Wednesday, May 13, 2015

ಹತ್ತಿರ.. ಹತ್ತಿರ.. ನೂರರ ಸಾಧನೆ : ಸರ್ಕಾರಿ ಬಡಶಾಲೆಯೊಂದರ ಸಾಹಸಗಾಥೆ


ಸರ್ಕಾರಿ ಶಾಲೆಗಳೆಂದರೆ ಅಲರ್ಜಿ ಎಂಬಂತ ವಾತಾವರಣದಲ್ಲಿ ಎಸ್ಎಸ್ಎಲ್ಸಿ ಪಲಿತಾಂಶದಲ್ಲಿ ಕೇವಲ ಶೆ.20, 30 ಪಲಿತಾಂಶಕ್ಕೆ ಮೀಸಲಾಗಿದ್ದ ಇಲ್ಲಿಯ ಸರ್ಕಾರಿ ಶಾಲೆಯೊಂದು ಈ ಬಾರಿ ಹತ್ತಿರ.. ಹತ್ತಿರ.. ಶೇ.100 ಸಾಧನೆ ಮಾಡಿ ಗಮನ ಸೆಳೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಯೊಂದರ ಹಿರಿಮೆ ಇದು.
ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆ
ನಗರದಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಾರಂಭಗೊಂಡು ದಶಕವೇ ಕಳೆದಿದೆ. ಖಾಸಗಿ ಶಾಲೆಯ ಅಬ್ಬರದ ನಡುವೆ ಅಳಿದುಳಿದ ಮಕ್ಕಳೇ ತುಂಬಿರುವ ಶೈಕ್ಷಣಿಕವಾಗಿ ಬಡಶಾಲೆ.
ಮೂಲಮೂತ ಸೌಕರ್ಯಗಳ ಕೊರತೆ, ಉತ್ತಮ ವಾತಾವರಣದ ಅಲಭ್ಯತೆಯ ಕಾರಣ ಪ್ರತಿವರ್ಷ 25, 30, 40 ಹೀಗೆ ಶೇಕಡವಾರು ಅಲ್ಪ ಪಲಿತಾಂಶದ ಶಾಲೆಯಾಗಿ ಕೆಟ್ಟ ಹೆಸರು ಪಡೆದುಕೊಂಡಿತ್ತು. ಸುಮ್ಮನೆ ಮನೆಯಲ್ಲಿ ಇರಬೇಕಲ್ಲ ಎನ್ನುವವರು ಮಾತ್ರ ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದ ಕಾರಣ ಉತ್ತಮ ಪಲಿತಾಂಶ ತರುವುದು ಶಿಕ್ಷಕರಿಗೂ ಒಂದು ಸವಾಲಾಗಿ ಪರಿಣಮಿಸಿತ್ತು.
ಮುಖ್ಯಶಿಕ್ಷಕರು ಬಂದರು:
ಆದರೆ ಸದರಿ ಶಾಲೆಗೆ ವರ್ಷದ ಹಿಂದೆ ಕ್ರಿಯಾಶೀಲ ಯುವಕ ಹನುಮಂತಪ್ಪ ಮುಖ್ಯಶಿಕ್ಷಕರಾಗಿ ಬಂದ ಮೇಲೆ ಒಂದಷ್ಟು ಬದಲಾವಣೆ ಕಾಣುವ ಭರವಸೆ ವ್ಯಕ್ತವಾಯಿತು. ಅದರ ಜೊತೆಜೊತೆಗೆ ಮೊನ್ನೆ ಮೊನ್ನೆ ತಾನೆ ಉದಯಿಸಿದ ಸಿ.ಅಜೇಯ್ ಅಧ್ಯಕ್ಷತೆಯ ಬಿದನೂರು ಸಾಂಸ್ಕೃತಿಕ ವೇದಿಕೆ ಶಾಲೆಯ ಬೆಳವಣಿಗೆ ಬಗ್ಗೆ ಗಮನ ಹರಿಸಿದ್ದು ಬದಲಾವಣೆಗೆ ಇನ್ನಷ್ಟು ಒತ್ತು ನೀಡಿದಂತಾಯಿತು.
ನಗರ ಚಿಕ್ಕಪೇಟೆ ಸರ್ಕಲ್ ನಲ್ಲಿ ಜನರಿಂದ ಸಂಭ್ರಮಾಚರಣೆ
ಪಲಿತಾಂಶ ಯಾಕೆ ಕಡಿಮೆ ಮತ್ತು ಯಾವ ವಿಷಯದಲ್ಲಿ ಮಕ್ಕಳು ಗೊಂದಲದಲ್ಲಿದ್ದಾರೆ ಎಂದು ಮುಖ್ಯಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದಾಗ ಗೊತ್ತಾಗಿದ್ದು ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ಇಲ್ಲಿಯ ಮಕ್ಕಳ ಪಾಲಿಗೆ ಕಷ್ಟ..ಕಷ್ಟ..
ಸ್ಮಾರ್ಟ್ ಕ್ಲಾಸ್:
ಉಡುಪಿ ಸ್ಪಂದನ ವಾಹಿನಿಯ ಜನಪ್ರೀಯ ಸ್ಮಾರ್ಟ್ ಕ್ಲಾಸ್ ಇಲ್ಲಿ ಅನುಷ್ಠಾನಗೊಂಡರೆ ಉಪಯೋಗ ಆಗಬಹುದು ಎಂಬ ಆಲೋಚನೆಯಲ್ಲಿ ಸಿ.ಅಜೇಯ್ ಹನುಮಾನ್ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಲಾಸ್ ನಾಯಕ್ ರೊಂದಿಗೆ ಸಮಾಲೋಚಿಸಿ ಅವರ ಕೊಡುಗೆಯೊಂದಿಗೆ ಸ್ಮಾರ್ಟ್ ಕ್ಲಾಸ್ ಆರಂಭಗೊಂಡಿತು. ಇದಕ್ಕೆ ಪೂರಕವಾಗಿ ಸಿ.ಅಜೇಯ್ ಸಹೋದರ ಸಿ.ಕೃಷ್ಣ ಕಾಮತ್ ಟಿವಿಯನ್ನು ಕೊಡುಗೆಯಾಗಿ ನೀಡಿದರು.
ಅಲ್ಲಿಂದ ಮಕ್ಕಳ ಆತ್ಮವಿಶ್ವಾಸ ಚಿಗುರೊಡೆಯಿತು. ಮುಖ್ಯ ಶಿಕ್ಷಕ ಹನುಮಂತಪ್ಪ ಸೇರಿದಂತೆ ಶಿಕ್ಷಕ ಸಿಬ್ಬಂದಿಗಳು ಹೊಸದೊಂದು ಸಾಧನೆಗೆ ಮುನ್ನುಡಿ ಬರೆಯಲು ಸಿದ್ದರಾಗಿಯೇ ಬಿಟ್ಟರು.
ಶೇ.ಹತ್ತಿಪ್ಪತ್ತು ಪಲಿತಾಂಶದೊಂದಿಗೆ ಸದಾ ಟೀಕೆಗೆ ಗುರಿಯಾಗುತ್ತಿದ್ದ ಸದರಿ ಶಾಲೆ ಈ ಬಾರಿಯ ಪಲಿತಾಂಶದಲ್ಲಿ ಗಣನೀಯ ಸಾಧನೆ ತೋರಬಹುದು ಎಂಬ ವಾತಾವರಣ ನಿರ್ಮಾಣ ವಾಗಿತ್ತು.
ಅಭಿನಂದನೆಗೆ ಅರ್ಹರಾದ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು
ಬಂದೇ ಬಿಟ್ಟಿತು:
ವೆಬ್ಸೈಟ್ ಪಲಿತಾಂಶದಲ್ಲಿ ಒಬ್ಬಬ್ಬ ವಿದ್ಯಾರ್ಥಿಯ ಪ್ರಗತಿ ನೋಡುತ್ತ ಹೋದಂತೆ ಅಂದುಕೊಂಡಿದ್ದು ನಿಜವಾಯ್ತು. ಆದರೆ ಬ್ಯಾಡ್ಲಕ್ ಎಂದರೆ ಶಾಲೆ ಬಿಟ್ಟಿದ್ದ ವಿದ್ಯಾರ್ಥಿ ಯೋರ್ವನನ್ನು ಹರಸಾಹಸದೊಂದಿಗೆ ಶೈಕ್ಷಣಿಕ ವರ್ಷ ಮುಕ್ತಾಯ ಸಂದರ್ಭದಲ್ಲಿ ಕರೆತಂದು ಆತನನ್ನು ಪರೀಕ್ಷೆಗೆ ಸಿದ್ದಪಡಿಸಲಾಯಿತು. ಆದರೆ ಆತ ಮಾತ್ರ ಒಂದು ವಿಷಯದಲ್ಲಿ ಹಿಂದುಳಿದ ಕಾರಣ 24 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉತೀರ್ಣರಾಗಿದ್ದರು. ಅದರಲ್ಲಿ 19 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದರಲ್ಲದೆ. ಶೇಕಡವಾರು ಅಂಕಸಾಧನೆ 70ಕ್ಕು ಮೀರಿದ್ದು ಹುಬ್ಬೇರಿಸುವಂತೆ ಮಾಡಿದೆ.
ಒಟ್ಟಾರೆ ಕಾರಣಗಳು ಏನೆ ಇರಲಿ ಕಡಿಮೆ ಪಲಿತಾಂಶದಿಂದ ಸದಾ ಟೀಕೆಗೆ ಗುರಿಯಾಗಿದ್ದ ನಗರದ ಸರ್ಕಾರಿ ಪ್ರೌಢಶಾಲೆ ಉತ್ತಮ ಪಲಿತಾಂಶದೊಂದಿಗೆ ತನ್ನ ಕಳಂಕವನ್ನು ತೊಡೆದು ಹಾಕಿ ಮುನ್ನೆಡೆದಿದೆ. ಇನ್ನು ತಿರುಗಿ ನೋಡುವ ಪ್ರಮೇಯ ಬರದಿರಲಿ ಎಂಬುದು ನಮ್ಮ ಆಶಯ
ಇವರೇನಂತಾರೆ.
ಉತ್ತಮ ಸಾಧನೆ
ಕಳಪೆ ಸಾಧನೆಯಲ್ಲಿದ್ದ ಚಿಕ್ಕಪೇಟೆ ಪ್ರೌಢಶಾಲೆ ಉತ್ತಮ ಸಾಧನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನದಲ್ಲಿ ಇನ್ನಷ್ಟು ಸಾಧನೆಗೆ ಈ ಪಲಿತಾಂಶ ಮುನ್ನುಡಿ ಬರೆಯಲಿ.
ಕಿಮ್ಮನೆ ರತ್ನಾಕರ್
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು,
..................................................................................

ರಾಮಯ್ಯನವರ ಕನಸು
ಸದರಿ ಉತ್ತಮ ಸಾಧನೆ ಮಾಡಬೇಕೆಂಬುದು ದಿ. ರಾಮಯ್ಯ ನವರ ಕನಸಾಗಿತ್ತು. ಇಂದು ನನಸಾಗಿದೆ. ಹಾಕಿದ ಶ್ರಮಕ್ಕೆ ಪ್ರತಿಫಲ ಸಂದಿದೆ.
ಸಿ.ಅಜೇಯ್ 
ಅಧ್ಯಕ್ಷರು, ಬಿದನೂರು ಸಾಂಸ್ಕೃತಿಕ ವೇದಿಕೆ
.....................................................................................
ನಮ್ಮ ಕನಸು
ಬಡರೈತ ಕೂಲಿಕಾಮರ್ಿಕ ಮಕ್ಕಳೇ ಹೆಚ್ಚು ಬರುತ್ತಿದ್ದ ಸದರಿ ಶಾಲೆ ಉತ್ತಮ ಸಾಧನೆ ಮಾಡಬೇಕು ಎಂಬುದು ನಮ್ಮದು ಬಹುದಿನದ ಕನಸು. ಅದು ಈಡೇರಿದೆ. ಇದಕ್ಕೆ ಶ್ರಮಿಸಿದ ಎಲ್ಲರು ಅಭಿನಂದನಾರ್ಹರು.
ನಮ್ಮೂರು ರಾಜಶೇಖರ್,
 ನಮ್ಮೂರು ಫೌಂಡೇಶನ್
.....................................................................................
ಸಹಕಾರದಿಂದ ಸಾಧನೆ
ಬಿದನೂರು ಸಾಂಸ್ಕೃತಿಕ ವೇದಿಕೆ ಅಳವಡಿಸಿದ ಸ್ಮಾಟರ್್ಕ್ಲಾಸ್ ಉತ್ತಮ ಫಲನೀಡಿತು. ವಿದ್ಯಾಥರ್ಿಗಳ ಉತ್ಸಾಹ, ಶಿಕ್ಷಕರ ದಣಿವರಿಯದ ಸೇವೆ ಮತ್ತು ಊರಿನವರ ಸ್ಪಂದನೆ ಉತ್ತಮ ಸಾಧನೆಗೆ ಸಾಧ್ಯವಾಗಿದ್ದು ಎಲ್ಲರಿಗೂ ಕೃತಜ್ಞತೆಗಳು
ಹನುಮಂತಪ್ಪ,
 ಮುಖ್ಯಶಿಕ್ಷಕರು
....................................................................................

No comments:

Post a Comment