Friday, December 20, 2013

ಬಸವಳಿದ ಬಿದನೂರಿಗೆ ಕಾಯಕಲ್ಪ ಎಂದು?


ಮೂಲಸೌಕಯ೯ ವಂಚಿತ ಐತಿಹಾಸಿಕ ಸ್ಮಾರಕಗಳು
ಸಚಿವ ಕಿಮ್ಮನೆ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಹೊಸನಗರ:ಐತಿಹಾಸಿಕ ಹಲವು ಸ್ಮಾರಕಗಳ ಕೇಂದ್ರ ಬಿದನೂರು ಬಸವಳಿಯುತ್ತಿದ್ದು ಪ್ರವಾಸಿ ಕೇಂದ್ರವಾಗಿ ಅಭಿವೖದ್ಧಿಯ ನಿರೀಕ್ಷೆ ಇಂದಿಗು ನಿರೀಕ್ಷೆಯಾಗಿಯೆ ಉಳಿದೆ.
ಕೆಳದಿ ಅರಸರ ರಾಜಧಾನಿಯಾಗಿ ಮಹತ್ವ ಪಡೆದು ಕೊಂಡ ಬಿದನೂರು ಇಂದಿನ ನಗರದಲ್ಲಿ ಸದೖಢ ಕೋಟೆ, ದೇವಗಂಗೆ ಕೊಳ, ಅರಸರ ಸಮಾಧಿಗಳು, ಬರೇಕಲ್ಲಿನ ಬತೇರಿ ಸೇರಿಂದತೆ ನೂರಾರು ಪಳಯುಳಿಕೆಗಳಿವೆ. ಆದನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು ಅವರಿಗೆ ಸೂಕ್ತ ಮೂಲಸೌಕಯ೯ಗಳು ಸಿಗದೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ.
ಸ್ಮಾರಕಗಳ ಧ್ವಂಸ:
ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಇಲ್ಲಿಯ ಸ್ಮಾರಕಗಳ ಕೆಳಗೆ ನಿಧಿ ಇದೆ ಪುಕಾರು ಹಬ್ಬುತ್ತಲೆ ಇದ್ದು ಅದನ್ನು ಬಗೆದು ಸ್ಮಾರಕಗಳನ್ನು ಹಾಳುಗೆಡವುವ ಕೆಲಸ ಕೂಡ ಆಗಾಗ್ಗೆ ಘಟಿಸುತ್ತಲೆ ಇದ್ದು ಸಂರಕ್ಷಣೆ ಇಲ್ಲದಂತಾಗಿದೆ. ಹಿಂದೆ ಶ್ರೀಧರಪುರದಲ್ಲಿರುವ ಅರಸರ ಸಮಾಧಿಗಳಲ್ಲಿ ಒಂದನ್ನು ನಿಧಿಯಾಸೆಗಾಗಿ ಬುಡಮೇಲು ಮಾಡಿದ್ದರು. ಬೆನ್ನಲೆ ಹೆಂಡಗದ್ದೆ ಸಮೀಪವಿರುವ ಗಳಿಗೆ ಬಟ್ಟಲು ಎಂಬ ವಿಶಾಲವಾದ ಕಲ್ಲಿನ ಮಂಚವನ್ನು ಕೂಡ ಇದೆ ಕಾರಣಕ್ಕೆ ಧ್ವಂಸ ಮಾಡಿದ್ದರು ಮಾತ್ರವಲ್ಲ ಬಸವನಬ್ಯಾಣ, ಬರೇಕಲ್ಲಿನ ಬತೇರಿ, ದುಬ್ಬಾರತಟ್ಟಿ ಸೇರಿದಂತೆ ಸ್ಮಾರಕಗಳಿರುವ ಹಲವು ಪ್ರದೇಶದಲ್ಲಿ ನಿಧಿ ಶೋಧ ನೆಡಸಿದ ವರದಿಯಾಗಿತ್ತು.
ಮುಳುಗಡೆ ತವರು:
ಹೇಳಿ ಕೇಳಿ ನಗರ ಹೋಬಳಿ ಮುಳುಗಡೆ ತವರು. ಚಕ್ರಾ, ಸಾವೇಹಕ್ಲು, ಮಾಣಿ ಅಣೇಕಟ್ಟುಗಳು ನಿಮಾ೯ಣ ಕಂಡಿದ್ದು ಹಿನ್ನೀರು ವ್ಯಾಪಿಸುತ್ತದೆ. ಮಾತ್ರವಲ್ಲ ಲಿಂಗನಮಕ್ಕಿ ಜಲಾಶಯದ ಜೀವನಾಡಿಯಾಗಿರುವ ಇಲ್ಲಿ ವಿಶಾಲವಾಗಿ ಹಿನ್ನೀರು ತುಂಬಿಕೊಳ್ಳುತ್ತದೆ. ಅಭಿವೖದ್ದಿ ಯೋಜನೆಗಾಗಿ ಸಕಲವನ್ನು ಬರಿದು ಮಾಡಿಕೊಂಡ ಸಾಕಷ್ಟು ಸಂತ್ರಸ್ತರ ಬದುಕು ಇಂದಿಗೂ ಮೂರಾಬಟ್ಟೆಯಾಗಿದೆ. ಕುಟುಂಬಕ್ಕೊಂದು ಉದ್ಯೋಗ ನೀಡುವ ಭರವಸೆ ಕೂಡ ಮರೀಚಿಕೆಯಾಗಿದ್ದು ಐಟಿಐ ತರಬೇತಿ ಪಡೆದುಕೊಂಡು ನೂರಾರು ಯುವಕರ ವಯಸ್ಸು ಮೀರುತ್ತಿದೆ ಹೊರತು ಕೆಲಸ ಮಾತ್ರ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮುಳುಗಡೆಯಿಂದ ಜನರು ಅತಂತ್ರರಾಗಿದ್ದು ಒಂದಡೆಯಾದರೆ ಇಲ್ಲಿಯ ಪ್ರದೇಶ ಬಹುತೇಕ ನೀರಿಗಾಹುತಿಯಾಗಿದ್ದು ಈಗ ಇತಿಹಾಸ. ಆದರೆ ಅಲ್ಲಿಂದ ಪ್ರದೇಶದ ಅಭಿವೖದ್ಧಿಗು ಕೂಡ ಪೂರಕವಾಗಿದ್ದ ಅಂಶಗಳು ಕೂಡ ಹಿನ್ನೀರಿನಲ್ಲಿ ಹುದುಗಿ ಹೋಗಿದ್ದು ಪ್ರದೇಶದ ಪಾಲಿಗೆ ನುಂಗಲಾರದ ಬಿಸಿತುಪ್ಪ.
ಪ್ರವಾಸಿಸ್ಥಳವಾಗಿ ಅಭಿವೖದ್ಧಿಯಾಗಲಿ:
ನಗರ ಹೋಬಳಿಯ ಆಭಿವೖದ್ಧಿಗೆ ಇರುವ ಏಕೈಕ ಆಶಾಕಿರಣ ಇಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಕೖತಿಕ ರಮಣೀಯತೆ. ಅದನ್ನು ಹಾಳುಗೆಡವದೆ ಪ್ರವಾಸೋಧ್ಯಮವಾಗಿ ಅಭಿವೖದ್ಧಿಯಾಗಬೇಕು ಎಂಬುದು ಸ್ಥಳೀಯರ ಹಲವು ವಷ೯ದ ಬೇಡಿಕೆ ಆದರೆ ಅದು ಮಾತ್ರ ಇಂದಿಗೂ ಮರೀಚಿಕೆ.
ಬಿದನೂರಿನ ಅಭಿವೖದ್ಧಿಗಾಗಿ ನಾಲ್ಕು ವಷ೯ಗಳ ಹಿಂದೆ ಸಕಾ೯ರದ ಮಟ್ಟದಲ್ಲಿ ಬಿದನೂರು ಅಭಿವೖದ್ಧಿ ವೇದಿಕೆ ರಚಿಸಿಲಾಗಿದ್ದು ಅಭಿವೖದ್ಧಿ ಬಗ್ಗೆ ಚಚಿ೯ಸಲಾಗಿತ್ತು. ಡಿಸಿ ಅಧ್ಯಕ್ಷರಾಗಿದ್ದ ವೇದಿಕೆ ಎರಡು ಸಭೆಗೆ ಮಾತ್ರ ಸೀಮಿತವಾಗಿದ್ದು ಮತ್ತೊಂದು ದುರಂತ. ನಂತರ ಶಿವಮೊಗ್ಗ ಜಿಲ್ಲೆ ಪ್ರವಾಸೋಧ್ಯಮ ಅಭಿವೖದ್ಧಿ ಪ್ಯಾಕೇಜ್್ನಲ್ಲಿ ಬಿದನೂರನ್ನು ಸೇರಿಸಲಾಗಿದೆ ಎಂಬ ಸಬೂಬು ನೀಡಿ ಬಿದನೂರು ಅಭಿವೖದ್ದಿ ವೇದಿಕೆಗೆ ಎಳ್ಳುನೀರು ಬಿಡಲಾಗಿತ್ತು.
ಸಚಿವರ ಮೇಲೆ ನಿರೀಕ್ಷೆ:
ಕ್ಷೇತ್ರ ತೀಥ೯ಹಳ್ಳಿ ತಾಲೂಕು ಹೊಸನಗರಕ್ಕೆ ಅವಲಂಬಿಸಿದ್ದ ನಗರ ಹೋಬಳಿಯ ತ್ರಿಶಂಕು ಸ್ಥಿತಿಗೆ ಮುಕ್ತಿ ಸಿಗುವುದು ದೂರದ ಮಾತು. ಆದರೆ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಕಿಮ್ಮನೆ ರತ್ನಾಕರ್ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಶಿಕ್ಷಣ ಖಾತೆ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ನಗರ ಹೋಬಳಿಯ ಜನತೆಯ ಹೊಂಗನಸುಗಳಿಗೆ ಜೀವ ಬಂದಂತಾಗಿದೆ. ನಗರ ಹೋಬಳಿಯಲ್ಲಿರುವ ದಕ್ಷಿಣದ ಚಿರಾಪುಂಜಿ ಹುಲಿಕಲ್, ಬಾಳೆಬರೆ, ಮಾಣಿ ಜಲಾಶಯ, ಚಕ್ರಾ ಸಾವೇಹಕ್ಲು ಡ್ಯಾಂ, ನಗರ, ಸಂಪೇಕಟ್ಟೆ, ನಿಟ್ಟೂರು ಭಾಗದ ಪ್ರಾಕೖತಿಕ ಮತ್ತು ಐತಿಹಾಸಿಕ ಶ್ರೀಮಂತಿಕೆಗೆ ಸಾಕ್ಷಿಯಾದ ಪ್ರದೇಶಗಳ ಅಭಿವೖದ್ಧಿ ಅದಕ್ಕು ಮುಖ್ಯವಾಗಿ ಪ್ರವಾಸಿಗರಿಗೆ ಪೂರಕವಾಗಿ ಮೂಲಸೌಕಯ೯ ಒದಗಿಸುವ ನಿಟ್ಟಿನಲ್ಲಿ ಸಚಿವರು ಗಮನ ಹರಿಸಲಿ ಎಂಬ ಆಶಯ ಪ್ರವಾಸಿಗರದ್ದಾಗಿದೆ.
ಬಿದನೂರು ಉತ್ಸವ:
ಕೆಳದಿ ಅರಸರ ಮೂರನೇ ರಾಜಧಾನಿಯಾಗಿ ಮಹತ್ವ ಪಡೆದ ಬಿದನೂರು ಉತ್ಸವ ನಡೆಸಬೇಕು ಎಂಬ ಬೇಡಿಕೆ ನಿರಂತರವಾಗಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳ ಉತ್ಸವ ಅದ್ದೂರಿಯಿಂದ ನಡೆಯುತ್ತಿರಬೇಕಾದರೆ ಬಿದನೂರನ್ನು ನಿಟ್ಟಿನಲ್ಲಿ ಸಕಾ೯ರ ಗಮನ ಹರಿಸಲಿ ಎಂಬುದು ಇತಿಹಾಸ ಪ್ರೀಯರ ಆಶಯ