ಹೊಸನಗರ: ಎಡಬಿಡದೆ ಸುರಿದ ಮಳೆಗೆ ರಸ್ತೆಯು ಸೇರಿಕೊಂಡು ಭಾರೀ ಧರೆ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿದು ಅಡಕೆ ಸೇರಿದಂತೆ 10 ಎಕರೆ ಜಮೀನಿಗೆ ಹಾನಿ ಸಂಭವಿಸಿದ ಘಟನೆ ತಾಲೂಕಿನ ನಗರ ಸಮೀಪ ಬೈಸೆ ಗ್ರಾಮದ ಜಾಮಿಜಡ್ಡು ಬಳಿ ನಡೆದಿದೆ.
ಸುಮಾರು 100 ಅಡಿ ಸುತ್ತಳತೆಯಲಿ ಧರೆ ಕುಸಿದಿದ್ದು ಧರೆ ಕೆಳಭಾಗದ ಹಳ್ಳ ಮುಚ್ಚಿಹೋಗಿದ್ದು ನೀರು ಶಿವರಾಮು ಉಪಧ್ಯಾಯ ಮತ್ತು ನಾರಾಯಣ ಉಪಾಧ್ಯಾಯ ಅಡಕೆ ತೋಟಕ್ಕೆ ನುಗ್ಗಿದೆ. ನಗರ-ಕೊಲ್ಲೂರು ರಸ್ತೆಯ ಯೆಬಗೋಡಿನಿಂದ ಜಾಮಿಜಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿದು ಹೋಗಿದ್ದು ಇನ್ನು ಸರಿಪಡಿಸಲಾಗಿ ಸ್ಥಿತಿ ನಿಮರ್ಾಣವಾಗಿದೆ.
5 ಎಕರೆ ಅಡಕೆ ತೋಟಕ್ಕೆ ನೀರು ನುಗ್ಗಿದ ಕಾರಣ ಅಡಕೆಗೆ ಕೊಳೆರೋಗ ಭೀತಿ ಮತ್ತು ಮರಗಳು ಸಾಯುವ ಬಗ್ಗೆ ಜಮೀನು ಮಾಲೀಕರಲ್ಲಿ ಆತಂಕ ಹುಟ್ಟು ಹಾಕಿದೆ. ಹಳ್ಳ ಸಂಪೂರ್ಣ ಮುಚ್ಚಿ ಹೋಗಿರುವ ಕಾರಣ ಮಣ್ಣು ತೆಗೆದು ಹಳ್ಳವನ್ನು ಮುಕ್ತಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
3 ವರ್ಷದಿಂದ ಕುಸಿತ:
ಕಳೆದ ಮೂರು ವರ್ಷದಿಂದ ಧರೆ ಸ್ವಲ್ಪ ಸ್ವಲ್ಪವಾಗಿ ಕುಸಿಯುತ್ತ ಬಂದಿದ್ದು ಕೂಡಲೇ ಕೆಳಭಾಗದಿಂದ ವಾಲ್ ನಿರ್ಮಿಸಿ ಕುಸಿತ ತಡೆಗಟ್ಟಲು ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸದ ಹಿನ್ನಲೆಯಲ್ಲಿ ಈ ದುರಂತ ಸಂಭವಿಸಿದೆ. ರಸ್ತೆ ಕುಸಿತ ಪರಿಣಾಮ ಪರ್ಯಾಯ ಸಂಪರ್ಕ ರಸ್ತೆ ಇಲ್ಲವಾಗಿದ್ದು ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಸಚಿವರು ಮತ್ತು ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಾರಾಯಣ ಉಪಾಧ್ಯಾಯ ಮನವಿ ಮಾಡಿದ್ದಾರೆ.
No comments:
Post a Comment