Friday, January 31, 2014

"ಸಕಾ೯ರಿ ಸೌಲಭ್ಯ ತಲುಪಲು ಕಾಳಜಿ ತೋರಬೇಕು" : ಕೊಡೂರು ಶಾಲೆಯಲ್ಲಿ ಸೈಕಲ್ ವಿತರಿಸಿದ ಜ್ಯೋತಿ ಚಂದ್ರಮೌಳಿ


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಕುಲಾಲ್ ಅಧ್ಯಕ್ಷತೆ
ಬಿದನೂರು:ಸಕಾ೯ರದ ಯಾವುದೆ ಸೌಲಭ್ಯಗಳು ಜನರಿಗೆ ತಲುಪುವಲ್ಲಿ ಮತ್ತು ಸಮಪ೯ಕ ಅನುಷ್ಠಾನಗೊಂಡಲ್ಲಿ ಮಾತ್ರ ಯೋಜನೆಗಳು ಸಾಥ೯ಕಗೊಳ್ಳುತ್ತವೆ. ಹಿನ್ನಲೆಯಲ್ಲಿ ಜನರಿಗೆ ಸೌಲಭ್ಯ ತಲುಪಿಸುವ ಕಾಳಜಿ ತೋರಬೇಕಿದೆ ಎಂದು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಹೇಳಿದರು.
ಕೋಡೂರು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಜ್ಯೋತಿ ಚಂದ್ರಮೌಳಿ ಸೈಕಲ್ ವಿತರಿಸಿದರು.
ಹೊಸನಗರ ತಾಲೂಕಿನ ಕೊಡೂರು ಸಕಾ೯ರಿ ಪ್ರೌಢಶಾಲೆಯ ಮಕ್ಕಳಿಗೆ ಸೈಕಲ್ ವಿತರಿಸಿದ ಅವರು, ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಸಕಾ೯ರ ಹಲವು ಯೋಜನೆ ರೂಪಿಸಿದೆ. ಇದನ್ನು ಸದುಪಯೋಗ ಪಡೆದುಕೊಳ್ಳುವ ಕೆಲಸ ಜನರಿಂದ ಆಗಬೇಕು ಎಂದರು.
ಶಾಲಾಭಿವೖದ್ಧಿ ಸಮಿತಿ ಅಧ್ಯಕ್ಷ ರಮೇಶ ಕುಲಾಲ್ ವಹಿಸಿದ್ದರು.
ತಾಪಂ ಸದಸ್ಯ ಕುನ್ನೂರು ಮಂಜಪ್ಪ, ಗ್ರಾಪಂ ಅಧ್ಯಕ್ಷ ಕೖಷ್ಣ ಬಿ.ಶೆಟ್ಟಿ, ಸದಸ್ಯರಾದ ಕೊಡೂರು ಚಂದ್ರಮೌಳಿ, ಪುಟ್ಟಪ್ಪ, ಗುರುಮೂತಿ೯, ಕರಿಗೆರಸು ಜಯಂತ್, ಲೋಹಿತ್, ಗಿರಿಜಮ್ಮ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಪ್ರಾಥಿ೯ಸಿದರು. ಮುಖ್ಯಶಿಕ್ಷಕ ಮಂಜಪ್ಪ ಸ್ವಾಗತಿಸಿದರು. ಶೇಖರಪ್ಪ ವಂದಿಸಿ, ಲಕ್ಷ್ಮಣ ನಿರೂಪಿಸಿದರು.
 .............................
ಇಂದು ಪ್ರತಿಭಟನೆ
ಹೊಸನಗರ: ತಾಲೂಕಿನ ಪಟಗುಪ್ಪಾ ಸೇತುವೆ ಮತ್ತು ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೋರಾಟ ಸಮಿತಿ ತಿಳಿಸಿದೆ.
ಪಟಗುಪ್ಪಾ ಸೇತುವೆ ಮಂಜೂರಾಗಿ ವರ್ಷಗಳೇ ಕಳೆದಿದ್ದರೂ ಕಾಮಗಾರಿ ಮಾತ್ರ ಕುಂಠುತ್ತಿದೆ. ಪಟಗುಪ್ಪಾಗೆ ತೆರಳುವ ರಸ್ತೆ ಮಂಜೂರಾಗಿದ್ದರೂ ಗುತ್ತಿಗೆದಾರರು ಇನ್ನೂ ಕಾಮಗಾರಿ ಆರಂಭಿಸಿಲ್ಲ. ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸಲು ಕಾಳಿಕಾಪುರದಿಂದ ಪಟ್ಟಣದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು.
ಜೇನಿಗ್ರಾಮ ಪಂಚಾಯ್ತಿಯ ಗ್ರಮಸ್ಥರು ಮತ್ತು ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು ಸಕಾ೯ರ ಕೂಡಲೇ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ನಗರದಲ್ಲಿ ಕುಡಿಯುವ ನೀರು ಯೋಜನೆಯ ವಾಟರ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಹೆಚ್.ವೈ.ಸತೀಶ್ ಗೌಡ
ಬಿದನೂರು: ಅತಿ ಹೆಚ್ಚು ವಾಷಿ೯ಕ ಮಬೀಳುವ ಮಲೆನಾಡಿನ ಪ್ರದೇಶದಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿರುವುದು ಆತಂಕಕಾರಿ ಎಂದು ಜಿಲ್ಲಾಪಂಚಾಯ್ತಿ ಸದಸ್ಯೆ ಶುಭಾ ಕೃಷ್ಣಮೂತಿ೯ ಹೇಳಿದರು.
ನಗರದಲ್ಲಿ ವಾಟರ್ ಟ್ಯಾಂಕ್ ಗೆ ಶುಭಾಕೃಷ್ಣಮೂರ್ತಿ ಶಂಕುಸ್ಥಾಪನೆ ನೆರವೇರಿಸದರು.
ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ನಗರದಲ್ಲಿ 15 ಲಕ್ಷ ರೂ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಯ ವಾಟರ್ ಟ್ಯಾಂಕ್ಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತಿದ್ದರೂ ಬೇಸಿಗೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ಹಾಗಾಗಿ ಮಲೆನಾಡಿನಲ್ಲೂ ಬಾವಿ ಮತ್ತು ಕುಡಿಯುವ ನೀರು ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದು, ಉಳಿದವುಗಳನ್ನೂ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದರು.
ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಸತೀಶ್ ಹೆಂಡೆಗದ್ದೆ, ಉಪಾಧ್ಯಕ್ಷೆ ಶಾಲಿನಿ ಜೋಗಿ, ಪ್ರಮುಖರಾದ ಕೆ.ವಿ.ಕೃಷ್ಣಮೂತಿ೯, ಕವಿರಾಜ್ ಕಾನ್ಬೈಲ್, ರಾಜಣ್ಣ ನಿಲ್ಸ್ಕಲ್, ಅರುಣಾಚಲ ಚಿಕ್ಕಪೇಟೆ, ಸುಬ್ರಹ್ಮಣ್ಯ ಭಾಗವತ್, ಗುರುಪ್ರಸಾದ್ ಮತ್ತಿತರರಿದ್ದರು.


ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಿಸಿದ ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ

ಶಿಕ್ಷಣಕ್ಕಾಗಿ ಸೈಕಲ್ ಸದುಪಯೋಗ ಪಡೆದುಕೊಳ್ಳಲು ಕರೆ
ಶುಭಾ ಕೃಷ್ಣಮೂರ್ತಿ

ಬಿದನೂರು: ಉತ್ತಮ ಶಿಕ್ಷಣ ಮತ್ತು ಎಲ್ಲರಿಗೂ ಶಿಕ್ಷಣ ನೀಡಬೇಕು ಎಂಬ ಆಶಯದಲ್ಲಿ ಸರ್ಕಾರಗಳು ಉತ್ತಮ ಯೋಜನೆ ಕಾರ್ಯಾಗತ ಗೊಳಿಸಿದ್ದು, ಸೈಕಲ್ ವಿತರಣೆ ಕೂಡ ಒಂದು. ಸೈಕಲ್ ನ್ನು ಸದುಪಯೋಗ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಜಿ.ಪಂ.ಸದಸ್ಯೆ ಶುಭಾಕೃಷ್ಣಮೂರ್ತಿ ಕರೆ ನೀಡಿದರು.
ಹೊಸನಗರ ತಾಲೂಕಿನ ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕ ಕೆ.ಬಾಲಚಂದ್ರ ವಹಿಸಿದ್ದರು.
ಗ್ರಾಪಂ ಸದಸ್ಯರಾದ ಕಣಕಿ ಮಹೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗರಾಜ್, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

ಹಿರಿಯ ಶಿಕ್ಷಕ ಪ್ರಕಾಶ್ ಜಿ ಸ್ವಾಗತಿಸಿದರು. ಪ್ರಕಾಶ್ ವಾರದ್ ವಂದಿಸಿದರು. ಭವ್ಯ ಟಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

Wednesday, January 29, 2014

ಎನ್.ಎನ್.ಎಸ್ ಶಿಬಿರದಿಂದ ಸಾಂಘಿಕ ಮನೋಭಾವ ಬೆಳವಣಿಗೆ : ಜಿ.ಪಂ.ಸದಸ್ಯೆ ಜ್ಯೋತಿ ಚಂದ್ರಮೌಳಿ


ಆಲಗೇರಮಂಡ್ರಿಯಲ್ಲಿ ಕೊಡಚಾದ್ರಿ ಕಾಲೇಜಿನ ಎನ್ಎಸ್ಎಸ್ ಶಿಬಿರ
ಹೊಸನಗರ : ಎನ್.ಎಸ್.ಎಸ್ ಶಿಬಿರದಲ್ಲಿ ವಿದ್ಯಾಥಿ೯ಗಳು ಪಾಲ್ಗೊಳ್ಳುವ ಮೂಲಕ ಅವರಲ್ಲಿ ಸಾಂಘಿಕ ಮನೋಭಾವ ಬೆಳೆಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಚಂದ್ರಮೌಳಿ ಅಭಿಪ್ರಾಯಪಟ್ಟರು.
ಎನ್ಎಸ್ಎಸ್ ಶಿಬಿರವನ್ನು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಉದ್ಘಾಟಿಸಿದರು.
ತಾಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಗೇರಿಮಂಡ್ರಿ ಸಕಾ೯ರಿ ಶಾಲೆಯ ಆವರಣದಲ್ಲಿ ಕೊಡಚಾದ್ರಿ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನ ವತಿಯಿಂದ ಹಮ್ಮಿಕೊಂಡ 7 ದಿನಗಳ ಎನ್.ಎಸ್.ಎಸ್ ವಾಷರ್ಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥಿ೯ಗಳು ಸೇವಾಮನೋಭಾವವನ್ನು ಬೆಳೆಸಿಕೊಂಡು ತಮ್ಮ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿವೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಪರಿಹಾರೋಪಾಯವನ್ನು ವಿದ್ಯಾಥಿ೯ಗಳು ಕಂಡು ಹಿಡಿಯಬೇಕಾಗಿದೆ ಎಂದರು.
ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರುಣಾಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾಥಿ೯ಗಳು ಕ್ರಿಯಾಶೀಲರಾಗಿ ಶಿಬಿರದಲ್ಲಿ ಪಾಲ್ಗೊಂಡು ಇಲ್ಲಿ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಳ್ಳಬೇಕೆಂದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿರ್ಮಲಾ ಗಣೇಶ್, ಹರಿದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ.ವಾಸು, ಅಲಗೇರಿಮಂಡ್ರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜಪ್ಪ, ಶಾಲೆಯ ಮುಖ್ಯ ಶಿಕ್ಷಕ ಹರೀಶ ಭಟ್ ಶಿಬಿರಾಧಿಕಾರಿ ಕೆ.ಸಿ.ಸೌಮ್ಯ, . ಸಹ ಶಿಬಿರಾಧಿಕಾರಿ ಅರುಣ್, ಪ್ರಶಾಂತ್, ಸುಧಾಕರ್ ಮುಂತಾದವರು ಇದ್ದರು. ವಿದ್ಯಾಥಿ೯ಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.


ಯುವ ಪೀಳಿಗೆ ಒಗ್ಗೂಡಲು ಕ್ರೀಡಾಕೂಟ ಪೂರಕ : ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಶೆಟ್ಟಿ


ಮಾರುತಿಪುರ ಚೌಡೇಶ್ವರಿ ಕ್ರಿಕೆಟರ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ
 ಹೊಸನಗರ:ಸಾಮಾಜಿಕ ಸಂಘಟನೆಯಲ್ಲಿ ವಿಮುಖರಾಗುತ್ತಿರುವ ಇಂದಿನ ಯುವ ಪೀಳಿಗೆ ಒಗ್ಗೂಡಲು ಕ್ರೀಡೆ ಸಹಕಾರಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಶೆಟ್ಟಿ ಹೇಳಿದರು.
ಕ್ರಿಕೆಟ್ ಪಂದ್ಯಾವಳಿಯನ್ನು ಪತ್ರಕರ್ತ ರಮೇಶ್ ಹೆಗಡೆ ಉದ್ಘಾಟಿಸಿದರು.
ಮಾರುತಿಪುರ ಚೌಡೇಶ್ವರಿ ಕ್ರಿಕೆಟರ್ಸ್ ಏರ್ಪಡಿಸಿದ್ದ 2 ದಿನಗಳ ಗ್ರಾಮೀಣ ತಂಡಗಳ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಇಂದು ಕ್ರಿಕೆಟ್ ಹೆಚ್ಚು ಜನಪ್ರೀಯತೆ ಗಳಿಸಿದೆ ಅದಕ್ಕೆ ಹೆಚ್ಚು ಯುವಕರು ಪಾಲ್ಗೊಳ್ಳುತ್ತಾರೆ ಮೂಲಕ ಸಾಮಾಜಿಕ ವಿಚಾರಧಾರೆಯತ್ತ ಗಮನಹರಿಸುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಬೇಕು ಎಂದರು.
ಪಂದ್ಯಾವಳಿ ಉದ್ಘಾಟಿಸಿದ ಪತ್ರಕರ್ತ ರಮೇಶ್ ಹೆಗಡೆ ಗುಂಡೂಮನೆ ಮಾತನಾಡಿ, ಕ್ರಿಕೆಟ್ ಜತೆಗೆ ಗ್ರಾಮೀಣ ಕ್ರೀಡೆಗೂ ಆದ್ಯತೆ ನೀಡುವ ಕಾರ್ಯವಾಗಬೇಕು ಎಂದರು. ಹಿರಿಯ ಕಲಾವಿದ ಮಂಜುನಾಥ ಪೂಜಾರಿ, ಸ್ಥಳೀಯ ಕ್ರಿಕೆಟ್ ಆಟಗಾರ ಇಂದ್ರೇಶ್, ಶಾಲಾ ದೈಹಿಕ ಶಿಕ್ಷಕ ಶಿವಕುಮಾರ್ ಮತ್ತಿತರರು ಇದ್ದರು. ಅರುಣ್ ನಿರೂಪಿಸಿದರು.


ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುವೆಂಪು ವಿದ್ಯಾಶಾಲೆಯ ಯೋಷಿತಾ ಎಸ್
ಯೋಷಿತಾ ಎಸ್
 

ಹೊಸನಗರ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಅಂಗವಾಗಿ ಶಿವಮೊಗ್ಗದಲ್ಲಿ ನಡೆದ ಹೆಣ್ಣಿನ ಶೋಷಣೆಯ ವಿರುದ್ಧ ರಕ್ಷಣೆ ಕುರಿತ ಭಿತ್ತಿಪತ್ರ ರಚನಾ ಸ್ಪಧೆ೯ಯಲ್ಲಿ ಪಟ್ಟಣದ ಕುವೆಂಪು ಪ್ರೌಢಶಾಲೆಯ ವಿದ್ಯಾಥಿ೯ನಿ  ಯೋಷಿತಾ ಎಸ್. ಸೊನಲೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಯೋಷಿತಾ ಎಸ್.