Tuesday, January 28, 2014

ಗ್ರಾಮೀಣ ಭಾಗದಲ್ಲಿ ಆಂಗ್ಲ ವ್ಯಾಮೋಹ :: ಹೊಸನಗರ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಆತಂಕ


  ಮಾತೃಭಾಷೆಯಲ್ಲೆ ಪ್ರಾಥಮಿಕ ಶಿಕ್ಷಣಕ್ಕೆ ಸಮ್ಮೇಳನಾಧ್ಯಕ್ಷೆ ಎಂ ರಚನಾ ಕಾಮತ್ ಒತ್ತಾಯ
ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಶ್ರಾವ್ಯಸಾಗರ್ ಉದ್ಘಾಟಿಸಿದರು.
ಹೊಸನಗರ:ಇಂದು ಗ್ರಾಮೀಣ ಭಾಗಗಳಲ್ಲೂ ಆಂಗ್ಲ ಭಾಷೆ ವ್ಯಾಮೋಹ ಮೀತಿ ಮೀರುತ್ತಿದೆ. ಕಾನ್ವೆಂಟ್ ಶಿಕ್ಷಣಕ್ಕೆ ಮಾರು ಹೋದ ಗ್ರಾಮೀಣರು ದುಬಾರಿ ಶುಲ್ಕ ನೀಡಿ ಮಕ್ಕಳನ್ನು ದೂರದೂರದ ಖಾಸಗಿ ಶಾಲೆಗಳಿಗೆ ದೂಡುತ್ತಿದ್ದಾರೆ. ಆಂಗ್ಲ ಭಾಷೆಯ ಅತೀ ವ್ಯಾಮೋಹ ಒಳ್ಳೆಯದಲ್ಲ. ಅಂಧ ವ್ಯಾಮೋಹ ನಿಲ್ಲಬೇಕು. ಮಾತೃ ಭಾಷೆಯಲ್ಲೇ ಮೊದಲ ಶಿಕ್ಷಣವಾಬೇಕು ಎಂದು ಎಂ.ರಚನಾಕಾಮತ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಸಕರ ಮಾದರಿ ಶಾಲೆ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷತೆ ವಹಿಸಿ  ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೆ ಕೊಡಿಸಬೇಕು. ಪೋಷಕರು ಆಂಗ್ಲ ವ್ಯಾಮೋಹ ಕೈಬಿಡುವಂತೆ ಮನವಿ ಮಾಡಿದರು.
ಶಿಕ್ಷಕರ ಮಕ್ಕಳು: 
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಇಂದು ಆಂಗ್ಲ ವ್ಯಾಮೋಹ ಸರ್ವ ವ್ಯಾಪಿಯಾಗಿದೆ. ಪಟ್ಟಣ ಮತ್ತು ಗ್ರಾಮೀಣ ಎಂಬ ಬೇಧವಿಲ್ಲ ಎಂದರಲ್ಲದೆ. ಸಕಾ೯ರಿ ಶಿಕ್ಷಕರು ಮೊದಲು ತಮ್ಮ ಮಕ್ಕಳನ್ನು ಸಕಾ೯ರಿ ಶಾಲೆಯಲ್ಲಿ ಓದಿಸಬೇಕು. ಕಾನ್ವೆಂಟ್ ಷೋಕಿಗೆ ಬಿದ್ದ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ತಮ್ಮ ಪ್ರತಿಷ್ಟೆ ಮೆರೆಯುತ್ತಿದ್ದಾರೆ. ಸಕಾ೯ರಿ ಸಂಬಳ ಪಡೆಯುವ ಶಿಕ್ಷಕರಿಗೆ ಸಕಾ೯ರಿ ಶಾಲೆಗಳೇಕೆ ಬೇಡ. ಮಕ್ಕಳನ್ನು ಸಕಾ೯ರಿ ಶಾಲೆಗಳಲ್ಲೇ ಓದಿಸಿ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಹೊಸನಗರ ಮಕ್ಕಳಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮಕ್ಕಳು.
ಇದಕ್ಕೆ ಪ್ರತಿಕ್ರಯಿಸಿದ ಶಾಲಾಭಿವೖದ್ಧಿ ಸಮಿತಿ ಅಧ್ಯಕ್ಷ ಸಕಾ೯ರಿ ಶಿಕ್ಷಕರೇ ಖಾಸಗಿ ಶಿಕ್ಷಣ ಸಂಸ್ಥೆಯನ್ನು ತೆರೆದು ಹಲವು ವಷ೯ಗಳಿಂದ ಸಕಾ೯ರಿ ಶಾಲೆಗಳನ್ನು ವಂಚಿಸುತ್ತಿದ್ದರು ಕೂಡ ಇಲಾಖೆ ಗಮನಹರಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. 2003 ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶ್ರಾವ್ಯ ಸಾಗರ ಸಮ್ಮೇಳನ ಉದ್ಘಾಟಿಸಿದರು.  ಕ್ರೀಡಾ ಪಟು ಮಿಥುನಕುಮಾರ್ ರಾಷ್ರ್ಟದ್ವಜಾರೋಹಣ ಮಾಡಿದರೆ, ನಾಡದ್ವಜಾರೋಹಣವನ್ನು ದಿವ್ಯ ನೆರವೇರಿಸಿದರು. ಯಕ್ಷ ಭಾಲ ಕಲಾವಿದ ಅರವಿಂದ್ ಹಾರೇಬೈಲು ಪರಿಷತ್ ದ್ವಜರೋಹಣ ಮಾಡಿದರು.
ನಿಕಟಪೂರ್ವಅಧ್ಯಕ್ಷ ಜಗತ್ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಮುಖ್ಯಶಿಕ್ಷಕ ಹೆಚ್.ಎಲ್.ಗುರುಮೂತಿ೯, ಪ್ರಮುಖರಾದ ಸದಾನಂದಕಾಮತ್, ಗುರುಮೂತಿ೯, ಮಹಾಬಲ್ ಕಸಾಪ ಪ್ರತಿನಿಧಿಗಳು ಪಾಲ್ಗೊಂಡಿದ್ದರು.  ವೈಭವಿ ಡಿ ಸ್ವಾಗತಿಸಿದರು. ಪ್ರಾಸ್ತವಿಕವಾಗಿ ರತ್ನಾಕರ್ಗೌಡ ಮಾತನಾಡಿದರು. ನಚಿಕೇತ, ಮೈತ್ರೇಯಿ ನಿರೂಪಿಸಿದರು.

No comments:

Post a Comment