Wednesday, August 20, 2014

ಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆರಂಭ..? ಕಾಲೇಜು ಅಗತ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳ ಬೇಟಿ


ಬಿದನೂರು: ರಾಜ್ಯದ ಬೆಳಕಾಗಿ ಸುತ್ತಲೂ ಹಿನ್ನೀರು ತುಂಬಿ ಅಭಿವೃದ್ಧಿ ವಂಚಿತವಾಗಿರುವ ನಗರ ಹೋಬಳಿಗೆ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ನಗರ ಹೋಬಳಿ ಗ್ರಾಮಸ್ಥರು ಒಕ್ಕೊರಲ ಬೇಡಿಕೆ ಇಟ್ಟಿದ್ದಾರೆ.
ಹೋಬಳಿ ಕೇಂದ್ರ ನಗರದಲ್ಲಿ ಪದವಿ ಕಾಲೇಜು ಆರಂಭಕ್ಕೆ ಮುನ್ನ ಪೂರಕ ಸೌಲಭ್ಯಗಳ ಸಂಬಂಧ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆಗಮಿಸಿದ ಡಾ.ಪಿ.ಚಂದ್ರಶೇಖರ್ ನೇತೃತ್ವದ ತಂಡದೊಂದಿಗೆ ಅಭಿಪ್ರಾಯ ಹಂಚಿಕೊಂಡ ಗ್ರಾಮಸ್ಥರು ಬಹು ವಿಸ್ತಾರವಾದ ನಗರ ಹೋಬಳಿಗೆ ಪದವಿ ಕಾಲೇಜು ತುರ್ತು ಅಗತ್ಯವಾಗಿದೆ ಎಂದು ಮನವರಿಕೆ ಮಾಡಿದರು.
ಬಿದನೂರು ಕಾಲೇಜ್ ಆರಂಭಕ್ಕೆ ಬಂಡಿಮಠ ಕಟ್ಟಡ ಪರಿಶೀಲನೆ
ಈಗಾಗಲೇ ನಗರ, ಮಾಸ್ತಿಕಟ್ಟೆ, ನಿಟ್ಟೂರು ಭಾಗದಲ್ಲಿ ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 350ಕ್ಕೆ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ನಗರದಲ್ಲಿ ಪದವಿ ಕಾಲೇಜು ಇಲ್ಲದ ಕಾರಣ ದೂರದ ತಾಲೂಕು ಕೇಂದ್ರ ಹೊಸನಗರ, ಸಾಗರ, ತೀರ್ಥಹಳ್ಳಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ.  ಇದಕ್ಕೆ ಒಗ್ಗದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತರಾಗಬೇಕಾಗಿ ಬಂದಿದೆ. ಮುಳುಗಡೆಯಿಂದ ತತ್ತರಿಸಿ ಹೋಗಿರುವ ನಗರ ಹೋಬಳಿಗೆ ಪದವಿ ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳಿಗೆ ಕೊರತೆ ಇಲ್ಲ. ಕಾಲೇಜು ಇರದ ಕಾರಣ ಬೇರೆಡೆ ಹೋಗುತ್ತಿರುವ ವಿದ್ಯಾರ್ಥಿಗಳು ಇಲ್ಲೆ ಆರಂಭವಾದರೆ ಹೆಚ್ಚಿನ ಉಪಯೋಗ ಪಡುತ್ತಾರೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ಮನವರಿಕೆ ಮಾಡಿದರು.
ಆರಂಭಿಕ ಕಟ್ಟಡ:
ಕಾಲೇಜು ಆರಂಭಕ್ಕೆ ತುತರ್ು ಕಟ್ಟಡ ಅವಶ್ಯಕತೆ ಇದ್ದರೆ ಬಂಡಿಮಠದಲ್ಲಿ ಈ ಹಿಂದೆ ಸಕರ್ಾರಿ ಶಾಲೆ ನಡೆಯುತ್ತಿದ್ದ  ಸುವ್ಯಸ್ಥಿತ ಕಟ್ಟಡ ಇದ್ದು ಕಾಲೇಜು ಆರಂಭಕ್ಕೆ ಯಾವುದೇ ತೊಂದರೆಯಾಗದು ಎಂದು ಗ್ರಾಪಂ ಅಧ್ಯಕ್ಷ ಸತೀಶ್ ಗೌಡ ಭರವಸೆ ನೀಡಿದರಲ್ಲದೆ ಕಟ್ಟಡಕ್ಕೆ ಅಭಿವೃದ್ಧಿ ಅಗತ್ಯವಿದ್ದರೆ ಗ್ರಾಪಂನಿಂದ ಮಾಡಿಕೊಡಲಾಗುವುದು ಎಂದರು. ನಂತರ ಬಂಡಿಮಠಕ್ಕೆ ತೆರಳಿ ಕಟ್ಟಡವನ್ನು ಪರಿಶೀಲಿಸಲಾಯಿತು.
ನಂತರ ಮಾತನಾಡಿದ ಅಧಿಕಾರಿಗಳ ತಂಡ ನೇತೃತ್ವ ವಹಿಸಿದ್ದ ಚಂದ್ರಶೇಖರ್, ಕಾಲೇಜು ಆರಂಭಕ್ಕೆ ಪೂರಕ ವಾತಾವರಣ ಇದ್ದು ಸಮರ್ಪಕ ವರದಿಯನ್ನು ಸಲ್ಲಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಶುಭಾಕೃಷ್ಣಮೂರ್ತಿ,  ಗ್ರಾಪಂ ಸದಸ್ಯ ನಾರಾಯಣ ಕಾಮತ್,  ಪ್ರಮುಖರಾದ ಕೆ.ವಿ.ಕೃಷ್ಣಮೂರ್ತಿ,  ಕೆ.ಪಿ.ನಾರಾಯಣಮೂರ್ತಿ, ದೇವಂಗಂಗೆ ಚಂದ್ರಶೇಖರಶೆಟ್ಟಿ,  ಎಸ್.ಪಕೀರಪ್ಪ,  ಡಾ.ಚೈತನ್ಯ,  ಕೆಸರಮನೆ ಮಧು, ವಡ್ಡಿನಬೈಲು ಸುಬ್ರಹ್ಮಣ್ಯ, ನೂಲಿಗ್ಗೇರಿ ಅಬ್ಬಾಸ್,  ಚಿಕ್ಕಪೇಟೆ ಚಂದ್ರಶೇಖರ್ ಶೆಟ್ಟಿ, ಅಡಗೋಡಿ ಶ್ರೀಧರಶೆಟ್ಟಿ, ವಸುಧಾ, ಅಧಿಕಾರಿಗಳಾದ ನಳೀನ್ ಚಂದ್ರ, ಈಶ್ವರಪ್ಪ, ರಾಮಚಂದ್ರನಾಯ್ಕ ಮತ್ತಿತರರು ಹಾಜರಿದ್ದರು.

Monday, July 28, 2014

ಜು.30: ಕೊಡಚಾದ್ರಿ ಕಾಲೇಜು ವಿದ್ಯಾಥಿ೯ಗಳೊಂದಿಗೆ ಚಿತ್ರಸಾಹಿತಿ ಕವಿರಾಜ್ ಸಂವಾದ


ಜು.30 ಹೊಸನಗರದಲ್ಲಿ ಪತ್ರಿಕಾ ದಿನಾಚರಣೆ:

ಹೊಸನಗರ:ತಾಲೂಕು ಕಾಯ೯ನಿರತ ಪತ್ರಕತ೯ರ ಸಂಘ ಕೊಡಚಾದ್ರಿ ಸಕಾ೯ರಿ ಪ್ರಥಮದಜೆ೯ ಕಾಲೇಜಿನಲ್ಲಿ ಜು.30ರಂದು ಪತ್ರಿಕಾದಿನಾಚರಣೆಯನ್ನು ಆಯೋಜಿಸಿದೆ.
ಜಿಲ್ಲಾ ವಾತಾ೯ ಇಲಾಖೆಯ ಸಹಾಯಕ ನಿದೇ೯ಶಕ ಹಿಮಂತರಾಜು ಜಿ ಕಾಯ೯ಕ್ರಮ ಉದ್ಘಾಟಿಸಲಿದ್ದು, ಮುಖ್ಯಅತಿಥಿಯಾಗಿ ಪಾಲ್ಗೊಳ್ಳಲಿರುವ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ವಿದ್ಯಾಥಿ೯ಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಪಿ ಮತ್ತು ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ವೈ.ಕೆ.ಸೂಯ೯ನಾರಾಯಣ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸುವರು.
ಕಾಯ೯ಕ್ರಮದಲ್ಲಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರಬಂಧ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕಾಯ೯ಕ್ರಮ ಯಶಸ್ವಿಗೊಳಿಸಲು ಸಂಘದ ಪ್ರಕಟಣೆಯಲ್ಲಿ ಕೋರಲಾಗಿದೆ.
'ಕವಿ'ರಾಜ:
 ಹೆಸರಿಗೆ ತಕ್ಕಂತೆ ಕವಿರಾಜನಾಗಿ ಗಾಂಧಿನಗರದಲ್ಲಿ ತನ್ನದೇ ಛಾಪು ಮೂಡಿಸಿರುವ ಕವಿರಾಜ್ ಇದೇ ಮೊದಲಬಾರಿ ಕೊಡಚಾದ್ರಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.  ಮುಳುಗಡೆಯ ಊರಿನಲ್ಲಿ ಹುಟ್ಟಿ, ಇಲ್ಲಿನ ಪರಿಸರದಲ್ಲಿ ಬದುಕಿ, ಇಂದು ಚಲನಚಿತ್ರ ರಂಗದಲ್ಲಿ ಬಹುಮನ್ನಣೆಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಕವಿರಾಜ್  ಸಾಧನೆ ಅನನ್ಯ.

Friday, July 25, 2014

ನಗರ ಸಮೀಪ ಭಾರೀ ಧರೆ ಕುಸಿತ: ಜಾಮಿಜಡ್ಡು ರಸ್ತೆ ಸಂಪರ್ಕ ಕಟ್: 10 ಎಕರೆ ಜಮೀನಿಗೆ ಹಾನಿ


ಹೊಸನಗರ: ಎಡಬಿಡದೆ ಸುರಿದ ಮಳೆಗೆ ರಸ್ತೆಯು ಸೇರಿಕೊಂಡು ಭಾರೀ ಧರೆ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿದು ಅಡಕೆ ಸೇರಿದಂತೆ 10 ಎಕರೆ ಜಮೀನಿಗೆ ಹಾನಿ ಸಂಭವಿಸಿದ ಘಟನೆ ತಾಲೂಕಿನ ನಗರ ಸಮೀಪ ಬೈಸೆ ಗ್ರಾಮದ ಜಾಮಿಜಡ್ಡು ಬಳಿ ನಡೆದಿದೆ.
 ಸುಮಾರು 100 ಅಡಿ ಸುತ್ತಳತೆಯಲಿ ಧರೆ ಕುಸಿದಿದ್ದು ಧರೆ ಕೆಳಭಾಗದ ಹಳ್ಳ ಮುಚ್ಚಿಹೋಗಿದ್ದು ನೀರು ಶಿವರಾಮು ಉಪಧ್ಯಾಯ ಮತ್ತು ನಾರಾಯಣ ಉಪಾಧ್ಯಾಯ ಅಡಕೆ ತೋಟಕ್ಕೆ ನುಗ್ಗಿದೆ. ನಗರ-ಕೊಲ್ಲೂರು ರಸ್ತೆಯ ಯೆಬಗೋಡಿನಿಂದ ಜಾಮಿಜಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿದು ಹೋಗಿದ್ದು ಇನ್ನು ಸರಿಪಡಿಸಲಾಗಿ ಸ್ಥಿತಿ ನಿಮರ್ಾಣವಾಗಿದೆ.
5 ಎಕರೆ ಅಡಕೆ ತೋಟಕ್ಕೆ ನೀರು ನುಗ್ಗಿದ ಕಾರಣ ಅಡಕೆಗೆ ಕೊಳೆರೋಗ ಭೀತಿ ಮತ್ತು ಮರಗಳು ಸಾಯುವ ಬಗ್ಗೆ ಜಮೀನು ಮಾಲೀಕರಲ್ಲಿ ಆತಂಕ ಹುಟ್ಟು ಹಾಕಿದೆ. ಹಳ್ಳ ಸಂಪೂರ್ಣ ಮುಚ್ಚಿ ಹೋಗಿರುವ ಕಾರಣ ಮಣ್ಣು ತೆಗೆದು ಹಳ್ಳವನ್ನು ಮುಕ್ತಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
3 ವರ್ಷದಿಂದ ಕುಸಿತ:
ಕಳೆದ ಮೂರು ವರ್ಷದಿಂದ ಧರೆ ಸ್ವಲ್ಪ ಸ್ವಲ್ಪವಾಗಿ ಕುಸಿಯುತ್ತ ಬಂದಿದ್ದು ಕೂಡಲೇ ಕೆಳಭಾಗದಿಂದ ವಾಲ್ ನಿರ್ಮಿಸಿ ಕುಸಿತ ತಡೆಗಟ್ಟಲು ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸದ ಹಿನ್ನಲೆಯಲ್ಲಿ ಈ ದುರಂತ ಸಂಭವಿಸಿದೆ. ರಸ್ತೆ ಕುಸಿತ ಪರಿಣಾಮ ಪರ್ಯಾಯ ಸಂಪರ್ಕ ರಸ್ತೆ ಇಲ್ಲವಾಗಿದ್ದು ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಸಚಿವರು ಮತ್ತು ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಾರಾಯಣ ಉಪಾಧ್ಯಾಯ ಮನವಿ ಮಾಡಿದ್ದಾರೆ.

ರಂಜಾನ್ ಪ್ರಯುಕ್ತ ಮಸೀದಿಗಳಿಗೆ ಸಚಿವರ ಹಣ್ಣು ಹಂಪಲು ಕೊಡುಗೆ: ಸಚಿವರಾಗಿ ಕಿಮ್ಮನೆಯ ಗಮನಾರ್ಹ ಸಾಧನೆ: ಅಮ್ರಪಾಲಿ ಸುರೇಶ್

ಸಚಿವರ ಪರವಾಗಿ ಅಮ್ರಪಾಲಿ ನೇತೃತ್ವದಲ್ಲಿ ಮಸೀದಿಗಳಿಗೆ ಹಣ್ಣುಹಂಪಲು ವಿತರಣೆ

ಹೊಸನಗರ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಿಮ್ಮನೆ ರತ್ನಾಕರ್ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ತೀರ್ಥಹಳ್ಳಿ ಕಾಂಗ್ರೆಸ್ ಪ್ರಮುಖ ಅಮ್ರಪಾಲಿ ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.
ತಾಲೂಕಿನ ನಗರ ಜುಮ್ಮಾ ಮಸೀದಿಗೆ ತೆರಳಿ ಸಚಿವ ಕಿಮ್ಮನೆಯವರಿಂದ ಪ್ರತಿವರ್ಷ ನೀಡಲಾಗುವ ಹಣ್ಣು ಹಂಪಲು ವಿತರಿಸಿ ರಂಜಾನ ಶುಭಾಶಯ ಕೋರಿ ಮಾತನಾಡಿದರು.
ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಕಿಮ್ಮನೆ ಸದ್ದಿಲ್ಲದೆ ಸಾಧನೆ ಮಾಡುತ್ತಿದ್ದಾರೆ. ಶ್ರೀಸಾಮಾನ್ಯನಿಗೂ ಹತ್ತಿರದಿಂದ ಸಿಗುವ ಅವರ ನೋವುಗಳಿಗೆ ಸ್ಪಂದಿಸುವ ಕಿಮ್ಮನೆ, ಶಿಕ್ಷಣ ಕ್ಷೇತ್ರದಲ್ಲಿ ಸಮವಸ್ತ್ರ ವಿತರಣೆ , ಪಠ್ಯಪುಸ್ತಕ ವಿತರಣೆ ಸೇರಿದಂತೆ ಇಲಾಖೆಗೆ ಸಮಗ್ರ ಕಾಯಕಲ್ಪವನ್ನು ಒಂದೇ ವರ್ಷದಲ್ಲಿ ನೀಡಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ ಎಂದರು.
ಅನಾವಶ್ಯಕ ಟೀಕೆ:
ಯಾವುದೆ ಹಮ್ಮು ಬಿಮ್ಮು ತೋರದೆ ಉತ್ತಮ ಕೆಲಸ ಮಾಡುತ್ತಿರುವ ಕಿಮ್ಮನೆ ವಿರುದ್ಧ ಅನಾವಶ್ಯಕ ಟೀಕೆ ಮಾಡುವುದು ಸಲ್ಲ. ಇನ್ನಷ್ಟು ಉತ್ತಮ ಕೆಲಸ ಮಾಡಲು ಸಹಕರಿಸುವುದು ಅಗತ್ಯವಿದೆ ಎಂದರು.
ಇದಕ್ಕು ಮುನ್ನ ಕೋಡೂರು, ಹೊಸನಗರ, ಜಯನಗರ, ಮಾಸ್ತಿಕಟ್ಟೆ ಸೇರಿದಂತೆ ತಾಲೂಕಿನ ವಿವಿಧ ಮಸೀದಿಗಳಿಗೆ ಬೇಟಿ ನೀಡಿ, ಹಣ್ಣುಹಂಪಲು ನೀಡಿ ಶುಭಾಶಯ ಕೋರಿದರು.
ಪ್ರಮೂಖರಾದ ಅಬ್ದುಲ್ ಸಮದ್ ಬಾಳೇಬೈಲು, ಅಬ್ದುಲ್ ರೆಹಮಾನ್ ನೋಣಬೂರು, ಮಜ್ಸೂದ್ ತೀರ್ಥಹಳ್ಳಿ, ನೂಲಿಗ್ಗೇರಿ ಅಬ್ಬಾಸ್, ಸಾಬಜನ್ ಸಾಬ್, ನಯಾಜ್ ಉಪಸ್ಥಿತರಿದ್ದರು.

 

ನಗರ ಪೊಲೀಸರ ಗುಡ್ಡ ರೋಧನ..!! ಇಲ್ಲಿ ಪೊಲೀಸ್ ಠಾಣೆಗೆ ಹೋಗೋದೆ ದೊಡ್ಡ ಸಾಹಸ!


ಮೂಲಭೂತ ಸೌಕಯ೯ ವಂಚಿತ ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಯ ನಗರ ಪೊಲೀಸ್ ಠಾಣೆ
ಹದಗೆಟ್ಟ ಸಂಪಕ೯ ರಸ್ತೆ| ನೀರಿಲ್ಲ..ವಸತಿ ಗೖಹ ಕೂಡ ಇಲ್ಲ
ಪೊಲೀಸ್ ಠಾಣೆಗೂ ಭದ್ರತಾ ಕಾಂಪೌಂಡ್ ಇಲ್ಲ
ರವಿ ಬಿದನೂರು
ಹೊಸನಗರ:ನಕ್ಸಲ್ ಪ್ರದೇಶಾಭಿವದ್ಧಿ ಹೆಸರಿನಲ್ಲಿ ನಗರಕ್ಕೆ ಪೊಲೀಸ್ ಠಾಣೆ ಲಭ್ಯವಾಗಿ ಹಲವು ವಷ೯ ಕಳೆದು ಕಾಯ೯ನಿವ೯ಹಿಸುತ್ತಿದ್ದರು ಕೂಡ ಠಾಣೆ ಮಾತ್ರ ಮೂಲಭೂತ ಸೌಕಯ೯ದಿಂದ ವಂಚಿತವಾಗಿ ಸಿಬ್ಬಂದಿಗಳು ಮಾತ್ರವಲ್ಲ ನಾಗರೀಕರು ಪರದಾಡು ಪರಿಸ್ಥಿತಿ ನಿಮಾ೯ಣವಾಗಿದೆ.
ತಾಲೂಕಿನ ನಗರ -ಚಿಕ್ಕಪೇಟೆ ಗುಡ್ಡದ ಮೇಲಿರುವ ಪೊಲೀಸ್ ಠಾಣೆಯ ಸ್ಥಿತಿ ಇದು. ಕೊರತೆಯ ಸರಮಾಲೆ ಹೊದ್ದು ಮಲಗಿರುವ ಇಲ್ಲಿ ಕೆಲಸ ಮಾಡುವುದು ದೊಡ್ಡ ಸಾಹಸ ಎಂಬಂತಾಗಿದೆ.
ಹದಗೆಟ್ಟ ಸಂಪಕ೯ ರಸ್ತೆ:
ಚಿಕ್ಕಪೇಟೆಯಿಂದ ಗಣಪತಿ ದೇವಸ್ಥಾನದ ಮಾಗ೯ವಾಗಿ ಠಾಣೆ ತಲುಪಬೇಕು. ದೇವಸ್ಥಾನವರೆಗೆ ರಸ್ತೆ ಕಿರಿದಾಗಿದ್ದರು ಕೂಡ ಡಾಂಬರು ಕಂಡಿದ್ದು ಪರವಾಗಿಲ್ಲ. ಆದರೆ ಯಾವುದೇ ದೊಡ್ಡ ವಾಹನ ಸಂಪಕ೯ ಸಾಧಿಸಲು ಸಾಧ್ಯವಿಲ್ಲ. ದೇವಸ್ಥಾನದಿಂದ ಗುಡ್ಡದ ಮೇಲ್ಭಾಗದ ಠಾಣೆವರೆಗಿನ ಸುಮಾರು 370 ಮೀ ರಸ್ತೆ ಸಂಪೂಣ೯ ಜಖಂ ಆಗಿದೆ. ಮಾತ್ರವಲ್ಲ ಜೆಲ್ಲಿ ಹಾಕಿ ವಷ೯ಗಳೇ ಕಳೆದಿದ್ದು ಇಂದಿಗೂ ಡಾಂಬರು ಕಂಡಿಲ್ಲ. ಜೆಲ್ಲಿಗಳು ಮೇಲೆದ್ದು ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ನಿಮಾ೯ಣವಾಗಿದೆ.
ಪೋಲೀಸ್ ಸಿಬ್ಬಂದಿಗಳೇ ಬೈಕ್, ಜೀಪ್್ನಲ್ಲಿ ಗುಡ್ಡದ ಮೇಲೆ ಹತ್ತಲು ಹರಸಾಹಸ ಪಡುತ್ತಿದ್ದು ಠಾಣೆಗೆ ಬರುವ ಜನರ ಪಾಡು ಹೇಳತೀರದಾಗಿದೆ. ಅದರಲ್ಲೂ ಈಗ ಸುರಿಯುತ್ತಿರುವ ಮಳೆಗೆ ಠಾಣೆಗೆ ಹೋಗುವ ಸಹವಾಸವೇ ಬೇಡಪ್ಪ ಎನ್ನುವಂತಾಗಿದೆ.
ನೀರಿಲ್ಲ:
ಠಾಣೆ ಬಂದಾಗಲಿಂದ ನೀರಿನ ವ್ಯವಸ್ಥೆ ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಪವಾ೯ಗಿಲ್ಲ ಆದರೂ ಕುಡಿಯಲು ನೀರಿಗೆ ಸಂಕಷ್ಟವಿದೆ. ಇನ್ನು ಬೇಸಿಗೆಯಲ್ಲಂತೂ ನೀರು ಬೇಕೆಂದರೆ ಪೊಲೀಸ್ ಸಿಬ್ಬಂದಿಗಳೇ ಗುಡ್ಡದ ಕೆಳಭಾಗದಲ್ಲಿರುವ ಬಾವಿವೊಂದರಿಂದ ಇಲ್ಲ ಹೊಳೆಯ ನೀರನ್ನು ತಂಡು ಠಾಣೆಗೆ ಬಳಸಬೇಕಾದ ಅನಿವಾಯ೯ತೆ ಇದೆ. ಚಿಕ್ಕಪೇಟೆ ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಜಿಪಂ ವತಿಯಿಂದ ಕಾಮಗಾರಿ ಕೈಗೆತ್ತಿಕೊಂಡು ವಷ೯ ಎರಡಾದರು ಇನ್ನು ಕಾಮಗಾರಿ ಮುಗಿದಿಲ್ಲ. ಗುತ್ತಿಗೆದಾರ ನಾಪತ್ತೆಯಾಗಿದ್ದು ಮುಂದೇನು ಎನ್ನುವ ಪರಿಸ್ಥಿತಿ ಇದೆ. ಠಾಣೆ ಎದುರುಗಡೆ ದೊಡ್ಡದಾಗಿ ನೀರಿನ ಟ್ಯಾಂಕ್ ನಿಮಾ೯ಣವಾಗಿದೆ ಬಿಟ್ಟರೆ ನೀರು ಮಾತ್ರ ಇಂದಿಗೂ ಬಂದಿಲ್ಲ. ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆಕೆಡಿಸಿಕೊಳ್ಳದಿರುವುದು ಸಿಬ್ಬಂದಿಗಳಿಗೆ ಬಿಸಿತುಪ್ಪವಾಗಿದೆ.
ವಸತಿಗೖಹ ಇಲ್ಲ:
ಸುಮಾರು 30 ಸಿಬ್ಬಂದಿಗಳ ಅವಶ್ಯಕತೆ ಇರುವ ನಗರ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ ವಸತಿ ಗೖಹ ನಿಮಾ೯ಣ ಇಂದಿಗೂ ಸಾಧ್ಯವಾಗಿಲ್ಲ. ಠಾಣಾ ಪ್ರದೇಶದಲ್ಲಿ ಬಾಡಿಗೆ ಮನೆಗಳ ಅಲಭ್ಯತೆ ಕಾರಣ ಸಿಬ್ಬಂದಿಗಳು ದೂರದ ಹೊಸನಗರ, ಸಾಗರ, ತೀಥ೯ಹಳ್ಳಿ, ಶಿವಮೊಗ್ಗದಲ್ಲಿ ಮನೆ ಮಾಡಿ ಅಲ್ಲಿಂದ ಓಡಾಡಬೇಕಾದ ಸಂದಿಗ್ಧಕ್ಕೆ ಸಿಲುಕಿದ್ದಾರೆ. ವಸತಿ ಗೖಹದ ಬಗ್ಗೆ ಇನ್ನೇನು ಬರುತ್ತದೆ, ಮಂಜೂರಾಗಿದೆ ಹೀಗೆ ಭರವಸೆ ಮಾತ್ರ ಪ್ರತಿವಷ೯ ಕೇಳಿ ಬರುತ್ತಲೇ ಇದೆ.
ನಕ್ಸಲ್ ಪ್ರದೇಶ:
ನಕ್ಸಲ್ ಪ್ರದೇಶದ ವ್ಯಾಪ್ತಿಯ ಭದ್ರತೆಗಾಗಿ ಹೋಬಳಿ ಕೇಂದ್ರ ನಗರದಲ್ಲಿ ನಿಮಾ೯ಣ ಕಂಡ ಪೊಲೀಸ್ ಠಾಣೆ ದುಸ್ಥಿತಿಯೇ ಹೀಗಿದೆ. ಅಲ್ಲದೆ ದೂರದ ಸುಳುಗೋಡು, ಯಡೂರು, ಉಳ್ತಿಗಾ, ನಿಟ್ಟೂರು, ಕೆ.ಬಿ.ಸಕ೯ಲ್ ಸೇರಿದಂತೆ ನೂರಾರು ಗ್ರಾಮಗಳು ಇದೇ ಠಾಣೆ ವ್ಯಾಪ್ತಿಗೆ ಬರಲಿದ್ದು, ಠಾಣೆಯ ಅವ್ಯವಸ್ಥೆಗೆ ನಲುಗಿ ಹೋಗುವಂತಾಗಿದೆ.
ಜನಪ್ರತಿನಿಧಿಗಳು, ಮೇಲ್ಮಟ್ಟದ ಪೊಲೀಸ್ ಅಧಿಕಾರಿಗಳು ಅವ್ಯವಸ್ಥೆ ಬಗ್ಗೆ ಗಮನಿಸಿ ಸೂಕ್ತ ಸೌಲಭ್ಯ ಒದಗಿಸುವಂತೆ ಸಾವ೯ಜನಿಕರು ಆಗ್ರಹಿಸಿದ್ದಾರೆ.
(ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ)

Monday, July 21, 2014

ಮಳೆ..ಮುಳುಗಡೆ.. ಸಂಸ್ಕೃತಿ.. ಶ್ರೀಮಂತಿಕೆ.. ದುರಂತ


ಡಾ.ಮಾರ್ಷಲ್ ಶರಾಂ

 ಬಿದನೂರು: ಮಳೆ..ಮುಳುಗಡೆ.. ಬದುಕು..ಸಂಸ್ಕೃತಿ.. ಮತ್ತು ಯಾತನೆ ಮೇಲೆ ಕೊಡಚಾದ್ರಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕ ಡಾ. ಮಾರ್ಷಲ್ ಶರಾಂ facebook ನಲ್ಲಿ ಬರೆದ ಸಾಲುಗಳನ್ನು ಇಲ್ಲಿ ನೀಡಲಾಗಿದೆ.
ನೀರು ನುಂಗಿದ್ದು ಜನರನ್ನ ಭೂಮಿಯನ್ನ ಮತ್ತು ಭಾವನೆಗಳನ್ನ. ಒಣಗಿದ ಮರಗಳು .ನೀರಮೇಲಿನ ಗುಳ್ಳೆಯ ಹಾಗೆ ಕೆಲಕಾಲ ನಮ್ಮನ್ನು ಕಾಡುತ್ತವೆ. ಮುಳುಗಡೆ ಊರಿಗೆ ಬಂದವರು ಮರಗಳ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ನೀರಲ್ಲಿ ಬೋಟಿಂಗ್ ಮೋಜು ನಡೆಸತ್ತ ಮರ ಮುಳುಗಿದ್ದನ್ನು ಅದರ ಹಿಂದಿನ ವ್ಯಥೆಯನ್ನು ಯಾರೂ ಅರಿಯುವುದಿಲ್ಲ. ವಾಟ್ ಸರ್ಪ್ರೈಸ್ ಎನ್ನುತ್ತ ನೀರ ಮೇಲೆ ತೇಲಾಡುವವರಿಗೆ ನೀರಳಗಿನ ದುಖ ಗೊತ್ತಾಗಲ್ಲ. ಮುಳುಗಿದ ಮರಗಳು ತಮ್ಮ ಸ್ವಾಭಿಮಾನ ಬಿಟ್ಟು ವ್ಯಥೆಯನ್ನು ಹೇಳಿಕೊಳ್ಳುವದಿಲ್ಲ. ಆದರೆ ದುರಾಸೆಯ ಮನುಷ್ಯ ಮರ ಮುಉಳುಗಿಸಿದ ಕತೆಯನ್ನು ಹೆಮ್ಮೆಯಿಂದ ಹೇಳಿಕೊಳ್ಲುವುದು ದುರಂತ
...............................................................
ಮಳೆ ಬಂದರೆ ಜಗತ್ತಿಗೆ ಒಳ್ಳದು. ಮನೆ ಇದ್ದರೆ ಜನರಿಗೆ ಒಳ್ಳೆಯದು. ಗೂಡಿದ್ದರೆ ಹಕ್ಕಿಗೆ ಒಳ್ಳೆದು. ನೀರಿದ್ದರೆ ಜೀವಜಾಲಕ್ಕೆ ಒಳ್ಳದು. ನೀನಿದ್ದರೆ ಎಲ್ಲರಿಗೂ ಒಳ್ಳೆಯದು. ನೀನು ಅಂದರೆ ಯಾರು? ಅವರವರ ಭಾವಕ್ಕೆ ತಕ್ಕಂತೆ ಯಾರೂ ಆಗಬಹುದು. ಅವರವರ ಅಭಿರುಚಿ ಅದು ಯಾರು ಎಂಬುದನ್ನು ನಿಕ್ಕಿ ಮಾಡುತ್ತದೆ.
ಮಳೆ 0ದರೆ ನೀರಲ್ಲ. ಜಲವಲ್ಲ, ಕೆಸರಲ್ಲ. ಅದು ಜೀವ. ಅದು ಹಸಿರು. ಅದು ಉಸಿರು, ಹಲಸಿನ ಬೀಜ ಸುಟ್ಟು ತಿನ್ನುವ ಹೊತ್ತು. ಶೀತವಾಗಿ ಮೂಗು ಸೊರಗುಡುತ್ತ ಸೀನುತ್ತ ಆಚೀಚೆಯವರಿ0 ಬೈಸಿಕೊಳ್ಳುತ್ತ ಕಳೆಯುವ ದಿನಗಳಿವು. ಬಟ್ಟೆ ಒಣಗದೇ ಬೆ0ಕಿ ಒಲೆಯ ಮು0ದೆ ಕೂತು ಬಟ್ಟೆ ಒಣಗಿಸಿಕೊಳ್ಳುತ್ತಿದ್ದ ನೆನಪು. ಈಗ ಒಲೆ ಇಲ್. ಬಟ್ಟೆ ಒಣಗಿಸಿಕೊಳ್ಳುವ ಮಜಾನೂ ಇಲ್ಲ.ಮಳೆ ಹುಳ ಹಿಡಿದು ಬೆ0ಕಿಪೊಟ್ಟಣದಲ್ಲಿ ಹಾಕಿಟ್ಟು ಆಡುವ ಹುಡುಗರಿಲ್ಲ. ನೀರಲ್ಲಿ ಕಾಗದ ದೋಣಿ ತೇಲಿಬಿಟ್ಟು 0ಭ್ರಮಿಸುವ ಮನಸ್ಸಗಳಿಲ್ಲ. ಮಳೆಬಿಲ್ಲನ್ನು ಅನುಭವಿಸುವ ಹಿರಿಯರೂ 0ಕಾಗಿದ್ದಾರೆ ಯಾಕೋ ಗೊತ್ತಿಲ್ಲ. ಮಳೆಯ ಮಜಾ ಇರೋದೇ ಹತ್ ಮೀನ್ ಹೊಡೆಯಯವಾಗ 0 ನನ್ ಹಿರಿಯೋರು ಹೇಳ್ತಿದ್ರು. ಇದು ನಿಜಾನೇ ಆಗಿದ್ರೆ ಬ್ಯಾಟರಿ ಹಿಡ್ಕ0ಡು ಹೊರಡುವಾ....................
........................................
ಗೊರಬು ಇಲ್ಲ. 0ಬಳಿ ಕೊಪ್ಪೆ ಇಲ್ಲ ಗೋಡೆಗೆ ತಡಿಕೆಗಳಿಲ್ಲ. ನೀರಿಗೂ ಬರ ಭಾವನೆಗಳಿಗೂ ಬರ..

ಡಾ.ಮಾರ್ಷಲ್ ಶರಾಂ

Saturday, July 19, 2014

ಕೊಡಚಾದ್ರಿ ಸಮೀಪದ ರಸ್ತೆ ಕುಸಿತ ಸಂಪಕ೯ದ ಆತಂಕದಲ್ಲಿ ಸ್ಥಳೀಯ ನಿವಾಸಿಗಳು

ಹೊಸನಗರ:ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಪ್ರಸಿದ್ಧ ಕೊಡಚಾದ್ರಿ ಗಿರಿಗೆ ತೆರಳುವ ಗೌರಿಕೆರೆ - ಕಟ್ಟಿನಹೊಳೆ ಮಾಗ೯ ಮದ್ಯದಲ್ಲಿ ರಸ್ತೆ ಭಾರೀ ಕುಸಿತ ಕಂಡಿದೆ.
ಶುಕ್ರವಾರ ಬೆಳಿಗ್ಗೆ ಕುಸಿತ ಕಂಡು ಬಂದಿದ್ದು, ಈ ಮಾಗ೯ದಲ್ಲಿ ವಾಹನ ಸಂಪಕ೯ ಕಡಿತಗೊಂಡಿದೆ. ರಸ್ತೆ ಕುಸಿತದಿಂದಾಗಿ ಕುಂಬ್ಳೆ, ಮಂಜಗಳಲೆ, ಕಟ್ಟಿನೊಳೆ ಸೇರಿದಂತೆ ಕುಸಿತ ಕಂಡ ರಸ್ತೆ ಮಾಗ೯ದ ಸಂಪಕ೯ ಹೊಂದಿರುವ ಗ್ರಾಮಗಳಿಗೆ ಸಂಪಕ೯ ಇಲ್ಲದಂತಾಗಿದೆ. ಬಸ್ಸಿನ ಸಂಪಕ೯ ಕೂಡ ಸಾಧ್ಯವಾಗದ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗೆ ಬರುವ ವಿದ್ಯಾಥಿ೯ಗಳಿಗೆ ದಿಕ್ಕು ತೋಚದಂತ ಪರಿಸ್ಥಿತಿ ನಿಮಾ೯ಣವಾಗಿದೆ.
ರಸ್ತೆ ಕುಸಿದಿರುವ ಹಿನ್ನಲೆಯಲ್ಲಿ ವಿದ್ಯಾಥಿ೯ಗಳು ಸುಮಾರು 8 ಕಿಮೀ ನಡದೇ ಬರಬೇಕಾದ ಪರಿಸ್ಥಿತಿ ಇದೆ. ಸುತ್ತಾಕಿ ಸಂಪೇಕಟ್ಟೆ ಮಾಗ೯ದಿಂದ ಬರಬಹುದಾದರು ಬಸ್ಸಿನ ವ್ಯವಸ್ಥೆ ಇಲ್ಲ.
ಪ್ರವಾಸಿಗಳಿಗೆ ತೊಂದರೆ:
ವಿಶ್ವ ಪ್ರಸಿದ್ಧ ಕೊಡಚಾದ್ರಿ ಅದರಲ್ಲು ಮಳೆ ಪ್ರಾರಂಭ ಆದ ನಂತರ ಜೀವಕಳೆ ತುಂಬಿಕೊಂಡಿರುವ ಹಿಡ್ಲಮನೆ ಫಾಲ್ಸ್್ಗೆ ಹೋಗಲು ಇದೇ ಮಾಗ೯ ಪ್ರಮುಖವಾಗಿದ್ದು ಪ್ರವಾಸಿಗರು ಈ ತಾಣಕ್ಕೆ ತೆರಳಲು ಕಷ್ಟಸಾಧ್ಯವಾಗಿದೆ.
ಸ್ಥಳೀಯರ ಆಕ್ರೋಶ:
ಕಳೆದ ಎರಡು ವಷ೯ದಿಂದ ರಸ್ತೆ ನಿವ೯ಹಣೆ ಮಾಡದಿರುವುದು ಮತ್ತು ಮುಂಜಾಗ್ರತೆ ವಹಿಸದಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅಮ್ಲಾಡಿ ಸತೀಶ್ ಸೇರಿದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕಿಮ್ಮನೆ ರತ್ನಾಕರ್ ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು ಮತ್ತು ಶಾಲಾ ಮಕ್ಕಳು, ಪ್ರವಾಸಿಗರು ಮತ್ತು ಸುತ್ತಮುತ್ತಲಿನ ಜನತೆ ಸಂಪಕ೯ ಸಾಧಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Thursday, July 17, 2014

ಕೊಡಚಾದ್ರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶ ಆರಂಭ

ಕೊಡಚಾದ್ರಿ ಪ್ರ ದ ಕಾಲೇಜು, ಹೊಸನಗರ
ಹೊಸನಗರ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2014 - 15 ನೇ ಸಾಲಿಗೆ ಕನ್ನಡ ಮತ್ತು ಅರ್ಥಶಾಸ್ತ್ರ  ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶ ಆರಂಭವಾಗಿದೆ.
ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಜುಲೈ 30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳು ಸದರಿ ಕಾಲೇಜಿನಲ್ಲಿ ದೊರೆಯಲಿದೆ.
ಹೆಚ್ಚಿನ ಮಾಹಿತಿಗೆ ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಬಿ,  ಕನ್ನಡವಿಭಾಗದ ಸಂಯೋಜಕ ಡಾ.ಮಾರ್ಷಲ್ ಶರಾಂ 9448628434,  ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಪ್ರೊ.ಪಿ ನಾಗರಾಜ್ 9449943213 ಮತ್ತು ಕಚೇರಿ ದೂರವಾಣಿ 08185-221360ಕ್ಕೆ ಸಂಪರ್ಕಿಸ ಬಹುದು ಎಂದು ಪ್ರಾಂಶುಪಾಲ ಚಂದ್ರಶೇಖರ್ ಬಿ ತಿಳಿಸಿದ್ದಾರೆ.

Tuesday, July 15, 2014

ಬಿದನೂರು ನಗರಕ್ಕೆ ಬರಲು "ಆಪತ್ಪಾಂಧವ" ರೆಡಿ... ಇದು ಜನಾನುರಾಗಿ ದಿ.ರಾಮಯ್ಯರವರ ಕನಸಿನ ಕೂಸು

ನಗರದ ಆಪತ್ಬಾಂಧವ
ಯಕ್ಷಗಾನ ಕಲಾವಿದ ದಿ.ನಗರ ಜಗನ್ನಾಥ ಶೆಟ್ಟಿಯವ ರ ಸ್ಮರಣಾರ್ಥವಾಗಿ ತುರ್ತು ಸೇವೆಗೆ ಸಜ್ಜು
ಬಿದನೂರು: ನಗರ ಭಾಗದ ಜನತೆಗೆ ಸಂತಸದ ಸುದ್ದಿ. ಖ್ಯಾತ ಯಕ್ಷಗಾನ ಕಲಾವಿದ ದಿ.ನಗರ ಜಗನ್ನಾಥ ಶೆಟ್ಟಿ ಸ್ಮರಣಾರ್ಥವಾಗಿ ತುರ್ತುಸೇವೆಯ ಆಶಯದೊಂದಿಗೆ ಆಪತ್ಪಾಂಧವ ಬಿದನೂರು ನಗರಕ್ಕೆ ಬರಲು ಸಜ್ಜುಗೊಂಡಿದೆ.
ಇದರೊಂದಿಗೆ ನಗರದ ಮಾಣಿಕ್ಯ, ಜನಾನುರಾಗಿ ದಿ.ಸಿ.ರಾಮಚಂದ್ರರಾವ್ (ರಾಮಯ್ಯ) ಕನಸು ಕೂಡ ಈಡೇರುವ ಹಂತಕ್ಕೆ ಬಂದಿದೆ.
ಶೆಟ್ಟರ ಸಂಸ್ಮರಣೆ:
ಬಡುಗು ತಿಟ್ಟಿನ ಯಕ್ಷಗಾನ ಲೋಕದ ರಂಗಸ್ಥಳ ರಾಜನಾಗಿ ಮೆರೆದ ದಿ.ನಗರ ಜಗನ್ನಾಥ ಶೆಟ್ಟರು ಅಸ್ತಂಗತರಾಗಿ 10 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ರಾಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಸುಮ್ಮನೆ ಕಾರ್ಯಕ್ರಮ ಮಾಡುವುದಕ್ಕಿಂತ ನಗರದ ಬಡ ಕೂಲಿಕಾರ್ಮಿಕರು, ಅಸಹಾಯಕರು, ಒಟ್ಟಾರೆ ಸಮಸ್ತ ಗ್ರಾಮಸ್ತರಿಗೆ ಉಪಯೋಗವಾಗುವ ರೀತಿಯಲ್ಲಿ ಶಾಶ್ವತ ಕಾರ್ಯಕ್ರಮವನ್ನಾಗಿಸಬೇಕು ಎಂಬ ಆಶಯ ಆಯೋಜಕರದ್ದಾಗಿತ್ತು.  ನಗರಕ್ಕೆ ತುರ್ತು ಸೇವೆಗೆ ಅಂಬ್ಯುಲೆನ್ಸ್ ತರಬೇಕು ಎಂದು ಚಿಂತನೆ ಹರಿಬಿಟ್ಟವರು ನಗರದ ರಾಮಯ್ಯ.
ರಾಮಯ್ಯನವರ ಅಧ್ಯಕ್ಷತೆ, ದೇವಗಂಗೆ ಚಂದ್ರಶೇಖರ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ರಚಿತವಾದ ಜಗನ್ನಾಥಶೆಟ್ಟರ ಸಂಸ್ಮರಣಾ ಸಮಿತಿ ವತಿಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಮಾತ್ರವಲ್ಲ ಅಂಬ್ಯುಲೆನ್ಸ್ ತರಲು ವೇದಿಕೆ ಕೂಡ ಸಜ್ಜಾಯಿತು.
ಇದಕ್ಕೆ ನಗರದ ನಾಗರಿಕರು ಕೂಡ  ಆರ್ಥಿಕ ಸಹಕಾರ ನೀಡಿ ಹುರಿದುಂಬಿಸಿದರು. ಹಾಗಾಗಿಯೇ ನಗರ ಹೋಬಳಿಯ ಸಮಸ್ತ ಜನರ ತುರ್ತುಸೇವೆಗೆ ಅಂಬ್ಯುಲೆನ್ಸ್ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಪತ್ಬಾಂಧವನಾಗಿ ನಗರಕ್ಕೆ ಬರಲಿದೆ.
ಆದರೆ ಇದಕ್ಕೆ ಜೀವ ತುಂಬಿದ ರಾಮಯ್ಯ ಇಂದು ನಮ್ಮೊಂದಿಗಿಲ್ಲ ಆದರೆ ಅವರ ಕನಸು ಮತ್ತು ಜಗನ್ನಾಥಶೆಟ್ಟರ ಸಂಸ್ಮರಣೆ ಸಾರ್ಥಕವಾಗುತ್ತಿರುವುದು ಮಾತ್ರ ಸಂತಸದ ವಿಚಾರ
ರಾಮಯ್ಯ ಸಹೋದರ ಸಿ.ಅಜಯ್ ಅಧ್ಯಕ್ಷತೆಯ ಬಿದನೂರು ಸಾಂಸ್ಕೃತಿಕ ವೇದಿಕೆ ಮತ್ತು ನಗರ ಆಸ್ಪತ್ರೆಯ ಸಹಯೋಗದಲ್ಲಿ ಅಂಬ್ಯುಲೆನ್ಸ್ ಕಾರ್ಯನಿರ್ವಹಿಸಲು ಸಜ್ಜಾಗಿದೆ.

Sunday, July 13, 2014

ಹುಲಿಕಲ್ ಘಾಟ್ ಮಡಿಲಲ್ಲಿ... ಕಣ್ಣುಕುಕ್ಕುತ್ತಿರುವ ಬಾಳೆಬರೆ ಜಲಧಾರೆ....



ಮಳೆಯ ಬರ ನೀಗಿಸಿದ ಪುನವ೯ಸು ವಷ೯ಧಾರೆ : ಶರಾವತಿ, ವಾರಾಹಿ ಹಿನ್ನೀರ ಪ್ರದೇಶದಲ್ಲಿ ಧಾರಾಕಾರ ಮಳೆ
 
ಬಿದನೂರು:ಜೂನ್ ತಿಂಗಳಿಂದ ಎದುರಿಸಿದ್ದ ಮಳೆಯ ಬರಕ್ಕೆ ಪುನವ೯ಸು ಬ್ರೇಕ್ ಹಾಕಿದ್ದು ಕಳೆದ ಮೂರು ದಿನಗಳಿಂದ ಲಿಂಗನಮಕ್ಕಿ ಶರಾವತಿ ಮತ್ತು ವಾರಾಹಿ ಹಿನ್ನೀರ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ನೀರಿಲ್ಲದೆ ಬಣಗುಟ್ಟಿದ್ದ ಹಿನ್ನೀರು ಪ್ರದೇಶ ಮತ್ತೆ ಜೀವಕಳೆ ಪಡೆದುಕೊಂಡಿದೆ. ನಾಟಿ ಕೖಷಿ ಚಟುವಟಿಕೆಗೆ ನೀರಿಗಾಗಿ ಹಾತೊರೆಯುತ್ತಿದ್ದ ಕೖಷಿ ಜಮೀನುಗಳು ನೀರು ತುಂಬಿಕೊಂಡಿದ್ದು ಕೖಷಿಯಲ್ಲಿ ರೈತರು ಬಿರುಸಾಗುವಂತೆ ಮಾಡಿದೆ.
ಮಳೆಯ ವಿವರ:
ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಹುಲಿಕಲ್ ನಲ್ಲಿ ಅತೀಹೆಚ್ಚು 131 ಮಿಮೀ ಮಳೆಯಾಗಿದೆ. ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 122, ಯಡೂರಿನಲ್ಲಿ 101 ಮಿಮೀ, ಮಾಸ್ತಿಕಟ್ಟೆಯಲ್ಲಿ 117 ಮಿಮೀ ಮಳೆ ಸುರಿದಿದೆ. ಇನ್ನು ಶರಾವತಿ ಹಿನ್ನೀರು ಪ್ರದೇಶವಾದ ಮತ್ತಿಮನೆಯಲ್ಲಿ 103 ಮಿಮೀ, ಶಂಕಣ್ಣ ಶ್ಯಾನುಬೋಗ್ ಗ್ರಾಪಂ ವ್ಯಾಪ್ತಿಯಲ್ಲಿ 71 ಮಿಮೀ, ತುಮರಿ ಭಾಗದಲ್ಲಿ 82 ಮಿಮೀ, ಖೈರಗುಂದ್ ಗ್ರಾಪಂ ವ್ಯಾಪ್ತಿಯಲ್ಲಿ 197 ಮಿಮೀ, ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ 99 ಮಿಮೀ ಮಳೆ ಸುರಿದಿದೆ.
ನಗರ, ಕಾರಗಡಿ ಅರೋಡಿ ಬಹುತೇಕ ಕಡೆ  ಸರಾಸರಿ 100 ಮಿಮೀ ಮಳೆ ಸುರಿದೆ. ಮಳೆ ಮತ್ತು ಗಾಳಿಯ ತೀವ್ರತೆಗೆ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬಂದಿದೆ. ಒಟ್ಟಾರೆ ಪುನವ೯ಸು ತಿಂಗಳಿಂದ ಮಳೆಯಿಲ್ಲದೆ ತತ್ತರಿಸಿದ್ದ ಜನರಿಗೆ ವರವಾಗಿ ಪರಿಣಮಿಸಿದೆ.
ಧುಮ್ಮಿಕ್ಕಿದ ಬಾಳೆಬರೆ:

ಮೂರುದಿನಗಳಿಂದ ಸುರಿಯುತ್ತಿರ ಮಳೆಯಿಂದಾಗಿ ಹುಲಿಕರ್ ಘಾಟ್್ನಲ್ಲಿ ಬರುವ ಬಾಳೆಬರೆ ಜಲಪಾತ ಧುಮ್ಮಿಕ್ಕುತ್ತಿದೆ. ನೇರವಾಗಿ ಹೆದ್ದಾರಿಗೆ ಧುಮುಕುವ ಜಲಧಾರೆ ಪ್ರತಿವಷ೯ದಂತೆ ಮತ್ತೆ ಪ್ರಯಾಣಿಕರ ಮನಸೂರೆಗೊಳ್ಳುತ್ತಿದೆ. ಸುಮಾರು 300 ಅಡಿಯಿಂದ ಬಂಡೆಕಲ್ಲುಗಳ ನಡುವೆ ಕೆಳಗೆ ಹರಿಯುವ ಜಲಧಾರೆ ಮತ್ತೆ ಜೀವಕಳೆ ಕಂಡುಗೊಂಡಿದ್ದು ಮಳೆಯ ತೀವ್ರತೆಗೆ ಸಾಕ್ಷಿ ಎನಿಸಿದೆ.
ಮರಣ ಕಂಡ ಮಂಗ:
ತಾಲೂಕಿನಾಧ್ಯಂತ ಸುರಿಯುತ್ತಿರುವ ವಷ೯ಧಾರೆಗೆ ಮಾರುತಿಪುರ ಅಂಬೇಡ್ಕರ್ ಕಾಲೋನೀ ಬಳಿಯ ಬೖಹತ್ ಮಾವಿನಮರವೊಂದು ಧರೆಗುರುಳಿದೆ. ಮರದಲ್ಲಿ ಮಂಗವೊಂದು ಇದ್ದು ಮರ ಬೀಳುವ ರಭಸಕ್ಕೆ ಅಲ್ಲೆ ಸಾವು ಕಂಡಿದೆ. ನಂತರ  ಭಾಸ್ಕರ ಶೆಟ್ಟಿ ನೇತೖತ್ವದಲ್ಲಿ ಸ್ಥಳೀಯರು ಮರವನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ ಪುರೋಹಿತ ಸುಬ್ರಹ್ಮಣ್ಯ ಭಟ್ ನೇತೖತ್ವದಲ್ಲಿ ಸಾವನಪ್ಪಿದ ಮಂಗವನ್ನು ವಿಧಿವಿತ್ತಾಗಿ ಅಂತ್ಯಕ್ರಿಯೆ ನೆಡಸಲಾಯಿತು.