Thursday, February 13, 2014

ಕೇಂದ್ರಕ್ಕೆ ಹೋದರು ರಾಜ್ಯವನ್ನು ಮರೆಯೋದಿಲ್ಲ : ಹೊಸನಗರ ಕಾರ್ಯಕರ್ತರ ಸಭೆಯಲ್ಲಿ ಬಿ ಎಸ್ ವೈ


ಹೊಸನಗರ: ಎಲ್ಲ ರೀತಿಯ ಅಧಿಕಾರವನ್ನು ನೋಡಿರುವ ನನಗೆ ಚುನಾವಣೆ ಸ್ಫಧೆ೯ ಅಗತ್ಯವಿಲ್ಲ. ದೇಶದ ಉಳಿವಿಗಾಗಿ, ಮೋದಿಯವರನ್ನು ಪ್ರಧಾನಿಯಾಗಿಸಲು ಪಕ್ಷದ ಸೂಚನೆಯಂತೆ ಲೋಕಸಭೆ ಚುನಾವಣೆಗೆ ಸ್ಫಧೆ೯ ಮಾಡುತ್ತಿದ್ದೇನೆ. ಗೆದ್ದು ದೆಹಲಿಗೆ ಹೋದರೂ ಕನಾ೯ಟಕವನ್ನು ಮರೆಯೋಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ನೆಹರೂ ಮೈದಾನದಲ್ಲಿ  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ರಾಜ್ಯದ ಜನರು ತಮ್ಮ ಮೇಲೆ ಅಭಿಮಾನವಿಟ್ಟು ಅಧಿಕಾರವನ್ನು ನೀಡಿದ್ದಾರೆ. ಅವಧಿಯಲ್ಲಿ ಜಾತಿ ಧರ್ಮವನ್ನು ನೋಡದೆ ಎಲ್ಲರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ರೂಪಿಸಿ ಅವರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ. ಈಗಲೂ ಕೇಂದ್ರ ಮಂತ್ರಿಯಾದರೆ ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ರಾಜ್ಯದ ಪರಿಸ್ಥಿತಿ ನೋಡಿದರೆ ಸಕಾ೯ರ ಬದುಕಿದೆಯೋ ಸತ್ತಿದೆಯೋ ತಿಳಿಯುವುದಿಲ್ಲ. ಕಾಂಗ್ರೆಸ್ ಸಕಾ೯ರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಯೋಜನೆ ನೀಡುವುದಿರಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವ ಯೋಗ್ಯತೆಯೂ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.
ನನ್ನ ಅವಧಿಯಲ್ಲಿ ಪ್ರತಿ ವರ್ಷ ಸಾವಿರದ ಐನೂರು ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿತ್ತು. ವರ್ಷ ಒಂದು ಗ್ರಾಮಕ್ಕೂ ಯೋಜನೆ ನೀಡಿಲ್ಲ. ರೈತರು ಬೆಳೆದ ಭತ್ತ, ಅಡಕೆ, ಜೋಳ, ಕಬ್ಬು ಸೇರಿದಂತೆ ಅನೇಕ ಬೆಳೆಗೆ ವ್ಶೆಜ್ಞಾನಿಕ ಬೆಲೆ ಸಿಗುತ್ತಿಲ್ಲ. 2011-12ರಲ್ಲಿ 2.54 ಲಕ್ಷ, 2012-13ರಲ್ಲಿ ಮೂರು ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಅನ್ವಯವಾಗಿತ್ತು. ವರ್ಷ ಕೇವಲ ಒಂದು ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ಕಾಂಗ್ರೆಸ್ ಸಕಾ೯ರ ಬಂದ ನಂತರ ಹೆಣ್ಣುಮಕ್ಕಳ ಜನನ ಕಡಿಮೆಯಾಯಿತೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ನಿರ್ಲಜ್ಜ ಸಕಾ೯ರ ತೊಲಗುವವರೆಗೂ  ರಾಜ್ಯದ ಜನತೆಗೆ ನೆಮ್ಮದಿಯಿಲ್ಲ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಸಿದ್ಧರಾಮಣ್ಣ, ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಪಂ ಸದಸ್ಯೆ ಶುಭಾ ಕೃಷ್ಣಮೂತಿ೯ ಮಾಜಿ ಶಾಸಕ ಆರಗ ಜ್ಞಾನೇಂದ್ರ, ತಾಪಂ ಅಧ್ಯಕ್ಷೆ ನಾಗರತ್ನಾ ದೇವರಾಜ್,  ತಾಪಂ ಸದಸ್ಯೆ ಜಯಲಕ್ಷ್ಮಿ ವೆಂಕಟೇಶ ಆಚಾರ್, ಬಿಜೆಪಿ ಅಧ್ಯಕ್ಷ ಕೆ.ವಿ.ಕೖಷ್ಣಮೂತಿ೯, ಎಂ.ಎನ್.ಸುಧಾಕರ್, .ವಿ.ಮಲ್ಲಿಕಾಜು೯ನ್, ವಾಲೆಮನೆ ಶಿವಕುಮಾರ್, ಬಿ.ಯುವರಾಜ್, ಎನ್.ಆರ್.ದೇವಾನಂದ್, ಪ್ರಹ್ಲಾದ್, ದೊಡ್ಲೇಪಾಲು ಚಂದ್ರಶೇಖರ್, ಸೋಮಶೇಖರ್ ಮತ್ತಿತರರಿದ್ದರು.


ತ್ರಿಣಿವೆ ಶಾಲೆಗೆ ಬೇಟಿ ನೀಡಿದ ಸಚಿವಕಿಮ್ಮನೆ
ಹೂಗುಚ್ಚ ನೀಡಿ ಸಚಿವರನ್ನು ಸ್ವಾಗತಿಸಿದ ವಿದ್ಯಾರ್ಥಿಗಳು
 ಹೊಸನಗರ: ತಾಲೂಕಿನ ನಾಗರಕೊಡಿಗೆ ತ್ರಿಣಿವೆ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಬೇಟಿ ನೀಡಿ ಶಾಲೆಯ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ಪಡೆದರು.
ತ್ರಿಣಿವೆ ಶಾಲೆ ಮಕ್ಕಳೊಂದಿಗೆ ಸಚಿವ ಕಿಮ್ಮನೆ
  ಸಚಿವ ಕಿಮ್ಮನೆ ರತ್ನಾಕರ್ ರಿಗೆ ಶಾಲೆಯ  ವಿದ್ಯಾಥಿ೯ಗಳು ಹೂವು, ಹೂಗುಚ್ಚ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಸಂದರ್ಭದಲ್ಲಿ ವಿದ್ಯಾಥಿ೯ಗಳನ್ನು ಆಲಿಂಗಿಸಿಕೊಂಡ ಸಚಿವ ಕಿಮ್ಮನೆ, ಒಳ್ಳೆಯ ರೀತಿಯಲ್ಲಿ ಓದಿ ಮಕ್ಕಳೆ..ಎಂದು ಶುಭ ಹಾರೈಸಿದರು.
 ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಪ್ಪ, ಮುಖ್ಯ ಶಿಕ್ಷಕ ರಾಜಪ್ಪ, ಸುಬ್ರಹ್ಮಣ್ಯ, ಗ್ರಾ.ಪಂ ಉಪಾಧ್ಯಕ್ಷ ಕಾರಗಡಿ ಜಯರಾಮ್, ಸದಸ್ಯ ಶಶಿಧರ್ ಪಟೇಲ್, ಪ್ರವೀಣ್ ಕಾರಗಡಿ ಮತ್ತಿತರರು ಹಾಜರಿದ್ದರು.

ತ್ರಿಣಿವೆ ಶಾಲೆಗೆ ಸಚಿವ ಕಿಮ್ಮನೆ ರತ್ನಾಕರ್ ಬೇಟಿ ನೀಡಿದರು.


ಹೊಸನಗರದಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ
ದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಬೆಂಬಲಿಸಿ : ವಾಟಗೋಡು ಸುರೇಶ್
ಹೊಸನಗರ: ದೇಶದಲ್ಲಿ ಸಾಮಾಜಿಕ ಬದಲಾವಣೆ ತರಲು ಬಾರಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಪಕ್ಷದ ತಾಲೂಕು ಸಂಚಾಲಕ ವಾಟಗೋಡು ಸುರೇಶ್ ಕೋರಿದರು.
ತಾಲೂಕಿನ ಮಾವಿನಕೊಪ್ಪದಲ್ಲಿ  ಆಮ್ಆದ್ಮಿ ಪಕ್ಷದ ಬೂತ್ ಕಾರ್ಯಕರ್ತರ ಸಭೆ ನಡೆಸಿ ನಂತರ ಅವರು ಮಾತನಾಡಿದರು.
ಆಪ್ ನೋಂದಣಿಗೆ ವಾಟಗೋಡು ಸುರೇಶ್ ಚಾಲನೆ ನೀಡಿದರು.
ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ದೇಶದಲ್ಲೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ಜನರು ದಹಲಿಯಂತೆ ಲೋಕಸಭಾ ಚುನಾವಣೆಗಳಲ್ಲಿಯೂ ಹೊಸ ಮುಖ ಮತ್ತು ಯುವಕರಿಗೆ ಆದ್ಯತೆನೀಡಲಿದ್ದಾರೆ. ಜನರಿಗೆ ಅಧಿಕಾರ, ಜನಪರ ಸಕಾ೯ರ ಎಂಬ ಘೋಶವಾಕ್ಯವಿಟ್ಟುಕೊಂಡಿರುವ ಆಮ್ ಆದ್ಮಿ ಪಕ್ಷ ದೇಶಾದ್ಯಂತ ಹೆಚ್ಚಿನ ಸ್ಥಾನ ಗಳಿಸಲಿದೆ. ಕನಾ೯ಟಕದಲ್ಲಿಯೂ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ತಾಲೂಕಿನಲ್ಲಿ ಪ್ರತಿ ಬೂತ್ ನಲ್ಲಿಯೂ ನಾಲ್ಕೈದು ಸಕ್ರೀಯ ಕಾರ್ಯಕರ್ತರನ್ನು ಗುರುತಿಸಿ ಈಗಿಂದಲೇ ಜನಸಂಪರ್ಕ ಪ್ರಾರಂಭಿಸಲಾಗುವುದು. ಪಕ್ಷದ ಸದಸ್ಯತ್ವ ಸಭಿಯಾನಕ್ಕೂ ಚಾಲನೆ ನೀಡಲಾಗಿಇದ್ದು, ಯುವಕರು ಸ್ವಯಂ ಪ್ರೇರಿತರಾಗಿ ಆನ್ಲೈನ್ ಮೂಲಕ ಸದಸ್ಯತ್ವ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ವಸಂತ್ ಕುಮಾರ್, ದೂಗೂರು ಪರಮೇಶ್ವರ್, ವಿದ್ಯಾಧರ ಭಟ್, ಈಶ್ವರಪ್ಪ ತಟಗೋಡು, ಗುಡ್ಡೇಕೊಪ್ಪ ಪ್ರವೀಣ್ ಬೋಜಪ್ಪ ಮತ್ತಿತರರಿದ್ದರು.

No comments:

Post a Comment