Wednesday, January 15, 2014

ಬಿದನೂರಿನ ಇತಿಹಾಸ ಪ್ರಸಿದ್ಧ ಪಾರ್ವತಿ ನೀಲಕಂಠೇಶ್ವರ ದೇಗುಲದಲ್ಲಿ ' ಮಹಾರುದ್ರಯಾಗ'ಕ್ಕೆ ಚಾಲನೆ


61 ಪುರೋಹಿತರಿಂದ ರುದ್ರಪಠಣ|ದೇಗುಲಕ್ಕೆ ಸಚಿವ ಕಿಮ್ಮನೆ ಬೇಟಿ
ಹೊಸನಗರ:ಲೋಕ ಕಲ್ಯಾಣಾಥ೯ವಾಗಿ ತಾಲೂಕಿನ ಬಿದನೂರು ನಗರದ ಪಾವ೯ತಿ ನೀಲಕಂಠೇಶ್ವರ ದೇಗುಲದಲ್ಲಿ ಹಮ್ಮಿಕೊಳ್ಳಲಾಗಿರುವ ಮಹಾರುದ್ರಯಾಗಕ್ಕೆ ಮಂಗಳವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಶೖಂಗೇರಿ ಶಾರದಾಪೀಠ ಆಸ್ಥಾನ್ ವಿದ್ವಾನ್ ವಿನಾಯಕ ಉಡುಪರ ನೇತೖತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾಮಿ೯ಕ ಕಾಯ೯ಕ್ರಮಗಳು ಆರಂಭಗೊಂಡಿದ್ದು, 61 ಪುರೋಹಿತರಿಂದ ರುದ್ರ ಪಠಣ ನೇರವೇರಿತು. 1008 ಮೋದಕ ಮಹಾಗಣಪತಿ ಹೋಮ, ಈಶ್ವರನಿಗೆ ವಿಶೇಷ ಪೂಜೆ ಜೊತೆಗೆ ಮಹಾರುದ್ರಯಾಗಕ್ಕೆ ಸಂಕಲ್ಪ ಪೂಜೆ ನೆರವೇರಿತು.


ಉಪನ್ಯಾಸ:
ಮಧ್ಯಾಹ್ನ ಮೈಸೂರು ವೇದಬ್ರಹ್ಮ ವಾಸುದೇವಭಟ್್ರಿಂದ ಮಹಾಶಿವ ಕುರಿತಾಗಿ ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ಇವರೊಂದಿಗೆ ಶೖಂಗೇರಿ ಪೀಠದ ಆಸ್ಥಾನ್ ವಿದ್ವಾನ್ ವಿನಾಯಕ ಉಡುಪರು ಪಾಲ್ಗೊಂಡಿದ್ದರು.
ಸಕಲ ಸಿದ್ದತೆ:
3 ದಿನಗಳ ಕಾಲ ನಡೆಯುವ ಮಹಾರುದ್ರಯಾಗಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಕೊನೆಯ ದಿನ ಶೖಂಗೇರಿ ಪೀಠದ ಭಾರತೀ ತೀಥ೯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಹಾರುದ್ರಯಾಗದ ಪೂಣಾ೯ಹುತಿ ಸಂಪನ್ನಗೊಳ್ಳಲಿದೆ.
ಸಚಿವ ಕಿಮ್ಮನೆ ಬೇಟಿ:
ಮಹಾರುದ್ರಯಾಗ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ದೇಗುಲಕ್ಕೆ ಬೇಟಿ ನೀಡಿ ಪ್ರಸಾದ್ ಸ್ವೀಕರಿಸಿದರು. ಜಿಪಂ ಸದಸ್ಯೆ ಶುಭಾಕೖಷ್ಣಮೂತಿ೯, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಕೆಪಿಸಿಸಿ ಸದಸ್ಯ ಜಿ.ಎಸ್.ನಾರಾಯಣರಾವ್, ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್ ಮತ್ತಿತರ ಮುಖಂಡರು ಬೇಟಿ ನೀಡಿದರು.
ಸಪರಿವಾರ ನೀಲಕಂಠೇಶ್ವರ ಮಹಾರುದ್ರಯಾಗ ಸಮಿತಿಯ ಅಧ್ಯಕ್ಷ ಗಾಯಕ ನಗರ ಶ್ರೀನಿವಾಸ ಉಡುಪ, ಉಪಾಧ್ಯಕ್ಷ ಕೆಸರೆಮನೆ ರಾಮಚಂದ್ರರಾವ್, ವಿನಾಯಕ ಉಡುಪ, ಕಾಯ೯ದಶಿ೯ ಗೋಪಾಲ ಉಡುಪ, ನಾರಾಯಣ ಉಪಾಧ್ಯಾಯ, ಬಿ.ಎಸ್.ವಿನಾಯಕ, ಖಚಾಂಚಿ ಎನ್.ಸತ್ಯನಾರಾಯಣರಾವ್ ದೇವಸ್ಥಾನ ಸಮಿತಿಯ ಅಧ್ಯಕ್ಷ ಕಬ್ಬಿನಮಕ್ಕಿ ವಿನಾಯಕ ಉಡುಪ, ಕಾಯ೯ದಶಿ೯ ಸುಧೀಂದ್ರಾಚಾರ್  ಊರಿನ ಪ್ರಮುಖರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.

No comments:

Post a Comment