ದಟ್ಟ ಕಾಡಿನಿಂದ ಕೂಡಿದ ಈ ಬೆಟ್ಟದ ಹೆಸರೇ ಚಿನ್ನದ ಗುಡ್ಡ. ಅನಾದಿಕಾಲದಿಂದರೂ ಬೆಟ್ಟಕ್ಕೆ ಈ ಹೆಸರೇ ಇದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸುಳುಗೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಿಣಿಕಲ್ ಗ್ರಾಮದಲ್ಲಿ ಈ ಬೆಟ್ಟವಿದ್ದು ಇದರ ಗಭ೯ದಲ್ಲಿ ಚಿನ್ನದ ನಿಕ್ಷೇಪವಿದೆ ಎಂಬ ಮಾತು ಕಳೆದ 2 ದಶಕಗಳ ಹಿಂದಿನಿಂದ ಗ್ರಾಮಸ್ಥರು ಆಡುತ್ತಿದ್ದಾರೆ.
ವೈಮಾನಿಕ ಪರಿಶೀಲನೆ: ಈ ಬೆಟ್ಟದಲ್ಲಿ ಚಿನ್ನವಿರುವುದರಿಂದಲೇ ಇದಕ್ಕೆ ಚಿನ್ನದಗುಡ್ಡ ಎಂಬ ಹೆಸರು ಬಂದಿರಬಹುದು ಎಂತಲ್ಲ. ಇದು ಕಾಕತಾಳೀಯವಷ್ಟೆ ತಲತಲಾಂತರದಿಂದಲೂ ಇದೇ ಹೆಸರಿನಿಂದ ಬೆಟ್ಟವನ್ನು ಗುರುತಿಸಲಾಗಿದೆ. ಆದರೆ 10-15 ವಷ೯ಗಳ ಹಿಂದೆ ಈ ಗುಡ್ಡದ ಸುತ್ತ ವೈಮಾನಿಕ ಸಮೀಕ್ಷೆ ನಡೆಸಿದ ಮೇಲೆ ಈ ಸುದ್ದಿಚಾಲ್ತಿಯಲ್ಲಿದೆ. ಅದರ ಬಳಿಕ ಅಧಿಕಾರಿಗಳ ತಂಡವೊಂದು ಬೇಟಿ ನೀಡಿ ಗುಡ್ಡದ ಮೇಲ್ಭಾಗದಲ್ಲಿ ಮಾಕ್೯ ಮಾಡಿ ಈ ಪ್ರದೇಶದ ಬಗ್ಗೆ ಮಾಹಿತಿ ಪಡೆದುಕೊಂಡ ಮೇಲೆ ಇಲ್ಲಿ ಚಿನ್ನದ ನಿಕ್ಷೇಪವಿದೆ ಎಂಬ ಅಂಶ ಗಮನಕ್ಕೆ ಬಂತು ಎನ್ನುತ್ತಾರೆ ಈ ತಪ್ಪಲಿನ ನಿವಾಸಿಗಳು.
ಚಿನ್ನದ ಅಂಶವಿದೆ: ಚಿನ್ನದ ನಿಕ್ಷೇಪವಿರುವ ಈ ಗುಡ್ಡದ ಕಾಲು ಸಮೀಪದಲ್ಲೇ ಮಾಣಿ(ವರಾಹಿ) ವಿದ್ಯುದಾಗಾರ, ವಾರಾಹಿ ಭೂಗಭ೯ ವಿದ್ಯುದಾಗಾರದ ಸುರಂಗ ಮಾಗ೯ ಮತ್ತು ಕವಲೇದುಗ೯ ಕೋಟೆವರೆಗೂ ವ್ಯಾಪಿಸಿದೆ. ಅಂದು ಸುರಂಗಮಾಗ೯ ನಿಮಾ೯ಣ ಮಾಡುವ ಸಂದಭ೯ದಲ್ಲೇ ಈ ಪ್ರದೇಶದ ವ್ಯಾಪ್ತಿಯಲ್ಲಿ ಚಿನ್ನದ ಅಂಶವಿರುವ ಮಾತು ಕೇಳಿಬಂದಿತ್ತು. ಅಲ್ಲದೇ ಇಲ್ಲಿಯ ಅದಿರು ಅಂಶವನ್ನು ಡಾಟಾಗೋಲ್ಡ್ ಮಿಷನ್್ನ ಪ್ರಯೋಗಕ್ಕೊಳಪಡಿಸಿದಾಗ ಚಿನ್ನದ ಅಂಶವಿರುವುದನ್ನು ಖಾತ್ರಿ ಪಡಿಸಿದ್ದರು ಎಂದು ಸ್ಥಳೀಯ ರಾಜಾರಾಂ ಹೇಳುತ್ತಾರೆ.
ವಿಶಿಷ್ಟ ಕಲ್ಲುಗಳು: ಚಿನ್ನದಗುಡ್ಡದ ಸುತ್ತಲೂ ಬೖಹದಾಕಾರರ ಮರಗಳು ಸೇರಿದಂತೆ ಸಮೖದ್ಧ ಸಸ್ಯಕಾಶಿಯಿಂದ ಕೂಡಿದ್ದು ತುದಿಮಾತ್ರ ಬೋಳಾಗಿದೆ. ಆ ಜಾಗದಲ್ಲಿ ಚಿಕ್ಕೆದುಗಿ೯ ಎಂಬ ಸಣ್ಣಗಿಡಗಳು ಮಾಚ್ರ ಹರಡಿಕೊಂಡಿವೆ. ಅಲ್ಲದೇ ಮೇಲ್ಭಾಗದಲ್ಲಿ ಆಯುತಾಕಾರದ ಸಣ್ಣಸಣ್ಣ ಕಲ್ಲುಗಳು ಕಂಡುಬರುತ್ತದೆ. ಮಾತ್ರವಲ್ಲ ಅಲ್ಲಲ್ಲಿ ಕಲ್ಲುಗಳಿಟ್ಟು ಪ್ರದೇಶವನ್ನು ಗುರುತು ಮಾಡಲಾಗಿದೆ.
ಈ ಪ್ರದೇಶಕ್ಕೆ ಬೇಟಿಇಟ್ಟು ಪರಿಶೀಲನೆ ಮಾಡಿದ ಅಧಿಕಾರಿಗಳ ತಂಡ, ಚಿನ್ನದಗುಡ್ಡ ಪ್ರದೇಶದಲ್ಲಿ ಮಣ್ಣನ್ನು ಅಗೆಯುವುದಾಗಲಿ ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದ್ದರು ಎನ್ನುತ್ತಾರೆ ತಪ್ಪಲಿನ ನಿವಾಸಿ ಬಾಳೇಹಕ್ಲು ಪುರೋಶೋತ್ತಮ. ಇತ್ತೀಚೆಗಷ್ಟೇ ಸಾಗರದ ಸುತ್ತಮುತ್ತ ನಿಕ್ಷೇಪವಿದೆ ಎಂದು ಪತ್ತೆಹಚ್ಚಲಾಗಿತ್ತು. ಈಗ ಚಿನ್ನದಗುಡ್ಡದ ಸರದಿ. ಈ ಗುಡ್ಡದ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮಾಣಿ ಜಲಾಶಯ ವಿದ್ದು ಈ ಪ್ರದೇಶ ಸಂತ್ರಸ್ತರ ಬೀಡಾಗಿದೆ ಅಲ್ಲದೇ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೇಪಟ್ಟಿಯೂ ಗ್ರಾಮಕ್ಕಿದೆ. ಹಿಂದೆ ಇಲ್ಲಿ ಚಿನ್ನವಿದೆ ಎಂದಾಗ ಸಂತಸವಾಗಿತ್ತು. ಕೇಂದ್ರದ ತಂಡವೇ ಬಂದು ಪರಿಶೀಲನೆ ಮಾಡಿರುವುದು ಖಚಿತ ಎಂದು ಭಾವಿಸಿರುವ ಸ್ಥಳೀಯರಿಗೆ ಇಂದಲ್ಲನಾಳೆ ಗಣಿಗಾರಿಕೆ ನಡೆಯಬಹುದು ಎಂಬ ಭೀತಿ 15 ವಷ೯ಗಳಿಂದಲೂ ಕಾಡುತ್ತಿದೆ.
(ಈಗಾಗಲೇ ಕನ್ನಡಪ್ರಭದಲ್ಲಿ ಈ ಲೇಖನ ಪ್ರಕಟಗೊಂಡಿದೆ)
good....
ReplyDeletethanks
ReplyDelete