Friday, May 8, 2015

ಸುಮಾರು ರೂ.20 ಲಕ್ಷ ವೆಚ್ಚದ ಕುಡಿಯುವ ನೀರು ಯೋಜನೆ ನೀರುಪಾಲು : ನೀರಿಲ್ಲದೆ ಪೊಲೀಸರ ಪರದಾಟ


 ಹೊಸನಗರ:ಕುಡಿಯುವ ನೀರಿಗೆ ಹಾಹಾಕಾರ ಎದ್ದ ಹಿನ್ನಲೆಯಲ್ಲಿ ತುತರ್ು ಕಾಮಗಾರಿ ರೂಪದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಅಡಿ ರು.22 ಲಕ್ಷ ವೆಚ್ಚದಲ್ಲಿ ಕಾಮಗಾರಿ ಎತ್ತುಕೊಂಡಿದ್ದೇನೋ ಸರಿ. ಆದರೆ 4 ವರ್ಷ ಕಳೆದರೂ ನೀರು ಇಲ್ಲ. ಹಾಕಿದ ದುಡ್ಡು ಪೋಲಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಚಿಕ್ಕಪೇಟೆ ಪೊಲೀಸ್ ಸ್ಟೇಶನ್ ಗುಡ್ಡದ ಮೇಲೆ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ದುಸ್ಥಿತಿ. ಚಿಕ್ಕಪೇಟೆ, ಕಾವಡಗೆರೆ, ಗಣಪತಿ ದೇವಸ್ಥಾನದ ರಸ್ತೆ, ಸಕರ್ಾರಿ ಹೈಸ್ಕೂಲು ರಸ್ತೆ, ಶನೇಶ್ವರ ದೇವಸ್ಥಾನದ ವರೆಗಿನ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸುವ ಸಂಬಂಧ ಕೈಗೊಂಡ ಕಾಮಗಾರಿ ಇದು.
ಮಾಚರ್್, ಏಪ್ರಿಲ್, ಮೇ ಬಂತೆಂದರೆ ನೀರಿಗಾಗಿ ಪರದಾಡುತ್ತಿದ್ದ ಇಲ್ಲಿಯ ನಿವಾಸಿಗಳು ಶಾಶ್ವತ ಯೋಜನೆಗಾಗಿ ಹಲವು ವರ್ಷಗಳಿಂದ ಆಗ್ರಹಿಸುತ್ತಲೆ ಬಂದಿದ್ದರು. ಅವರ ಬೇಡಿಕೆಗೆ ಅಂತು ಯೋಜನೆ ಏನೋ ದಕ್ಕಿತು. ಆದರೆ ನೀರು ಮಾತ್ರ ಬರಲಿಲ್ಲ.
ಯೋಜನೆ ದುಸ್ಥಿತಿ:
ಯೋಜನೆ ಸಂಬಂಧಪಟ್ಟಂತೆ ಪೊಲೀಸ್ ಸ್ಟೇಶನ್ ಪಕ್ಕದಲ್ಲೆ ಶಿಖರಪ್ರಾಯ ಎನ್ನುವಂತೆ ಟ್ಯಾಂಕ್ ನಿಮರ್ಿಸಲಾಗಿದೆ. ಕೆಳಗೆ ಹರಿಯುವ ಹೊಳೆಯ ಆಚೆ ಪಕ್ಕದಲ್ಲಿ ಬೋರ್ ಹೊಡೆಸಲಾಗಿದೆ. ಉದ್ದೇಶಿತ ಭಾಗಗಳಿಗೆ ಪೈಪ್ಲೈನ್ ಕೂಡ ಮಾಡಲಾಗಿದೆ. ಆದರೆ ಪೂತರ್ಿ ಕಳಪೆ, ಬೋರು ತೆಗೆದರು ನೀರು ಬರುವ ಲಕ್ಷಣ ಕಾಣಲಿಲ್ಲ. ತೆಗೆದ ಬೋರಿನ ಪೈಪ್ನ್ನೆ ಕದ್ದು ಸಾಗಿಸಿ, ಬೋರ್ ಹೊಂಡಕ್ಕೆ ಕಲ್ಲುಹಾಕಿ ಮುಚ್ಚಲಾಗಿದ್ದು ಇನ್ನು ಉಪಯೋಗ ಬಾರದ ಸ್ಥಿತಿ ನಿಮರ್ಾಣವಾಗಿದೆ. ಒಟ್ಟಾರೆ ಅವೈಜ್ಞಾನಿಕ ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಮಿಷನ್, ಗುತ್ತಿಗೆದಾರನಿಗೆ ಹಣ ಮಾಡಿಕೊಳ್ಳಲಷ್ಟೆ ಯೋಜನೆ ಸೀಮಿತವಾಗಿದೆ ಎಂದು ಸ್ಥಳೀಯ ನಿವಾಸಿಗಳು ಶಾಪ ಹಾಕುತ್ತಿದ್ದಾರೆ.
ನೀರಿಗಾಗಿ ಹಾಹಾಕಾರ: ಪೊಲೀಸರ ಪರದಾಟ:
ಯೋಜನೆಯ ಉದ್ದೇಶಿತ ಭಾಗಗಳಲ್ಲಿ ನೀರಿಗಾಗಿ ಹಾಹಾಕಾರ ಕಂಡು ಬಂದಿದ್ದು ಪರದಾಡು ಸ್ಥಿತಿ ಹೆಚ್ಚಾಗಿದೆ. ಇನ್ನು ಪಕ್ಕದಲ್ಲೆ ಇರುವ ನಕ್ಸಲ್ ಪೀಡಿತ ಪ್ರದೇಶದ ನಗರ ಪೊಲೀಸ್ ಠಾಣೆಗು ಕೂಡ ನೀರು ಇಲ್ಲ. ಗುಡ್ಡದ ಕೆಳಭಾಗದಿಂದ ಅಳಿದುಳಿದ ನೀರನ್ನು ಹೊತ್ತೊಯ್ಯಬೇಕಾದ ಸ್ಥಿತಿ ತಂದೊಡ್ಡಿದೆ. ಇನ್ನು ಠಾಣೆಯಲ್ಲಿರುವ ಮಹಿಳೆಯರು ತಮ್ಮೆಲ್ಲ ಅಗತ್ಯಗಳಿಗೆ ಬಾಟಲಿಯಲ್ಲಿ ನೀರು ಇಟ್ಟುಕೊಳ್ಳಬೇಕಾದ ಸಂದಿಗ್ಥ ಸ್ಥಿತಿಗೆ ಸಿಲುಕಿದ್ದಾರೆ.
ಇಷ್ಟಾದರೂ ತಲೆಕೆಡಿಸಿಕೊಳ್ಳದ ಜಿಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕತೆ ಹೇಳುತ್ತಿದ್ದಾರೆ ಹೊರತು ಜನರಿಗೆ ನೀರು ಒದಗಿಸುವ ಸಂಬಂಧ 4 ವರ್ಷವಾದರು ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ.
ತನಿಖೆಗೆ ಒಳಪಡಿಸಿ:
ಯೋಜನೆ ಸಂಬಂಧಪಟ್ಟಂತೆ ಬೇಕಾಬಿಟ್ಟಿ ಕಾಮಗಾರಿ ಮಾಡದಿರುವುದು. ಮತ್ತು ಬೋರ್ ಪೈಪ್ ಕದ್ದು ಸಾಗಿಸಲಾಗಿದೆ ಎಂಬ ಸುದ್ದಿ ಹರಿಬಿಟ್ಟಿದ್ದಾರೆ ಈ ಸಂಬಂಧ ಯಾವುದೆ ದೂರು ದಾಖಲಾಗಿಲ್ಲ. ಯೋಜನೆ ಪೂತರ್ಿ ಕಳಪೆಯಾಗಿದ್ದರೂ ಶೇ.80 ರಷ್ಷು ಬಿಲ್ ಪಾವತಿ ಮಾಡಿರುವುದು ಇವೆಲ್ಲ ಅನುಮಾನಕ್ಕೆ ಕಾರಣವಾಗಿದ್ದು ತನಿಖೆಗೆ ಒಳಪಡಿಸುವಂತೆ ಸ್ಥಳೀಯ ಜನಸೇವಕ ಸಂಘಟನೆ ಆಗ್ರಹಿಸಿದೆ.
ಮಳೆಬಂತೆಂದರೆ ಕಾಲುಬುಡದವರಗೆ ಹಿನ್ನೀರು ಹೊದ್ದು ಮಲಗುವ ಇಲ್ಲಿಯ ನಿವಾಸಿಗಳ ಬೇಸಿಗೆ ನೀರಿನ ಹಾಹಾಕಾರಕ್ಕೆ ಮುಕ್ತಿಯೇ ಇಲ್ಲ ಎಂಬಂತಾಗಿದೆ. ಯೋಜನೆ ಏನೋ ಬಂತು ಈಗ ಅದೆ ದೊಡ್ಡ ಸಮಸ್ಯೆಯಾಗಿ ಕುಳಿತಿರುವುದು ಗಾಯದ ಮೇಲೆ ತುಪ್ಪ ಸುರಿದಂತಾಗಿದೆ. ಇನ್ನಾದರು ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರೋ ಕಾದುನೋಡಬೇಕು.

No comments:

Post a Comment