Saturday, January 18, 2014

ಬಂಟರ ಸಮಾಜಕ್ಕೆ ಇಂದು ಗುರುವು ಇದ್ದಾರೆ..ಗುರಿ ಕೂಡ ಇದೆ :: ಬಂಟರ ಸಮಾವೇಶದಲ್ಲಿ ಡಾ.ವಿಶ್ವಸಂತೋಷ ಭಾರತೀ ಸ್ವಾಮೀಜಿ


ಹೊಸನಗರದಲ್ಲಿ ಬಂಟರ ಯಾನೆ ನಾಡವರ ಸಂಘದ ಸಮಾವೇಶ
 ಹೊಸನಗರ; ಸಂಘ ಮತ್ತು ಸಮಾಜದ ಕೆಲಸಗಳಿಗೆ ಆಹ್ವಾನ ಬೇಡ. ನನಗೆ ಕರೆದಿಲ್ಲ ಎಂಬ ಬಿಗುಮಾನ ಬಿಟ್ಟು ಸಾಂಘಿಕವಾಗಿ ಪ್ರಯತ್ನಿಸಿದರೇ ಮಾತ್ರ ಸಂಘಟನೆ ಸಾಧ್ಯ ಎಂದು ಬಾಕೂ೯ರು ಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತೀ ಶ್ರೀಗಳು ತಿಳಿಸಿದರು.
ತಾಲೂಕು ಬಂಟರಯಾನೆ ನಾಡವರ ಸಂಘದ ವಾಷಿ೯ಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.ಸಂಘ ಯಾರದ್ದು ಅಲ್ಲ. ಅದು ನಮ್ಮದು ಎಂಬ ಕಲ್ಪನೆ ಬರಬೇಕು. ಸಂಘ ಬಲಯುತವಾದಾಗ ಸಕಾ೯ರ ನಮ್ಮನ್ನು ಗುರುತಿಸುತ್ತದೆ ಎಂದ ಶ್ರೀಗಳು ಇಂದು ಎಲ್ಲಾ ಜಾತಿ, ಜನಾಂಗಗಳು ಸಕಾ೯ರಗಳಿಂದ ಲಕ್ಷಾಂತರ ಅನುದಾನ ಪಡೆದಿವೆ. ಒಂದು ಪೈಸೆ ಹಣ ಪಡೆಯದ ಸಮಾಜ ಎಂದರೆ ಅದು ಬಂಟರ ಸಮಾಜ ಮಾತ್ರ ಎಂದರು.
ಕೈ ಬಲಪಡಿಸಿ; ಬಂಟರಯಾನೆ ನಾಡವರ ಸಮಾಜಕ್ಕೆ ಗುರು - ಗುರಿಇಲ್ಲ ಎಂಬ ಅಪವಾದವಿತ್ತು. ಆದರೆ ಇಂದು ಗುರುಗಳು ಇದ್ದಾರೆ, ಗುರಿಯೂ ಇದೆ. ನಾವು ಬಂಟರ ಸಮಾಜಕ್ಕೆ ಮಾತ್ರ ಗುರುಗಳಲ್ಲ. ಆದರೆ ಪೂವಾ೯ಶ್ರಮವಾದ ಬಂಟ ಸಮಾಜದ ಕುರಿತು ವಿಶೇಷ ಆಸಕ್ತಿ ನನಗಿದೆ. ಬಂಟರ ಸಮಾಜ ಮೊದಲು ಸಂಘಟಿಸಬೇಕೆಂಬ ಉದ್ದೇಶ ಹೊಂದಿದ್ದು ದಿಕ್ಕಿನಲ್ಲಿ ಕಾರ್ಯತತ್ಪರರಾಗಿದ್ದೇವೆ. ಬಾಕೂ೯ರು ಸಂಸ್ಥಾನದ ಜೀಣೋ೯ದ್ದಾರ ಆಗಬೇಕಿದೆ. ಸಮಾಜ ಬಾಂಧವರು ಕೈ ಜೋಡಿಸಬೇಕೆಂದುಕರೆ ನೀಡಿದರು.
ದುಂದು ವೆಚ್ಚ ಬೇಡ:
 ಸಮಾಜದಲ್ಲಿ ಮೂಢತನಕ್ಕೆ ಹೆಚ್ಚು ಹಣಖಚು೯ ಮಾಡಲಾಗುತ್ತಿದೆ. ಅನ್ಯರ ಮಾತು ಕೇಳಿ ಸಲ್ಲದನ್ನು ಮಾಡಬೇಡಿ. ಪ್ರತಿಷ್ಟೆ ಮೆರೆಯಲು ದೈವಗಳ ಪ್ರತಿಷ್ಟಾಪನೆಕಾರ್ಯ ನಡೆಯುತ್ತಿದೆ. ಇದೂ ಒಂದು ಫ್ಯಾಷನ್ ಆಗುತ್ತಿದೆ ನಿಜ ಸಂಗತಿ ಎಂದರೆ ದೈವಗಳ ನೆಲೆ ಹಾಕುವ ಅಧಿಕಾರ ಸಮಾಜ ಬಾಂಧವರಿಗಿಲ್ಲ ಎಂದ ಶ್ರೀಗಳು  ಅನಗತ್ಯ ದುಂದು ವೆಚ್ಚ ಮಾಡದಂತೆ ತಿಳಿ ಹೇಳಿದರು.
 ಸಮಾಜದ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸತೀಶ ಶೆಟ್ಟಿ, ಸುಧಾಕರ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಕೃಷ್ಣ ಪ್ರಸಾದ್ಅಡ್ಯಂತಾಯ, ಜಯರಾಮ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಮತ್ತಿತರರು ಹಾಜರಿದ್ದರು. ಪ್ರಸಾದ್ ಸ್ವಾಗತಿಸಿದರು. ಶಿವರಾಮ ಶೆಟ್ಟಿ ನಿರೂಪಿಸಿದರು. ಕರುಣಾಕರ ಶೆಟ್ಟಿ ವಂದಿಸಿದರು.

No comments:

Post a Comment