ಡಾ.ಮಾರ್ಷಲ್ ಶರಾಂ |
ಬಿದನೂರು: ಮಳೆ..ಮುಳುಗಡೆ.. ಬದುಕು..ಸಂಸ್ಕೃತಿ.. ಮತ್ತು ಯಾತನೆ ಮೇಲೆ ಕೊಡಚಾದ್ರಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕ ಡಾ. ಮಾರ್ಷಲ್ ಶರಾಂ facebook ನಲ್ಲಿ ಬರೆದ ಸಾಲುಗಳನ್ನು ಇಲ್ಲಿ ನೀಡಲಾಗಿದೆ.
ನೀರು
ನುಂಗಿದ್ದು ಜನರನ್ನ ಭೂಮಿಯನ್ನ ಮತ್ತು ಭಾವನೆಗಳನ್ನ. ಒಣಗಿದ ಮರಗಳು .ನೀರಮೇಲಿನ ಗುಳ್ಳೆಯ ಹಾಗೆ ಕೆಲಕಾಲ ನಮ್ಮನ್ನು ಕಾಡುತ್ತವೆ. ಮುಳುಗಡೆ ಊರಿಗೆ ಬಂದವರು ಈ ಮರಗಳ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ನೀರಲ್ಲಿ ಬೋಟಿಂಗ್ ಮೋಜು ನಡೆಸತ್ತ ಮರ ಮುಳುಗಿದ್ದನ್ನು ಅದರ ಹಿಂದಿನ ವ್ಯಥೆಯನ್ನು ಯಾರೂ ಅರಿಯುವುದಿಲ್ಲ. ಓ ವಾಟ್ ಎ ಸರ್ಪ್ರೈಸ್ ಎನ್ನುತ್ತ ನೀರ ಮೇಲೆ ತೇಲಾಡುವವರಿಗೆ ನೀರಳಗಿನ ದುಖ ಗೊತ್ತಾಗಲ್ಲ. ಮುಳುಗಿದ ಮರಗಳು ತಮ್ಮ ಸ್ವಾಭಿಮಾನ ಬಿಟ್ಟು ವ್ಯಥೆಯನ್ನು ಹೇಳಿಕೊಳ್ಳುವದಿಲ್ಲ. ಆದರೆ ದುರಾಸೆಯ ಮನುಷ್ಯ ಮರ ಮುಉಳುಗಿಸಿದ ಕತೆಯನ್ನು ಹೆಮ್ಮೆಯಿಂದ ಹೇಳಿಕೊಳ್ಲುವುದು ದುರಂತ
...............................................................
ಮಳೆ ಬಂದರೆ ಜಗತ್ತಿಗೆ
ಒಳ್ಳದು. ಮನೆ
ಇದ್ದರೆ ಜನರಿಗೆ
ಒಳ್ಳೆಯದು. ಗೂಡಿದ್ದರೆ
ಹಕ್ಕಿಗೆ ಒಳ್ಳೆದು. ನೀರಿದ್ದರೆ ಜೀವಜಾಲಕ್ಕೆ ಒಳ್ಳದು. ನೀನಿದ್ದರೆ ಎಲ್ಲರಿಗೂ ಒಳ್ಳೆಯದು. ನೀನು ಅಂದರೆ ಯಾರು? ಅವರವರ ಭಾವಕ್ಕೆ ತಕ್ಕಂತೆ ಯಾರೂ ಆಗಬಹುದು. ಅವರವರ ಅಭಿರುಚಿ ಅದು ಯಾರು ಎಂಬುದನ್ನು ನಿಕ್ಕಿ ಮಾಡುತ್ತದೆ.
ಮಳೆ
ಎ0ದರೆ ನೀರಲ್ಲ. ಜಲವಲ್ಲ, ಕೆಸರಲ್ಲ. ಅದು ಜೀವ. ಅದು ಹಸಿರು. ಅದು ಉಸಿರು, ಹಲಸಿನ ಬೀಜ ಸುಟ್ಟು ತಿನ್ನುವ ಹೊತ್ತು. ಶೀತವಾಗಿ ಮೂಗು ಸೊರಗುಡುತ್ತ ಸೀನುತ್ತ ಆಚೀಚೆಯವರಿ0ದ ಬೈಸಿಕೊಳ್ಳುತ್ತ ಕಳೆಯುವ ದಿನಗಳಿವು. ಬಟ್ಟೆ ಒಣಗದೇ ಬೆ0ಕಿ ಒಲೆಯ ಮು0ದೆ ಕೂತು ಬಟ್ಟೆ ಒಣಗಿಸಿಕೊಳ್ಳುತ್ತಿದ್ದ
ನೆನಪು.
ಈಗ ಒಲೆ ಇಲ್ಲ.
ಬಟ್ಟೆ ಒಣಗಿಸಿಕೊಳ್ಳುವ ಮಜಾನೂ ಇಲ್ಲ.ಮಳೆ ಹುಳ ಹಿಡಿದು ಬೆ0ಕಿಪೊಟ್ಟಣದಲ್ಲಿ ಹಾಕಿಟ್ಟು ಆಡುವ ಹುಡುಗರಿಲ್ಲ. ನೀರಲ್ಲಿ ಕಾಗದ ದೋಣಿ ತೇಲಿಬಿಟ್ಟು ಸ0ಭ್ರಮಿಸುವ ಮನಸ್ಸಗಳಿಲ್ಲ. ಮಳೆಬಿಲ್ಲನ್ನು ಅನುಭವಿಸುವ ಹಿರಿಯರೂ ಮ0ಕಾಗಿದ್ದಾರೆ ಯಾಕೋ ಗೊತ್ತಿಲ್ಲ. ಮಳೆಯ ಮಜಾ ಇರೋದೇ ಹತ್ ಮೀನ್ ಹೊಡೆಯಯವಾಗ ಅ0ತ ನನ್ ಹಿರಿಯೋರು ಹೇಳ್ತಿದ್ರು. ಇದು ನಿಜಾನೇ ಆಗಿದ್ರೆ ಬ್ಯಾಟರಿ ಹಿಡ್ಕ0ಡು ಹೊರಡುವಾ....................
........................................
ಗೊರಬು
ಇಲ್ಲ. ಕ0ಬಳಿ ಕೊಪ್ಪೆ ಇಲ್ಲ ಗೋಡೆಗೆ ತಡಿಕೆಗಳಿಲ್ಲ. ನೀರಿಗೂ ಬರ ಭಾವನೆಗಳಿಗೂ ಬರ..
ಡಾ.ಮಾರ್ಷಲ್ ಶರಾಂ
No comments:
Post a Comment