Friday, July 25, 2014

ರಂಜಾನ್ ಪ್ರಯುಕ್ತ ಮಸೀದಿಗಳಿಗೆ ಸಚಿವರ ಹಣ್ಣು ಹಂಪಲು ಕೊಡುಗೆ: ಸಚಿವರಾಗಿ ಕಿಮ್ಮನೆಯ ಗಮನಾರ್ಹ ಸಾಧನೆ: ಅಮ್ರಪಾಲಿ ಸುರೇಶ್

ಸಚಿವರ ಪರವಾಗಿ ಅಮ್ರಪಾಲಿ ನೇತೃತ್ವದಲ್ಲಿ ಮಸೀದಿಗಳಿಗೆ ಹಣ್ಣುಹಂಪಲು ವಿತರಣೆ

ಹೊಸನಗರ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಿಮ್ಮನೆ ರತ್ನಾಕರ್ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ತೀರ್ಥಹಳ್ಳಿ ಕಾಂಗ್ರೆಸ್ ಪ್ರಮುಖ ಅಮ್ರಪಾಲಿ ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.
ತಾಲೂಕಿನ ನಗರ ಜುಮ್ಮಾ ಮಸೀದಿಗೆ ತೆರಳಿ ಸಚಿವ ಕಿಮ್ಮನೆಯವರಿಂದ ಪ್ರತಿವರ್ಷ ನೀಡಲಾಗುವ ಹಣ್ಣು ಹಂಪಲು ವಿತರಿಸಿ ರಂಜಾನ ಶುಭಾಶಯ ಕೋರಿ ಮಾತನಾಡಿದರು.
ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಕಿಮ್ಮನೆ ಸದ್ದಿಲ್ಲದೆ ಸಾಧನೆ ಮಾಡುತ್ತಿದ್ದಾರೆ. ಶ್ರೀಸಾಮಾನ್ಯನಿಗೂ ಹತ್ತಿರದಿಂದ ಸಿಗುವ ಅವರ ನೋವುಗಳಿಗೆ ಸ್ಪಂದಿಸುವ ಕಿಮ್ಮನೆ, ಶಿಕ್ಷಣ ಕ್ಷೇತ್ರದಲ್ಲಿ ಸಮವಸ್ತ್ರ ವಿತರಣೆ , ಪಠ್ಯಪುಸ್ತಕ ವಿತರಣೆ ಸೇರಿದಂತೆ ಇಲಾಖೆಗೆ ಸಮಗ್ರ ಕಾಯಕಲ್ಪವನ್ನು ಒಂದೇ ವರ್ಷದಲ್ಲಿ ನೀಡಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ ಎಂದರು.
ಅನಾವಶ್ಯಕ ಟೀಕೆ:
ಯಾವುದೆ ಹಮ್ಮು ಬಿಮ್ಮು ತೋರದೆ ಉತ್ತಮ ಕೆಲಸ ಮಾಡುತ್ತಿರುವ ಕಿಮ್ಮನೆ ವಿರುದ್ಧ ಅನಾವಶ್ಯಕ ಟೀಕೆ ಮಾಡುವುದು ಸಲ್ಲ. ಇನ್ನಷ್ಟು ಉತ್ತಮ ಕೆಲಸ ಮಾಡಲು ಸಹಕರಿಸುವುದು ಅಗತ್ಯವಿದೆ ಎಂದರು.
ಇದಕ್ಕು ಮುನ್ನ ಕೋಡೂರು, ಹೊಸನಗರ, ಜಯನಗರ, ಮಾಸ್ತಿಕಟ್ಟೆ ಸೇರಿದಂತೆ ತಾಲೂಕಿನ ವಿವಿಧ ಮಸೀದಿಗಳಿಗೆ ಬೇಟಿ ನೀಡಿ, ಹಣ್ಣುಹಂಪಲು ನೀಡಿ ಶುಭಾಶಯ ಕೋರಿದರು.
ಪ್ರಮೂಖರಾದ ಅಬ್ದುಲ್ ಸಮದ್ ಬಾಳೇಬೈಲು, ಅಬ್ದುಲ್ ರೆಹಮಾನ್ ನೋಣಬೂರು, ಮಜ್ಸೂದ್ ತೀರ್ಥಹಳ್ಳಿ, ನೂಲಿಗ್ಗೇರಿ ಅಬ್ಬಾಸ್, ಸಾಬಜನ್ ಸಾಬ್, ನಯಾಜ್ ಉಪಸ್ಥಿತರಿದ್ದರು.

 

No comments:

Post a Comment