ವೀರಾಪುರ ಡಾ.ಮರುಳಸಿದ್ದ
ಸ್ವಾಮೀಜಿಯ ನೇತೖತ್ವದಲ್ಲಿ
ಕಾಯ೯ಕ್ರಮ
ಹೊಸನಗರ:ನೂರಾರು ಭಕ್ತರ
ಸಮ್ಮುಖದಲ್ಲಿ, ವಿವಿಧ ಧಾಮಿ೯ಕ ಕಾಯ೯ಕ್ರಮಗಳೊಂದಿಗೆ ವೀರಾಪುರ ಹಿರೇಮಠದ ಡಾ.ಮರುಳಸಿದ್ದ
ಪಂಡಿತಾರಾಧ್ಯ ಸ್ವಾಮೀಜಿ ನೇತೖತ್ವದಲ್ಲಿ ಮೂಲೆಗದ್ದೆ ಸಿದ್ದಲಿಂಗ
ಶಿವಯೋಗಿ ಸ್ವಾಮೀಜಿಗಳ
ತುಲಾಭಾರ ಮಂಗಳವಾರದ
ಮಕರಸಂಕ್ರಾತಿ ಸಂಭ್ರಮದಲ್ಲಿ ವಿಜ್ರಂಭಣೆಯಿಂದ ನೆರವೇರಿತು.
ಕಿಕ್ಕಿರಿದು ತುಂಬಿದ ಭಕ್ತ
ಸಮೂಹ ಶ್ರೀಗಳ
ತುಲಾಭಾರದಲ್ಲಿ ತಲ್ಲೀನರಾಗಿ ಮಂದಸ್ಮಿತರಾಗಿದ್ದು,
ವೀರಶೈವ ಯುವ
ವೇದಿಕೆ ಅಧ್ಯಕ್ಷ
ಮತ್ತು ಸಂಸದ
ಬಿ.ವೈ.ರಾಘವೇಂದ್ರ, ಅಪೆಕ್ಸ್
ಅಧ್ಯಕ್ಷ ಮಂಜುನಾಥಗೌಡ
ಸೇರಿದಂತೆ 20ಕ್ಕು ಹೆಚ್ಚು ಕುಟುಂಬಗಳು ಶ್ರೀಗಳ
ತುಲಾಭಾರ ಸೇವೆ
ನೆರವೇರಿಸಿದರು.
ತುಲಾಭಾರ ಕಾಯ೯ಕ್ರಮದ ಅಧ್ಯಕ್ಷತೆ
ವಹಿಸಿದ್ದ ವೀರಾಪುರ
ಹಿರೇಮಠದ ಡಾ.ಮರುಳಸಿದ್ದ ಪಂಡಿತಾರಾಧ್ಯ
ಸ್ವಾಮೀಜಿ ಇಂತಹ
ಅವಕಾಶ ಎಲ್ಲರಿಗೂ
ಸಿಗದು. ಧಮಾ೯ತ್ಮರಿಗೆ
ಮಾತ್ರ ತುಲಾಭಾರ
ನೆರವೇರುತ್ತದೆ. ಸಕರ ಭಕ್ತರ ಇಚ್ಚೆಯಂತೆ ತುಲಾಭಾರ
ನೆಡೆದಿದ್ದು ಇದರಿಂದ ಭಕ್ತರ ಹಿಂದಿನ ಪಾಪಕಮ೯,
ಹರಕೆ, ಸಂಕಷ್ಟ
ಎಲ್ಲವು ನಿವಾರಣೆ
ಯಾಗುತ್ತದೆ ಎಂದರು.
ಇದಕ್ಕು ಮುನ್ನ ತುಲಾಭಾರದ
ಹಿನ್ನಲೆಯಲ್ಲಿ ಬೆಳಿಗ್ಗೆ 6 ರಿಂದ ವಿವಿಧ ಧಾಮಿ೯ಕ
ವಿಧಿವಿದಾನಗಳ ಆಚರಣೆ ನಡೆಯಿತು. ಷಟಸ್ಥಲ ಧ್ವಜಾರೋಹಣ,
ಚನ್ನಬಸವೇಶ್ವರ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ
ಬಿಲ್ವಾಚ೯ನೆ ಮತ್ತು ಮಹಾಮಂಗಲ ಮತ್ತು ಚೌಡೇಶ್ವರಿ
ದೇವಿಗೆ ವಿಶೇಷ
ಪೂಜೆ ನೆರವೇರಿತು.
ಸಚಿವ ಕಿಮ್ಮನೆಯಿಂದ ಉದ್ಘಾಟನೆ:
ಮೂಲಗದ್ದೆ ಮಠದ ಆವರಣದಲ್ಲಿ
ನಡೆದ ಮಕರ
ಸಂಕ್ರಮಣ ಮತ್ತು
ತುಲಾಭಾರ ಮಹೋತ್ಸವ
ಸಮಾರಂಭವನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್
ಉದ್ಘಾಟಿಸಿ, ಉತ್ತಮ ಸಮಾಜ ರೂಪಿಸುವ ಶಕ್ತಿ
ಸ್ವಾಮೀಜಿಗಳಿಂದ ಮಾತ್ರ ಸಾಧ್ಯ. ವ್ಯಕ್ತಿಯ ಜೀವನ
ಮೌಲ್ಯಗಳ ಬಗ್ಗೆ
ಜಾಗೖತಿ ಮೂಡಿಸಬೇಕಿದೆ
ಎಂದರು.
50 ವಷ೯ದ ಹಿಂದೆ ಶೈಕ್ಷಣಿಕ
ಪ್ರಗತಿ ಕೇವಲ
ಶೇ.20ರಷ್ಟಿದ್ದರು
ಕೂಡ ಸಮಾಜದಲ್ಲಿ
ಉತ್ತಮ ವಾತಾರಣ,
ಸಂಸ್ಕೖತಿ ಮೇಳೈಸಿದ್ದವು.
ಆದರಿಂದು ಶೇ.76
ರಷ್ಟು ಶೈಕ್ಷಣಿಕ
ಪ್ರಗತಿ ಸಾಧಿಸಿದ್ದರು
ಕೂಡ ಉತ್ತಮ
ಪರಿಸರ ನಿಮಾ೯ಣ
ಮಾಡುವಲ್ಲಿ ವಿಫಲರಾಗಿದ್ದೇವೆ.
ಇಂದು ಸಮಾಜದಲ್ಲಿ
ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಲ್ಲಿ ಶೇ.90ರಷ್ಟು
ವಿದ್ಯಾವಂತರೆ ಪಾಲ್ಗೊಂಡಿರುವ ಬಗ್ಗೆ ಆತಂಕ ವ್ಯಕ್ತ
ಪಡಿಸಿದರು.
ಶ್ರೀಮಠಕ್ಕೆ ಅಗತ್ಯವಾಗಿ ಬೇಕಾಗಿರುವ
ಕಾಲುಸೇತುವೆ ನಿಮಾ೯ಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ, ದೇವರ
ಮೇಲಿನ ನಂಬಿಕೆ
ತಮ್ಮ ಆತ್ಮವಿಶ್ವಾಸ
ಹೆಚ್ಚಿಸುತ್ತದೆ. ಮತ್ತು ಮೂಲೆಗದ್ದೆ ಸ್ವಾಮೀಜಿಗಳ ಸೇವೆ
ಮತ್ತು ಕೈಂಕಯ೯
ಮಾದರಿಯಾಗಿದೆ ಎಂದರು. ಚನ್ನಬಸವೇಶ್ವರ ಶಿವಯೋಗಿಗಳ ಗದ್ದುಗೆಯ
ನೂತನ ಕಟ್ಟಡಕ್ಕೆ
ರು.5 ಲಕ್ಷ
ನೀಡುವುದಾಗಿ ಭರವಸೆ ನೀಡಿದರು. ಅಪೆಕ್ಸ್ ಅಧ್ಯಕ್ಷ
ಆರ್.ಎಂ.ಮಂಜುನಾಥಗೌಡ ಮಠದ
ಅಭಿವೖದ್ಧಿಗೆ ರು.1.5ಲಕ್ಷ ನೀಡುವುದಾಗಿ ಭರವಸೆ
ನೀಡಿದರು.
ಹುಕ್ಕೇರಿ ಮಠದ ಸದಾಶಿವ
ಶಿವಯೋಗಿಗಳು, ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ,
ತಾಪಂ ಸದಸ್ಯೆ
ಶಾಂತಾ ಶೇಖರಪ್ಪ,
ಶರಣ ಸಾಹಿತ್ಯ
ಪರಿಷತ್ತು ಅಧ್ಯಕ್ಷ
ಹೊಸಕೋಟೆ ಹಾಲಪ್ಪಗೌಡ,
ಸದಾನಂದ ಶಿವಯೋಗಾಶ್ರಮ
ಟ್ರಸ್ಟ್ ಅಧ್ಯಕ್ಷ
ಬಿ.ಯುವರಾಜ್,
ಸಮುದಾಯದ ಪ್ರಮುಖರಾದ
ಜಯಶೀಲಪ್ಪಗೌಡ, ಹರತಾಳು ಶಿವಕುಮಾರ್, ನಾಗರಾಜ್ ಚಿಕ್ಕಮಣತಿ
ಹಾಲಪ್ಪ, ರಾಜಶೇಖರ್,
ತಾರಕೇಶಗೌಡ, ಶಿವಾನಂದ್, ಸಾರ್ಬಡಿ ಸುರೇಶ್ ಉಪಸ್ಥಿತರಿದ್ದರು.
No comments:
Post a Comment