Friday, January 17, 2014

ಇತಿಹಾಸ ಪ್ರಸಿದ್ಧ ನೀಲಕಂಠೇಶ್ವರ ದೇಗುಲದಲ್ಲಿ ಮಹಾರುದ್ರಯಾಗ ಸಂಪನ್ನ


 ಬಿದನೂರಿಗೆ ಇದ್ದ ಶಾಪ ವಿಮೋಚನೆ : ಶೃಂಗೇರಿ ಶ್ರೀ
ಹೊಸನಗರ:ಇತಿಹಾಸದಲ್ಲಿ ಶೖಂಗೇರಿ ಪೀಠದಿಂದ ಬಿದನೂರಿಗೆ ಶಾಪವಿತ್ತು ಎಂಬ ಪ್ರತೀತಿ ಇತ್ತು. ಆದರಿಂದು ಬಿದನೂರಿನ ಆರಾಧ್ಯಧೈವ ನೀಲಕಂಠೇಶ್ವನಿಗೆ ಗುರುಪೀಠದಿಂದ ಪೂಜೆ ಸಂಪನ್ನಗೊಂಡಿರುವುದರಿಂದ ಇಂದಿನ ಶಾಪ ವಿಮೋಚನೆಯಾಗಿದೆ ಎಂದು ಶೃಂಗೇರಿ ಶಾರದಾಪೀಠದ ಭಾರತೀತೀಥ೯ ಸ್ವಾಮೀಜಿ ನುಡಿದಿದ್ದಾರೆ.
ತಾಲೂಕಿನ ಬಿದನೂರು-ನಗರದ ನೀಲಕಂಠೇಶ್ವರ ದೇಗುಲದಲ್ಲಿ ಸಪರಿವಾರ ನೀಲಕಂಠೇಶ್ವರ ಮಹಾರುದ್ರಯಾಗ ಸಮಿತಿ ಹಮ್ಮಿಕೊಂಡಿದ್ದ ರುದ್ರಪುರಶ್ಚರಣಪೂವ೯ಕ ಮಹಾರುದ್ರಯಾಗ ಪೂಣಾ೯ಹುತಿಯ ಸಾನ್ನಿಧ್ಯವಹಿಸಿದ ನಂತರ ಶ್ರೀಗಳು ಆಶೀವ೯ಚನ ನೀಡಿದರು.
ಐತಿಹಾಸಿಕ ವಾಗಿ ಸಾಕಷ್ಟು ಮಹತ್ವ ಪಡೆದ ಬಿದನೂರಿನ ದೇವಸ್ಥಾನಗಳು ಕೂಡ ಚಾರಿತ್ರಿಕವಾಗಿವೆ. ಇಷ್ಟಾಥ೯ ಸಿದ್ದಿಗೊಳಿಸುವ ನೀಲಕಂಠೇಶ್ವರ ಸನ್ನಿಧಿಯಲ್ಲಿ ಮಹಾರುದ್ರಯಾಗ ಸಂಪನ್ನಗೊಂಡಿರುವುದರಿಂದ ಪ್ರಾಂತ್ಯಕ್ಕೆ ಶುಭವಾಗಲಿದೆ ಎಂದರು.
ಭಕ್ತಿಪೂಜೆ ಶ್ರೇಷ್ಠ:
ಪೂಜೆಯನ್ನು ಎಷ್ಟು ಹೊತ್ತು, ಎಷ್ಟು ಆಡಂಬರವಾಗಿ ಮಾಡುವುತ್ತೇವೆ ಎನ್ನುವುದಕ್ಕಿಂತ ಐದೇ ನಿಮಿಷ ಮಾಡಿದರೂ ಸಮಯದಲ್ಲಿ ಬೇರೆಕಡೆ ಮನಸ್ಸು ಹರಿಯಬಿಡದೆ ಭಕ್ತಿಪೂವ೯ಕ ಮಾಡಿದರೆ ಅದು ನೇರವಾಗಿ ಭಗವಂತನಿಗೆ ತಲುಪತ್ತದೆ.  ಭಗವಂತನಿಗೂ ಕೂಡ ಬಡವ ಶ್ರೀಮಂತ, ಪಂಡಿತ, ಪಾಮರ, ದೊಡ್ಡವ-ಸಣ್ಣವ ಎಂಬ ಬೇದವಿಲ್ಲದೆ ನಿಜವಾದ ಭಕ್ತಿಗೆ ಒಲಿಯುತ್ತಾನೆ. ಜಗತ್ತಿನ ಶ್ರೇಷ್ಠ ತತ್ವಜ್ಞಾನಿ ಆದಿಶಂಕರರೆ ಭಗವಂತನ ಶ್ರೇಷ್ಠ ಆರಾಧಕರಾಗಿ ಹೊರಹೊಮ್ಮಿ ಲೋಕಕ್ಕೆ ಬೆಳಕು ನೀಡಿರುವಾಗ ನಾವೆಲ್ಲ ಯಾವ ಲೆಕ್ಕ. ಆದರೆ ಯಾಂತ್ರಿಕವಾಗಿ ಜಪ ತಪ, ಪೂಜೆ ಪುನಸ್ಕಾರ ನಡೆಸದೆ ಭಕ್ತಿಪೂವ೯ಕ ನಡೆಸಿದರೆ ಮಾತ್ರ ಸಾಥ೯ಕಗೊಳ್ಳುತ್ತದೆ ಎಂದರು.
ಶತಮೂಖ೯ರು:
ದೇವನೊಬ್ಬನೆ ನಾಮ ಹಲವು ಆದರೆ ಇದನ್ನು ಅರಿಯದೆ ಶಿವಗಿಂತ ವಿಷ್ಣು, ವಿಷ್ಣುಗಿಂತ ಶಿವ ದೊಡ್ಡವ ಎಂದು ಜಗಳವಾಡುವವರು ಶತ ಮೂಖ೯ರು ಎಂದ ಶ್ರೀಗಳು ಎಲ್ಲ ದೇವರಲ್ಲಿರುವದು ಶಕ್ತಿವೊಂದೆ, ಶಕ್ತಿಯನ್ನೆ ದೇವರು ಎಂಬು ನಾವು ನಂಬುತ್ತೇನೆ. ನಮ್ಮ ನಂಬಿಕೆಗಳಿಗಾಗಿ ವಿಶೇಷ ನಾಮಗಳಿಂದ ಆರಾಧಿಸುತ್ತೇವೆ ಅಷ್ಟೆ ಎಂದರು.
ಜೀಣೋ೯ದ್ಧಾರ ಮಾಡಿ:
ಬಿದನೂರಿನಲ್ಲಿರುವ ನೀಲಕಂಠೇಶ್ವರ ದೇಗುಲ ಐತಿಹಾಸಿಕ ಮಹತ್ವ ಪಡೆದುಕೊಂಡ ವಿಶಿಷ್ಠ ದೇಗುಲ. ಆದರೆ ಇದರ ಜೀಣೋ೯ದ್ಧಾರ ತುತಾ೯ಗಿ ಆಗಬೇಕಿದೆ. ನೀವು ಜೀಣೋ೯ದ್ಧಾರಕ್ಕೆ ಮನಸ್ಸು ಮಾಡಿದರೆ ಶೖಂಗೇರಿ ಪೀಠದಿಂದ ರು.1 ಲಕ್ಷ ನೆರವು ನೀಡುವುತ್ತೇವೆ. ಹಾಗಂತ ಇಷ್ಟಕ್ಕೆ ಸೀಮಿತ ಮಾಡದೆ ಕೆಲಸ ಆಗುತ್ತಿದ್ದಂತೆ ಅಂದಿನ ಅಗತ್ಯಕ್ಕೆ ಸರಿಯಾಗಿ ಮತ್ತಷ್ಟು ನೆರವು ನೀಡುತ್ತೇವೆ ಎಂದು ಶ್ರೀಗಳು ಭರವಸೆ ನೀಡಿದರು.
ವಿವಿಧ ಧಾಮಿ೯ಕ ಕಾಯ೯ಕ್ರಮ:
ಮಹಾರುದ್ರಯಾಗದ ಮೂರನೇ ದಿನ ಶ್ರೀಗಳು ಬೆಳಿಗ್ಗೆ ಆಗಮಿಸುತ್ತಿದ್ದಂತೆ ಭಕ್ತರು ಪೂಣ೯ಕುಂಭ ಭಕ್ತಿಪೂವ೯ಕ ಸ್ವಾಗತ ನೀಡಿ ಬರಮಾಡಿಕೊಂಡರು. ನಂತರ ಶ್ರೀಗಳ ಸಮ್ಮುಖದಲ್ಲಿ ಯಾಗದ ಪೂಣಾ೯ಹುತಿಯು ಸಂಪನ್ನಗೊಂಡಿತು. ನೀಲಕಂಠೇಶ್ವನ ಮೂತಿ೯ಗೆ ಶ್ರಂಗೇರಿ ಶ್ರಿಗಳು ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರು ಶ್ರೀಗಳ ಪಾದಪೂಜೆ ಮಾಡಿ ಧನ್ಯರಾದ ಬಳಿಕ, ಸಕಲ ಭಕ್ತಾಧಿಗಳಿಗೆ ಮಂತ್ರಾಕ್ಷತೆ ವಿತರಿಸಲಾಯಿತು.
ಧಾಮಿ೯ಕ ಸಭೆಯಲ್ಲಿ ಕಮ್ಮರಡಿ ಲಕ್ಷ್ಮೀನಾರಾಯಣ ಸೋಮಯಾಜಿ ಪ್ರಾಸ್ತಾವಿಕವಾಗಿ ಬಿದನೂರಿನ ದೇಗುಲ ಮತ್ತು ಶೖಂಗೇರಿ ಪೀಠದ ಮಹತ್ವದ ಬಗ್ಗೆ ತಿಳಿಸಿದರು. ಶೖಂಗೇರಿ ಪೀಠದ ಆಸ್ಥಾನ್ ವಿದ್ವಾನ್, ಮಹಾರುದ್ರಯಾಗ ಸಮಿತಿಯ ಗೌರವಾಧ್ಯಕ್ಷರಾದ ವಿನಾಯಕ ಉಡುಪ ಭಿನ್ನವತ್ತಳೆ ಸಲ್ಲಿಸಿದರು. ಕೆ.ವಿ.ಕೖಷ್ಣಮೂತಿ೯ ಕಾಯ೯ಕ್ರಮ ನಿವ೯ಹಿಸಿದರು.

ಸುಸೂತ್ರವಾಗಿ ನಡೆದ ಮೂರುದಿನಗಳ ಯಾಗ ಕಾಯ೯ಕ್ರಮ
ಹೊಸನಗರ: ಬಿದನೂರಿನ ನೀಲಕಂಠೇಶ್ವರ ದೇಗುಲದಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿದ್ದ ಮಹಾರುದ್ರಯಾಗ ಧಾಮಿ೯ಕ ಕಾಯ೯ಕ್ರಮ ಸುಸೂತ್ರವಾಗಿ, ಅಚ್ಚುಕಟ್ಟಾಗಿ ಮುಕ್ತಾಯ ಕಂಡಿತು.
ಕಳೆದ ಮೂರು ತಿಂಗಳಿಂದ ಸಿದ್ದತೆ ನಡೆಸಿದ್ದ ಶೖಂಗೇರಿ ಪೀಠದ ಆಸ್ಥಾನ್ ವಿದ್ವಾನ್ ವಿನಾಯಕ ಉಡುಪ ನೇತೖತ್ವದ ಸಪರಿವಾರ ನೀಲಕಂಠೇಶ್ವರ ಮಹಾರುದ್ರಯಾಗ ಸಮಿತಿ ಕಾಯ೯ಕ್ರಮದ ಯಶಸ್ಸಿಗಾಗಿ ಟೊಂಕ ಕಟ್ಟಿತ್ತು.
ಹಾಗಾಗಿ ಕಾಯ೯ಕ್ರಮದ ಊಟ, ಉಪಚಾರ, ಧಾಮಿ೯ಕ ಕಾಯ೯ಕ್ರಮ, ಉಪನ್ಯಾಸ ಹೀಗೆ ಎಲ್ಲವು ಅಚ್ಚುಕಟ್ಟಾಗಿ ಗಮನಸೆಳೆಯಿತು.  ಅಲ್ಲದೆ ಶೖಂಗೇರಿ ಭಾರತೀ ತೀಥ೯ ಸ್ವಾಮೀಜಿಗಳು 1990ರಲ್ಲಿ ನೀಲಕಂಠೇಶ್ವರ ದೇಗುಲಕ್ಕೆ ಬೇಟಿ ನೀಡಿದ್ದರು. ನಂತರ 24 ವಷ೯ದ ಬಳಿಕ ಆಗಮಿಸಿದ್ದು ಗಮನಸೆಳೆಯಿತು.
ಕಾಯ೯ಕ್ರಮದಲ್ಲಿ ಜಿಪಂ ಸದಸ್ಯೆ ಶುಭಾ ಕೖಷ್ಣಮೂತಿ೯ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಕೊನೆಯ ದಿನ ಮಾಜಿ ಶಾಸಕ ಆರಗ ಜ್ಞಾನೇಂದ್ರ ಬೇಟಿಕೊಟ್ಟರು. ಅಲ್ಲದೆ ಯಾಗ ಸಮಿತಿ ಮತ್ತು ದೇವಸ್ಥಾನ ಸಮಿತಿ ಕಾಯ೯ಕತ೯ರು ಯಾಗ ಯಶಸ್ಸಿಗೆ ಶ್ರಮಹಾಕಿದ್ದು ಗಮನ ಸೆಳೆಯಿತು.No comments:

Post a Comment