Sunday, July 13, 2014

ಬಿದನೂರು ಸಾಂಸ್ಕೃತಿಕ ವೇದಿಕೆ ಟ್ರಸ್ಟ್ ವತಿಯಿಂದ ಸಚಿವ ಕಿಮ್ಮನೆ ರತ್ನಾಕರ್ ಬೇಟಿ, ಅಂಬ್ಯುಲೆನ್ಸ್ ಗೆ ಚಾಲನೆ ಮತ್ತು ಟ್ರೊಮೊ ಸೆಂಟರ್ ಶಂಕುಸ್ಥಾಪನೆಗೆ ದಿನಾಂಕ ನಿಗದಿ

ಆಗಸ್ಟ್ 24 ಭಾನುವಾರ ನಗರದಲ್ಲಿ ಬಹುತೇಕ ಕಾರ್ಯಕ್ರಮ ಸಾಧ್ಯತೆ
ಬಿದನೂರು: ಬಿದನೂರು ಸಾಂಸ್ಕ್ರತಿಕ ವೇದಿಕೆ ಟ್ರಸ್ಟ್ ಅಧ್ಯಕ್ಷ ಸಿ ಅಜಯ್  ನೇತೃತ್ವದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ರನ್ನು ಬೇಟಿ ಮಾಡಿ, ನಗರದಲ್ಲಿ ಯಕ್ಷಗಾನ ಕಲಾವಿದ ದಿ.ನಗರ ಜಗನ್ನಾಥಶೆಟ್ಟಿ ಸ್ಮರಣಾರ್ಥ ಅಂಬ್ಯುಲೆನ್ಸ್ ಗೆ ಚಾಲನೆ ಮತ್ತು ನಗರದ ಮಾಣಿಕ್ಯ ದಿ.ಸಿ ರಾಮಚಂದ್ರರಾವ್ (ರಾಮಯ್ಯ) ಸ್ಮರಣಾರ್ಥ ನಗರ ಆಸ್ಪತ್ರೆ ಆವರಣದಲ್ಲಿ ನೂತನ ಟ್ರೊಮೊ ಸೆಂಟರ್ ಗೆ ಶಂಕುಸ್ಥಾಪನೆ ಕಾರ್ಯಕ್ರಮದ ದಿನಾಂಕ ನಿಗದಿ ಬಗ್ಗೆ ಚರ್ಚೆ ನಡೆಸಲಾಯಿತು.
ಸಚಿವ ಕಿಮ್ಮನೆಯೊಂದಿಗೆ ಟ್ರಸ್ಟ್ ವತಿಯಿಂದ ಸಮಾಲೋಚನೆ
ಆಗಸ್ಟ್ 24:
ಮುಂಬರುವ ಆಗಸ್ಟ್ 24 ಭಾನುವಾರದಂದು ಕಾರ್ಯಕ್ರಮ ನಡೆಸಲು ದಿನಾಂಕ ನಿಗದಿ ಪಡಿಸಲಾಗಿದ್ದು ಬಹುತೇಕ ಆ ದಿನಾಂಕದಂದೆ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಅಂಬ್ಯುಲೆನ್ಸ್ ನ್ನು ಟ್ರಸ್ ವತಿಯಿಂದ ಖರೀದಿ ಮಾಡಲಾಗಿದೆ. ನೋಂದಣಿ ಮಾತ್ರ ಬಾಕಿ ಇದ್ದು ದಿನಾಂಕ ನಿಗದಿ ಆದರೆ ಕೂಡಲೇ ನೋಂದಣಿ ಮಾಡಿಸಲು ಅನುಕೂಲವಾಗುತ್ತದೆ. ಮತ್ತು ರಾಮಯ್ಯ ಸ್ಮರಣಾರ್ಥ ಸ್ವತ: ಕಿಮ್ಮನೆ ಕೊಡುಗೆ ಯಾಗಿರುವ ಟ್ರೊಮೊ ಸೆಂಟರ್ ಗೆ ಹಣ ಟ್ರಸ್ಟ್ ಖಾತೆಯಲ್ಲಿದ್ದು ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಅನುಕೂಲವಾಗುತ್ತದೆ ಎಂದು ಟ್ರಸ್ಠಿ ಕೃಷ್ಣ ಕಾಮತ್ ಸಚಿವರಿಗೆ ಮನವರಿಕೆ ಮಾಡಿದರು.
ಇದಕ್ಕೆ ಸಮ್ಮತಿಸಿದ ಸಚಿವರು ಕೂಡಲೇ ಕಾರ್ಯಕ್ರಮ ಆಯೋಜನೆ ಸಂಬಂಧ ಕ್ರಮ ಕೈಗೊಳ್ಳಲು ತಮ್ಮ ಕಾರ್ಯದರ್ಶಿ ಈಶ್ವರಪ್ಪಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ  ಕೋಶಾಧಿಕಾರಿ ಅಬ್ಬಾಸ್ ನೂಲಿಗ್ಗೇರಿ,  ರಾಮಕುಮಾರ್ ಭಂಡಾರಕರ್, ಉಮೇಶ್ ಹೊಳ್ಳ ಕಾರ್ಯದರ್ಶಿ ರವಿ ಉಪಸ್ಥಿತರಿದ್ದರು.

Tuesday, July 8, 2014

ನಮ್ ನಗರ facebook ಬಳಗದ "ಮಿತ್ರಕೂಟ"ಕ್ಕೆ ನಮ್ಮೂರು ಕಡೆಯಿಂದ ವಿಶಿಷ್ಠ ಬಹುಮಾನ

ನಮ್ಮೂರು ರಾಜಶೇಖರ್
ನಮ್ಮೂರ ಅಭಿಮಾನದ ಪ್ರತೀಕ ನಮ್ಮೂರು ರಾಜಶೇಖರ್
ಬಿದನೂರು: ನಗರದಲ್ಲಿ ಆಗಸ್ಟ್ 16 ರಂದು ನಮ್ ನಗರ facebook ಬಳಗ ಆಯೋಜಿಸಿರುವ ಮಿತ್ರಕೂಟ ಕಾರ್ಯಕ್ರಮಕ್ಕೆ ಹೊಸತನದ ರಂಗು ಮೂಡಲಾರಂಭಿಸಿದೆ.

ಅಂದು ನೆಡಯುವ ಕಾರ್ಯಕ್ರಮಕ್ಕೆ ಪೂರಕವಾಗಿ ನಮ್ಮೂರು ಫೌಂಡೇಶನ್ ಸಂಸ್ಥಾಪಕ ನಮ್ಮೂರು ರಾಜಶೇಖರ್ ವಿಶೇಷ ಸ್ಪರ್ಧೆಗಳನ್ನು ಸಂಘಟಿಸಿ ವಿಶಿಷ್ಠ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಪ್ರತಿವರ್ಷ ಯುವ ಕ್ರಿಯಾಶೀಲ ಮನಸ್ಸುಗಳಿಗೆ ಪೂರಕವಾಗಿ ಮತ್ತು ಪ್ರೇರಣಾತ್ಮಕವಾಗಿ ಹೊಸತನದ ಸ್ಪರ್ಧೆ ಎನ್ನುವುದಕ್ಕಿಂತ ಅವರಲ್ಲಿನ ಪ್ರತಿಭೆಗೆ ವೇದಿಕೆ ಸಿದ್ದಪಡಿಸಿ ಮಾತ್ರವಲ್ಲ ಸುಪ್ತವಾಗಿರುವ ಪ್ರತಿಭೆಯನ್ನು ಹೊರತಂದು ಬಹುಮಾನದ ಮೂಲಕ ಗೌರವಿಸುತ್ತ ಬರುತ್ತಿರುವ ನಮ್ಮೂರು ರಾಜಶೇಖರ್ ಆಗಸ್ಟ್ 16 ರಂದು ನಡೆಯಲಿರುವ ಮಿತ್ರಕೂಟಕ್ಕು ತಮ್ಮದೆ ರೀತಿಯಲ್ಲಿ ಖದರ್ ತುಂಬಲು ಮನಸ್ಸು ಮಾಡಿದ್ದಾರೆ.
ಅವರ face book timeline ನಲ್ಲಿ ತಮ್ಮದೆ ರೀತಿಯಲ್ಲಿ ಆಹ್ವಾನ ನೀಡಿದ್ದಾರೆ.. ಅದು ಇಂತಿದೆ.

ನಮ್ಮೂರಿನವರಿಗಾಗಿ...
ಮಾಜಿ ಶಾಸಕ ಬೇಳೂರು ಜೊತೆ ಕುಶಲೋಪರಿಯಲ್ಲಿರುವ ನಮ್ಮೂರು
ನಮ್ ನಗರ' ದಲ್ಲಿ ಪೋಸ್ಟಿಂಗ್ /ಕಾಮೆಂಟ್ ಮಾಡುತ್ತಿರುವ ಆಸಕ್ತಿಯಿಂದ ತೊಡಗಿರುವ ಕ್ರಿಯಾತ್ಮಕ ಸದಸ್ಯರಿಗೆ ಅಭಿನಂದನೆಗಳು .
.
ನಿಮ್ಮ ಸೃಜನಾತ್ಮಕತೆ ಗೆ ಪ್ರೇರಣೆ ನೀಡಲು ' ನಮ್ಮೂರು ಪ್ರತಿಷ್ಠಾನ ' , ೧೬- ಆಗಸ್ಟ್ ರಂದು ನಡೆಯುವ 'ಮಿತ್ರಕೂಟ' ದ ಸಂದರ್ಭದಲ್ಲಿ ವಿವಿಧ ಬಹುಮಾನಗಳನ್ನು ಪ್ರಾಯೋಜಿಸಿದೆ .
.
ಫೋಟೋಗ್ರಫಿ , ಕವನ , ವಿಶೇಷ ಮಾಹಿತಿ , ಸುದ್ದಿ - ಸಮಾಚಾರ , ಕಥನ , ಪನ್ , ಸ್ಟೇಟಸ್ , ಇತ್ಯಾದಿ ವಿಭಾಗಗಳಲ್ಲಿ ಸ್ವಂತ ಮತ್ತು ' ಶೇರ್' ಬರಹಗಳಿಗೆ ಕೂಡ ಸೂಕ್ತ ಬಹುಮಾನಗಳಿವೆ . ಇಂದಿನಿಂದ ೧೫ ಆಗಸ್ಟ್ ರವರೆಗೆ ನೀವು ಮಾಡುವ ಎಲ್ಲಾ ಪೋಸ್ಟ್ ಈ ಸ್ಪರ್ಧೆಗೆ ಭಾಗಿಯಾಗುತ್ತವೆ . ದಯವಿಟ್ಟು ನಮ್ಮ ಊರಿನ ಸುತ್ತಮುತ್ತಲಿನ ವಿಷಯಗಳಿಗೆ ಮತ್ತು ಫೋಟೋಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ .
.
ನಿಮ್ಮದಲ್ಲದ ಬರಹಗಳಿಗೆ ದಯವಿಟ್ಟು ಮೂಲ ಲೇಖಕರ ಹೆಸರು ಅಥವಾ ಗೊತ್ತಿಲ್ಲದಿದ್ದರೆ ' ಸಂಗ್ರಹ ' ಎಂದು ನಮೂದಿಸಿ . ಕೃತಿಚೌರ್ಯ ದಯವಿಟ್ಟು ಬೇಡ . ಇನ್ನೇಕೆ ತಡ ಶುರು ಮಾಡಿ . ನಿಮ್ಮ ಪ್ರತಿಭೆ ಬೇಗ ಹೊರಬರಲಿ .
' ನಮ್ ನಗರ ' ನಿಮ್ಮ ಕಲಾತ್ಮಕತೆಗೆ ಕನ್ನಡಿಯಾಗಲಿ . ಆಲ್ ದಿ ಬೆಸ್ಟ್ !!
............................. ನಮ್ಮೂರು ರಾಜಶೇಖರ್ , ಹೈದರಾಬಾದ್ , ತೆಲಂಗಾಣ

ಆಗಸ್ಟ್ 16 ರಂದು ನಡೆಯುವ ನಮ್ ನಗರ face book ಮಿತ್ರರು ಹಮ್ಮಿಕೊಂಡಿರುವ ಮಿತ್ರಕೂಟ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಬಳಗದ ಸದಸ್ಯ ಪ್ರಕಾಶ ಶೇಟ್ ಮನವಿ ಮಾಡಿದ್ದಾರೆ. 

Tuesday, July 1, 2014

ಹೀಗೊಂದು ವಿಶೇಷ ಕಾರ್ಯಕ್ರಮ... facebook ಗೆಳೆಯರ ಬೇಟಿ

ನಮ್ ನಗರ ಟೀಂ ನಿಂದ ಆಗಸ್ಟ್ 16 ರಂದು ಆಯೋಜನೆ
ಬಿದನೂರು: ನಮ್ ನಗರ face book ಗೆಳೆಯರಿಗಾಗಿ ಆಗಸ್ಟ್ 16 ರಂದು ಮಿತ್ರಕೂಟದ ಆಯೋಜನೆ. ಒಂದಷ್ಟು ವಿಶೇಷತೆ ಕೂಡ ಇದರ ಹೈಲೈಟ್ಸ್.
ನಮ್ ನಗರ face book ಮಿತ್ರರು ಸೇರಿ ಮಾಡುವ ಕಾರ್ಯಕ್ರಮದಲ್ಲಿ ಪರಸ್ಪರ ಪರಿಚಯ, ವಿಚಾರ ವಿನಿಮಯ, ಒಂದಿಷ್ಟು ಜೋಕು.. ಹಾಡು.. ಕವನ ವಾಚನ..ಹರಟೆ..ಸನ್ಮಾನ..ಗೌರವ..ಗುರುತಿಸುವಿಕೆ..ಹೀಗೆ ವಿಶಿಷ್ಠವಾಗಿಸುವ ಇರಾದೆ ನಮ್ ನಗರ ಮಿತ್ರರದ್ದು.
ಇದಕ್ಕೆ ನಮ್ ನಗರದ ಎಲ್ಲಾ ಮಿತ್ರರು ಮಿತ್ರಕೂಟ ಹೇಗಿದ್ದರೆ ಚೆನ್ನ.. ಎಂಬ ಬಗ್ಗೆ ಅನಿಸಿಕೆ ಅಭಿಪ್ರಾಯವನ್ನು http://facebook.com/ನಮ್ ನಗರ ದೊಂದಿಗೆ ಹಂಚಿಕೊಳ್ಳ ಬಹುದು.
ಏನೇ ಮಾಡಿದರು ವಿಶೇಷವಾಗಿರಬೇಕು.. ಅದರಲ್ಲು ಡಿಫರೆಂಟ್ ಆಗಿರಬೇಕು.. ಈ ಹಿನ್ನಲೆಯಲ್ಲಿ ನಮ್ ನಗರ facebook ಮಿತ್ರರು ನಿಜವಾಗಿಯೂ ಹೊಸತನ್ನು ಚಿಂತಿಸಿದ್ದಾರೆ.. ಮಾತ್ರವಲ್ಲ ಕಾರ್ಯರೂಪಕ್ಕು ಮುಂದಾಗಿದ್ದಾರೆ.. ವಿಶೇಷವಾಗಿರಲಿ ಎಂಬ ಆಶಯದೊಂದಿಗೆ ಅವರಿಗೆ ನಮ್ಮ ಕಡೆಯಿಂದ ALL THE BEST

ಸಂಕಟದಲ್ಲಿ ಸಂಪೇಕಟ್ಟೆ ಆಸ್ಪತ್ರೆ..... ವೈದ್ಯರಿದ್ದಾರೆ ಆದರೆ ಆಸ್ಪತ್ರೆಯಲ್ಲಲ್ಲ....!!!



ಇದು ನಕ್ಸಲ್ ಪೀಡಿತ ಪ್ರದೇಶದ ಆಸ್ಪತ್ರೆಯ ದುಸ್ಥಿತಿ


ಹೊಸನಗರ:ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ ವೈದ್ಯಾಧಿಕಾರಿಗಳು ಮಾತ್ರ ಸಿಗುತ್ತಿಲ್ಲ. ಇರಬೇಕಾದ 7 ಹುದ್ದೆಗಳಲ್ಲಿ ಒಬ್ಬರು ಮಾತ್ರ ಕಾಯ೯ನಿವ೯ಹಿಸುತ್ತಿದ್ದಾರೆ. ನಕ್ಸಲ್ ಪೀಡಿತಪ್ರದೇಶದಲ್ಲಿ ಬರುವ ಈ ಆಸ್ಪತ್ರೆಯಲ್ಲಿ ಕಳೆದ ಬರೋಬ್ಬರಿ ಎರಡುವರೆ ವಷ೯ದಿಂದ ಇದೇ ಅವ್ಯವಸ್ಥೆ ಮನೆ ಮಾಡಿದ್ದರೂ ಕೂಡ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.
ಇದು ತಾಲೂಕಿನ ಸಂಪೇಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ. ಈವರೆಗೆ ಅಧಿಕಾರಿಗಳಿಗೆ ಕೊಟ್ಟ ಮನವಿಗೆ ಲೆಕ್ಕವಿಲ್ಲ ಅಲ್ಲದೆ ಐದಾರು ಬಾರಿ ಗ್ರಾಮಸ್ತರು ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ ಪರಿಹಾರ ಮಾತ್ರ ಮರೀಚಿಕೆ.
ವೈದ್ಯರು ಎಲ್ಲಿ?
ಸಂಪೇಕಟ್ಟೆ ಆಸ್ಪತ್ರೆಗೆ ಸಕಾ೯ರದ ಲೆಕ್ಕದಲ್ಲಿ ವೈದ್ಯರು ಕಾಯ೯ನಿವ೯ಹಿಸುತ್ತಿದ್ದಾರೆ. ಹಾಗಂತ ವೈದ್ಯರ ನೇಮಕವಾಗಿರುವುದು ನಿಜ. ಆದರೆ ಆಸ್ಪತ್ರೆಗೆ ಬೇಟಿ ಕೊಡುವ ಯಾರಿಗೂ ವೈದ್ಯರು ಕಾಣಸಿಗುತ್ತಿಲ್ಲ. ಸದರಿ ವೈದ್ಯರು 2 ವಷ೯ದಿಂದೀಚೆ ಸಂಪೇಕಟ್ಟೆ ಕಾಯ೯ನಿವ೯ಹಿಸುತ್ತಿದ್ದಾರೆ. ಇವರು ಶಿವಮೊಗ್ಗದಿಂದ ಓಡಾಡಬೇಕು. ಅದರಲ್ಲೂ ಪ್ರಸ್ತುತ ಜೂನ್ ತಿಂಗಳಲ್ಲಿ ಇಲ್ಲಿಯವರೆ 9 ದಿನ ಕೆಲಸಕ್ಕೆ ಹಾಜರಾಗಿದ್ದಾರಂತೆ. ಎರಡು ವಷ೯ದಲ್ಲಿ ಹೆಚ್ಚೆಂದರೆ 50ರಿಂದ 60 ದಿನ ಆಸ್ಪತ್ರೆಗೆ ಬೇಟಿ ನೀಡಿರಬಹುದು ಎನ್ನುತ್ತಾರೆ ಸ್ಥಳೀಯರು.
ಆಸ್ಪತ್ರೆ ಕಟ್ಟಡದ ಮೇಲೆ ಬೆಳೆದ ಗಿಡ
5 ಸಾವಿರ ಜನಸಂಖ್ಯೆ:
ಸಂಪೇಕಟ್ಟೆ ಆಸ್ಪತ್ರೆ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರಕ್ಕು ಹೆಚ್ಚು ಜನಸಂಖ್ಯೆ ಇದೆ. ಇವರೆಲ್ಲರಿಗೂ ಇದೇ ಆಸ್ಪತ್ರೆಯೇ ಏಕೈಕ ದಿಕ್ಕು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಸಿಗದೆ, ಔಷಧಿಯೂ ಸಿಗದೆ ದೂರದ ನಗರಕ್ಕೆ ಇಲ್ಲ ನಿಟ್ಟೂರಿಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಇನ್ನು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ಕಿರಿಯ ಪುರುಷ ಆರೋಗ್ಯ ಸಹಾಯಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಗ್ರೂಪ್ ಡಿ ಸೇರಿದಂತೆ ಒಟ್ಟು 7 ಹುದ್ದೆಗಳು ತುಂಬಿರಬೇಕು ಆದರೆ ವೈದ್ಯರು ಬರುತ್ತಿಲ್ಲ. ಬಂದರೂ ರೋಗಿಗಳ ಕೈಗೆ ಸಿಗುತ್ತಿಲ್ಲ. ಬಿಟ್ಟರೆ ಒಬ್ಬರು ಮಾತ್ರ ಕಾಯ೯ನಿವ೯ಹಿಸುತ್ತಿದ್ದಾರೆ ಎಂದರೆ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.
ಸುತ್ತಮುತ್ತಲಿನ ಕುಗ್ರಾಮ, ಮಜರೆ ಹಳ್ಳಿಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರಿಲ್ಲದೆ ಚಿಕಿತ್ಸೆ ಪಡೆಯದಂತಾಗಿದೆ. ಮುಂದಿನ ಊರಿಗೆ ಹೋಗಲು ಹಣಕಾಸಿ ಕೊರತೆ. ವಾಪಾಸು ಹೋಗಲು ಅನಾರೋಗ್ಯದ ಸಂಕಟ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳಿಗೂ ಸಮಸ್ಯೆಯ ಅರಿವಿದೆ ಆದರೂ ಜಾಣಕುರುಡು ಪ್ರದಶಿ೯ಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಳಾಗುತ್ತಿರುವ ಔಷಧಿ:
ವೈದ್ಯರು ಆಗೊಮ್ಮೆ ಈಗೊಮ್ಮೆ ನೆಂಟರ ರೀತಿಯಲ್ಲಿ ಬಂದುಹೋಗುತ್ತಿರುವ ಕಾರಣ. ಆಸ್ಪತ್ರೆಗೆ ಬಂದ ಔಷಧಿಗಳು ಖಾಲಿಯಾಗದೆ ಹಾಳಾಗುತ್ತಿವೆ. ಅಲ್ಲದೆ ಆಸ್ಪತ್ರೆ ನಿವ೯ಹಣೆ ಕೂಡ ಕಾಣದೆ ಗಿಡಗಂಟಿಗಳು ಬೆಳೆದು ನಿಂತಿವೆ. ಕೇವಲ ಊರಿಗೊಂದು ಆಸ್ಪತ್ರೆ ಇದೆ ಎಂಬುದು ಬಿಟ್ಟರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಆರೋಪಿಸುತ್ತಾರೆ ಗ್ರಾಪಂ ಅಧ್ಯಕ್ಷೆ ರಮಾವತಿ.
ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸುತ್ತಿರುವ ಗ್ರಾಪಂ ಸದಸ್ಯರು
ಜನರೇಟರ್ ನಾಪತ್ತೆ:
ನಾನು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆಗೆ ಜನರೇಟರ್ ಮತ್ತು ವಿವಿಧ ಸೌಲಭ್ಯ ಒದಗಿಸಲಾಗಿತ್ತು ಈಗ ಜನರೇಟರ್ ಕಾಣೆಯಾಗಿ ಈ ಬಗ್ಗೆ ಪ್ರಶ್ನಿಸಿದರೆ ಆಸ್ಪತ್ರೆಯಲ್ಲಿ ಸೂಕ್ತ ಉತ್ತರ ಸಿಗುತ್ತಿಲ್ಲ. ಆಸ್ಪತ್ರೆಯಿಂದ ಜನತೆಗೆ ಉಪಯೋಗ ಆಗುತ್ತಿಲ್ಲ. ಆದರೆ ಬಂದ ಅನುದಾನ ಮಾತ್ರ ಖಚಾ೯ಗುತ್ತಿದೆ ಇದು ಅಧಿಕಾರಿಗಳು ಮತ್ತು ಆಸ್ಪತ್ರೆ ಬಗ್ಗೆ ಅನುಮಾನ ಹುಟ್ಟಿಸುವಂತಾಗಿದೆ ಈ ಬಗ್ಗೆ ಅಧಿಕಾರಿಗಳು ಉತ್ತರಿಸಲಿ ಎಂದು ಸ್ವಾಮಿ ಆಗ್ರಹಿಸಿದ್ದಾರೆ.
ಆಸ್ಪತ್ರೆಯನ್ನು ಶಾಶ್ವತವಾಗಿ ಮುಚ್ಚಿ:
ಕೇವಲ ಸಕಾ೯ರದ ಲೆಕ್ಕದಲ್ಲಿ ಇಲ್ಲಿ ಆಸ್ಪತ್ರೆ ಇರುವ ಅವಶ್ಯಕತೆ ಇಲ್ಲ. ವೈದ್ಯರು ಪ್ರತಿದಿನ ಕಾಯ೯ನಿವ೯ಹಿಸಬೇಕು ಮತ್ತು ಆಸ್ಪತ್ರೆ ಸೌಲಭ್ಯ ಸಕಾಲಕ್ಕೆ ಲಭ್ಯವಾಗುವುದಾರೆ ಮಾತ್ರ ಇರಲಿ. ಇಲ್ಲವಾದರೆ ಶಾಶ್ವತವಾಗಿ ಮುಚ್ಚಲಿ. ನಕ್ಸಲ್ ಪೀಡಿತ ಪ್ರದೇಶದ ಅಗತ್ಯಕ್ಕು ಅಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಮಸ್ತರೇ ಸೇರಿ ಆಸ್ಪತ್ರೆಯನ್ನು ಮುಚ್ಚಬೇಕಾಗುತ್ತದೆ. ಅದಕ್ಕು ಮುನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಲಿ ಎಂದು ಗ್ರಾಪಂ ಉಪಾಧ್ಯಕ್ಷ ಮೋಹನಶೆಟ್ಟಿ ಎಚ್ಚರಿಸಿದ್ದಾರೆ.
(ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ)

Wednesday, May 28, 2014

"ಅರಣ್ಯ ಸಂಪತ್ತು ವೖದ್ಧಿಸಿದರೆ ದೇಶ ಸಮೖದ್ಧಿ" - ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಮತ


ಪರಿಸರ ಜಾಗೖತಿ ಬಗ್ಗೆ ಚಕ್ರವಾಕ ಸುಬ್ರಹ್ಮಣ್ಯ ಉಪನ್ಯಾಸ ನೀಡಿದರು.

ಹೊಸನಗರ:ಅರಣ್ಯ ಸಂಪತ್ತು, ವನ್ಯಜೀವಿಗಳು ಹೇರಳವಾದರೆ ಮಾತ್ರ ನಮ್ಮ ದೇಶ ಸಮೖದ್ಧಿಗೊಳ್ಳುತ್ತದೆ ಮಾತ್ರವಲ್ಲ ಉತ್ತಮ ವಾತಾವರಣದ ಬದುಕು ಸಾಧ್ಯ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.
  ತಾಲೂಕಿನ ಕಿಳಂದೂರು ಗ್ರಾಮ ಅರಣ್ಯ ಸಮಿತಿ ಕಾಯ೯ಕ್ರಮದಲ್ಲಿ ಉಪನ್ಯಾಸ ನೀಡಿ, ಇಂದು ವಾತಾವರಣದಲ್ಲಿ ಅಸಮತೋಲನ ಎದ್ದು ಕಾಣುತ್ತಿದೆ ಇದರ ಪರಿಣಾಮ ಅಕಾಲಿಕ ಮಳೆ, ಉಷ್ಣಾಂಶ ತೀವ್ರತೆ ಕಂಡು ಬರುತ್ತಿದೆ. ಕಾಡಿನ ನಿರಂತರ ನಾಶವೆ ಇದಕ್ಕೆಲ್ಲ ಮೂಲ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗೖತಿ ಅಗತ್ಯ: ಪರಿಸರದ ಮೇಲೆ ಆಗುತ್ತಿರುವ ನಿರಂತರ ದೌಜ೯ನ್ಯದಿಂದಾಗಿ ಬದುಕು ದಿಕ್ಕುಪಾಲಾಗುತ್ತಿದೆ ಈ ಬಗ್ಗೆ ಎಚ್ಚರ ಅಗತ್ಯ. ಕಾಡಿನ ನಾಶದಿಂದಾಗಿ ಅಂತಜ೯ಲ ಪಾತಾಳ ಸೇರುತ್ತಿದ್ದು ಕುಡಿಯುವ ನೀರಿನ ಬವಣೆ ವಿಪರೀತವಾಗುತ್ತಿದೆ. ಇವೆಲ್ಲ ನಾವೆ ತಂದುಕೊಂಡ ಆಪತ್ತು ಇನ್ನು ಮೇಲಾದರು ಈ ಬಗ್ಗೆ ಜಾಗೖತಿ ಕಾಯ೯ ಮಾಡದಿದ್ದಲ್ಲಿ ನಮ್ಮನ್ನು ಯಾರು ರಕ್ಷಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಉಪವಲಯ ಅರಣ್ಯಾಧಿಕಾರಿ ಮಧುಕರ್ ರಿಂದ ಮಾಹಿತಿ
ಗ್ರಾಮಸ್ತರ ಸಹಭಾಗಿತ್ವ:
ಉಪವಲಯ ಅರಣ್ಯಾಧಿಕಾರಿ ಮಧುಕರ್, ಅರಣ್ಯ ಸಂರಕ್ಷಣೆಗೆ ಸಂರಕ್ಷಣೆಗೆ ಎಷ್ಟೆ ಕಾನೂನು ತಂದರು ಗ್ರಾಮಸ್ಥರ ಸಹಭಾಗಿತ್ವ ಇಲ್ಲದೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ 2004ರಲ್ಲಿ ಗ್ರಾಮ ಅರಣ್ಯ ಸಮಿತಿ ಚಾಲನೆಗೆ ಬಂದಿದ್ದು ಇದರ ಜವಾಬ್ದಾರಿಯನ್ನು ಗ್ರಾಮಸ್ತರು ಅರಿಯಬೇಕಿದೆ.
ಗ್ರಾ.ಅ.ಸಮಿತಿ ಅಧ್ಯಕ್ಷ ಶಂಕ್ರಪ್ಪಗೌಡರ ಮಾತು
ಅರಣ್ಯ ಸಮಿತಿಯಿಂದ ಬೆಳೆಸಲಾದ ನಡುತೋಪಿನಿಂದ ಬರುವ ಆದಾಯದಲ್ಲಿ ಶೇ.50 ರಷ್ಟು ಅರಣ್ಯ ಸಮಿತಿಗೆ ದೊರಕುತ್ತಿದ್ದು, ಇದರಿಂದ ಅರಣ್ಯ ಅಭಿವೖದ್ಧಿ ಮತ್ತು ಗ್ರಾಮದ ಅಭಿವೖದ್ಧಿ ಕಾಯ೯ ಮಾಡಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ತರು ಸಮಿತಿಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಪಸಕ್ತ ಕಿಳಂದೂರು ಅರಣ್ಯ ಸಮಿತಿಗೆ ರು.1.5 ಲಕ್ಷ ಹಣ ಬಂದಿದ್ದು ಗ್ರಾಮದ ಅಭಿವೖದ್ಧಿಗೆ ಬಳಸಬಹುದಾಗಿದೆ ಎಂದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ವೈ.ಶಂಕರಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕರಿಮನೆ ಗ್ರಾಪಂ ಉಪಾಧ್ಯಕ್ಷ ಎನ್.ವೈ.ಸುರೇಶ್ ಕಾಯ೯ಕ್ರಮ ಉದ್ಘಾಟಿಸಿದರು.
ಗ್ರಾಪಂ ಸದಸ್ಯ ಹೆಚ್.ಜಿ.ದೇವೇಂದ್ರ, ವನಜಾ ಚನ್ನಪ್ಪಗೌಡ, ಎಂ.ಎನ್.ಕಾಂತಪ್ಪ, ವಿ.ಡಿ.ದಿನೇಶ್, ಗ್ರಾಮದ ಪ್ರಮುಖರು, ಸ್ವಸಹಾಯ ಸಂಘದ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Tuesday, May 27, 2014

ರಾಮಯ್ಯ ಸ್ಮರಣಾರ್ಥ ಆರೋಗ್ಯ ಶಿಬಿರ ಮತ್ತು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆ : ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ



ರಾಮಯ್ಯ ಸ್ಮರಣಾಥ೯ ಉಚಿತ ಹೖದಯ ರೋಗ ತಪಾಸಣಾ ಶಿಬಿರ



ನಗರ ಚೇತನಾ ಬಳಗ ಯುವಕರರಿಂದ ಜನೋಪಯೋಗಿ ಕಾರ್ಯಕ್ರಮ
ಹೊಸನಗರ: ಇತ್ತೀಚೆಗೆ ನಿಧನರಾದ ಎಪಿಎಂಸಿ ಸದಸ್ಯ ರಾಮಯ್ಯ ಸ್ನರಣಾಥ೯ ನಗರ ಚೇತನ ಬಳಗದ ವತಿಯಿಂದ ಉಚಿತವಾಗಿ ಹೖದಯ ಸಂಬಂಧಿ ರೋಗದ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು.
ನಗರ ಸಂಯುಕ್ತ ಸಕಾ೯ರಿ ಆಸ್ಪತ್ರೆ ಆವರಣದಲ್ಲಿ ನಡೆದ ಶಿಬಿರದಲ್ಲಿ ಮಂಗಳೂರು ಇಂಡಿಯನ್ ಆಸ್ಪತ್ರೆಯ ಖ್ಯಾತ ವೈದ್ಯರು ಶಿಭಿರಾಥಿ೯ಗಳ ಹೖದಯ ತಪಾಸಣೆ ಕೈಗೊಂಡರು. ಸುಮಾರು 200ಕ್ಕು ಹೆಚ್ಚು ಶಿಬಿರರಾಥಿ೯ಗಳು ಭಾಗವಹಿಸಿದ್ದು ಅದರಲ್ಲಿ ಮುಂದಿನ ಚಿಕಿತ್ಸೆಗಾಗಿ 30 ಶಿಬಿರಾಥಿ೯ಗಳನ್ನು ಗುರುತಿಸಲಾಯಿತು.
ಮೌನಾಚರಣೆ:
ಇದಕ್ಕು ಮುಂಚಿತವಾಗಿ ಅಗಲಿದ ರಾಮಯ್ಯರಿಗೆ 1 ನಿಮಿಷ ಮೌನಾಚರಣೆ ಮಾಡುವುದರ ಮೂಲಕ ಗೌರವಾಪ೯ಣೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಚೇತನ ಬಳಗದ ನಿದೇ೯ಶಕ ವಿಕ್ರಮ್, ಬಡವರು, ಕೂಲಿಕಾಮಿ೯ಕರ ಆರೋಗ್ಯ ಸಮಸ್ಯೆಗೆ ತುತಾ೯ಗಿ ಸ್ಪಂದಿಸುತ್ತಿದ್ದ ರಾಮಯ್ಯ ಸ್ತರಣಾಥ೯ವಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ಜನೋಪಯೋಗಿ ಇಂತಹ ಕಾಯ೯ಕ್ರಮಗಳ ಸದುಪಯೋಗವನ್ನು ಎಲ್ಲರು ಪಡೆಯಲು ಮುಂದಾಗಬೇಕು ಎಂದರು.
ಬಸ್ ವ್ಯವಸ್ಥೆ:
ಮುಂದಿನ ಚಿಕಿತ್ಸೆಗೆ ಗುರುತಿಸಲಾದ 30 ಜನರಿಗೆ ಮಂಗಳೂರು ಇಂಡಿಯನ್ ಆಸ್ಪತ್ರೆಗೆ ಹೋಗಿಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು ಮೇ.30 ಭಾನುವಾರ ಬೆಳಿಗ್ಗೆ 10 ಗಂಟೆ ನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಶಿಬಿರಾಥಿ೯ಗಳು ಈ ಸೌಲಭ್ಯ ಪಡೆದುಕೊಳ್ಳಲು ವಿಕ್ರಮ್ ಮನವಿ ಮಾಡಿದರು.
ಚೇತನಾ ಬಳಗದ ಅನಂತ ಕಂಚುಗಾರ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಇಂಡಿಯನ್ ಆಸ್ಪತ್ರೆಯ ಡಾ.ನಾಗನಾಥ್, ಡಾ.ಸಫ್ರಾಜ್ ನವಾಜ್, ಡಾ.ತೇಜಸ್ವಿ ನಗರ, ಡಾ.ಯಜ್ಞಶ್ರೀ ನಾಗನಾಥ್, ಚೇತನಾ ಬಳಗದ ನಿದೇ೯ಶಕರಾದ ಅಶೋಕದಾಸ್, ಗುರುರಾಜ್ ಶೇಟ್, ವಿಜಯ ಎಸ್. ಪ್ರಸಾದ್ ವಿ ಕಿಣಿ, ಪ್ರದೀಪಗೌಡ ಮತ್ತು ಮಂಗಳೂರು ಇಂಡಿಯನ್ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.