Wednesday, August 20, 2014

ಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆರಂಭ..? ಕಾಲೇಜು ಅಗತ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳ ಬೇಟಿ


ಬಿದನೂರು: ರಾಜ್ಯದ ಬೆಳಕಾಗಿ ಸುತ್ತಲೂ ಹಿನ್ನೀರು ತುಂಬಿ ಅಭಿವೃದ್ಧಿ ವಂಚಿತವಾಗಿರುವ ನಗರ ಹೋಬಳಿಗೆ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ನಗರ ಹೋಬಳಿ ಗ್ರಾಮಸ್ಥರು ಒಕ್ಕೊರಲ ಬೇಡಿಕೆ ಇಟ್ಟಿದ್ದಾರೆ.
ಹೋಬಳಿ ಕೇಂದ್ರ ನಗರದಲ್ಲಿ ಪದವಿ ಕಾಲೇಜು ಆರಂಭಕ್ಕೆ ಮುನ್ನ ಪೂರಕ ಸೌಲಭ್ಯಗಳ ಸಂಬಂಧ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆಗಮಿಸಿದ ಡಾ.ಪಿ.ಚಂದ್ರಶೇಖರ್ ನೇತೃತ್ವದ ತಂಡದೊಂದಿಗೆ ಅಭಿಪ್ರಾಯ ಹಂಚಿಕೊಂಡ ಗ್ರಾಮಸ್ಥರು ಬಹು ವಿಸ್ತಾರವಾದ ನಗರ ಹೋಬಳಿಗೆ ಪದವಿ ಕಾಲೇಜು ತುರ್ತು ಅಗತ್ಯವಾಗಿದೆ ಎಂದು ಮನವರಿಕೆ ಮಾಡಿದರು.
ಬಿದನೂರು ಕಾಲೇಜ್ ಆರಂಭಕ್ಕೆ ಬಂಡಿಮಠ ಕಟ್ಟಡ ಪರಿಶೀಲನೆ
ಈಗಾಗಲೇ ನಗರ, ಮಾಸ್ತಿಕಟ್ಟೆ, ನಿಟ್ಟೂರು ಭಾಗದಲ್ಲಿ ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 350ಕ್ಕೆ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ನಗರದಲ್ಲಿ ಪದವಿ ಕಾಲೇಜು ಇಲ್ಲದ ಕಾರಣ ದೂರದ ತಾಲೂಕು ಕೇಂದ್ರ ಹೊಸನಗರ, ಸಾಗರ, ತೀರ್ಥಹಳ್ಳಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ.  ಇದಕ್ಕೆ ಒಗ್ಗದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತರಾಗಬೇಕಾಗಿ ಬಂದಿದೆ. ಮುಳುಗಡೆಯಿಂದ ತತ್ತರಿಸಿ ಹೋಗಿರುವ ನಗರ ಹೋಬಳಿಗೆ ಪದವಿ ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳಿಗೆ ಕೊರತೆ ಇಲ್ಲ. ಕಾಲೇಜು ಇರದ ಕಾರಣ ಬೇರೆಡೆ ಹೋಗುತ್ತಿರುವ ವಿದ್ಯಾರ್ಥಿಗಳು ಇಲ್ಲೆ ಆರಂಭವಾದರೆ ಹೆಚ್ಚಿನ ಉಪಯೋಗ ಪಡುತ್ತಾರೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ಮನವರಿಕೆ ಮಾಡಿದರು.
ಆರಂಭಿಕ ಕಟ್ಟಡ:
ಕಾಲೇಜು ಆರಂಭಕ್ಕೆ ತುತರ್ು ಕಟ್ಟಡ ಅವಶ್ಯಕತೆ ಇದ್ದರೆ ಬಂಡಿಮಠದಲ್ಲಿ ಈ ಹಿಂದೆ ಸಕರ್ಾರಿ ಶಾಲೆ ನಡೆಯುತ್ತಿದ್ದ  ಸುವ್ಯಸ್ಥಿತ ಕಟ್ಟಡ ಇದ್ದು ಕಾಲೇಜು ಆರಂಭಕ್ಕೆ ಯಾವುದೇ ತೊಂದರೆಯಾಗದು ಎಂದು ಗ್ರಾಪಂ ಅಧ್ಯಕ್ಷ ಸತೀಶ್ ಗೌಡ ಭರವಸೆ ನೀಡಿದರಲ್ಲದೆ ಕಟ್ಟಡಕ್ಕೆ ಅಭಿವೃದ್ಧಿ ಅಗತ್ಯವಿದ್ದರೆ ಗ್ರಾಪಂನಿಂದ ಮಾಡಿಕೊಡಲಾಗುವುದು ಎಂದರು. ನಂತರ ಬಂಡಿಮಠಕ್ಕೆ ತೆರಳಿ ಕಟ್ಟಡವನ್ನು ಪರಿಶೀಲಿಸಲಾಯಿತು.
ನಂತರ ಮಾತನಾಡಿದ ಅಧಿಕಾರಿಗಳ ತಂಡ ನೇತೃತ್ವ ವಹಿಸಿದ್ದ ಚಂದ್ರಶೇಖರ್, ಕಾಲೇಜು ಆರಂಭಕ್ಕೆ ಪೂರಕ ವಾತಾವರಣ ಇದ್ದು ಸಮರ್ಪಕ ವರದಿಯನ್ನು ಸಲ್ಲಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಶುಭಾಕೃಷ್ಣಮೂರ್ತಿ,  ಗ್ರಾಪಂ ಸದಸ್ಯ ನಾರಾಯಣ ಕಾಮತ್,  ಪ್ರಮುಖರಾದ ಕೆ.ವಿ.ಕೃಷ್ಣಮೂರ್ತಿ,  ಕೆ.ಪಿ.ನಾರಾಯಣಮೂರ್ತಿ, ದೇವಂಗಂಗೆ ಚಂದ್ರಶೇಖರಶೆಟ್ಟಿ,  ಎಸ್.ಪಕೀರಪ್ಪ,  ಡಾ.ಚೈತನ್ಯ,  ಕೆಸರಮನೆ ಮಧು, ವಡ್ಡಿನಬೈಲು ಸುಬ್ರಹ್ಮಣ್ಯ, ನೂಲಿಗ್ಗೇರಿ ಅಬ್ಬಾಸ್,  ಚಿಕ್ಕಪೇಟೆ ಚಂದ್ರಶೇಖರ್ ಶೆಟ್ಟಿ, ಅಡಗೋಡಿ ಶ್ರೀಧರಶೆಟ್ಟಿ, ವಸುಧಾ, ಅಧಿಕಾರಿಗಳಾದ ನಳೀನ್ ಚಂದ್ರ, ಈಶ್ವರಪ್ಪ, ರಾಮಚಂದ್ರನಾಯ್ಕ ಮತ್ತಿತರರು ಹಾಜರಿದ್ದರು.