Wednesday, April 6, 2011

ಶ್ರೀಗಳ ರಾಮಕಥಾ ಮಾಲಿಕೆಯೇ ರಾಮೋತ್ಸವದ ಹೈಲೈಟ್ಸ್ !

ಶ್ರೀಮಠದಲ್ಲಿ ಶ್ರೀರಾಮೋತ್ಸವ

ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಏಪ್ರಿಲ್ 8 ರಿಂದ 13ರವರೆಗೆ ಸಂಪನ್ನಗೊಳ್ಳಲಿರುವ ರಾಮೋತ್ಸವ ಕಾಯ೯ಕ್ರಮಕ್ಕೆ ಭರದ ಸಿದ್ದತೆ ಆರಂಭಗೊಂಡಿದೆ. ಪ್ರತಿವಷ೯ದಂತೆ ವಿವಿಧ ಧಾಮಿ೯ಕ, ಸಾಂಸ್ಕೖತಿಕ ಕಾಯ೯ಕ್ರಮ, ಪ್ರತಿಷ್ಠಿತ ಪ್ರಶಸ್ತಿಗಳ ವಿತರಣೆ ಜೊತೆಗೆ ಸಲದ ಉತ್ಸವಕ್ಕೆ ಹಲವು ವೈಶಿಷ್ಠತೆಯ ಮೆರಗು ನೀಡಲು ಶ್ರೀಮಠ ಉದ್ದೇಶಿಸಿದೆ.

ಶ್ರೀರಾಮಚಂದ್ರಾಪುರ ಮಠಕ್ಕೆ ದಿನಂಪ್ರತಿ ನೂರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಕಾ೯ರ ಪರಿಸರದಲ್ಲಿ ಯಾತ್ರಿನಿವಾಸ ನಿಮಿ೯ಸಲು ಉದ್ದೇಶಿಸಿದೆ. ಸುಮಾರು ರು.4.5 ಕೋಟಿ ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ಯಾತ್ರಿನಿವಾಸಕ್ಕೆ ಶಂಕುಸ್ಥಾಪನೆ ನೆರವೇರಲಿದೆ.

ರಾಮಕಥಾ ಮಾಲಿಕೆ:

ಇದು ಬಾರಿಯ ವಿಶೇಷ ಕಾಯ೯ಕ್ರಮ ಅಂತಲೇ ಬಣ್ಣಿಸಲಾಗುತ್ತಿದೆ. ಕಾರಣ ಪ್ರತಿದಿನ ಮದ್ಯಾಹ್ನ 2.30 ರಿಂದ 5.30ರವರೆಗೆ ರಾಮಕಥಾ ಮಾಲಿಕೆ ಹರಿದು ಬರಲಿದೆ. ವಾಲ್ಮೀಕಿಗಳ ತಪಸ್ಸಿನ ದಿವ್ಯ ಕೊಡುಗೆಯಾಗಿರುವ ವಾಲ್ಮೀಕಿ ರಾಮಾಯಣದ ಪಠಣ ಖುದ್ದು ರಾಘವೇಶ್ವರ ಸ್ವಾಮೀಜಿಗಳಿಂದಲೇ ನೆರವೇರಲಿದೆ. ವೇದವೇ ರಾಮಾಯಣವಾಗಿ, ವೇದಪುರುಷನೇ ಶ್ರೀರಾಮನಾಗಿ ಮನುಜನಿಗೆ ಬದುಕಿನ ಶಿಕ್ಷಣಕೊಟ್ಟ ಕಥೆಯೊಂದಿಗೆ ಸಂಗೀತ, ನೖತ್ಯ ರೂಪಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಮಾತ್ರವಲ್ಲದೇ ಶ್ರೀಗಳಿಂದ ವಚನಾಮೖತಧಾರೆ ಹರಿಯುತ್ತಿದ್ದಂತೆ ಅದಕ್ಕೆ ತಕ್ಕಂತೆ ಸನ್ನೀವೇಶವನ್ನು ವೇದಿಕೆಯಲ್ಲಿ ಮೂಡಿಸುವ ಇಂಗಿತ ಶ್ರೀಮಠದ್ದು.

ಭಕ್ತರು ಭಕ್ತಿಭಾವದ ಪರಕಾಷ್ಠೆ ತಲುಪಿ ಗತಿಸಿದ ರಾಮಾಯಣದ ಚಿತ್ರಣವನ್ನು ಮತ್ತೆ ಕಾಣುವಂತಾಗಬೇಕು. ಹಲವಾರು ಕವಿಗಳು ರಾಮಾಯಣವನ್ನು ತಮ್ಮದೇ ರೀತಿಯಲ್ಲಿ ಚಿತ್ರಿಸಿದ್ದಾರೆ. ಅದಕ್ಕೆಲ್ಲಾ ಮೇರುಕೖತಿ ವಾಲ್ಕೀಕಿ ರಾಮಾಯಣ. ಜನರ ಸ್ವಚ್ಚಂದ ಮತ್ತು ನೆಮ್ಮದಿಯ ಬದುಕಿಗೆ ಚೈತನ್ಯ ನೀಡುವ ಶಕ್ತಿ ಇದರಲ್ಲಿದೆ. ಮಾತ್ರವಲ್ಲ ಮಯಾ೯ದ ಪುರುಶೋತ್ತಮ ಶ್ರೀರಾಮನ ನಡೆನುಡಿ, ಶಿಸ್ತು, ಸಂಯಮದ ಮೇಲೆ ಬೆಳಕು ಚೆಲ್ಲುವ ರಾಮಾಯಣ ದೖಶ್ಯಕಾವ್ಯದೊಂದಿಗೆ ಮಿಳಿತಗೊಂಡು ಶ್ರೀಗಳ ಪ್ರವಚನದೊಂದಿಗೆ ಭಕ್ತರ ಭಾವಪರವಶಕ್ಕೆ ಕಾರಣವಾಗಬೇಕು ಎಂಬ ಹಿನ್ನಲೆಯಲ್ಲಿ ಕಾಯ೯ಕ್ರಮಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಉತ್ಸವದಲ್ಲಿ ಪ್ರತಿವಷ೯ ಶ್ರೀಮಠದಿಂದ ಕೊಡಮಾಡುವ ಪ್ರತಿಷ್ಠಿತ ಶ್ರೀಮಾತಾ. ಪುರುಶೋತ್ತಮ, ಧನ್ಯಸೇವಕ ಪ್ರಶಸ್ತಿ ಶ್ರೀಗಳಿಂದ ಅನುಗ್ರಹವಾಗಲಿದೆ. ರಾಘವೇಶ್ವರ ಸ್ವಾಮೀಜಿಗಳು ದೀಕ್ಷೆ ಹಿಡಿದ ಸ್ಮರಣಾಥ೯ವಾಗಿ ಸಂಕಷ್ಟ ವ್ಯಕ್ತಿ ಅಥವಾ ಕುಟುಂಬವೊಂದಕ್ಕೆ ಹೊಸಬದುಕು ನೀಡಲಾಗುತ್ತದೆ. ಅಲ್ಲದೇ ಬಾಲ ಶ್ರೀರಾಮನಿಗೆ ರಜತ ತುಲಾಭಾರ, ರಥೋತ್ಸವ, ರಾಮಜನ್ಮೋತ್ಸವ, ಸೀತಾಕಲ್ಯಾಣೋತ್ಸವ, ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಗುರುಪಾದುಕಾ ಪೂಜೆ, ಸಾಮೂಹಿಕ ದೀಪಮಾಲಿಕೆ, ಶ್ರೀಮಠದಲ್ಲಿ ನೂತನವಾಗಿ ನಿಮಾ೯ಣಗೊಳ್ಳುತ್ತಿರುವ ಚಂದ್ರಮೌಳೀಶ್ವರ ದೇಗುಲದ ಷಡಾಧಾರ ಪ್ರತಿಷ್ಠಾಪನೆ, ಲಂಕಾದಹನ ಸೇರಿದಂತೆ ವೈವಿಧ್ಯಮಯ ಕಾಯ೯ಕ್ರಮಗಳು ವಿಶಿಷ್ಠವಾಗಿ ಸಂಪನ್ನಗೊಳ್ಳಲಿದೆ. ವೈಶಿಷ್ಠಪೂಣ೯ ಕಾಯ೯ಕ್ರಮಕ್ಕೆ ಭಕ್ತಸಾಗರ ಹರಿದು ಬರಲಿ ಎಂಬುದು ಶ್ರೀಗಳ ಆಶಯವಾಗಿದೆ.

2 comments:

  1. ಶ್ರೀಮಠದ ಕಾರ್ಯಕ್ರಮಗಳು ಯಶಸ್ವಿಯಾಗಲಿ ......ಗುರುಗಳ ಅನುಗ್ರಹ ದೊರೆಯುವಂತಾಗಲಿ ....ಹರೇ ರಾಮ

    ReplyDelete