Tuesday, July 8, 2014

ನಮ್ ನಗರ facebook ಬಳಗದ "ಮಿತ್ರಕೂಟ"ಕ್ಕೆ ನಮ್ಮೂರು ಕಡೆಯಿಂದ ವಿಶಿಷ್ಠ ಬಹುಮಾನ

ನಮ್ಮೂರು ರಾಜಶೇಖರ್
ನಮ್ಮೂರ ಅಭಿಮಾನದ ಪ್ರತೀಕ ನಮ್ಮೂರು ರಾಜಶೇಖರ್
ಬಿದನೂರು: ನಗರದಲ್ಲಿ ಆಗಸ್ಟ್ 16 ರಂದು ನಮ್ ನಗರ facebook ಬಳಗ ಆಯೋಜಿಸಿರುವ ಮಿತ್ರಕೂಟ ಕಾರ್ಯಕ್ರಮಕ್ಕೆ ಹೊಸತನದ ರಂಗು ಮೂಡಲಾರಂಭಿಸಿದೆ.

ಅಂದು ನೆಡಯುವ ಕಾರ್ಯಕ್ರಮಕ್ಕೆ ಪೂರಕವಾಗಿ ನಮ್ಮೂರು ಫೌಂಡೇಶನ್ ಸಂಸ್ಥಾಪಕ ನಮ್ಮೂರು ರಾಜಶೇಖರ್ ವಿಶೇಷ ಸ್ಪರ್ಧೆಗಳನ್ನು ಸಂಘಟಿಸಿ ವಿಶಿಷ್ಠ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಪ್ರತಿವರ್ಷ ಯುವ ಕ್ರಿಯಾಶೀಲ ಮನಸ್ಸುಗಳಿಗೆ ಪೂರಕವಾಗಿ ಮತ್ತು ಪ್ರೇರಣಾತ್ಮಕವಾಗಿ ಹೊಸತನದ ಸ್ಪರ್ಧೆ ಎನ್ನುವುದಕ್ಕಿಂತ ಅವರಲ್ಲಿನ ಪ್ರತಿಭೆಗೆ ವೇದಿಕೆ ಸಿದ್ದಪಡಿಸಿ ಮಾತ್ರವಲ್ಲ ಸುಪ್ತವಾಗಿರುವ ಪ್ರತಿಭೆಯನ್ನು ಹೊರತಂದು ಬಹುಮಾನದ ಮೂಲಕ ಗೌರವಿಸುತ್ತ ಬರುತ್ತಿರುವ ನಮ್ಮೂರು ರಾಜಶೇಖರ್ ಆಗಸ್ಟ್ 16 ರಂದು ನಡೆಯಲಿರುವ ಮಿತ್ರಕೂಟಕ್ಕು ತಮ್ಮದೆ ರೀತಿಯಲ್ಲಿ ಖದರ್ ತುಂಬಲು ಮನಸ್ಸು ಮಾಡಿದ್ದಾರೆ.
ಅವರ face book timeline ನಲ್ಲಿ ತಮ್ಮದೆ ರೀತಿಯಲ್ಲಿ ಆಹ್ವಾನ ನೀಡಿದ್ದಾರೆ.. ಅದು ಇಂತಿದೆ.

ನಮ್ಮೂರಿನವರಿಗಾಗಿ...
ಮಾಜಿ ಶಾಸಕ ಬೇಳೂರು ಜೊತೆ ಕುಶಲೋಪರಿಯಲ್ಲಿರುವ ನಮ್ಮೂರು
ನಮ್ ನಗರ' ದಲ್ಲಿ ಪೋಸ್ಟಿಂಗ್ /ಕಾಮೆಂಟ್ ಮಾಡುತ್ತಿರುವ ಆಸಕ್ತಿಯಿಂದ ತೊಡಗಿರುವ ಕ್ರಿಯಾತ್ಮಕ ಸದಸ್ಯರಿಗೆ ಅಭಿನಂದನೆಗಳು .
.
ನಿಮ್ಮ ಸೃಜನಾತ್ಮಕತೆ ಗೆ ಪ್ರೇರಣೆ ನೀಡಲು ' ನಮ್ಮೂರು ಪ್ರತಿಷ್ಠಾನ ' , ೧೬- ಆಗಸ್ಟ್ ರಂದು ನಡೆಯುವ 'ಮಿತ್ರಕೂಟ' ದ ಸಂದರ್ಭದಲ್ಲಿ ವಿವಿಧ ಬಹುಮಾನಗಳನ್ನು ಪ್ರಾಯೋಜಿಸಿದೆ .
.
ಫೋಟೋಗ್ರಫಿ , ಕವನ , ವಿಶೇಷ ಮಾಹಿತಿ , ಸುದ್ದಿ - ಸಮಾಚಾರ , ಕಥನ , ಪನ್ , ಸ್ಟೇಟಸ್ , ಇತ್ಯಾದಿ ವಿಭಾಗಗಳಲ್ಲಿ ಸ್ವಂತ ಮತ್ತು ' ಶೇರ್' ಬರಹಗಳಿಗೆ ಕೂಡ ಸೂಕ್ತ ಬಹುಮಾನಗಳಿವೆ . ಇಂದಿನಿಂದ ೧೫ ಆಗಸ್ಟ್ ರವರೆಗೆ ನೀವು ಮಾಡುವ ಎಲ್ಲಾ ಪೋಸ್ಟ್ ಈ ಸ್ಪರ್ಧೆಗೆ ಭಾಗಿಯಾಗುತ್ತವೆ . ದಯವಿಟ್ಟು ನಮ್ಮ ಊರಿನ ಸುತ್ತಮುತ್ತಲಿನ ವಿಷಯಗಳಿಗೆ ಮತ್ತು ಫೋಟೋಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ .
.
ನಿಮ್ಮದಲ್ಲದ ಬರಹಗಳಿಗೆ ದಯವಿಟ್ಟು ಮೂಲ ಲೇಖಕರ ಹೆಸರು ಅಥವಾ ಗೊತ್ತಿಲ್ಲದಿದ್ದರೆ ' ಸಂಗ್ರಹ ' ಎಂದು ನಮೂದಿಸಿ . ಕೃತಿಚೌರ್ಯ ದಯವಿಟ್ಟು ಬೇಡ . ಇನ್ನೇಕೆ ತಡ ಶುರು ಮಾಡಿ . ನಿಮ್ಮ ಪ್ರತಿಭೆ ಬೇಗ ಹೊರಬರಲಿ .
' ನಮ್ ನಗರ ' ನಿಮ್ಮ ಕಲಾತ್ಮಕತೆಗೆ ಕನ್ನಡಿಯಾಗಲಿ . ಆಲ್ ದಿ ಬೆಸ್ಟ್ !!
............................. ನಮ್ಮೂರು ರಾಜಶೇಖರ್ , ಹೈದರಾಬಾದ್ , ತೆಲಂಗಾಣ

ಆಗಸ್ಟ್ 16 ರಂದು ನಡೆಯುವ ನಮ್ ನಗರ face book ಮಿತ್ರರು ಹಮ್ಮಿಕೊಂಡಿರುವ ಮಿತ್ರಕೂಟ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಬಳಗದ ಸದಸ್ಯ ಪ್ರಕಾಶ ಶೇಟ್ ಮನವಿ ಮಾಡಿದ್ದಾರೆ. 

No comments:

Post a Comment