Sunday, January 19, 2014

ನಾಳೆಯಿಂದ ಬಿದನೂರು-ನಗರ ಮಾರಿಕಾಂಬ ದೇವಿ ಜಾತ್ರೆ


ಪಿಎಸ್ಐ ಸತೀಶ್ ನೇತೃತ್ವದಲ್ಲಿ ಶಾಂತಿಸಭೆ
ಹೊಸನಗರ:.21ರಿಂದ 5 ದಿನಗಳ ಕಾಲ ತಾಲೂಕಿನ ಬಿದನೂರು-ನಗರದ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ನಡೆಯಲಿದ್ದು ಸಕಲ ಸಿದ್ದತೆಗಳು ನಡೆದಿವೆ.
ಹಲವು ವಷ೯ಗಳ ಇತಿಹಾಸವಿರುದ ಇಲ್ಲಿಯ ಮಾರಿಜಾತ್ರೆಗೆ ನಗರ ಹೋಬಳಿಯ ಮೂಲೆಮೂಲೆಯಿಂದ ಭಕ್ತರು ಆಗಮಿಸಿ ಹರಕೆ ಒಪ್ಪಿಸಿ ಆರಾಧನೆಗೈಯುವ ಪದ್ದತಿ ಇದೆ ಮಾತ್ರವಲ್ಲ ಜಾತ್ರಾ ಸಂದಭ೯ದಲ್ಲಿ ದೂರದೂರಿನಲ್ಲಿರುವ ತಮ್ಮ ಬಂಧುಗಳನ್ನು ಬರಮಾಡಿಕೊಂಡು ಸಂಭ್ರಮದ ಆಚರಿಸುವುದು ಇಲ್ಲಿಯ ರೂಢಿಯಾಗಿದೆ.
ಶಾಂತಿಸಭೆ:
ಮಾರಿಜಾತ್ರೆ ಸುಸೂತ್ರವಾಗಿ ನಡೆಯಬೇಕು ಮತ್ತು ಭದ್ರತೆಯ ಹಿನ್ನಲೆಯಲ್ಲಿ ನಗರ ಪೊಲೀಸ್ ಠಾಣೆ ಪಿಎಸ್ಐ ಹೆಚ್.ಎಸ್.ಸತೀಶ ನೇತೃತ್ವದಲ್ಲಿ ಗುಜರಿಪೇಟೆ ಸಭಾಂಗಣದಲ್ಲಿ ಶಾಂತಿಸಭೆ ನಡೆಸಲಾಯಿತು. ಸಂದಭ೯ದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಉಡುಪ ಜಾತ್ರೆಯ ಹಿನ್ನಲೆ ಮತ್ತು ಬಾರಿಯ ಸಿದ್ದತೆ ಬಗ್ಗೆ ಮಾಹಿತಿ ನೀಡಿ ಸವ೯ ಸಹಕಾರ ನೀಡುವಂತೆ ಸಭೆಯಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಪಿಎಸ್ಐ ಸತೀಶ್, ಜಾತ್ರೆಯ 5 ದಿನಗಳಲ್ಲಿ ಸಾವಿರಾರು ಜನರು ಭಾಗವಹಿಸುವ ಹಿನ್ನಲೆಯಲ್ಲಿ ಇಲಾಖೆಯಿಂದ ಸಕಲ ಭದ್ರತೆ ನೀಡಲಾಗುವುದು ಮತ್ತು ಯಾವುದೆ ಅಹಿತಕರ ಘಟನೆ ನಡೆಯದಂತೆ ಜಾತ್ರಾ ಸಮಿತಿ ಕೂಡ ಗಮನ ಹರಿಸಬೇಕು. ತುತು೯ ಸಂದಭ೯ದಲ್ಲಿ ಇಲಾಖೆಗೆ ಕೂಡಲೆ ಮಾಹಿತಿ ನೀಡಿ ಎಂದರು.
ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್, ಪ್ರಮುಖರಾದ ದೇವಗಂಗೆ ಚಂದ್ರಶೇಖರಶೆಟ್ಟಿ, ಎಸ್.ಪಕೀರಪ್ಪ, ಚಿಕ್ಕಪೇಟೆ ವಿಠಲರಾವ್, ಹಾಜಿಸಾಬ್, ಕರುಣಾಕರಶೆಟ್ಟಿ, ದಾವೂದ್ ಸಾಬ್, ಕುಮಾರ್, ಆತ್ಮಾನಂದರಾವ್ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.
ಫೋಟೋ ಮಾಹಿತಿ : ನಗರ ಗುಜರಿಪೇಟೆ ವೆಂಕಟರಮಣ ದೇಗುಲದ ಸಭಾಂಗಣದಲ್ಲಿ ಮಾರಿಜಾತ್ರೆ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಪಿಎಸ್ಐ ಸತೀಶ್ ಅಗತ್ಯ ಮಾಹಿತಿ ನೀಡಿದರು.

No comments:

Post a Comment