Tuesday, January 28, 2014

ಗ್ರಾಮೀಣ ಭಾಗದಲ್ಲಿ ಆಂಗ್ಲ ವ್ಯಾಮೋಹ :: ಹೊಸನಗರ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಆತಂಕ


  ಮಾತೃಭಾಷೆಯಲ್ಲೆ ಪ್ರಾಥಮಿಕ ಶಿಕ್ಷಣಕ್ಕೆ ಸಮ್ಮೇಳನಾಧ್ಯಕ್ಷೆ ಎಂ ರಚನಾ ಕಾಮತ್ ಒತ್ತಾಯ
ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಶ್ರಾವ್ಯಸಾಗರ್ ಉದ್ಘಾಟಿಸಿದರು.
ಹೊಸನಗರ:ಇಂದು ಗ್ರಾಮೀಣ ಭಾಗಗಳಲ್ಲೂ ಆಂಗ್ಲ ಭಾಷೆ ವ್ಯಾಮೋಹ ಮೀತಿ ಮೀರುತ್ತಿದೆ. ಕಾನ್ವೆಂಟ್ ಶಿಕ್ಷಣಕ್ಕೆ ಮಾರು ಹೋದ ಗ್ರಾಮೀಣರು ದುಬಾರಿ ಶುಲ್ಕ ನೀಡಿ ಮಕ್ಕಳನ್ನು ದೂರದೂರದ ಖಾಸಗಿ ಶಾಲೆಗಳಿಗೆ ದೂಡುತ್ತಿದ್ದಾರೆ. ಆಂಗ್ಲ ಭಾಷೆಯ ಅತೀ ವ್ಯಾಮೋಹ ಒಳ್ಳೆಯದಲ್ಲ. ಅಂಧ ವ್ಯಾಮೋಹ ನಿಲ್ಲಬೇಕು. ಮಾತೃ ಭಾಷೆಯಲ್ಲೇ ಮೊದಲ ಶಿಕ್ಷಣವಾಬೇಕು ಎಂದು ಎಂ.ರಚನಾಕಾಮತ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಸಕರ ಮಾದರಿ ಶಾಲೆ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷತೆ ವಹಿಸಿ  ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೆ ಕೊಡಿಸಬೇಕು. ಪೋಷಕರು ಆಂಗ್ಲ ವ್ಯಾಮೋಹ ಕೈಬಿಡುವಂತೆ ಮನವಿ ಮಾಡಿದರು.
ಶಿಕ್ಷಕರ ಮಕ್ಕಳು: 
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಇಂದು ಆಂಗ್ಲ ವ್ಯಾಮೋಹ ಸರ್ವ ವ್ಯಾಪಿಯಾಗಿದೆ. ಪಟ್ಟಣ ಮತ್ತು ಗ್ರಾಮೀಣ ಎಂಬ ಬೇಧವಿಲ್ಲ ಎಂದರಲ್ಲದೆ. ಸಕಾ೯ರಿ ಶಿಕ್ಷಕರು ಮೊದಲು ತಮ್ಮ ಮಕ್ಕಳನ್ನು ಸಕಾ೯ರಿ ಶಾಲೆಯಲ್ಲಿ ಓದಿಸಬೇಕು. ಕಾನ್ವೆಂಟ್ ಷೋಕಿಗೆ ಬಿದ್ದ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ತಮ್ಮ ಪ್ರತಿಷ್ಟೆ ಮೆರೆಯುತ್ತಿದ್ದಾರೆ. ಸಕಾ೯ರಿ ಸಂಬಳ ಪಡೆಯುವ ಶಿಕ್ಷಕರಿಗೆ ಸಕಾ೯ರಿ ಶಾಲೆಗಳೇಕೆ ಬೇಡ. ಮಕ್ಕಳನ್ನು ಸಕಾ೯ರಿ ಶಾಲೆಗಳಲ್ಲೇ ಓದಿಸಿ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಹೊಸನಗರ ಮಕ್ಕಳಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮಕ್ಕಳು.
ಇದಕ್ಕೆ ಪ್ರತಿಕ್ರಯಿಸಿದ ಶಾಲಾಭಿವೖದ್ಧಿ ಸಮಿತಿ ಅಧ್ಯಕ್ಷ ಸಕಾ೯ರಿ ಶಿಕ್ಷಕರೇ ಖಾಸಗಿ ಶಿಕ್ಷಣ ಸಂಸ್ಥೆಯನ್ನು ತೆರೆದು ಹಲವು ವಷ೯ಗಳಿಂದ ಸಕಾ೯ರಿ ಶಾಲೆಗಳನ್ನು ವಂಚಿಸುತ್ತಿದ್ದರು ಕೂಡ ಇಲಾಖೆ ಗಮನಹರಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. 2003 ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶ್ರಾವ್ಯ ಸಾಗರ ಸಮ್ಮೇಳನ ಉದ್ಘಾಟಿಸಿದರು.  ಕ್ರೀಡಾ ಪಟು ಮಿಥುನಕುಮಾರ್ ರಾಷ್ರ್ಟದ್ವಜಾರೋಹಣ ಮಾಡಿದರೆ, ನಾಡದ್ವಜಾರೋಹಣವನ್ನು ದಿವ್ಯ ನೆರವೇರಿಸಿದರು. ಯಕ್ಷ ಭಾಲ ಕಲಾವಿದ ಅರವಿಂದ್ ಹಾರೇಬೈಲು ಪರಿಷತ್ ದ್ವಜರೋಹಣ ಮಾಡಿದರು.
ನಿಕಟಪೂರ್ವಅಧ್ಯಕ್ಷ ಜಗತ್ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಮುಖ್ಯಶಿಕ್ಷಕ ಹೆಚ್.ಎಲ್.ಗುರುಮೂತಿ೯, ಪ್ರಮುಖರಾದ ಸದಾನಂದಕಾಮತ್, ಗುರುಮೂತಿ೯, ಮಹಾಬಲ್ ಕಸಾಪ ಪ್ರತಿನಿಧಿಗಳು ಪಾಲ್ಗೊಂಡಿದ್ದರು.  ವೈಭವಿ ಡಿ ಸ್ವಾಗತಿಸಿದರು. ಪ್ರಾಸ್ತವಿಕವಾಗಿ ರತ್ನಾಕರ್ಗೌಡ ಮಾತನಾಡಿದರು. ನಚಿಕೇತ, ಮೈತ್ರೇಯಿ ನಿರೂಪಿಸಿದರು.

ಕುಗ್ರಾಮದ ಸರ್ಕಾರಿ ಶಾಲೆಗಳು ಸುವರ್ಣ ಮಹೋತ್ಸವ ಆಚರಣೆ ಸಂತಸ ತಂದಿದೆ

ಕುಂಬಳೆ ಶಾಲಾ ಸುವಣ೯ ಸಂಭ್ರಮದಲ್ಲಿ ಕಾಗೋಡು ತಿಮ್ಮಪ್ಪ
 ಹೊಸನಗರ:ಇಂದು ಶಿಕ್ಷಣ ವ್ಯವಸ್ಥೆ ಬದಲಾವಣೆ ಹಾದಿಯಲ್ಲಿದೆ. ಶಾಲೆ ಸಮಸ್ಯೆಗಳ ಮೂಲ ಕೊರತೆಯನ್ನು ನೀಗಿಸುವಲ್ಲಿ ಸಕಾ೯ರ ಮನ ಮಾಡಿದ್ದು ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕಾಗೋಡುತಿಮ್ಮಪ್ಪ ಹೇಳಿದರು.
ಕುಂಬಳೆ ಶಾಲೆಯ ಸುವರ್ಣ ಸಂಭ್ರಮಕ್ಕೆ ಕಾಗೋಡುತಿಮ್ಮಪ್ಪ ಚಾಲನೆ ನೀಡಿದರು.
ಮಂಜಗಳಲೆ ಸಮೀಪದ ಕುಂಬಳೆ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶನಿವಾರಚಾಲನೆ ನೀಡಿ  ಮಾತನಾಡಿದ ಅವರು ಶಾಲೆಗಳ ಪ್ರಗತಿಯ ದೃಷ್ಟಿಯಲ್ಲಿ ಸಕಾ೯ರ ಯಾವತ್ತು ಎಡವಬಾರದು. ಅದರಲ್ಲೂ ಗ್ರಾಮೀಣ ಭಾಗದ ಶಾಲೆಗಳ ಸರ್ವತೋಮುಖ ಅಭಿವೃದ್ದಿ ಸಕಾ೯ರದ ಪ್ರಮುಖ ಕಾರ್ಯಕ್ರಮವಾಗಬೇಕು. ನಿಟ್ಟಿನಲ್ಲಿ ಸಕಾ೯ರ ಸಾಗಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ಸಂತಸ:
 ಕುಗ್ರಾಮಗಳಲ್ಲೂ ಉತ್ತಮ ಶಾಲೆಗಳಿವೆ. 50,100 ವರ್ಷಗಳನ್ನೂ ಪೂರೈಸಿರುವ ಶಾಲೆಗಳು ಇಂದಿಗೂ ಜನರ ಜೀವನಾಡಿ ಆಗಿವೆ. ಆಂದು ಬೆಳ್ಳಕ್ಕ ಲಕ್ಷ್ಮಿನಾರಾಯಣಪ್ಪರ  ಮನೆಯಲ್ಲಿ ಆರಂಭವಾದ ಶಾಲೆ ಇಂದು ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಅದರಲ್ಲೂ ಇಲ್ಲಿನ ಜನತೆ ತಮ್ಮ ಮನೆಯ ಹಬ್ಬದಂತೆ ಸಂಭ್ರಮದಲ್ಲಿರುವುದು ನಿಜಕ್ಕೂ ಸಂತಸಕರ ಸಂಗತಿಎಂದರು.
ಸಂದರ್ಭದಲ್ಲಿ ಕುಂಬಳೆ ಉಷಾ ಲಕ್ಷ್ಮಿನಾರಾಯಣಪ್ಪ ಅವರನ್ನು ಸನ್ಮಾನಿಸಿಲಾಯಿತು. ಸಮಿತಿಅಧ್ಯಕ್ಷ ಕೆ.ಎಲ್.ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ತಾ.ಪಂ ಮಲ್ಲಿಕಾ ಸುರೇಂದ್ರ, ನಿಟ್ಟೂರು ಗ್ರಾ.ಪಂ ಸವಿತಾಗಿರೀಶ್, ಸುಕನ್ಯಾರಾಧಾಕೃಷ್ಣ, ಚಂದ್ರಶೇಖರ ಶೆಟ್ಟಿ, ಹಾಲ ಸಿದ್ದಪ್ಪ,  ಮಲ್ಲಾಡಿಗಿರೀಶ್ಕ್ಯಾಫ್ಟನ್ ದಿನೇಶ್, ಸಮಿತಿ ಕಾಯ೯ದಶಿ೯ . ರಾಮಚಂದ್ರ ,ದೊಡ್ಮನೆ ಲಕ್ಷ್ಮಿನಾರಾಯಣ ಹಾಜರಿದ್ದರು.

Wednesday, January 22, 2014

ಸುವರ್ಣ ಸಂಭ್ರಮದಲ್ಲಿ ಕುಂಬಳೆ ಶಾಲೆ :: ಜ.25 ಮತ್ತು 26 ರಂದು ಕಾರ್ಯಕ್ರಮ


ಕಾರ್ಯಕ್ರಮ ಉದ್ಘಾಟಿಸಲಿರುವ ಸ್ಪೀಕರ್ ಕಾಗೋಡು, ಸಮಾರೋಪದಲ್ಲಿ ಸಚಿವ ಕಿಮ್ಮನೆ ಬಾಗಿ
ಹೊಸನಗರ: ತಾಲೂಕಿನ ನಿಟ್ಟೂರು ಸಮೀಪದ ಮಂಜಗಳಲೆ ಗ್ರಾಮದಲ್ಲಿ 50 ವಸಂತ ಪೂರೈಸಿರುವ ಕುಂಬಳೆ ಸರ್ಕಾರಿ ಪ್ರಾಥಮಿಕ ಶಾಲೆ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದ್ದು ಗ್ರಾಮಸ್ತರ ಕೂಡುವಿಕೆಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ ಎಂದು ಸುವರ್ಣ ಮಹೋತ್ಸವ ಕಾರ್ಯದರ್ಶಿ ..ರಾಮಚಂದ್ರ ಮತ್ತು ದೊಡ್ಮನೆ ಲಕ್ಷ್ಮೀನಾರಾಯಣ್ ಹೇಳಿದರು.
1962ರಲ್ಲಿ ಪ್ರಾರಂಭಗೊಂಡ ಕುಂಬಳೆ ಶಾಲೆ ಸುತ್ತಮುತ್ತಲಿನ ಗ್ರಾಮಗಳ ಪಾಲಿಗೆ ವಿದ್ಯಾಕೇಂದ್ರವಾಗಿ ಗಮನಸೆಳೆದು ಸಾವಿರಾರು ವಿದ್ಯಾರ್ಥಿಗಳ ಉತ್ತಮ ಬದುಕಿಗೆ ತನ್ನದೆ ಕೊಡುಗೆ ನೀಡಿ ಗಮನ ಸೆಳೆದಿದೆ ಎಂದರು.
ಸರ್ಕಾರಿ ಶಾಲೆಯೊಂದು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿಂದೆ ಇಡೀ ಊರೆ ಶೃಂಗಾರಗೊಂಡು ಹಬ್ಬವನ್ನಾಗಿ ಆಚರಿಸಬೇಕೆಂಬ ಗ್ರಾಮಸ್ಥರ ಆಶಯದಲ್ಲಿ ವ್ಯವಸ್ಥಿತ ಪೂರ್ವಸಿದ್ದತೆಯಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಿ ಅದಕ್ಕಾಗಿಯೇ ಸುವರ್ಣ ಮಹೋತ್ಸವ ಕ್ರಿಯಾ ಸಮಿತಿ ರಚಿಸಿಕೊಂಡು ಸಿದ್ದತೆ ನಡೆಸಲಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿ:
ಕುಂಬಳೆ ಶಾಲೆ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಶಾಲೆಗೆ ಕಾಂಪೌಂಡ್ ನಿರ್ಮಾಣ, ರಂಗ ಮಂದಿರ,  ಸೇರಿದಂತೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ಅಲ್ಲದೆ ಉತ್ಸವಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಗ್ರಾಮಸ್ತರು ಶ್ರಮದಾನದಲ್ಲಿ ಭಾಗವಹಿಸಿದ್ದಾರೆ ಎಂದರು.
ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಂಭ್ರಮ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸಮಾರೋಪದಲ್ಲಿ ಭಾಗವಹಿಸುವರು, ಮತ್ತು ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಎಲ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಸುವರ್ಣಪುಷ್ಪ ಸ್ಮರಣ ಸಂಚಿಕೆ, ಸೀತಾರಾಮ ಶಂಭು ರಚಿಸಿದ ಎರಡು ಮುತ್ತುಗಳು ಪುಸ್ತಕ ಬಿಡುಗಡೆ,  ಶಿಕ್ಷಕರು ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿದಂತೆ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ಮೇಳೈಸಲಿದೆ ಎಂದರು.
ಫೋಟೋ: ಮಾಹಿತಿ : ಸುವರ್ಣ ಸಂಭ್ರಮದ ಹಿನ್ನಲೆಯಲ್ಲಿ ಕುಂಬಳೆ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು.

Sunday, January 19, 2014

ನಾಳೆಯಿಂದ ಬಿದನೂರು-ನಗರ ಮಾರಿಕಾಂಬ ದೇವಿ ಜಾತ್ರೆ


ಪಿಎಸ್ಐ ಸತೀಶ್ ನೇತೃತ್ವದಲ್ಲಿ ಶಾಂತಿಸಭೆ
ಹೊಸನಗರ:.21ರಿಂದ 5 ದಿನಗಳ ಕಾಲ ತಾಲೂಕಿನ ಬಿದನೂರು-ನಗರದ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ನಡೆಯಲಿದ್ದು ಸಕಲ ಸಿದ್ದತೆಗಳು ನಡೆದಿವೆ.
ಹಲವು ವಷ೯ಗಳ ಇತಿಹಾಸವಿರುದ ಇಲ್ಲಿಯ ಮಾರಿಜಾತ್ರೆಗೆ ನಗರ ಹೋಬಳಿಯ ಮೂಲೆಮೂಲೆಯಿಂದ ಭಕ್ತರು ಆಗಮಿಸಿ ಹರಕೆ ಒಪ್ಪಿಸಿ ಆರಾಧನೆಗೈಯುವ ಪದ್ದತಿ ಇದೆ ಮಾತ್ರವಲ್ಲ ಜಾತ್ರಾ ಸಂದಭ೯ದಲ್ಲಿ ದೂರದೂರಿನಲ್ಲಿರುವ ತಮ್ಮ ಬಂಧುಗಳನ್ನು ಬರಮಾಡಿಕೊಂಡು ಸಂಭ್ರಮದ ಆಚರಿಸುವುದು ಇಲ್ಲಿಯ ರೂಢಿಯಾಗಿದೆ.
ಶಾಂತಿಸಭೆ:
ಮಾರಿಜಾತ್ರೆ ಸುಸೂತ್ರವಾಗಿ ನಡೆಯಬೇಕು ಮತ್ತು ಭದ್ರತೆಯ ಹಿನ್ನಲೆಯಲ್ಲಿ ನಗರ ಪೊಲೀಸ್ ಠಾಣೆ ಪಿಎಸ್ಐ ಹೆಚ್.ಎಸ್.ಸತೀಶ ನೇತೃತ್ವದಲ್ಲಿ ಗುಜರಿಪೇಟೆ ಸಭಾಂಗಣದಲ್ಲಿ ಶಾಂತಿಸಭೆ ನಡೆಸಲಾಯಿತು. ಸಂದಭ೯ದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಉಡುಪ ಜಾತ್ರೆಯ ಹಿನ್ನಲೆ ಮತ್ತು ಬಾರಿಯ ಸಿದ್ದತೆ ಬಗ್ಗೆ ಮಾಹಿತಿ ನೀಡಿ ಸವ೯ ಸಹಕಾರ ನೀಡುವಂತೆ ಸಭೆಯಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಪಿಎಸ್ಐ ಸತೀಶ್, ಜಾತ್ರೆಯ 5 ದಿನಗಳಲ್ಲಿ ಸಾವಿರಾರು ಜನರು ಭಾಗವಹಿಸುವ ಹಿನ್ನಲೆಯಲ್ಲಿ ಇಲಾಖೆಯಿಂದ ಸಕಲ ಭದ್ರತೆ ನೀಡಲಾಗುವುದು ಮತ್ತು ಯಾವುದೆ ಅಹಿತಕರ ಘಟನೆ ನಡೆಯದಂತೆ ಜಾತ್ರಾ ಸಮಿತಿ ಕೂಡ ಗಮನ ಹರಿಸಬೇಕು. ತುತು೯ ಸಂದಭ೯ದಲ್ಲಿ ಇಲಾಖೆಗೆ ಕೂಡಲೆ ಮಾಹಿತಿ ನೀಡಿ ಎಂದರು.
ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್, ಪ್ರಮುಖರಾದ ದೇವಗಂಗೆ ಚಂದ್ರಶೇಖರಶೆಟ್ಟಿ, ಎಸ್.ಪಕೀರಪ್ಪ, ಚಿಕ್ಕಪೇಟೆ ವಿಠಲರಾವ್, ಹಾಜಿಸಾಬ್, ಕರುಣಾಕರಶೆಟ್ಟಿ, ದಾವೂದ್ ಸಾಬ್, ಕುಮಾರ್, ಆತ್ಮಾನಂದರಾವ್ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.
ಫೋಟೋ ಮಾಹಿತಿ : ನಗರ ಗುಜರಿಪೇಟೆ ವೆಂಕಟರಮಣ ದೇಗುಲದ ಸಭಾಂಗಣದಲ್ಲಿ ಮಾರಿಜಾತ್ರೆ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಪಿಎಸ್ಐ ಸತೀಶ್ ಅಗತ್ಯ ಮಾಹಿತಿ ನೀಡಿದರು.