ಮೂಲಭೂತ ಸೌಕಯ೯ ವಂಚಿತ
ನಕ್ಸಲ್ ಪೀಡಿತ
ಪ್ರದೇಶ ವ್ಯಾಪ್ತಿಯ
ನಗರ ಪೊಲೀಸ್
ಠಾಣೆ
ಹದಗೆಟ್ಟ ಸಂಪಕ೯ ರಸ್ತೆ|
ನೀರಿಲ್ಲ..ವಸತಿ
ಗೖಹ ಕೂಡ
ಇಲ್ಲ
ಪೊಲೀಸ್ ಠಾಣೆಗೂ ಭದ್ರತಾ
ಕಾಂಪೌಂಡ್ ಇಲ್ಲ
ರವಿ ಬಿದನೂರು
ಹೊಸನಗರ:ನಕ್ಸಲ್ ಪ್ರದೇಶಾಭಿವದ್ಧಿ
ಹೆಸರಿನಲ್ಲಿ ನಗರಕ್ಕೆ ಪೊಲೀಸ್ ಠಾಣೆ ಲಭ್ಯವಾಗಿ
ಹಲವು ವಷ೯
ಕಳೆದು ಕಾಯ೯ನಿವ೯ಹಿಸುತ್ತಿದ್ದರು
ಕೂಡ ಠಾಣೆ
ಮಾತ್ರ ಮೂಲಭೂತ
ಸೌಕಯ೯ದಿಂದ ವಂಚಿತವಾಗಿ
ಸಿಬ್ಬಂದಿಗಳು ಮಾತ್ರವಲ್ಲ ನಾಗರೀಕರು ಪರದಾಡು ಪರಿಸ್ಥಿತಿ
ನಿಮಾ೯ಣವಾಗಿದೆ.
ತಾಲೂಕಿನ ನಗರ -ಚಿಕ್ಕಪೇಟೆ
ಗುಡ್ಡದ ಮೇಲಿರುವ
ಪೊಲೀಸ್ ಠಾಣೆಯ
ಸ್ಥಿತಿ ಇದು.
ಕೊರತೆಯ ಸರಮಾಲೆ
ಹೊದ್ದು ಮಲಗಿರುವ
ಇಲ್ಲಿ ಕೆಲಸ
ಮಾಡುವುದು ದೊಡ್ಡ
ಸಾಹಸ ಎಂಬಂತಾಗಿದೆ.
ಹದಗೆಟ್ಟ ಸಂಪಕ೯ ರಸ್ತೆ:
ಚಿಕ್ಕಪೇಟೆಯಿಂದ ಗಣಪತಿ ದೇವಸ್ಥಾನದ
ಮಾಗ೯ವಾಗಿ ಠಾಣೆ
ತಲುಪಬೇಕು.
ದೇವಸ್ಥಾನವರೆಗೆ
ರಸ್ತೆ ಕಿರಿದಾಗಿದ್ದರು
ಕೂಡ ಡಾಂಬರು
ಕಂಡಿದ್ದು ಪರವಾಗಿಲ್ಲ.
ಆದರೆ ಯಾವುದೇ
ದೊಡ್ಡ ವಾಹನ
ಸಂಪಕ೯ ಸಾಧಿಸಲು
ಸಾಧ್ಯವಿಲ್ಲ.
ದೇವಸ್ಥಾನದಿಂದ ಗುಡ್ಡದ ಮೇಲ್ಭಾಗದ ಠಾಣೆವರೆಗಿನ
ಸುಮಾರು 370
ಮೀ ರಸ್ತೆ ಸಂಪೂಣ೯ ಜಖಂ
ಆಗಿದೆ.
ಮಾತ್ರವಲ್ಲ
ಜೆಲ್ಲಿ ಹಾಕಿ
ವಷ೯ಗಳೇ ಕಳೆದಿದ್ದು
ಇಂದಿಗೂ ಡಾಂಬರು
ಕಂಡಿಲ್ಲ.
ಜೆಲ್ಲಿಗಳು
ಮೇಲೆದ್ದು ರಸ್ತೆಯಲ್ಲಿ
ಓಡಾಡದ ಪರಿಸ್ಥಿತಿ
ನಿಮಾ೯ಣವಾಗಿದೆ.
ಪೋಲೀಸ್ ಸಿಬ್ಬಂದಿಗಳೇ ಬೈಕ್,
ಜೀಪ್್ನಲ್ಲಿ ಗುಡ್ಡದ ಮೇಲೆ ಹತ್ತಲು ಹರಸಾಹಸ
ಪಡುತ್ತಿದ್ದು ಠಾಣೆಗೆ ಬರುವ ಜನರ ಪಾಡು
ಹೇಳತೀರದಾಗಿದೆ. ಅದರಲ್ಲೂ ಈಗ ಸುರಿಯುತ್ತಿರುವ ಮಳೆಗೆ
ಈ ಠಾಣೆಗೆ
ಹೋಗುವ ಸಹವಾಸವೇ
ಬೇಡಪ್ಪ ಎನ್ನುವಂತಾಗಿದೆ.
ನೀರಿಲ್ಲ:
ಠಾಣೆ ಬಂದಾಗಲಿಂದ ನೀರಿನ
ವ್ಯವಸ್ಥೆ ಕಲ್ಪಿಸಲು
ಇದುವರೆಗೂ ಸಾಧ್ಯವಾಗಿಲ್ಲ.
ಮಳೆಗಾಲದಲ್ಲಿ ಪವಾ೯ಗಿಲ್ಲ ಆದರೂ ಕುಡಿಯಲು ನೀರಿಗೆ
ಸಂಕಷ್ಟವಿದೆ. ಇನ್ನು ಬೇಸಿಗೆಯಲ್ಲಂತೂ ನೀರು ಬೇಕೆಂದರೆ
ಪೊಲೀಸ್ ಸಿಬ್ಬಂದಿಗಳೇ
ಗುಡ್ಡದ ಕೆಳಭಾಗದಲ್ಲಿರುವ
ಬಾವಿವೊಂದರಿಂದ ಇಲ್ಲ ಹೊಳೆಯ ನೀರನ್ನು ತಂಡು
ಠಾಣೆಗೆ ಬಳಸಬೇಕಾದ
ಅನಿವಾಯ೯ತೆ ಇದೆ.
ಚಿಕ್ಕಪೇಟೆ ಭಾಗಕ್ಕೆ
ಕುಡಿಯುವ ನೀರು
ಸರಬರಾಜು ಮಾಡಲು
ಜಿಪಂ ವತಿಯಿಂದ
ಕಾಮಗಾರಿ ಕೈಗೆತ್ತಿಕೊಂಡು
ವಷ೯ ಎರಡಾದರು
ಇನ್ನು ಕಾಮಗಾರಿ
ಮುಗಿದಿಲ್ಲ. ಗುತ್ತಿಗೆದಾರ ನಾಪತ್ತೆಯಾಗಿದ್ದು
ಮುಂದೇನು ಎನ್ನುವ
ಪರಿಸ್ಥಿತಿ ಇದೆ.
ಠಾಣೆ ಎದುರುಗಡೆ
ದೊಡ್ಡದಾಗಿ ನೀರಿನ
ಟ್ಯಾಂಕ್ ನಿಮಾ೯ಣವಾಗಿದೆ
ಬಿಟ್ಟರೆ ನೀರು
ಮಾತ್ರ ಇಂದಿಗೂ
ಬಂದಿಲ್ಲ. ಈ
ಬಗ್ಗೆ ಜನಪ್ರತಿನಿಧಿಗಳು,
ಅಧಿಕಾರಿಗಳು ತಲೆಕೆಡಿಸಿಕೊಳ್ಳದಿರುವುದು ಸಿಬ್ಬಂದಿಗಳಿಗೆ
ಬಿಸಿತುಪ್ಪವಾಗಿದೆ.
ವಸತಿಗೖಹ ಇಲ್ಲ:
ಸುಮಾರು 30 ಸಿಬ್ಬಂದಿಗಳ ಅವಶ್ಯಕತೆ
ಇರುವ ನಗರ
ಪೊಲೀಸ್ ಠಾಣೆಗೆ
ಸಂಬಂಧಿಸಿದಂತೆ ವಸತಿ ಗೖಹ ನಿಮಾ೯ಣ ಇಂದಿಗೂ
ಸಾಧ್ಯವಾಗಿಲ್ಲ. ಠಾಣಾ ಪ್ರದೇಶದಲ್ಲಿ ಬಾಡಿಗೆ ಮನೆಗಳ
ಅಲಭ್ಯತೆ ಕಾರಣ
ಸಿಬ್ಬಂದಿಗಳು ದೂರದ ಹೊಸನಗರ, ಸಾಗರ, ತೀಥ೯ಹಳ್ಳಿ,
ಶಿವಮೊಗ್ಗದಲ್ಲಿ ಮನೆ ಮಾಡಿ ಅಲ್ಲಿಂದ ಓಡಾಡಬೇಕಾದ
ಸಂದಿಗ್ಧಕ್ಕೆ ಸಿಲುಕಿದ್ದಾರೆ. ವಸತಿ ಗೖಹದ ಬಗ್ಗೆ
ಇನ್ನೇನು ಬರುತ್ತದೆ,
ಮಂಜೂರಾಗಿದೆ ಹೀಗೆ ಭರವಸೆ ಮಾತ್ರ ಪ್ರತಿವಷ೯
ಕೇಳಿ ಬರುತ್ತಲೇ
ಇದೆ.
ನಕ್ಸಲ್ ಪ್ರದೇಶ:
ನಕ್ಸಲ್ ಪ್ರದೇಶದ ವ್ಯಾಪ್ತಿಯ
ಭದ್ರತೆಗಾಗಿ ಹೋಬಳಿ ಕೇಂದ್ರ ನಗರದಲ್ಲಿ ನಿಮಾ೯ಣ
ಕಂಡ ಪೊಲೀಸ್
ಠಾಣೆ ದುಸ್ಥಿತಿಯೇ
ಹೀಗಿದೆ. ಅಲ್ಲದೆ
ದೂರದ ಸುಳುಗೋಡು,
ಯಡೂರು, ಉಳ್ತಿಗಾ,
ನಿಟ್ಟೂರು, ಕೆ.ಬಿ.ಸಕ೯ಲ್
ಸೇರಿದಂತೆ ನೂರಾರು
ಗ್ರಾಮಗಳು ಇದೇ
ಠಾಣೆ ವ್ಯಾಪ್ತಿಗೆ
ಬರಲಿದ್ದು, ಠಾಣೆಯ
ಅವ್ಯವಸ್ಥೆಗೆ ನಲುಗಿ ಹೋಗುವಂತಾಗಿದೆ.
ಜನಪ್ರತಿನಿಧಿಗಳು, ಮೇಲ್ಮಟ್ಟದ ಪೊಲೀಸ್
ಅಧಿಕಾರಿಗಳು ಅವ್ಯವಸ್ಥೆ ಬಗ್ಗೆ ಗಮನಿಸಿ ಸೂಕ್ತ
ಸೌಲಭ್ಯ ಒದಗಿಸುವಂತೆ
ಸಾವ೯ಜನಿಕರು ಆಗ್ರಹಿಸಿದ್ದಾರೆ.
(ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ)