ಪಟಗುಪ್ಪ ಸೇತುವೆಗೆ ರು.3 ಕೋಟಿ ಹೆಚ್ಚುವರಿ ಹಣ|
ಅಗತ್ಯವಿದ್ದರೆ ಆಧುನಿಕ ತಂತ್ರಜ್ಞಾನ ಬಳಸಿ| 3 ತಿಂಗಳಲ್ಲಿ ಬಹುತೇಕ ಕಾಮಗಾರಿ
ಪೂಣ೯ಗೊಳಿಸಿ: ಕಾಗೋಡು ಸೂಚನೆ
ಹೊಸನಗರ:ಮುಂಬರುವ 3 ತಿಂಗಳಲ್ಲಿ
ಪಟಗುಪ್ಪ ಸೇತುವೆಯ
ಬಹುತೇಕ ಕಾಮಗಾರಿ
ಮುಗಿಸಬೇಕು. ಹೆಚ್ಚುವರಿ ರು.3ಕೋಟಿ ಹಣ
ಅಗತ್ಯವಿದ್ದು ಅದನ್ನು ಒದಗಿಸುತ್ತೇನೆ. ಅಗತ್ಯವಿದ್ದರೆ ಆಧುನಿಕ
ತಂತ್ರಜ್ಞಾನ ಬಳಸಿ. ಒಟ್ಟಿನಲ್ಲಿ ವಷ೯ದೊಳಗೆ ಕಾಮಗಾರಿ
ಮುಗಿಸಬೇಕು ಎಂದು
ಸ್ಥಳೀಯ ಶಾಸಕ,
ಸ್ಪೀಕರ್ ಕಾಗೋಡು
ತಿಮ್ಮಪ್ಪ ಅಧಿಕಾರಿಗಳಿಗೆ
ಕಟ್ಟಪ್ಪಣೆ ನೀಡಿದ್ದಾರೆ.
ಪಟಗುಪ್ಪ ಸೇತುವೆ ಕಾಮಗಾರಿ ಪರಿಶೀಲಿಸುತ್ತಿರುವ ಸ್ಪೀಕರ್ ಕಾಗೋಡು. |
ಕನ್ನಡಪ್ರಭದಲ್ಲಿ ಫೆ.4ರಂದು
ಪ್ರಕಟಗೊಂಡ 'ಪಟಗುಪ್ಪ ಸೇತುವೆ ಕಾಮಗಾರಿಗೆ ಮುಕ್ತಿ
ಎಂದು?' ವರದಿಗೆ
ಸ್ಪಂದಿಸಿದ ಸ್ಪೀಕರ್
ಕಾಗೋಡು ತಿಮ್ಮಪ್ಪ
ಮಂಗಳವಾರ ಪಟಗುಪ್ಪದ
ಹಿನ್ನೀರು ಪ್ರದೇಶಕ್ಕೆ
ಬೇಟಿ ನೀಡಿ
ಕಾಮಗಾರಿ ಸ್ಥಿತಿಗತಿಯನ್ನು
ಪರಿಶೀಲಿಸಿದರು.
ಕಾಮಗಾರಿ ವಿಳಂಬದ ಬಗ್ಗೆ
ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದ
ಕಾಗೋಡು, ಕಾಮಗಾರಿಯಲ್ಲಿ
ವಿಳಂಬ ಧೋರಣೆ
ಸಲ್ಲ. ಕಾಮಗಾರಿ
ಚುರುಕುಗೊಳಿಸಲು ನಿಮಗೇನಾದರು ಸಮಸ್ಯೆ ಇದ್ದರೆ ಸರಕಾರದೊಂದಿಗೆ
ಮಾತುಕತೆ ನಡೆಸಿ
ಬಗೆಹರಿಸುತ್ತೇನೆ. ವಷ೯ದೊಳಗೆ ಕಾಮಗಾರಿ ಮುಗಿಯಬೇಕು ಹೆಚ್ಚಿನ
ವಿಳಂಬ ಸಹಿಸುವುದಿಲ್ಲ
ಎಂದು ಎಚ್ಚರಿಸಿದರು.
ಸಂಸ್ಥೆಯ ಅದ್ಯಕ್ಷರೊಂದಿಗೆ ಮಾತುಕತೆ
ಪಟಗುಪ್ಪ ಸೇತುವೆ ಕಾಮಗಾರಿ
ಕೈಗೆತ್ತಿಕೊಂಡಿರುವ ಕೆಎಸ್ಆರ್್ಡಿಸಿಎಲ್ ಸಂಸ್ಥೆ ಅಧ್ಯಕ್ಷರೊಂದಿಗೆ ಮಾತುಕತೆ
ನಡೆಸಲಾಗಿದ್ದು, ಅವರಿಗೆ ಖುದ್ದು ಬೇಟಿ ಮಾಡಿ
ಪರಿಶೀಲಿಸಿ ಮತ್ತು
ಅಗತ್ಯ ಕ್ರಮ
ಕೈಗೊಳ್ಳಲು ಸೂಚಿಸಿದ್ದೇನೆ.
ಸದ್ಯದಲ್ಲೆ ಕಾಮಗಾರಿ
ಸ್ಥಳಕ್ಕೆ ಬೇಟಿ
ನೀಡುತ್ತಾರೆ ಎಂದರು. ಹಿನ್ನೀರು ಇರುವಾಗ ಮತ್ತು
ಮಳೆ ಬರುವ
ಸಂದಭ೯ದಲ್ಲು ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ
ನಡೆಸಲು ಸಾಧ್ಯವಿದ್ದರೆ
ಕೂಡಲೇ ಅದನ್ನು
ಕೂಡ ಅಳವಡಿಸಿಕೊಳ್ಳಿ.
ಹಿನ್ನೀರುತೀರದ ದಂಡೆಗೆ ಪಿಚ್ಚಿಂಗ್ ಬದಲಿಗೆ ಕಾಂಕ್ರೀಟ್
ವಾಲ್ ನಿಮಿ೯ಸುವ
ಬಗ್ಗೆ ಯೋಚಿಸಿ
ಎಂದು ಅಧಿಕಾರಿಗಳಿಗೆ
ಸೂಚಿಸಿದರು.
ಬೇಸಿಗೆಯ 3 ತಿಂಗಳಲ್ಲಿ ಕಾಮಗಾರಿಯನ್ನು
ತ್ವರಿತವಾಗಿ ನಡೆಸುವ ಅವಕಾಶ ಇದ್ದರೂ ಕೂಡ
ಕಾಮಗಾರಿ ನಿವ೯ಹಿಸುತ್ತಿಲ್ಲ
ಎಂಬ ಸಾವ೯ಜನಿಕರ
ಅಸಮಧಾನಕ್ಕೆ, ಸರಿ ಬಿಡಿ ಇವತ್ತಿಂದ ಲೆಕ್ಕ
ಇನ್ಮುಂದೆ ಕಾಮಗಾರಿ
ಸರಿಯಾದ ದಾರಿಯಲ್ಲಿ
ನಡೆಯುತ್ತದೆ ಎಂದು ಕಾಗೋಡು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಕನ್ನಡಪ್ರಭದೊಂದಿಗೆ ಮಾತನಾಡಿ ಈಗಾಗಲೆ ರು.29.3ಕೋಟಿ
ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು ರು.3
ಕೋಟಿ ಹೆಚ್ಚುವರಿ
ಬೇಕಾಗಲಿದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ವಷ೯ದೊಳಗೆ ಕಾಮಗಾರಿ
ಮುಗಿಸುವ ಸಂಬಂಧ
ತುತು೯ಕ್ರಮ ಕೈಗೊಳ್ಳುತ್ತೇನೆ.
ಈ ನಿಟ್ಟಿನಲ್ಲಿ
ಸಕಾ೯ರ ಮತ್ತು
ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ
ಎಂದು ಭರವಸೆ
ನೀಡಿದರು.
ಪ್ರತಿಭಟನೆ ಮಾಡಲಿ
ಪಟಗುಪ್ಪ ಸೇತುವೆ ಮತ್ತು
ರಸ್ತೆ ಕಾಮಗಾರಿ
ಸಂಬಂಧ ನಡೆಸಿದ
ಪ್ರತಿಭಟನೆಯಲ್ಲಿ ಸೊರಬದ ಮಾಜಿ ಶಾಸಕರು ಭಾಗವಹಿಸಿದ್ದರಲ್ಲ
ಎಂಬ ಪ್ರಶ್ನೆಗೆ
ಪ್ರತಿಭಟನೆಗೆ ನಾನಾಕಾರಣಗಳಿವೆ ಎಂದು ಚುಟುಕಾಗಿ ಉತ್ತರಿಸಿ,
ಸೊರಬದಿಂದ ಇಲ್ಲಿಗೆ
ಬರುವುದು ಹಳೇ
ಬೇರುಗಳ ಹುಡುಕಾಟಕ್ಕೆ
ಇರಬಹುದು ಎಂದು
ವ್ಯಂಗ್ಯವಾಡಿದರು.
ಜಿಪಂ ಸದಸ್ಯ ಕಲಗೋಡು
ರತ್ನಾಕರ್, ಎಪಿಎಂಸಿ
ಅಧ್ಯಕ್ಷ ಗುಬ್ಬಿಗಾ
ಅನಂತರಾವ್, ಸದಸ್ಯ
ಹೆಚ್.ಬಿ.ಕಲ್ಯಾಣಪ್ಪಗೌಡ, ಬಗರ್್ಹುಕುಂ
ಸಮಿತಿ ಅಧ್ಯಕ್ಷ
ಏರಗಿ ಉಮೇಶ್,
ತಾಲೂಕು ಪ್ರಮುಖರು,
ಊರಿನ ಗ್ರಾಮಸ್ತರು
ಪಾಲ್ಗೊಂಡಿದ್ದರು.
No comments:
Post a Comment