Saturday, February 1, 2014

ಬಡವರ ಬಗ್ಗೆ ಕಾಳಜಿಯುಕ್ತ ಸೇವೆ ಅಗತ್ಯ :: ಬೆಂಗಳೂರು ಮೆಟ್ರೋ ಲಯನ್ಸ್ ಅಧ್ಯಕ್ಷ ಸೋಮಶೇಖರ್


ಕುಗ್ರಾಮ ಕುಂಬ್ರಿಬೈಲು ಮಕ್ಕಳಿಗೆ ಲಯನ್ಸ್ ನೆರವು
ಬಿದನೂರು:ರಿಮೋಟ್ ಪ್ರದೇಶದ ಜನರಿಗೆ ನೆರವು ನೀಡುವ ಕಾಳಜಿಯುಕ್ತ ಸೇವೆಯ ಅಗತ್ಯವಿದೆ ಎಂದು ಬೆಂಗಳೂರು ಮೆಟ್ರೋ ಅದ್ಯಕ್ಷರಾದ ಲಯನ್  ಹೆಚ್ ಎಸ್ ಸೋಮಶೇಖರ್ ಹೇಳಿದರು.
ಹೊಸನಗರ ತಾಲೂಕು ಕುಂಬ್ರಿಬೈಲು ಕುಗ್ರಾಮದ ವಿದ್ಯಾರ್ಥಿಗಳಿಗೆ ಲಯನ್ಸ್ ನೆರವು
ಹೊಸನಗರ ತಾಲೂಕು ಸುಳುಗೋಡು ಗ್ರಾಪಂ ವ್ಯಾಪ್ತಿಯ ಕುಂಬ್ರಿಬೈಲು ಶಾಲೆಯ ಅವರಣದಲ್ಲಿ ಲಯನ್ಸ್ ಕ್ಲಬ್ ಬೆಂಗಳೂರು ಮೆಟ್ರೋ ಮತ್ತು ಲಯನ್ಸ್ ಕ್ಲಬ್ ವಾರಾಹಿ ಮಾಸ್ತಿಕಟ್ಟೆ  ಜಂಟಿಯಾಗಿ ಹಮ್ಮಿಕೊಂಡಿದ್ದ ಕಾಯ೯ಕ್ರಮದಲ್ಲಿ ಸುಮಾರು 55 ಜನರಿಗೆ ಬೆಸಿ೯ಟ್, 25 ವಿದ್ಯಾಥಿ೯ಗಳಿಗೆ ಬ್ಯಾಗ್ ಮತ್ತು ಪುಸ್ತಕವನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಬಡವರು ಮತ್ತು ಕುಗ್ರಾಮಗಳಿಗೆ ಸೌಲಭ್ಯ ನೀಡುವಲ್ಲಿ ಸಕಾ೯ರೇತರ ಸಂಘ ಸಂಸ್ಥೆಗಳು ಕೂಡ ಮುಂದೆ ಬರಬೇಕು ಎಂದರಲ್ಲದೆ. ಕುಂಬ್ರಿಬೈಲ್ ಶಾಲೆ ಉಚಿತವಾಗಿ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಬೆಂಗಳೂರು ಮೆಟ್ರೋ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗರಾಜ್ ಮಾಸ್ತಿಕಟ್ಟೆ ಲಯನ್ಸ್   ಹೆಚ್ ಜಿ ವೆಂಕಟೇಶ್ ಗೌಡ ,ವೆಂಕಟೇಶ್ ಹೆಗ್ಡೆ ,ನಾಗೇಶ್ , ಜಿಲ್ಲಾದ್ಯಕ್ಷ ಲಯನ ಹೆಚ್ ಕೆ ವಿದ್ಯಾನಂದ ರಾವ್, ಅನಂತಮೂತಿ೯ ಶೆಣೈ,  ಗ್ರಾಪಂ ಸದಸ್ಯ ಚಂದ್ರಶೇಖರ್, ಪ್ರಮುಖರಾದ ಜಯಶೀಲಪ್ಪಗೌಡ, ಅಧ್ಯಾಪಕರು, ಗ್ರಾಮಸ್ತರು ಪಾಲ್ಗೊಂಡಿದ್ದರು.
ಅಪರೂಪಕ್ಕೊಮ್ಮೆ ಕಾಯ೯ಕ್ರಮವನ್ನು ನೋಡುವ ಗ್ರಾಮಸ್ತರು ಲಯನ್ಸ್ ಕಾಯ೯ಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

No comments:

Post a Comment