Monday, February 3, 2014

ಬಹು ನಿರೀಕ್ಷಿತ ಪಟಗುಪ್ಪ ಸೇತುವೆ ಕಾಮಗಾರಿಗೆ ಮುಕ್ತಿ ಎಂದು?


7 ವಷ೯ದಿಂದ ಆಮೆಗತಿಯಲ್ಲಿರುವ ಕಾಮಗಾರಿ ! ಬೇಸಿಗೆ 2-ರಿಂದ 3 ತಿಂಗಳು ಮಾತ್ರ ಕಾಮಗಾರಿ ನಡೆಸಬಹುದು
! ಆಧುನಿಕ ತಂತ್ರಜ್ಞಾನ ಬಳಸಿದರೆ ಮಾತ್ರ ಕಾಮಗಾರಿ ಕೊನೆ ಕಾಣಬಹುದು.
ಪಟಗುಪ್ಪ ಸೇತುವೆ ಕಾಮಗಾರಿ ನೋಟ
ಹೊಸನಗರ:ಸಂತ್ರಸ್ತ ಗ್ರಾಮಗಳ ಹಲವು ವಷ೯ಗಳ ಬೇಡಿಕೆಯಾದ ಪಟಗುಪ್ಪ ಸೇತುವೆ ಸುಮಾರು 28 ಕೋಟಿ ವೆಚ್ಚದಲ್ಲಿ ನಿಮಾ೯ಣ ಮಾಡಲು ಸಕಾ೯ರ ಮನಮಾಡಿದ್ದು ನಿಜ. ಹಾಗೆಯೇ ಭಾರೀ ಪ್ರಚಾರದೊಂದಿಗೆ ಕಾಮಗಾರಿಗೆ ಶಿಲನ್ಯಾಸ ಮಾಡಿದ್ದು ಹೌದು. ಆದರೆ ಕಾಮಗಾರಿ ಪ್ರಾರಂಭಗೊಂಡು 7ರಿಂದ 8 ವಷ೯ ಕಳೆದರೂ ಇನ್ನು ಶೇ.50 ರಷ್ಟು ಕಾಮಗಾರಿ ಪೂಣ೯ಗೊಳ್ಳದಿರುವುದು ಸುಗಮ ಸಂಪಕ೯ಕ್ಕೆ ಹಾತೊರೆಯುತ್ತಿರುವ ಕುಟುಂಬಗಳ ಭ್ರಮನಿರಶನಕ್ಕೆ ಕಾರಣವಾಗಿದೆ.
ಕಾಮಗಾರಿ ವಿಳಂಬ ಏಕೆ?
ಪಟಗುಪ್ಪ ಸೇತುವೆ ನಿಮಾ೯ಣದ ಕನಸು ಮತ್ತು ಮಾತು 5 ದಶಕದಿಂದಲೂ ಕೇಳಿ ಬರುತ್ತಿದೆ. ಪಟಗುಪ್ಪ ಸುತ್ತಮುತ್ತಲಿನ ಗ್ರಾಮಸ್ಥರ ನಿರಂತರ ಹೋರಾಟದ ಫಲವಾಗಿ ಸಕಾ೯ರ ಕಣ್ತೆರೆದು 7 ವಷ೯ಗಳ ಹಿಂದೆ ಪಟ್ಟಗುಪ್ಪ ಸೇತುವೆ ನಿಮಾ೯ಣಕ್ಕೆ ಕೈ ಹಾಕಿತು. ಸುಮಾರು 28 ಕೋಟಿ ವೆಚ್ಚದ ಸೇತುವೆ ನಿಮಾ೯ಣದ ಶಿಲಾನ್ಯಾಸ ಏನೋ ಲಗುಬಗೆಯಿಂದ ನೆರವೇರಿತು. ಆದರೆ ಕಾಮಗಾರಿ ಪಾತ್ರ ಪೂಣ೯ಗೊಳ್ಳುವುದಿರಲಿ ಕಾಮಗಾರಿಯಲ್ಲಿ ಕನಿಷ್ಠ ಪ್ರಗತಿ ಕೂಡ ಇಂದಿಗೂ ಸಾಧ್ಯವಾಗಿಲ್ಲ.
ಅದಕ್ಕೆ ಕಾರಣ ಕೂಡ ಇಲ್ಲದಿಲ್ಲ. ಜೂನ್ ತಿಂಗಳು ಬಂತೆಂದರೆ ಮಳೆಗಾಲ ಪ್ರಾರಂಭವಾಗಿ ಹಿನ್ನೀರು ಏರುತ್ತದೆ. ಏರಿದ ಹಿನ್ನೀರು ಇಳಿಯಬೇಕಾದರೆ ಫೆಬ್ರವರಿ ಅಂತ್ಯ ಕಾಣುತ್ತದೆ. ಉಳಿದ ಮೂರು ತಿಂಗಳಲ್ಲಿ ಕಾಮಗಾರಿ ನಡೆಸಬೇಕು. ಮಾತ್ರವಲ್ಲ ಕಾಮಗಾರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸದಿರುವುದು ಒಂದಾದರೆ ಕಾಮಗಾರಿ ಅನುಷ್ಠಾನಗೊಂಡು ಇಲ್ಲಿಯವರೆಗಿರುವ ರಾಜಕೀಯ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಜೊತೆಗೆ ಅಧಿಕಾರಿಗಳ ದಿವ್ಯ ನಿಲ೯ಕ್ಷ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ಪಟಗುಪ್ಪದ ಅನಿವಾಯ೯ತೆ:
ಪಟಗುಪ್ಪ ಸೇತುವೆ ಬೇಡಿಕೆ ಇಂದು ನಿನ್ನೆಯದಲ್ಲ. ಸರಿಸುಮಾರು 5 ದಶಕದ ಬೇಡಿಕೆ. 1944 ಸುಮಾರಿ ಮಡೇನೂರು ಡ್ಯಾಂ ನಿಮಾ೯ಣಗೊಂಡಾಗ ಪಟ್ಟಗುಪ್ಪದಲ್ಲಿದ್ದ ಸೇತುವೆ ಮುಳುಗಿತು. ಆಗ ಸಂಪಕ೯ಕ್ಕೆ ಪರದಾಟ ಕಂಡು ಸೇತುವೆಯನ್ನು ಅಭಿವೖದ್ಧಿ ಪಡಿಸಿ ಏರಿಸಲಾಯಿತು. ತದನಂತರ 1965 ಸುಮಾರಿಗೆ ಲಿಂಗನಮಕ್ಕಿ ಡ್ಯಾಂ ನಿಮಾ೯ಣಗೊಂಡ ನಂತರ ಅಭಿವೖದ್ಧಿಗೊಂಡ ಸೇತುವೆ ಕೂಡ ಪೂಣ೯ ಪ್ರಮಾಣದಲ್ಲಿ ಮುಳುಗಡೆಗೆ ತುತ್ತಾಗಿದ್ದು ಮತ್ತೆ ಸಂಪಕ೯ ಪರದಾಟ ಮೇಳೈಸಿತು. ಅಲ್ಲಿಂದಲೂ ನೂತನ ಮತ್ತು ಸುಸಜ್ಜಿತ ಸೇತುವೆ ಬೇಡಿಕೆ ಕೇಳಿ ಬರುತ್ತಿತ್ತು.
ಇಂದಿನ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಪಟಗುಪ್ಪ ವರದಿ
ಸುಗಮ ಸಂಪಕ೯
ಹೊಸನಗರ ದಿಂದ ಸಾಗರದಿಂದ ಹತ್ತಿರದಿಂದ ಸಂಪಕ೯ ಸಾಧಿಸಲು ಪಟಗುಪ್ಪ ಸೇತುವೆ ಮುಖ್ಯಪಾತ್ರ ವಹಿಸುತ್ತದೆ. ಈಗಿನ ಮಾಗ೯ದ ಪ್ರಕಾರ ಸುಮಾರು ಕನಿಷ್ಠ 15 ರಿಂದ 20 ಕಿ.ಮೀ ಉಳಿಯುತ್ತದೆ. ಅಲ್ಲದೆ ದೂರದ ಮಂಗಳೂರು, ಉಡುಪಿ ಕೊಲ್ಲೂರು ಭಾಗದಿಂದ ಬರುವ ವಾಹನಗಳು ಅತೀ ಕಡಿಮೆ ಅವಧಿಯಲ್ಲಿ ಸಾಗರ ಸಂಪಕಿ೯ಸ ಬಹುದು. ಮತ್ತು ಮುಳುಗಡೆಯಿಂದ ಸಂತ್ರಸ್ಥ ಪ್ರದೇಶಗಳಾಗಿ ಹೊರಹೊಮ್ಮಿ ಕುಗ್ರಾಮದಂತಾದ ಪ್ರದೇಶಗಳಿಗೆ ಸಂಪಕ೯ ತುತು೯ ಮತ್ತು ಅತ್ಯಂತ ಅಗತ್ಯವಾಗಿದೆ. ಆದರೆ ಬೇಡಿಕೆಗೆ ಪೂರಕವಾಗಿ ಸೇತುವೆ ಮಂಜೂರಾಗಿ ಏಳೆಂಟು ವಷ೯ಕಳೆದರೂ ಕೂಡ ಅಧ೯ದಷ್ಟು ಕಾಮಗಾರಿ ಮುಗಿಯದಿರುವುದು ಸಾಕಷ್ಟು ಅಸಮಧಾನಕ್ಕೆ ಕಾರಣವಾಗಿದೆ. ಬಗ್ಗೆ ಸ್ಥಳೀಯರು ಸಾಕಷ್ಟು ಹೋರಾಟಗಳನ್ನು ವಷ೯ಂಪ್ರತಿ ಮಾಡುತ್ತಾ ಬಂದಿದ್ದರೂ ಕೂಡ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಆಗಬೇಕಾಗಿದ್ದೇನು?
ಕಾಮಾಗಾರಿ ಕೈಗೆತ್ತಿಗೊಂಡಿರುವ ksrdcl ಕಾಮಗಾರಿ ಬಗ್ಗೆ ತನ್ನ ಇಚ್ಚಾಶಕ್ತಿ ಪ್ರದಶಿ೯ಶಬೇಕು.
ಕಾಮಗಾರಿ ನಿವ೯ಹಿಸುತ್ತಿರುವ cccl ಕಂಪನಿ ಕಾಮಗಾರಿಗೆ ಚುರುಕು ಮುಟ್ಟಿಸಬೇಕು.
ಆದಷ್ಟು ಆಧುನಿಕ ತಂತ್ರಜ್ಞಾನ ಅಳವಡಿಸಬೇಕು. ಮಳೆ ಬರುವಾಗಲು ಮತ್ತು ಹಿನ್ನೀರು ಇರುವಾಗಲು ಕಾಮಗಾರಿ ನಿವ೯ಹಿಸುವ ವ್ಯವಸ್ಥೆ ಮಾಡಬೇಕು.
ಇವರೇನಂತಾರೆ.
ನಮ್ಮ ಜೀವಿತಾವಧಿಯಲ್ಲಿ ಸಾಕಾರ ಕಷ್ಟ
ಅಧಿಕಾರಿಗಳು ಮತ್ತು ಸಕಾ೯ರದ ಇಚ್ಚಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಗ್ರಾಮಸ್ಥರ ಹೋರಾಟದಿಂದ ಸೇತುವೆ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಆದರೆ ಇದೆ ರೀತಿ ಮುಂದುವರೆದರೆ ನಮ್ಮ ಜೀವಿತಾವಧಿಯಲ್ಲಿ ಸೇತುವೆ ಕನಸು ಸಾಕಾರಗೊಳ್ಳುವುದಿಲ್ಲ.
ಹೆಚ್.ಬಿ.ಕಲ್ಯಾಣಪ್ಪಗೌಡ, ಆಪ್ ಕೋಸ್ ಸದಸ್ಯರು, ಹೊಸನಗರ
ಚುರುಕುಮುಟ್ಟಿಸುತ್ತೇನೆ

ಕಾಗೋಡು ತಿಮ್ಮಪ್ಪ
ಪಟಗುಪ್ಪ ಸೇತುವೆ ಕಾಮಗಾರಿಗೆ ಚುರುಕುಮುಟ್ಟಿಸುವ ಸಂಬಂಧ ಎಲ್ಲಾ ಕ್ರಮ ಕೈಗೊಳ್ಳುತ್ತೇನೆ. ಈಗಾಗಲೆ ksrdcl ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದೇನೆ. ಮತ್ತು ಕಾಮಗಾರಿ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ
ಕಾಗೋಡು ತಿಮ್ಮಪ್ಪ
ವಿಧಾನಸಭಾ ಸ್ಪೀಕರ್.
( ಈ ವರದಿ ಇಂದಿನ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ)

No comments:

Post a Comment