ಕಾರಣಗಿರಿಯಲ್ಲಿ ಹೊಸನಗರ ತಾಲೂಕು ಮಟ್ಟದ
ಯುವಜನ ಮೇಳ
ಹೊಸನಗರ: ಯುವಜನ
ಮೇಳಗಳಲ್ಲಿ ಕೇವಲ
ಸ್ಪಧೆ೯ಗಾಗಿ ಮಾತ್ರ ಸ್ಪಧೆ೯ ಮಾಡದೇ ನಿಜವಾದ
ಪ್ರತಿಭೆ ಅನಾವರಣಗೊಳ್ಳಲು
ಸ್ಪಧೆ೯ ಮಾಡಬೇಕಿದೆ
ಎಂದು ತಾ.ಪಂ ಅಧ್ಯಕ್ಷೆ
ನಾಗರತ್ನ ದೇವರಾಜ್
ಅಭಿಪ್ರಾಯಪಟ್ಟರು.
ಯುವಜನ ಮೇಳದಲ್ಲಿ ತಾಪಂ ಅಧ್ಯಕ್ಷೆ ನಾಗರಾತ್ನ ಮಾತನಾಡಿದರು. |
ತಾಲೂಕಿನ ಕಾರಣಗಿರಿಯಲ್ಲಿ ನಡೆದ
ತಾ. ಮಟ್ಟದ
ಯುವಜನ ಮೇಳ
ಉದ್ಘಾಟನಾ ಸಮಾರಂಭದ
ಅಧ್ಯಕ್ಷೆ ವಹಿಸಿ
ಮಾತನಾಡಿದ ಅವರು
ಇಂದು ಯುವಜನ
ಮೇಳ ತನ್ನಆಕರ್ಷಣೆ
ಕಳೆದುಕೊಳ್ಳುತ್ತಿದೆ. ಭಾಗವಹಿಸುವ ಸ್ಪಧಿ೯ಗಳು
ಗಣನೀಯವಾಗಿ ಕಡಿಮೆಯಾಗಿದ್ದಾರೆ.
ಇದಕ್ಕೆ ಹತ್ಥಾರು
ಕಾರಣಗಳಿದ್ದು ಅವೆಲ್ಲ ನಿವಾರಣೆ ಆದಾಗಲೇ ನಿಜವಾದ
ಯುವಜನ ಮೇಳ
ಸಾಕಾರಗೊಳ್ಳಲಿದೆ ಎಂದರು.
ಜಿ.ಪಂ ಸದಸ್ಯೆ
ಶುಭಾಕೃಷ್ಣಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಗತ
ಸಮಿತಿ ಅಧ್ಯಕ್ಷ
ಕಾರಗಡಿ ಜಯರಾಮ್,
ಜಿಲ್ಲಾ ಯುವಒಕ್ಕೂಟ
ಅಧ್ಯಕ್ಷ ಮಾಸ್ತಿಕಟ್ಟೆ
ಸುಬ್ರಹ್ಮಣ್ಯ, ಸದಸ್ಯೆ ಹೇಮಾವತಿ, ಹನಿಯ ಸುಬ್ಬಣ್ಣ,ಶೀಲಾ ರಾಮನ್
ಮತ್ತಿತರರು ಹಾಜರಿದ್ದರು.
ಕಲಾವಿದೆ ಕಡೆಗಣನೆ:
15 ವರ್ಷಗಳಿಂದ
ಯುವಜನ ಮೇಳಗಳಲ್ಲಿ
ಭಾಗವಹಿಸಿ, ಹತ್ತಾರುಯುವಜನ
ಮೇಳಗಳಲ್ಲಿ ತೀಪು೯ಗಾರರಾಗಿ
ನೇಮಕಗೊಂಡಿದ್ದ ನನ್ನನ್ನು ಕಾರಣಗಿರಿ ಯುವಜನ ಮೇಳಕ್ಕೆ
ಬೇಕೆಂದೆ ಆಹ್ವಾನಿಸದೆ
ಅವಮಾನಿಸಿದ್ದಾರೆ ಎಂದು ಕಿರುತೆರೆ,ಆಕಾಶವಾಣಿ ಕಲಾವಿದೆ,
ಮೇಲಿನ ಬೇಸಿಗೆ
ಗ್ರಾ.ಪಂ
ಅಧ್ಯಕ್ಷೆ ನೆಲ್ಲುಂಡೆ
ಲಲಿತಾ ಆರೋಪಿಸಿದ್ದಾರೆ.
ಕಾರಣಗಿರಿ ನಮ್ಮ ಗ್ರಾ.ಪಂ ವ್ಯಾಪ್ತಿಯ
ಪ್ರದೇಶವನ್ನು ಹೊಂದಿದೆ. ಪಕ್ಕದ ಗ್ರಾ.ಪಂ
ಅಧ್ಯಕ್ಷೆಯನ್ನು ವೇದಿಕೆಗೆ ಕರೆಯುವ ಸೌಜನ್ಯತೋರಿಲ್ಲ. ಅದಿರಲಿ
ಹತ್ತಾರು ವರ್ಷಗಳ
ತೀಪು೯ಗಾರರಾಗಿ ಯುವಜನ ಮೇಳಗಳ್ಲಲಿ ದುಡಿದ ನನ್ನನ್ನು
ನನ್ನ ಊರುಮನೆಯಲ್ಲಿ
ನಡೆದ ಮೇಳಕ್ಕೆ
ಆಯ್ಕೆ ಮಾಡದೆ
ನಿಜವಾದಕಲಾವಿದೆಗೆಅವಮಾನ ಮಾಡಿದ್ದಾರೆಎಂದು ಆರೋಪಿಸಿದರು.
ತೀಪು೯ಗಾರರ ಆಯ್ಕೆಗೆ ಇರುವ
ಮಾನದಂಡವೇನು. ಪಟ್ಟಭದ್ರರಿಗೆ ಮಾತ್ರ ಮಣೆ ಹಾಕುವ
ಸಂಪ್ರದಾಯ ಎಷ್ಟು
ಸರಿ. ಕಲಾವಿದೆ,
ಗ್ರಾ.ಪಂ
ಅಧ್ಯಕ್ಷೆಯನ್ನು ವ್ಯವಸ್ಥಿತವಾಗಿ ಕಡೆಗಣಿಸಿ ಅವಮಾನ ಮಾಡುವಲ್ಲಿ
ಯಾರ್ಯಾರ ಕೈವಾಡ
ಕೆಲಸ ಮಾಡಿದೆ
ಎಂದು ಇಲಾಖೆಗೆ
ಪತ್ರ ಬರೆದು
ಸ್ಪಷ್ಟನೆ ಕೇಳಲಾಗಿದೆ
ಎಂದು ತಿಳಿಸಿದರು.
ಹೊಸನಗರ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ
ಫೆ.12 ರಂದು ಸಮ್ಮೇಳನ
ಪೂವ೯ಭಾವಿ ಸಭೆ
ಹೊಸನಗರ: ತಾಲೂಕು ಮಟ್ಟದ
3ನೇ ಸಾಹಿತ್ಯ
ಸಮ್ಮೇಳನ ನಡೆಸುವ
ಸಂಬಂಧ ಪಟ್ಟಣದ
ಸುದ್ದಿಮನೆಯಲ್ಲಿ ಫೆ.12ರಂದು ಮಧ್ಯಾಹ್ನ 4 ಗಂಟೆಗೆ
ಪೂವ೯ಭಾವಿ ಸಭೆ
ಕರೆಯಲಾಗಿದ್ದು, ಕಸಾಪ ಪ್ರತಿನಿಧಿಗಳು, ಆಸಕ್ತರು ಭಾಗವಹಿಸುವಂತೆ
ತಾಲೂಕು ಕಸಾಪ
ಅಧ್ಯಕ್ಷ ರತ್ನಾಕರ್
ಕೋರಿದ್ದಾರೆ.
No comments:
Post a Comment