Wednesday, January 15, 2014

ಸ್ಪೀಕರ್ ಕಾಗೋಡು ನೇತೃತ್ವದಲ್ಲಿ ಯಶಸ್ವಿ ಬಗರ್ ಹುಕುಂ ರೈತರ ಸಮಾವೇಶ


 ಎಪಿಎಂಸಿ ಸದಸ್ಯ ಸಿ ರಾಮಚಂದ್ರರಾವ್ ಬಿದನೂರು ನಗರದಲ್ಲಿ ಆಯೋಜಿಸಿದ ಬಗರ್ ಹುಕುಂ ರೈತರ ಸಮಾವೇಶ
ಹೊಸನಗರ:2 ವಷ೯ದ ಹಿಂದೆ ಸಾಗುವಳಿ ಚೀಟಿ ನೀಡಿ ಇನ್ನು ಪಾಣಿಯಲ್ಲಿ ದಾಖಲಾಗಿಲ್ಲ ಎಂದರೆ ಏನಥ೯. ಸಕಾ೯ರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಅಧಿಕಾರಿಗಳಿಗೆ ಸಕಾ೯ರ ಚುರುಕು ಮುಟ್ಟಿಸಬೇಕಿದ್ದು ಇದಕ್ಕೆ ಮೀನಾಮೇಷ ಸಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಕಾ೯ರಕ್ಕೆ ಕಿವಿ ಹಿಂಡಿದ್ದಾರೆ.

ತಾಲೂಕಿನ ನಗರ ಗುಜರಿಪೇಟೆ ಆವರಣದಲ್ಲಿ ಕಾಗೋಡು ಅಭಿಮಾನಿ ಬಳಗ ಆಯೋಜಿಸಿದ್ದ, ಬಗರ್್ಹುಕುಂ, ವಸತಿ ರಹಿತರು ಮತ್ತು ಅರಣ್ಯ ಮೂಲನಿವಾಸಿಗಳ ಬೖಹತ್ ಸಮಾವೇಶ ಉದ್ಘಾಟಿಸಿ, ಸಿಎಂ ಸಿದ್ದರಾಮಯ್ಯ ಸದನದಲ್ಲಿ ನ್ಯಾಯಸಮ್ಮತ ಮತ್ತು ಕ್ರಿಯಾಶೀಲ ಸಕಾ೯ರ ನೀಡುವುದಾಗಿ ಹೇಳಿದ್ದು ಅದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದಿದ್ದಾರೆ.
ಸಕಾ೯ರ ಬಂದು ಹಲವು ತಿಂಗಳು ಕಳೆದಿದೆ. ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮಾತ್ರ ಬಗರ್್ಹುಕುಂ ಸಮಿತಿ ರಚನೆಯಾಗಿದ್ದು ಹೊರತು ಪಡಿಸಿ ಮತ್ತೆಲ್ಲು ಇನ್ನು ರಚನೆಯಾಗಿಲ್ಲ. ಬಗ್ಗೆ ಆಯಾಯ ಭಾಗದ ಶಾಸಕರು ಉತ್ಸುಕತೆ ತೋರಬೇಕಿದೆ ಎಂದರು.
ಸ್ಪೀಕರ್ ಆಗಿ ಬಾಯಿ ಕಟ್ಟಿದೆ:
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಡರೈತ, ಕೂಲಿಕಾಮಿ೯ಕರಿಂದ ಹರಿದುಬಂದ ನೂರಾರು ಸಮಸ್ಯೆಗಳ ಅಹವಾಲು ಸ್ವೀಕರಿಸಿದ ಅವರು, ಸ್ಪೀಕರ್ ಆಗಿ ದೊಡ್ಡ ಸ್ಥಾನದಲ್ಲಿದ್ದು ಬಾಯಿ ಕಟ್ಟಿದೆ. ಬಡವರ, ರೈತರ ನೋವು ಕಂಡು ಮರುಕವಾಗುತ್ತಿದೆ ಎಂದು ಭಾವುಕರಾದ ಅವರು ಅಧಿಕಾರಿಗಳಿಗೆ ಏನಾಗಿದೆ ಸಣ್ಣ ಕೆಲಸ ಮಾಡಲು ಕೂಡ ಯಾಕೆ ಸತಾಯಿಸುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದು ನುಡಿದರು.
ವಿರಮಿಸುವುದಿಲ್ಲ:
ನಾನೀಗ ಕಾಂಗ್ರೆಸ್ ಪಕ್ಷದವನಲ್ಲ. ಸ್ಪೀಕರ್ ಆದರೆ ಸಮಸ್ಯೆ ಬಗ್ಗೆ ಯಾರಿಗೆ ಎಲ್ಲಿ ಏನು ಹೇಳಬೇಕು ಎಂಬುದನ್ನು ಹೇಳುತ್ತೇನೆ. ಬಗರ್ ಹುಕುಂ, ವಸತಿ ರಹಿತರ ಮತ್ತು ಅರಣ್ಯ ಮೂಲನಿವಾಸಿಗಳ ಸಮಸ್ಯೆಗಳಿಗೆ ಇಂತಹ ಸಮಯದಲ್ಲೂ ಸ್ಪಂದಿಸಿಲ್ಲ ಎಂದು ನಾನು ಇದ್ದು ಸತ್ತಂತೆ. ನನಗೆ ಅಧಿಕಾರದ ಆಸೆಯಿಲ್ಲ ಸಮಸ್ಯೆ ಪರಿಹಾರದವರೆಗೆ ವಿರಮಿಸುವುದಿಲ್ಲ. ಯಾರು ಕೂಡ ಹೆದರಬೇಕಿಲ್ಲ. ಸಂಘಟನೆ ಮೂಲಕ ನ್ಯಾಯ ಪಡೆದುಕೊಳ್ಳುವುದೆ ನಿಜವಾದ ಶಕ್ತಿ. ಅದಕ್ಕೆ ನನ್ನ ಸಂಪೂಣ೯ ಬೆಂಬಲವಿದೆ ಎಂದು ಘೋಷಿಸಿದರಲ್ಲದೆ ಸಮಸ್ಯೆ ನಿವಾರಣೆಗೆ ಪ್ರತಿ ಗ್ರಾಮಮಟ್ಟದಲ್ಲು ಸಭೆ ನಡೆಸಲು ಸಿದ್ದ ಎಂದು ಘೋಷಿಸಿದರು.
ಬೇಡಿಕೆಗಳು:
ಕನಾ೯ಟಕ ಭೂಕಂದಾಯ ಕಾಯ್ದೆ 94 ಅಂತೆ, ರಚಿತವಾದ ಸಮಿತಿಯಿಂದ ಫಾರಂ 50, 53 ರಲ್ಲಿ ನೀಡಿದ ಅಜಿ೯ಗಳನ್ನು ಕೂಡಲೇ ವಿಲೇವಾರಿ ಮಾಡುವುದು. ಕನಾ೯ಟಕ ಭೂಕಂದಾಯ ಕಾಯ್ದೆ 94 ಬಿ ಪ್ರಕಾರ ಫಾರಂ 50, 53 ರಲ್ಲಿ ಅಜಿ೯ ಇಲ್ಲದಿದ್ದರೆ 1990ನೇ ಇಸವಿಗಿಂತ ಮೊದಲು ಕೃಷಿ ಮಾಡಿರುವುದು ಕಂಡು ಬಂದರೆ ಅದನ್ನು ಮಂಜೂರು ಮಾಡಿಸುವುದು.
ಕನಾ೯ಟಕ ಭೂ ಕಂದಾಯ ಕಾಯ್ದೆ 94 ಸಿ ಯಂತೆ ಸಕರ್ಾರಿ ಜಾಗದಲ್ಲಿ 2012 ಇಸವಿಯೊಳಗೆ ಮನೆ ನಿಮಿ೯ಸಿದವರಿಗೆ ತಕ್ಷಣ ಹಕ್ಕುಪತ್ರ ನೀಡಲು ಕೋರುವುದು.
ಕೇಂದ್ರ ಸಕಾ೯ರ ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರಣ್ಯ ಮೂಲ ನಿವಾಸಿಗಳಿಗೆ ಹಕ್ಕನ್ನು ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳುವುದು.
ಮಾಸ್ತಿಕಟ್ಟೆ (ಖೈರಗುಂದ ಗ್ರಾ ಪಂ) ಯಲ್ಲಿರುವ ಕೆಪಿಸಿ ನಿರ್ವಹಣಾ ಕಚೇರಿಗಳನ್ನು ಸ್ಳಳಾಂತರಿಸಿರುವುದನ್ನು ಸಮಗ್ರವಾಗಿ ಪರಿಶೀಲಿಸಿ, ಅವೈಜ್ಞಾನಿಕ ಸ್ಥಳಾಂತರವನ್ನು ರದ್ದು ಪಡಿಸಿ ಸಂತ್ರಸ್ಥ ಪ್ರದೇಶಕ್ಕೆ ಜೀವ ತುಂಬುವುದು.
ಎಪಿಎಂಸಿ ಅಧ್ಯಕ್ಷ, ಕಾಗೋಡು ಅಭಿಮಾನಿ ಬಳಗದ ಅಧ್ಯಕ್ಷ ಸಿ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಸಂದಭ೯ದಲ್ಲಿ ಹಿರಿಯರಾದ ಹಾಜಿಸಾಬ್, ಚಂದ್ರಶೇಖರಶೆಟ್ಟಿ, ಅತ್ತಿಕೊಡಿಗೆ ನಾಗಪ್ಪಗೌಡ ಕಾಗೋಡರವರನ್ನು ಸನ್ಮಾನಿಸಿದರು.
ಪ್ರಮುಖರಾದ ಕಲಗೋಡು ರತ್ನಾಕರ್, ಏರಗಿ ಉಮೇಶ್, ಪಟೇಲೆ ಗರುಡಪ್ಪಗೌಡ, ರಮೇಶಹೆಗ್ಡೆ, ಗುಬ್ಬಿಗ ಅನಂತರಾವ್, ಹೆಚ್.ಬಿ.ಕಲ್ಯಾಣಪ್ಪಗೌಡ,  ಯಡೂರು ರಾಜಾರಾಂ, ಗೋಪಾಲಶೆಟ್ಟಿ, ಕರುಣಾಕರಶೆಟ್ಟಿ ಮತ್ತು ನಗರ ಹೋಬಳಿಯ ಮೂಲೆಗಳಿಂದ ರೈತರು ಭಾಗವಹಿಸಿದ್ದರು.

No comments:

Post a Comment