ಆಗಸ್ಟ್ 24 ಭಾನುವಾರ ನಗರದಲ್ಲಿ ಬಹುತೇಕ ಕಾರ್ಯಕ್ರಮ ಸಾಧ್ಯತೆ
ಬಿದನೂರು: ಬಿದನೂರು ಸಾಂಸ್ಕ್ರತಿಕ ವೇದಿಕೆ ಟ್ರಸ್ಟ್ ಅಧ್ಯಕ್ಷ ಸಿ ಅಜಯ್ ನೇತೃತ್ವದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ರನ್ನು ಬೇಟಿ ಮಾಡಿ, ನಗರದಲ್ಲಿ ಯಕ್ಷಗಾನ ಕಲಾವಿದ ದಿ.ನಗರ ಜಗನ್ನಾಥಶೆಟ್ಟಿ ಸ್ಮರಣಾರ್ಥ ಅಂಬ್ಯುಲೆನ್ಸ್ ಗೆ ಚಾಲನೆ ಮತ್ತು ನಗರದ ಮಾಣಿಕ್ಯ ದಿ.ಸಿ ರಾಮಚಂದ್ರರಾವ್ (ರಾಮಯ್ಯ) ಸ್ಮರಣಾರ್ಥ ನಗರ ಆಸ್ಪತ್ರೆ ಆವರಣದಲ್ಲಿ ನೂತನ ಟ್ರೊಮೊ ಸೆಂಟರ್ ಗೆ ಶಂಕುಸ್ಥಾಪನೆ ಕಾರ್ಯಕ್ರಮದ ದಿನಾಂಕ ನಿಗದಿ ಬಗ್ಗೆ ಚರ್ಚೆ ನಡೆಸಲಾಯಿತು.
ಆಗಸ್ಟ್ 24:
ಮುಂಬರುವ ಆಗಸ್ಟ್ 24 ಭಾನುವಾರದಂದು ಕಾರ್ಯಕ್ರಮ ನಡೆಸಲು ದಿನಾಂಕ ನಿಗದಿ ಪಡಿಸಲಾಗಿದ್ದು ಬಹುತೇಕ ಆ ದಿನಾಂಕದಂದೆ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಅಂಬ್ಯುಲೆನ್ಸ್ ನ್ನು ಟ್ರಸ್ ವತಿಯಿಂದ ಖರೀದಿ ಮಾಡಲಾಗಿದೆ. ನೋಂದಣಿ ಮಾತ್ರ ಬಾಕಿ ಇದ್ದು ದಿನಾಂಕ ನಿಗದಿ ಆದರೆ ಕೂಡಲೇ ನೋಂದಣಿ ಮಾಡಿಸಲು ಅನುಕೂಲವಾಗುತ್ತದೆ. ಮತ್ತು ರಾಮಯ್ಯ ಸ್ಮರಣಾರ್ಥ ಸ್ವತ: ಕಿಮ್ಮನೆ ಕೊಡುಗೆ ಯಾಗಿರುವ ಟ್ರೊಮೊ ಸೆಂಟರ್ ಗೆ ಹಣ ಟ್ರಸ್ಟ್ ಖಾತೆಯಲ್ಲಿದ್ದು ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಅನುಕೂಲವಾಗುತ್ತದೆ ಎಂದು ಟ್ರಸ್ಠಿ ಕೃಷ್ಣ ಕಾಮತ್ ಸಚಿವರಿಗೆ ಮನವರಿಕೆ ಮಾಡಿದರು.
ಇದಕ್ಕೆ ಸಮ್ಮತಿಸಿದ ಸಚಿವರು ಕೂಡಲೇ ಕಾರ್ಯಕ್ರಮ ಆಯೋಜನೆ ಸಂಬಂಧ ಕ್ರಮ ಕೈಗೊಳ್ಳಲು ತಮ್ಮ ಕಾರ್ಯದರ್ಶಿ ಈಶ್ವರಪ್ಪಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ಅಬ್ಬಾಸ್ ನೂಲಿಗ್ಗೇರಿ, ರಾಮಕುಮಾರ್ ಭಂಡಾರಕರ್, ಉಮೇಶ್ ಹೊಳ್ಳ ಕಾರ್ಯದರ್ಶಿ ರವಿ ಉಪಸ್ಥಿತರಿದ್ದರು.

ಸಚಿವ ಕಿಮ್ಮನೆಯೊಂದಿಗೆ ಟ್ರಸ್ಟ್ ವತಿಯಿಂದ ಸಮಾಲೋಚನೆ |

No comments:
Post a Comment