Saturday, February 15, 2014

ಸಮಾಜಕ್ಕಾಗಿ ಮಾಡಿದ ಕಾಯ೯ ವ್ಯಥ೯ವಾಗುವುದಿಲ್ಲ :: ಗೋವಾ ಜೀವೋತ್ತಮ ಮಠದ ವಿದ್ಯಾಧಿರಾಜ ಸ್ವಾಮೀಜಿ


ನಗರ ಗುಜರಿಪೇಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಮತ್ತು ಪಾದಪೂಜೆ
ಹೊಸನಗರ:ಉತ್ತಮ ವ್ಯಕ್ತಿತ್ವ ನಿಮಾ೯ಣದಲ್ಲಿ ಧಮ೯ದ ಕಾಯ೯ ಮತ್ತು ಸಮಾಜಸೇವೆ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೆ ಸಮಾಜದ ಒಳಿತಿಗಾಗಿ ಮಾಡಿದ ಕಾಯ೯ ವ್ಯಥ೯ವಾಗುವುದಿಲ್ಲ ಎಂದು ಗೋವಾದ ಪತ೯ಗಾಳಿ ಜೀವೋತ್ತಮ ಮಠದ ವಿದ್ಯಾಧಿರಾಜ ತೀಥ೯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗುಜರಿಪೇಟೆ ವೆಂಕಟರಮಣ ದೇಗುಲಕ್ಕೆ ಗುರುಗಳ ಆಗಮನ
ತಾಲೂಕಿನ ನಗರದ ಗುಜರಿಪೇಟೆ ವೆಂಕಟರಮಣ ಕಲಾಭವನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಮ್ಮಿಕೊಂಡಿದ್ದ ಕಾಯ೯ಕ್ರಮದಲ್ಲಿ ಆಶೀವ೯ಚನ ನೀಡಿ, ಯಾವುದೆ ಕಾಯ೯ವನ್ನಾದರೂ ನಿಷ್ಠೆಯಿಂದ ಮಾಡಬೇಕು ಎಂದರು.
ಬಿದನೂರು ಸಂಸ್ಥಾನದಲ್ಲಿ ಸಾರಸ್ವತರು
ಕೆಳದಿ ಅರಸರ ರಾಜಧಾನಿಯಾಗಿ ಗಮನ ಸೆಳೆದ ಬಿದನೂರು ಸಂಸ್ಥಾನದಲ್ಲಿ ರಾಜಾಶ್ರಯ ಮತ್ತು ಸ್ಥಾನ ಪಡೆಯುವ ಮೂಲಕ ಸಾರಸ್ವತರು ಸಮಾಜ ಸೇವೆ ನಿರತರಾಗಿದ್ದನ್ನು ಸ್ಮರಿಸಬಹುದು.ಇತಿಹಾಸದ ಕಾಲದಿಂದಲೂ ಬಿದನೂರಿನೊಂದಿಗೆ ಸಾರಸ್ವತರ ಬಾಂಧವ್ಯ ಅನನ್ಯವಾಗಿದೆ ಎಂದರು.
ಸಮಾಜ ಅಧ್ಯಕ್ಷರಿಂದ ಗೌರವ ಸಮರ್ಪಣೆ
ಸಾರಸ್ವತ ಸಮಾಜ ಸಾರವಂತ, ಶ್ರಮಜೀವಿ, ಬುದ್ದಿವಂತ ಸಮಾಜವಾಗಿ ಗುರುತಿಸಲ್ಪಡುತ್ತದೆ. ದೇವಾಲಯಗಳ ಅಭಿವೖದ್ಧಿ ಮತ್ತು ಧಾಮಿ೯ಕ ಕಾಯ೯ದ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ನಡೆಸುವುದು ಸೇರಿದಂತೆ ಸಮಗ್ರ ಅಭಿವೖದ್ಧಿ ಸಾಧ್ಯ ಎಂದರು.
ಸಮಾಜ ಬಾಂಧವರು
ಸಂದಭ೯ದಲ್ಲಿ ನಗರ ಆಗಮಿಸಿದ ಶ್ರೀಗಳನ್ನು ಫೂಣ೯ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಸಮಾಜದ ಹತ್ತು ಸಮಸ್ತರಿಂದ ಮತ್ತು ಪರಊರಿನ ಬಾಂಧವರಿಂದ ಗುರುಗಳ ಪಾದಪೂಜೆ ನೆರವೇರಿಸಲಾಯಿತು.
ನಗರ ಗುಜರಿಪೇಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ.ರಾಮಚಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಗಳ ಆಗಮನ
ತೀಥ೯ಹಳ್ಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ರಾಮದಾಸ್ ಕಾಮತ್, ಪ್ರಮುಖರಾದ ಶ್ರೀನಿವಾಸ ಕಾಮತ್, ರಾಘವೇಂದ್ರ ಪೈ, ವಿಠಲಭಟ್, ನಾರಾಯಣ ಕಾಮತ್, ನಿಟ್ಟೂರು ವೆಂಕಟರಮಣ ಪ್ರಭು, ಮಾಸ್ತಿಕಟ್ಟೆ ರವೀಂದ್ರ ಪ್ರಭು, ಮುಕುಂದಕಾಮತ್, ಮತ್ತು. ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ವೇದಮೂತಿ೯ ರಮಾನಂದ ಭಟ್ ಪ್ರಾಥಿ೯ಸಿದರು. ಕೆ.ಭಾಸ್ಕರಭಟ್ ಸ್ವಾಗತಿಸಿದರು. ಸುರೇಶ್ ಭಟ್ ವಂದಿಸಿದರು.

Thursday, February 13, 2014

ಕೇಂದ್ರಕ್ಕೆ ಹೋದರು ರಾಜ್ಯವನ್ನು ಮರೆಯೋದಿಲ್ಲ : ಹೊಸನಗರ ಕಾರ್ಯಕರ್ತರ ಸಭೆಯಲ್ಲಿ ಬಿ ಎಸ್ ವೈ


ಹೊಸನಗರ: ಎಲ್ಲ ರೀತಿಯ ಅಧಿಕಾರವನ್ನು ನೋಡಿರುವ ನನಗೆ ಚುನಾವಣೆ ಸ್ಫಧೆ೯ ಅಗತ್ಯವಿಲ್ಲ. ದೇಶದ ಉಳಿವಿಗಾಗಿ, ಮೋದಿಯವರನ್ನು ಪ್ರಧಾನಿಯಾಗಿಸಲು ಪಕ್ಷದ ಸೂಚನೆಯಂತೆ ಲೋಕಸಭೆ ಚುನಾವಣೆಗೆ ಸ್ಫಧೆ೯ ಮಾಡುತ್ತಿದ್ದೇನೆ. ಗೆದ್ದು ದೆಹಲಿಗೆ ಹೋದರೂ ಕನಾ೯ಟಕವನ್ನು ಮರೆಯೋಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ನೆಹರೂ ಮೈದಾನದಲ್ಲಿ  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ರಾಜ್ಯದ ಜನರು ತಮ್ಮ ಮೇಲೆ ಅಭಿಮಾನವಿಟ್ಟು ಅಧಿಕಾರವನ್ನು ನೀಡಿದ್ದಾರೆ. ಅವಧಿಯಲ್ಲಿ ಜಾತಿ ಧರ್ಮವನ್ನು ನೋಡದೆ ಎಲ್ಲರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ರೂಪಿಸಿ ಅವರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ. ಈಗಲೂ ಕೇಂದ್ರ ಮಂತ್ರಿಯಾದರೆ ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ರಾಜ್ಯದ ಪರಿಸ್ಥಿತಿ ನೋಡಿದರೆ ಸಕಾ೯ರ ಬದುಕಿದೆಯೋ ಸತ್ತಿದೆಯೋ ತಿಳಿಯುವುದಿಲ್ಲ. ಕಾಂಗ್ರೆಸ್ ಸಕಾ೯ರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಯೋಜನೆ ನೀಡುವುದಿರಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವ ಯೋಗ್ಯತೆಯೂ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.
ನನ್ನ ಅವಧಿಯಲ್ಲಿ ಪ್ರತಿ ವರ್ಷ ಸಾವಿರದ ಐನೂರು ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿತ್ತು. ವರ್ಷ ಒಂದು ಗ್ರಾಮಕ್ಕೂ ಯೋಜನೆ ನೀಡಿಲ್ಲ. ರೈತರು ಬೆಳೆದ ಭತ್ತ, ಅಡಕೆ, ಜೋಳ, ಕಬ್ಬು ಸೇರಿದಂತೆ ಅನೇಕ ಬೆಳೆಗೆ ವ್ಶೆಜ್ಞಾನಿಕ ಬೆಲೆ ಸಿಗುತ್ತಿಲ್ಲ. 2011-12ರಲ್ಲಿ 2.54 ಲಕ್ಷ, 2012-13ರಲ್ಲಿ ಮೂರು ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಅನ್ವಯವಾಗಿತ್ತು. ವರ್ಷ ಕೇವಲ ಒಂದು ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ಕಾಂಗ್ರೆಸ್ ಸಕಾ೯ರ ಬಂದ ನಂತರ ಹೆಣ್ಣುಮಕ್ಕಳ ಜನನ ಕಡಿಮೆಯಾಯಿತೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ನಿರ್ಲಜ್ಜ ಸಕಾ೯ರ ತೊಲಗುವವರೆಗೂ  ರಾಜ್ಯದ ಜನತೆಗೆ ನೆಮ್ಮದಿಯಿಲ್ಲ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಸಿದ್ಧರಾಮಣ್ಣ, ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಪಂ ಸದಸ್ಯೆ ಶುಭಾ ಕೃಷ್ಣಮೂತಿ೯ ಮಾಜಿ ಶಾಸಕ ಆರಗ ಜ್ಞಾನೇಂದ್ರ, ತಾಪಂ ಅಧ್ಯಕ್ಷೆ ನಾಗರತ್ನಾ ದೇವರಾಜ್,  ತಾಪಂ ಸದಸ್ಯೆ ಜಯಲಕ್ಷ್ಮಿ ವೆಂಕಟೇಶ ಆಚಾರ್, ಬಿಜೆಪಿ ಅಧ್ಯಕ್ಷ ಕೆ.ವಿ.ಕೖಷ್ಣಮೂತಿ೯, ಎಂ.ಎನ್.ಸುಧಾಕರ್, .ವಿ.ಮಲ್ಲಿಕಾಜು೯ನ್, ವಾಲೆಮನೆ ಶಿವಕುಮಾರ್, ಬಿ.ಯುವರಾಜ್, ಎನ್.ಆರ್.ದೇವಾನಂದ್, ಪ್ರಹ್ಲಾದ್, ದೊಡ್ಲೇಪಾಲು ಚಂದ್ರಶೇಖರ್, ಸೋಮಶೇಖರ್ ಮತ್ತಿತರರಿದ್ದರು.


ತ್ರಿಣಿವೆ ಶಾಲೆಗೆ ಬೇಟಿ ನೀಡಿದ ಸಚಿವಕಿಮ್ಮನೆ
ಹೂಗುಚ್ಚ ನೀಡಿ ಸಚಿವರನ್ನು ಸ್ವಾಗತಿಸಿದ ವಿದ್ಯಾರ್ಥಿಗಳು
 ಹೊಸನಗರ: ತಾಲೂಕಿನ ನಾಗರಕೊಡಿಗೆ ತ್ರಿಣಿವೆ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಬೇಟಿ ನೀಡಿ ಶಾಲೆಯ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ಪಡೆದರು.
ತ್ರಿಣಿವೆ ಶಾಲೆ ಮಕ್ಕಳೊಂದಿಗೆ ಸಚಿವ ಕಿಮ್ಮನೆ
  ಸಚಿವ ಕಿಮ್ಮನೆ ರತ್ನಾಕರ್ ರಿಗೆ ಶಾಲೆಯ  ವಿದ್ಯಾಥಿ೯ಗಳು ಹೂವು, ಹೂಗುಚ್ಚ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಸಂದರ್ಭದಲ್ಲಿ ವಿದ್ಯಾಥಿ೯ಗಳನ್ನು ಆಲಿಂಗಿಸಿಕೊಂಡ ಸಚಿವ ಕಿಮ್ಮನೆ, ಒಳ್ಳೆಯ ರೀತಿಯಲ್ಲಿ ಓದಿ ಮಕ್ಕಳೆ..ಎಂದು ಶುಭ ಹಾರೈಸಿದರು.
 ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಪ್ಪ, ಮುಖ್ಯ ಶಿಕ್ಷಕ ರಾಜಪ್ಪ, ಸುಬ್ರಹ್ಮಣ್ಯ, ಗ್ರಾ.ಪಂ ಉಪಾಧ್ಯಕ್ಷ ಕಾರಗಡಿ ಜಯರಾಮ್, ಸದಸ್ಯ ಶಶಿಧರ್ ಪಟೇಲ್, ಪ್ರವೀಣ್ ಕಾರಗಡಿ ಮತ್ತಿತರರು ಹಾಜರಿದ್ದರು.

ತ್ರಿಣಿವೆ ಶಾಲೆಗೆ ಸಚಿವ ಕಿಮ್ಮನೆ ರತ್ನಾಕರ್ ಬೇಟಿ ನೀಡಿದರು.


ಹೊಸನಗರದಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ
ದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಬೆಂಬಲಿಸಿ : ವಾಟಗೋಡು ಸುರೇಶ್
ಹೊಸನಗರ: ದೇಶದಲ್ಲಿ ಸಾಮಾಜಿಕ ಬದಲಾವಣೆ ತರಲು ಬಾರಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಪಕ್ಷದ ತಾಲೂಕು ಸಂಚಾಲಕ ವಾಟಗೋಡು ಸುರೇಶ್ ಕೋರಿದರು.
ತಾಲೂಕಿನ ಮಾವಿನಕೊಪ್ಪದಲ್ಲಿ  ಆಮ್ಆದ್ಮಿ ಪಕ್ಷದ ಬೂತ್ ಕಾರ್ಯಕರ್ತರ ಸಭೆ ನಡೆಸಿ ನಂತರ ಅವರು ಮಾತನಾಡಿದರು.
ಆಪ್ ನೋಂದಣಿಗೆ ವಾಟಗೋಡು ಸುರೇಶ್ ಚಾಲನೆ ನೀಡಿದರು.
ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ದೇಶದಲ್ಲೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ಜನರು ದಹಲಿಯಂತೆ ಲೋಕಸಭಾ ಚುನಾವಣೆಗಳಲ್ಲಿಯೂ ಹೊಸ ಮುಖ ಮತ್ತು ಯುವಕರಿಗೆ ಆದ್ಯತೆನೀಡಲಿದ್ದಾರೆ. ಜನರಿಗೆ ಅಧಿಕಾರ, ಜನಪರ ಸಕಾ೯ರ ಎಂಬ ಘೋಶವಾಕ್ಯವಿಟ್ಟುಕೊಂಡಿರುವ ಆಮ್ ಆದ್ಮಿ ಪಕ್ಷ ದೇಶಾದ್ಯಂತ ಹೆಚ್ಚಿನ ಸ್ಥಾನ ಗಳಿಸಲಿದೆ. ಕನಾ೯ಟಕದಲ್ಲಿಯೂ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ತಾಲೂಕಿನಲ್ಲಿ ಪ್ರತಿ ಬೂತ್ ನಲ್ಲಿಯೂ ನಾಲ್ಕೈದು ಸಕ್ರೀಯ ಕಾರ್ಯಕರ್ತರನ್ನು ಗುರುತಿಸಿ ಈಗಿಂದಲೇ ಜನಸಂಪರ್ಕ ಪ್ರಾರಂಭಿಸಲಾಗುವುದು. ಪಕ್ಷದ ಸದಸ್ಯತ್ವ ಸಭಿಯಾನಕ್ಕೂ ಚಾಲನೆ ನೀಡಲಾಗಿಇದ್ದು, ಯುವಕರು ಸ್ವಯಂ ಪ್ರೇರಿತರಾಗಿ ಆನ್ಲೈನ್ ಮೂಲಕ ಸದಸ್ಯತ್ವ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ವಸಂತ್ ಕುಮಾರ್, ದೂಗೂರು ಪರಮೇಶ್ವರ್, ವಿದ್ಯಾಧರ ಭಟ್, ಈಶ್ವರಪ್ಪ ತಟಗೋಡು, ಗುಡ್ಡೇಕೊಪ್ಪ ಪ್ರವೀಣ್ ಬೋಜಪ್ಪ ಮತ್ತಿತರರಿದ್ದರು.

Tuesday, February 11, 2014

ಯುವಜನಮೇಳದಲ್ಲಿ ಸ್ಪಧೆ೯ಗಾಗಿ ಮಾತ್ರ ಸ್ಪಧೆ೯ ಬೇಡ :: ಹೊಸನಗರ ತಾಪಂ ಅಧ್ಯಕ್ಷ ನಾಗರತ್ನ ದೇವರಾಜ್


ಕಾರಣಗಿರಿಯಲ್ಲಿ ಹೊಸನಗರ ತಾಲೂಕು ಮಟ್ಟದ ಯುವಜನ ಮೇಳ
 ಹೊಸನಗರ: ಯುವಜನ ಮೇಳಗಳಲ್ಲಿ ಕೇವಲ ಸ್ಪಧೆ೯ಗಾಗಿ ಮಾತ್ರ ಸ್ಪಧೆ೯ ಮಾಡದೇ ನಿಜವಾದ ಪ್ರತಿಭೆ ಅನಾವರಣಗೊಳ್ಳಲು ಸ್ಪಧೆ೯ ಮಾಡಬೇಕಿದೆ ಎಂದು ತಾ.ಪಂ ಅಧ್ಯಕ್ಷೆ ನಾಗರತ್ನ ದೇವರಾಜ್ ಅಭಿಪ್ರಾಯಪಟ್ಟರು.
ಯುವಜನ ಮೇಳದಲ್ಲಿ ತಾಪಂ ಅಧ್ಯಕ್ಷೆ ನಾಗರಾತ್ನ ಮಾತನಾಡಿದರು.
ತಾಲೂಕಿನ ಕಾರಣಗಿರಿಯಲ್ಲಿ ನಡೆದ ತಾ. ಮಟ್ಟದ ಯುವಜನ ಮೇಳ ಉದ್ಘಾಟನಾ ಸಮಾರಂಭದ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು ಇಂದು ಯುವಜನ ಮೇಳ ತನ್ನಆಕರ್ಷಣೆ ಕಳೆದುಕೊಳ್ಳುತ್ತಿದೆ. ಭಾಗವಹಿಸುವ ಸ್ಪಧಿ೯ಗಳು ಗಣನೀಯವಾಗಿ ಕಡಿಮೆಯಾಗಿದ್ದಾರೆ. ಇದಕ್ಕೆ ಹತ್ಥಾರು ಕಾರಣಗಳಿದ್ದು ಅವೆಲ್ಲ ನಿವಾರಣೆ ಆದಾಗಲೇ ನಿಜವಾದ ಯುವಜನ ಮೇಳ ಸಾಕಾರಗೊಳ್ಳಲಿದೆ ಎಂದರು.
ಜಿ.ಪಂ ಸದಸ್ಯೆ ಶುಭಾಕೃಷ್ಣಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕಾರಗಡಿ ಜಯರಾಮ್, ಜಿಲ್ಲಾ ಯುವಒಕ್ಕೂಟ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸದಸ್ಯೆ ಹೇಮಾವತಿ, ಹನಿಯ ಸುಬ್ಬಣ್ಣ,ಶೀಲಾ ರಾಮನ್ ಮತ್ತಿತರರು ಹಾಜರಿದ್ದರು.
ಕಲಾವಿದೆ ಕಡೆಗಣನೆ: 
 15 ವರ್ಷಗಳಿಂದ ಯುವಜನ ಮೇಳಗಳಲ್ಲಿ ಭಾಗವಹಿಸಿ, ಹತ್ತಾರುಯುವಜನ ಮೇಳಗಳಲ್ಲಿ ತೀಪು೯ಗಾರರಾಗಿ ನೇಮಕಗೊಂಡಿದ್ದ ನನ್ನನ್ನು ಕಾರಣಗಿರಿ ಯುವಜನ ಮೇಳಕ್ಕೆ ಬೇಕೆಂದೆ ಆಹ್ವಾನಿಸದೆ ಅವಮಾನಿಸಿದ್ದಾರೆ ಎಂದು ಕಿರುತೆರೆ,ಆಕಾಶವಾಣಿ ಕಲಾವಿದೆ, ಮೇಲಿನ ಬೇಸಿಗೆ ಗ್ರಾ.ಪಂ ಅಧ್ಯಕ್ಷೆ ನೆಲ್ಲುಂಡೆ ಲಲಿತಾ ಆರೋಪಿಸಿದ್ದಾರೆ.
ಕಾರಣಗಿರಿ ನಮ್ಮ ಗ್ರಾ.ಪಂ ವ್ಯಾಪ್ತಿಯ ಪ್ರದೇಶವನ್ನು ಹೊಂದಿದೆ. ಪಕ್ಕದ ಗ್ರಾ.ಪಂ ಅಧ್ಯಕ್ಷೆಯನ್ನು ವೇದಿಕೆಗೆ ಕರೆಯುವ ಸೌಜನ್ಯತೋರಿಲ್ಲ. ಅದಿರಲಿ ಹತ್ತಾರು ವರ್ಷಗಳ ತೀಪು೯ಗಾರರಾಗಿ ಯುವಜನ ಮೇಳಗಳ್ಲಲಿ ದುಡಿದ ನನ್ನನ್ನು ನನ್ನ ಊರುಮನೆಯಲ್ಲಿ ನಡೆದ ಮೇಳಕ್ಕೆ ಆಯ್ಕೆ ಮಾಡದೆ ನಿಜವಾದಕಲಾವಿದೆಗೆಅವಮಾನ ಮಾಡಿದ್ದಾರೆಎಂದು ಆರೋಪಿಸಿದರು.
ತೀಪು೯ಗಾರರ ಆಯ್ಕೆಗೆ ಇರುವ ಮಾನದಂಡವೇನು. ಪಟ್ಟಭದ್ರರಿಗೆ ಮಾತ್ರ ಮಣೆ ಹಾಕುವ ಸಂಪ್ರದಾಯ ಎಷ್ಟು ಸರಿ. ಕಲಾವಿದೆ, ಗ್ರಾ.ಪಂ ಅಧ್ಯಕ್ಷೆಯನ್ನು ವ್ಯವಸ್ಥಿತವಾಗಿ ಕಡೆಗಣಿಸಿ ಅವಮಾನ ಮಾಡುವಲ್ಲಿ ಯಾರ್ಯಾರ ಕೈವಾಡ ಕೆಲಸ ಮಾಡಿದೆ ಎಂದು ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಕೇಳಲಾಗಿದೆ ಎಂದು ತಿಳಿಸಿದರು.

ಹೊಸನಗರ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ
ಫೆ.12 ರಂದು ಸಮ್ಮೇಳನ ಪೂವ೯ಭಾವಿ ಸಭೆ    
ಹೊಸನಗರ: ತಾಲೂಕು ಮಟ್ಟದ 3ನೇ ಸಾಹಿತ್ಯ ಸಮ್ಮೇಳನ ನಡೆಸುವ ಸಂಬಂಧ ಪಟ್ಟಣದ ಸುದ್ದಿಮನೆಯಲ್ಲಿ ಫೆ.12ರಂದು ಮಧ್ಯಾಹ್ನ 4 ಗಂಟೆಗೆ ಪೂವ೯ಭಾವಿ ಸಭೆ ಕರೆಯಲಾಗಿದ್ದು, ಕಸಾಪ ಪ್ರತಿನಿಧಿಗಳು, ಆಸಕ್ತರು ಭಾಗವಹಿಸುವಂತೆ ತಾಲೂಕು ಕಸಾಪ ಅಧ್ಯಕ್ಷ ರತ್ನಾಕರ್ ಕೋರಿದ್ದಾರೆ.