Sunday, February 2, 2014

ದಾಶ೯ನಿಕರನ್ನು ಪೂಜಿಸುವುದಕ್ಕಿಂತ ಅವರ ಸಂದೇಶ ಪಾಲಿಸಿ :: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್


ಬಿದನೂರು ನಗರ- ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣಾ ಸಮಾರಂಭದಲ್ಲಿ ಶಿಕ್ಷಣ ಸಚಿವ
ಹೊಸನಗರ:ಸಮಾಜಕ್ಕೆ ಬೆಳಕು ನೀಡಿ ಹೋದ ದಾಶ೯ನಿಕರನ್ನು ಪೂಜಿಸುವುದಕ್ಕಿಂತ ಅವರ ಸಂದೇಶ ಪಾಲಿಸುವಂತಾಗಬೇಕು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯ ಪಟ್ಟರು.
ನಗರ-ಚಿಕ್ಕಪೇಟೆ ಪ್ರೌಢಶಾಲೆಯಲ್ಲಿ ಶಿಕ್ಷಣ ಸಚಿವರಿಂದ ಸೈಕಲ್ ವಿತರಣೆ
ತಾಲೂಕಿನ ಬಿದನೂರು ನಗರ-ಚಿಕ್ಕಪೇಟೆ ಸಕಾ೯ರಿ ಪ್ರೌಢಶಾಲೆಯಲ್ಲಿ ವಿದ್ಯಾಥಿ೯ಗಳಿಗೆ ಸೈಕಲ್ ವಿತರಿಸಿ, ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಗುಣಗಳು ಕೂಡ ವಿದ್ಯಾಥಿ೯ಗಳಲ್ಲಿ ಮೇಳೈಸಬೇಕು ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಗಮನಾಹ೯ವಾಗಿದೆ ಎಂದರು.
ಎಸ್ಎಸ್ಎಲ್್ಸಿ ಪರೀಕ್ಷೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾಥಿ೯ಗಳು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು. ಕೇವಲ ಪಾಸಾಗುವುದಗಷ್ಟೆ ಅಂಕ ಪಡೆಯದೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಕೆಲಸ ಮಾಡಬೇಕು ಎಂದರು.
ಶೇ.100 ಪಲಿತಾಂಶಕ್ಕೆ ಬಹುಮಾನ:
ಸದರಿ ಶಾಲೆಯಲ್ಲಿ 14 ವಿದ್ಯಾಥಿ೯ಗಳು ವ್ಯಾಸಾಂಗ ಮಾಡುತ್ತಿದ್ದು ಅಷ್ಟು ವಿದ್ಯಾಥಿ೯ಗಳು ಉತ್ತೀಣ೯ರಾದಲ್ಲಿ ಪ್ರತಿವಿದ್ಯಾಥಿ೯ಗಳಿಗೆ ತಲಾ ರು.2000 ಬಹುಮಾನ ನೀಡುವುದಾಗಿ ಸಚಿವರು ಘೋಷಿಸಿದರು. ಆದರೆ ಒಬ್ಬ ವಿದ್ಯಾಥಿ೯ ಫೇಲಾದರು ಕೂಡ ಬಹುಮಾನ ಸಿಗುವುದಿಲ್ಲ. ಹಾಗಾಗಿ ಶೇ.100 ಪಲಿತಾಂಶ ಬರುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಒಂದುವೇಳೆ ಶ್ರಮವಹಿಸಿ ಕೊಡ ಫೇಲಾದಲ್ಲಿ ಯಾವುದೆ ವಿದ್ಯಾಥಿ೯ ಧೖತಿಗೆಡಬಾರದು ಎಂದು ಮನವಿ ಮಾಡಿದರು.
ಉಚಿತವಾಗಿ ಸೈಕಲ್ ಸಿಕ್ಕಿದೆ ಎಂದ ಮಾತ್ರಕ್ಕೆ ಹಿಗ್ಗಾಮುಗ್ಗಾ ಓಡಿಸಿ ಅಪಾಯ ತಂದುಕೊಳ್ಳಬೇಡಿ. ಶಿಸ್ತುಬದ್ದವಾಗಿ ಸೈಕಲ್್ನ್ನು ಬಳಸುವ ಮೂಲಕ ಉತ್ತಮ ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಳ್ಳಿ ಎಂದು ವಿದ್ಯಾಥಿ೯ಗಳಿಗೆ ಸಚಿವರು ತಿಳಿಹೇಳಿದರು.
ಮನವಿ:
ಮುಖ್ಯರಸ್ತೆಯಿಂದ ಶಾಲೆಗೆ ಬರುವ ರಸ್ತೆ ದುಸ್ಥಿತಿಯಲ್ಲಿದೆ. ಪ್ರತಿನಿತ್ಯ ಓಡಾಡುವ ವಿದ್ಯಾಥಿ೯ಗಳು ಮತ್ತು ಶಿಕ್ಷಕರಿಗೆ ತುಂಬ ತೊಂದರೆಯಾಗುತ್ತಿದೆ. ಹಿನ್ನಲೆಯಲ್ಲಿ ಹೊಸದಾಗಿ ಡಾಂಬರೀಕರಣ ಮಾಡಿಸುವಂತೆ ಸಚಿವರಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ್ ಮನವಿ ಮಾಡಿದರು.
ಜಿಪಂ ಸದಸ್ಯ ಡಾ.ಸುಂದರೇಶ್, ತೀಥ೯ಹಳ್ಳಿ ತಹಶೀಲ್ದಾರ್ ಗಣೇಶ್, ವಲಯ ಅರಣ್ಯಾಧಿಕಾರಿ ಮೃತ್ಯುಂಜಯಪ್ಪ, ಮುಖ್ಯಶಿಕ್ಷಕ ಸೂರಪ್ಪ, ಗ್ರಾಪಂ ಸದಸ್ಯ ಆದಿರಾಜ್, ಸಹ ಶಿಕ್ಷಕರು, ಶಾಲಾಭಿವೖದ್ಧಿ ಸಮಿತಿ ಸದಸ್ಯರು ಮತ್ತು ಪೋಷಕರು ಪಾಲ್ಗೊಂಡಿದ್ದರು.

No comments:

Post a Comment