Wednesday, January 15, 2014

ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ : ಡಾ.ಆರ್.ಎಂ.ಮುಂಜುನಾಥ ಗೌಡ


ಕಾಯ೯ಕತ೯ರ ಸಮ್ಮುಖದಲ್ಲಿ ಮನಬಿಚ್ಚಿದ ರಾಜ್ಯ ಅಪೆಕ್ಸ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ
ಹೊಸನಗರ:ಕೆಜೆಪಿ ಬಿಜೆಪಿ ವಿಲೀನಗೊಂಡಿದ್ದರೂ ಕೂಡ ನಾನು ಮಾತ್ರ ಬಿಜೆಪಿ ಹೋಗು ಮಾತೆ ಇಲ್ಲ. ಬೆನ್ನಿಗೆ ಚೂರಿ ಹಾಕುವವರೊಂದಿಗೆ ಹೊಂದಾಣಿಕೆ ಹೇಗೆ ಸಾಧ್ಯ ಎಂದು ರಾಜ್ಯ ಅಪೆಕ್ಸ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಕರಿಮನೆ ಚಂಡಿಕೇಶ್ವರಿ ಸಭಾಂಗಣದಲ್ಲಿ ಮುಂದಿನ ರಾಜಕೀಯ ನಿಧಾ೯ರದ ಬಗ್ಗೆ ಕಾಯ೯ಕತ೯ರಿಂದ ಅಭಿಪ್ರಾಯ ಪಡೆದ ಅವರು, ಮುಂದಿನ ಹೆಜ್ಜೆ ಬಗ್ಗೆ ಶೀಘ್ರದಲ್ಲೆ ತೀಮಾ೯ನ ಪ್ರಕಟಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಜೆ.ಹೆಚ್.ಪಟೇಲ್್ರನ್ನು ಅತ್ಯಂತ ಗೌರವದಿಂದ ಕಂಡಿದ್ದೇನೆ ಮತ್ತು ಬೆರೆತಿದ್ದೇನೆ. ಅದೆ ರೀತಿ ಬಿ.ಎಸ್.ಯಡಿಯೂರಪ್ಪರ ಬಗ್ಗೆ ಕೂಡ ಗೌರವ ಹೊಂದಿದ್ದು, ಕೆಜೆಪಿ ಕಟ್ಟಿದಾಗ ಅವರ ಬೆಂಬಲಕ್ಕೆ ನಿಂತಿದ್ದೆ. ಆದರೆ ಬಿಜೆಪಿಯೊಂದಿಗೆ ವಿಲೀನ ನನಗೆ ಯಾಕೊ ಸರಿ ಕಾಣುತ್ತಿಲ್ಲ ಎನ್ನುವ ಮೂಲಕ ಬಿಜೆಪಿ ಬಗ್ಗೆ ತಮ್ಮ ನಿಲುವನ್ನು ಬಹಿರಂಗಗೊಳಿಸಿದ್ದಾರೆ.
 ಕೆಜೆಪಿ ಕಟ್ಟಿದ ಕಾಯ೯ಕತ೯ರು ಮತ್ತು ಬೆಂಬಲಿಗರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇನೆ. ಬಿಜೆಪಿಗೆ ಹೋದಲ್ಲಿ ಕಿರುಕುಳ ತಪ್ಪಿದ್ದಲ್ಲ. ಹಾಗಾಗಿ ವಿಭಿನ್ನವಾಗಿ ಆಲೋಚಿಸುತ್ತಿದ್ದು ಶೀಘ್ರದಲ್ಲಿ ತೀಮಾ೯ನ ಕೈಗೊಳ್ಳುತ್ತೇನೆ. ಬೆಂಬಲಿಗರಾರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.
ಹಾಗಂತ ಕಾಂಗ್ರೆಸ್, ಜೆಡಿಎಸ್ ಬಗ್ಗೆ ಉತ್ತಮ ಭಾವನೆ ಇಲ್ಲ. ದೆಹಲಿಯಲ್ಲಿ ಆಮ್ ಆದ್ಮಿ ಸಕಾ೯ರ ರಚನೆಯಾಗಿರುವುದು ನೋಡಿದರೆ ರಾಜಕೀಯ ದಿಕ್ಸೂಚಿ ಬದಲಾಗುತ್ತಿದೆ. ಬಿಜೆಪಿ ಮೋದಿಯನ್ನು ಪ್ರಧಾನಿ ಅಭ್ಯಥಿ೯ ಎಂದು ಬಿಂಬಿಸಿದರೂ ರಾಜಧಾನಿಯಲ್ಲಿ ಸಕಾ೯ರ ರಚಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇನ್ನು ಅತ್ಯಧಿಕ ಸ್ಥಾನ ಹೊಂದಿರುವ ಉತ್ತರಪ್ರದೇಶದಲ್ಲೂ ಕಾಂಗ್ರೆಸ್ ಬಿಜೆಪಿ ಆಟ ನಡೆಯುವ ಸಾಧ್ಯತೆ ಇಲ್ಲ. ಅಲ್ಲೇನಿದ್ದರೂ ಎಸ್.ಪಿ ಮತ್ತು ಬಿಎಸ್್ಪಿ ನಡುವೆ ಸ್ಪಧೆ೯ ಕಂಡುಬರುತ್ತಿದೆ ಎಂದರು.
ವಿಭಿನ್ನ ಅಭಿಪ್ರಾಯ:
ಇದಕ್ಕು ಮುನ್ನ ತಮ್ಮ ಅಭಿಪ್ರಾಯ ತಿಳಿಸಿದ ಕಾಯ೯ಕತ೯ರಲ್ಲಿ ಕೆಲವರು ಯಾವುದೆ ಪಕ್ಷ ಹೋಗೋದು ಬೇಡ. ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಬೆಂಬಲಿಸೋಣ, ಇನ್ನು ಕೆಲವರು ತಟಸ್ಥವಾಗಿರಿ ಎಂದರೆ ಬಹುತೇಕ ಕಾಯ೯ಕತ೯ರು ನಿಮ್ಮ ನಿಧಾ೯ರಕ್ಕೆ ನಾವು ಬದ್ದರಾಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಪ್ರಮುಖರಾದ ಸಚೀಂದ್ರಹೆಗಡೆ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ದೊಡ್ಲೆಪಾಲ್ ಚಂದ್ರಶೇಖರ್, ಡಿ.ಟಿ.ಸತ್ಯನಾರಾಯಣ, ಸುಧೀರ್, ದೇವೇಂದ್ರ, ಸುಮಾ ಸುಬ್ರಹ್ಮಣ್ಯ, ಸುಷ್ಮಾ ಸಂಜಯ್, ವಿದ್ಯಾಧರ್, ಗುರುಶಂಕರ್ ಶ್ರೀಧರಶೆಟ್ಟಿ ಉಪಸ್ಥಿತರಿದ್ದರು.

No comments:

Post a Comment