Sunday, January 19, 2014

ಶಿಕ್ಷಣ ವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಜಾಗೃತರಾಗಬೇಕಿದೆ :: ಬಂಗಾರಮಕ್ಕಿ ಶ್ರೀ ಮಾರುತಿ ಗುರೂಜಿ ಅಭಿಮತ


ಹೊಸನಗರದಲ್ಲಿ ವಿದ್ಯಾಸಂಸ್ಥೆಯ ಗುರೂಜಿ ವಿದ್ಯಾಲಯದ ವಾರ್ಷಿಕ ಸಮಾರಂಭ
ಹೊಸನಗರ:-ದಿನಕ್ಕೊಂದು ರೀತಿಯ ಬದಲಾವಣೆ ಹಾಗೂ ಹೊಸತನದಿಂದಾಗಿ ಇಂದಿನ ಶಿಕ್ಷಣ ಹದಗೆಡುತ್ತಿದ್ದು ,ವ್ಯವಸ್ಥೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ತಿಳಿಸಿದರು.
ಅವರು ಇಲ್ಲಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಶ್ರೀ ಗುರೂಜಿ ವಿದ್ಯಾಲಯದ ಸಮಾರಂಭ ಉದ್ಘಾಟಿಸಿ, ಶಿಕ್ಷಣದ ಮಾಧ್ಯಮದ ಬಗ್ಗೆ ಇಂದು ವ್ಯಾಪಕ ಚಚೆ೯ ನಡೆದಿದೆ. ನಾವೆಲ್ಲ ಕನ್ನಡಿಗರಾಗಿದ್ದು ನಮ್ಮ ಮಾತೃಭಾಷೆಯೊಂದಿಗೆ ನೆರೆಹೊರೆ ಭಾಷೆಗಳನ್ನು ಕಲಿಯಬಹುದು. ಆದರೆ ಭಾಷೆಯ ಮೇಲಿನ ತಡೆ, ಜ್ಞಾನದ ಎಲ್ಲೆ ಇಲ್ಲದಿದ್ದಾಗ ಸವಾ೯ಂಗೀಣ ಅಭಿವೃದ್ಧಿ ಸಾಧ್ಯ ಎಂದರು.
  ಶಿಕ್ಷಣದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು.  ಉದ್ಯೋಗ ನೀಡುವಂತಹ, ಸ್ವಾವಲಂಬಿತನದಿಂದ ಬದುಕುವಂತಹ ದಾರಿಯನ್ನು ಶಿಕ್ಷಣ ನೀಡಬೇಕು.  ಪ್ರತಿಯೊಂದು ಮಗುವೂ ಪ್ರತಿಭೆಯನ್ನು ಹೊಂದಿರುತ್ತದೆ ಅದನ್ನು ಗುರುತಿಸಬೇಕು, ಇಂದು ಸಮಾಜದಲ್ಲಿ ಎಲ್ಲ ಅವ್ಯವಸ್ಥೆಗಳು ಶಿಕ್ಷಿತರಿಂದಲೇ ನಡೆಯುತ್ತಿರುವುದು ವಿಷಾದನೀಯ ಎಂದರು.  ಹೊಟ್ಟೆಪಾಡಿಗಾಗಿ ದಾರಿ ತಪ್ಪುತ್ತಿರುವುದು ನಿಂತರೆ ಸಮಾಜದಲ್ಲಿ ಅಪರಾಧಗಳು ನಿಲ್ಲುತ್ತವೆ ಎಂದರು.
ಭಾರತ ಜಗತ್ತಿಗೆ ಮೇಲ್ಪಂಕ್ತಿ:
 ನಮ್ಮ ದೇಶ ಸಂಸ್ಕಾರ-ಸಂಸ್ಕೃತಿಯ ಗುರು, ಗುರುವಿಗೇ ಗುರು.  ನಮ್ಮ ಆಚಾರ-ವಿಚಾರಗಳನ್ನು ಆಯುವರ್ೇದ, ಯೋಗ,ರಾಮಾಯಣ,ಮಹಾಭಾರತ ಇವುಗಳನ್ನು ಅರಿಯುವುದಕ್ಕಾಗಿ ಮತ್ತು ಪಾಲಿಸುವುದಕ್ಕಾಗಿ ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನದಾಹಿಗಳಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ.  ಇವೆಲ್ಲವನ್ನೂ ಬಿಟ್ಟು ನಾವು ಬೇರೆಡೆ ಮುಖ ತಿರುಗಿಸಿದರೆ ಆಹಾರಕ್ಕಾಗಿ ನೀರಿಗಾಗಿ ಬೇಡುವ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಿಕ್ಷಕರಿಗೆ ಇತರೆ ಕೆಲಸಗಳದ್ದೇ ಹೊರೆ:-ಸಕಾ೯ರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಇದ್ದು, ಅನ್ನ ವಸ್ತ್ರಗಳನ್ನು ಉಚಿತವಾಗಿ ನೀಡಿದರೂ ಜನ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.  ಸಕಾ೯ರಿ ಶಾಲೆಗಳಲ್ಲಿ ಶಿಕ್ಷಕರಿಗೆ ಕಲಿಸುವುದಕ್ಕಿಂತ ಹೆಚ್ಚಾಗಿ ಬೇರೆ ಬೇರೆ ಕೆಲಸಗಳಲ್ಲಿ  ತೊಡಗಿಸುತ್ತಿರುವುದೆ ಇದಕ್ಕೆ ಕಾರಣ ಎಂದರು. .
                ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಮಾತನಾಡಿ ಅಂಕದ ಆಧಾರದ ಮೇಲೆ ಕಲಿಕೆ ಅಲ್ಲ, ಗಿಡಗಳಿಗೆ ಗೊಬ್ಬರ ಹಾಕಿ ಬೆಳೆಸುವಂತೆ ಮನೆಪಾಠ, ಗೈಡ್್ಗಳ ಮೂಲಕ ಪಾಲಕರು ಮಕ್ಕಳನ್ನು ಬೆಳೆಸುತ್ತಿದ್ದು ಅದು ಸಹಜ ಬೆಳವಣಿಗೆಗೆ ಪೂರಕವಲ್ಲ ಎಂದರು .
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆರ್.ದತ್ತಾತ್ರೇಯ ವಹಿಸಿದ್ದು, ಪುರ ಪಂಚಾಯಿತಿಯ ಸದಸ್ಯರಾದ ರತ್ನಾಕರ ಶ್ರೇಷ್ಠಿ. ಡಿ.ಎಂ, ಚಂದ್ರಶೇಖರ ಶೇಟ್, ವರ್ತಕರ ಸಂಘದ ಅಧ್ಯಕ್ಷ ಹೆಚ್.ಶ್ರೀನಿವಾಸ ಕಾಮತ್, ಮಲೆನಾಡು ವಿದ್ಯಾಕೇಂದ್ರದ ಅಧ್ಯಕ್ಷ ವತೇ೯ಶ್, ತಿರುಜ್ಞಾನಮ್ ಫೌಂಡೇಷನ್್ನ ರೋಹಿಣಿ.ಕೆ.ಎಲ್ ಪಾಲ್ಗೊಂಡಿದ್ದರು.
  ಫೋಟೋ ಮಾಹಿತಿ: ಹೊಸನಗರದ ಶ್ರೀ ಗುರೂಜಿ ವಿದ್ಯಾಲಯದ ಕಾಯ೯ಕ್ರಮವನ್ನು ಬಂಗಾರಮಕ್ಕಿ ಗುರೂಜಿ ಉದ್ಘಾಟಿಸಿದರು.

No comments:

Post a Comment