Saturday, February 1, 2014

ಪಟಗುಪ್ಪ ಸೇತುವೆ ಕಾಮಗಾರಿ ತ್ವರಿತಕ್ಕೆ ಆಗ್ರಹಿಸಿ ಗ್ರಾಮಸ್ತರಿಂದ ತಾಲೂಕು ಕೇಂದ್ರಕ್ಕೆ ಪಾದಯಾತ್ರೆ


ಬಹುಕೋಟಿ  ಪಟಗುಪ್ಪ ಸೇತುವೆ ಕಾಮಗಾರಿ ವಿಳಂಬಕ್ಕೆ ಖಂಡನೆ
 ಬಿದನೂರು;ಹೊಸನಗರ_ ಸಾಗರ ಸಂಪರ್ಕ ಸೇತುವಾದ ಬಹು ಕೋಟಿ ವೆಚ್ಚದ ಪಟಗುಪ್ಪ ಸೇತುವೆಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಶೇ25 ರಷ್ಟು ಕಾಮಗಾರಿ ನಡೆದಿಲ್ಲ. ಜನಪ್ರತಿನಿದಿಗಳು ಮತ್ತು ಅಧಿಕಾರಿಗಳು ವಿಚಾರದಲ್ಲಿ ಸೋಮಾರಿದೋರಣೆ ತಳೆದಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸನಗರ ತಾಲೂಕು ಕಚೇರಿ ಎದುರು ಗ್ರಾಮಸ್ತರ ಪ್ರತಿಭಟನೆ

ಹೊಸನಗರ ಸಾಗರ ಸಂಪರ್ಕ ಮಾರ್ಗದ ಪಟಗುಪ್ಪ ಸೇತುವೆ ಮತ್ತು ಹೊಸನಗರ- ಪಟಗುಪ್ಪ ಸಂಪರ್ಕರಸ್ತೆಕಾಮಗಾರಿ ವಿಳಂಬ ಖಂಡಿಸಿ ಜೇನಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಪಟಗುಪ್ಪದಿಂದ ತಾಲೂಕು ಕೇಂದ್ರಕ್ಕೆ ಪಾದಯಾತ್ರೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
2007ರಲ್ಲಿ  23 ಕೋಟಿರೂ ವೆಚ್ಚದ ಪಟಗುಪ್ಪ ಸೇತುವೆ ಕಾಮಗಾರಿ ಮಂಜೂರು ಮಾಡಲಾಗಿದ್ದು 08ರಲ್ಲಿ ಕಾಮಗಾರಿ ಆರಂಭವಾಗಿ ಈಗ 7 ವರ್ಷ ಕಳೆದರೂ ಕಾಮಗಾರಿ ಚುರುಕು ಕಂಡಿಲ್ಲಸೇತುವೆಗೆ ಒಟ್ಟು 52 ಬೀಮ್ ನಿಮಿ೯ಸಬೇಕಿದ್ದು ಅದರಲ್ಲಿ 17 ಬೀಮ್ ಮಾತ್ರ ಕಟ್ಟಲಾಗಿದೆ. ಪ್ರತಿ ವರ್ಷ ಸೇತುವೆಕಾಮಗಾರಿ ನೆನೆಗುದಿಗೆ ಬೀಳುತ್ತಿದೆ. ಮಳೆಗಾಲದ ನಂತರದ ನೀರು ಇಳಿದ ದಿನಗಳಲ್ಲಿ ಕಾಮಗಾರಿ ನಡೆಯಬೇಕಾಗಿದ್ದು ಈಗ ಸಕಾಲವಾಗಿದೆ. ಇನ್ನೂ ಕಾಮಗಾರಿ ಚುರುಕು ಕಾಣದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದುಎಂದು ಎಚ್ಚರಿಸಿದರು.
ಮಾಜಿ ಶಾಸಕ ಹರತಾಳುಹಾಲಪ್ಪ,ದೇವಾನಂದ್, ಬಿ.ಜಿ.ನಾಗರಾಜ್, ವಿನಯ್, ಸಂತೋಷ್ ರಾಜುಗೌಡ, ಕಾಡಳ್ಳಿ ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment