ಮಾರುತಿಪುರ ಚೌಡೇಶ್ವರಿ ಕ್ರಿಕೆಟರ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ
ಹೊಸನಗರ:ಸಾಮಾಜಿಕ
ಸಂಘಟನೆಯಲ್ಲಿ ವಿಮುಖರಾಗುತ್ತಿರುವ ಇಂದಿನ ಯುವ ಪೀಳಿಗೆ
ಒಗ್ಗೂಡಲು ಕ್ರೀಡೆ
ಸಹಕಾರಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ್
ಶೆಟ್ಟಿ ಹೇಳಿದರು.
ಕ್ರಿಕೆಟ್ ಪಂದ್ಯಾವಳಿಯನ್ನು ಪತ್ರಕರ್ತ ರಮೇಶ್ ಹೆಗಡೆ ಉದ್ಘಾಟಿಸಿದರು. |
ಮಾರುತಿಪುರ ಚೌಡೇಶ್ವರಿ ಕ್ರಿಕೆಟರ್ಸ್
ಏರ್ಪಡಿಸಿದ್ದ 2 ದಿನಗಳ ಗ್ರಾಮೀಣ ತಂಡಗಳ ಕ್ರಿಕೆಟ್
ಪಂದ್ಯಾವಳಿ ಉದ್ಘಾಟನಾ
ಕಾರ್ಯಕ್ರಮದಲ್ಲಿ ಅವರು ಇಂದು ಕ್ರಿಕೆಟ್ ಹೆಚ್ಚು
ಜನಪ್ರೀಯತೆ ಗಳಿಸಿದೆ
ಅದಕ್ಕೆ ಹೆಚ್ಚು
ಯುವಕರು ಪಾಲ್ಗೊಳ್ಳುತ್ತಾರೆ
ಈ ಮೂಲಕ
ಸಾಮಾಜಿಕ ವಿಚಾರಧಾರೆಯತ್ತ
ಗಮನಹರಿಸುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಬೇಕು ಎಂದರು.
ಪಂದ್ಯಾವಳಿ ಉದ್ಘಾಟಿಸಿದ ಪತ್ರಕರ್ತ
ರಮೇಶ್ ಹೆಗಡೆ
ಗುಂಡೂಮನೆ ಮಾತನಾಡಿ,
ಕ್ರಿಕೆಟ್ ಜತೆಗೆ
ಗ್ರಾಮೀಣ ಕ್ರೀಡೆಗೂ
ಆದ್ಯತೆ ನೀಡುವ
ಕಾರ್ಯವಾಗಬೇಕು ಎಂದರು. ಹಿರಿಯ ಕಲಾವಿದ ಮಂಜುನಾಥ
ಪೂಜಾರಿ, ಸ್ಥಳೀಯ
ಕ್ರಿಕೆಟ್ ಆಟಗಾರ
ಇಂದ್ರೇಶ್, ಶಾಲಾ
ದೈಹಿಕ ಶಿಕ್ಷಕ
ಶಿವಕುಮಾರ್ ಮತ್ತಿತರರು
ಇದ್ದರು. ಅರುಣ್
ನಿರೂಪಿಸಿದರು.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುವೆಂಪು ವಿದ್ಯಾಶಾಲೆಯ ಯೋಷಿತಾ ಎಸ್
ಯೋಷಿತಾ ಎಸ್ |
ಹೊಸನಗರ:ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ
ಇಲಾಖೆ, ಸಾರ್ವಜನಿಕ
ಶಿಕ್ಷಣ ಇಲಾಖೆ
ಮತ್ತು ಜಿಲ್ಲಾ
ಮಕ್ಕಳ ರಕ್ಷಣಾ
ಘಟಕ ಇವರ
ಸಂಯುಕ್ತ ಆಶ್ರಯದಲ್ಲಿ
ಸಮಗ್ರ ಮಕ್ಕಳ
ರಕ್ಷಣಾ ಯೋಜನೆಯ
ಅಂಗವಾಗಿ ಶಿವಮೊಗ್ಗದಲ್ಲಿ
ನಡೆದ ಹೆಣ್ಣಿನ
ಶೋಷಣೆಯ ವಿರುದ್ಧ
ರಕ್ಷಣೆ ಕುರಿತ
ಭಿತ್ತಿಪತ್ರ ರಚನಾ ಸ್ಪಧೆ೯ಯಲ್ಲಿ ಪಟ್ಟಣದ ಕುವೆಂಪು
ಪ್ರೌಢಶಾಲೆಯ ವಿದ್ಯಾಥಿ೯ನಿ ಯೋಷಿತಾ ಎಸ್.
ಸೊನಲೆ ಪ್ರಥಮ
ಸ್ಥಾನ ಪಡೆದು
ರಾಜ್ಯ ಮಟ್ಟಕ್ಕೆ
ಆಯ್ಕೆಯಾಗಿದ್ದಾಳೆ.
ಯೋಷಿತಾ ಎಸ್.
No comments:
Post a Comment