೋಣ.