Wednesday, February 5, 2014

ಮುಂಬಾರಿಗೆ ಸಕಾ೯ರಿ ಪ್ರೌಢಶಾಲೆ ಮಂಜೂರು:ಸಚಿವ ಕಿಮ್ಮನೆ ಭರವಸೆ


ಮುಂಬಾರು ಗ್ರಾಮಸ್ತರಿಂದ ಅಹವಾಲು ಸ್ವೀರಿಸಿದ ಸಚಿವರು
ಹೊಸನಗರ: ಬಹುದಿನಗಳ ಗ್ರಾಮಸ್ಥರ ಬೇಡಿಕೆಯಂತೆ ಮುಂಬಾರು ಗ್ರಾಮಕ್ಕೆ ಸಕಾ೯ರಿ ಪ್ರೌಢಶಾಲೆ ಮಂಜೂರು ಮಾಡಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭರವಸೆ ನೀಡಿದರು.
ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯ್ತಿ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ, ವಜ್ರಮಹೋತ್ಸವ ಸಂಭ್ರಮದಲ್ಲಿರುವ ಮುಂಬಾರು ಸಕಾ೯ರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ದುರಸ್ತಿಗೆ ರೂ. 6 ಲಕ್ಷ ಮಂಜೂರು ಮಾಡುವುದಾಗಿ ಹೇಳಿದರು.
ಅಹವಾಲು ಸ್ವೀಕರಿಸುತ್ತಿರುವ ಸಚಿವ ಕಿಮ್ಮನೆ
ಹುಂಚಾ-ಮುಂಬಾರು ರಸ್ತೆ ಅಭಿವೃದ್ಧಿ ಹಾಗೂ ಮರು ಡಾಂಬರೀಕರಣ, ಹಿರಿಯೋಗಿ-ಸಾವಂತರು-ಮೈಥಳ್ಳಿ ರಸ್ತೆ ಜೆಲ್ಲಿ ಬಿಚಾವಣೆ, ಡಾಂಬರೀಕರಣ ಮಾಡಿಸಲಾಗುವುದು. ಬೇಹಳ್ಳಿ ಸೇತುವೆಗೆ ಒಂದು ಕೋಟಿಗೂ ಮೀರಿ ಅನುದಾನ ಬೇಕಿರುವುದರಿಂದ ನಬಾಡ೯ ಯೋಜನೆಯಲ್ಲಿ ಮಂಜೂರು ಮಾಡಿಸುವುದಾಗಿ ತಿಳಿಸಿದರು.ಮುಂಬಾರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಎನ್ಎಂ ವಸತಿ ಗೃಹ ಮಂಜೂರಾತಿ ಕುರಿತಂತೆ ಸಂಬಂಧಪಟ್ಟ ಸಚಿವರ ಹಾಗೂ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ತುರಗೋಡು ನಾಗರಾಜ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ತಾ.ಪಂ.ಮಾಜಿ ಅಧ್ಯಕ್ಷ ಅಬ್ಬಿ ಮಲ್ಲೇಶಪ್ಪ ಹಾಗೂ ಮುಂಬಾರು ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು. ಲೇಖನಮೂತಿ೯ ಸ್ವಾಗತಿಸಿದರು. ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂತಿ೯ ವಂದಿಸಿದರು.

3 comments:

  1. ಮುಂಬಾರಿಗೆ ಪ್ರೌಢಶಾಲೆ ಮಂಜೂರು ಆದರೆ ಸುತ್ತಮುತ್ತಲಿನ 6 ಗ್ರಾಮದ ಮಕ್ಕಳಿಗೆ ಅನುಕೂಲವಾಗುತ್ತದೆ... ಇಲ್ಲಿನ ಮಕ್ಕಳು ಪ್ರೌಢಶಾಲೆಗೆ ಹೋಗಬೇಕು ಅಂದರೆ ಹೊಸನಗರ ಅಥವಾ ಕೋಡೂರಿಗೆ ಹೋಗಬೇಕು...

    ReplyDelete
  2. ಹಾಗಾದರೆ ಖಂಡಿತಾ ಪ್ರೌಢಶಾಲೆ ಬೇಕು.. ಭರವಸೆ ಈಡೇರದಿದ್ದರೆ ಇನ್ನೊಮ್ಮೆ ನೆನಪಿಸಿ.. ಸುದ್ದಿಯ ಮೂಲಕ ಸಚಿವರ ಗಮನ ಸೆಳೆಯೋಣ. ಭರವಸೆ ಭರವಸೆ ಆಗಿ ಉಳಿಯದೆ ಆದಷ್ಟು ಶೀಘ್ರ ಮುಂಬಾರಿಗೆ ಪ್ರೌಢಶಾಲೆ ಬರಲಿ.. 6 ಗ್ರಾಮದ ಮಕ್ಕಳ ಹೈಸ್ಕೂಲು ಶಿಕ್ಷಣ ಸುಲಭವಾಗಿ ದೊರಕಲಿ.. ಶಶಿ

    ReplyDelete
  3. ಖಂಡಿತ ರವಿಯವರೇ....

    ReplyDelete