Tuesday, February 4, 2014

ಶಿಕ್ಷಣ ಇಲಾಖೆಯ ಯೋಜನೆಗಳ ಸಮಪ೯ಕ ಅನುಷ್ಠಾನಕ್ಕೆ ಬದ್ಧ : ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್


ಹೊಸನಗರ ತಾಲೂಕು ಕುಸುಗುಂಡಿ ಸರ್ಕಾರಿ ಶಾಲಾ ಸುವರ್ಣ ಮಹೋತ್ಸವ
 ಹೊಸನಗರ: ಪ್ರತಿವಷ೯ ಕೊಡಲೇ ಬೇಕಾದ ಯೋಜನೆಗಳ ದಿನಾಂಕ ಮೊದಲೆ ತಿಳಿದಿರುವಾಗ ಅವುಗಳ ವಿಳಂಬ ಸಲ್ಲ ಎಂಬ ಹಿನ್ನಲೆಯಲ್ಲಿ ಬಾರಿಯಿಂದ ಸಕಾಲದಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶಿಕ್ಷಣ ಸಚಿವ ಕಿಮ್ಮನೆಯಿಂದ ಸುವರ್ಣ ಮಹೋತ್ಸವ ಉದ್ಘಾಟನೆ
ತಾಲೂಕಿನ ಕುಸುಗುಂಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸುವರ್ಣ ಮಹೋತ್ಸವದ ಅಂಗವಾಗಿ ಶಾಲಾ ನೂತನ ಕೊಠಡಿ ಉದ್ಘಾಟಿಸಿ, ಮುಂದಿನ ಬಾರಿ ವಿದ್ಯಾಥಿ೯ಗಳಿಗೆ ನೀಡಬೇಕಿರುವ ಸೈಕಲ್ ಯೋಜನೆ ಬಗ್ಗೆ ಈಗಲೆ ಸಿದ್ಧತೆ ನಡೆದಿದೆ. ಸಮವಸ್ತ್ರ ಪುಸ್ತಕಗಳು ಕೂಡ ಶೈಕ್ಷಣಿಕ ವರ್ಷದ ಆರಂಭಕ್ಕೆ ದೊರೆಯಲು ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಆಡಳಿತ ಮಾಡುವವರಿಗೆ ದೂರದಶಿ೯ತ್ವ ಇರಬೇಕು. ಮತ್ತು ಯಾವುದೆ ಯೋಜನೆಗಳ ಅನುಷ್ಠಾನಕ್ಕೆ ಸಮಯ ಸಂದಭ೯ ಪೂರಕವಾಗಿರಬೇಕು. ವಿಳಂಬವಾದರೆ ಮೂಲ ಉದ್ದೇಶ ಸಾಥ೯ಕಗೊಳ್ಳುವುದಿಲ್ಲ ಮತ್ತು ಫಲಾನುಭವಿಗಳಿಗೆ ನ್ಯಾಯ ದೊರಕಿದಂತೆ ಅನಿಸುವುದಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯಲ್ಲಿ ವಷ೯ಂಪ್ರತಿ ನೀಡುವ ಸೌಲಭ್ಯಗಳ ತ್ವರಿತ ವಿಲೇವಾರಿಗೆ ಪೂರಕ ಸಿದ್ದತೆ ನಡೆಸಲಾಗಿದೆ ಎಂದರು.
 ಶಾಲಾ ಸಮಿತಿ ಅಧ್ಯಕ್ಷ ಎಂ.ಸಿ. ಲಕ್ಷ್ಮಣ ಅಧ್ಯಕ್ಷತೆವಹಿಸಿದ್ದರು.
 ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ.ಸುಬ್ಬಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜ್ಯೋತಿ ಚಂದ್ರಮೌಳಿ, ಕಲಗೋಡು ರತ್ನಾಕರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ ದೇವರಾಜ್, ಉಪಾಧ್ಯಕ್ಷೆ ಗೀತಾ ನಿಂಗಪ್ಪ, ಸದಸ್ಯರಾದ ಕುಬೇರಪ್ಪ, ಕೋಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಬಿ ಶೆಟ್ಟಿ, ಸದಸ್ಯರಾದ ಸಾವಿತ್ರಿ, ಬಂಗಾರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಮತ್ತಿತರರು ಇದ್ದರು. ಗಣಪತಿ ಪ್ರಾಥಿ೯ಸಿ, ದೀಪ ಸ್ವಾಗತಿಸಿದರು. ಆರ್, ನಾಗರಾಜ್ ನಿರೂಪಿಸಿ, ರಾಣಿ ವಂದಿಸಿದರು.

No comments:

Post a Comment