Saturday, December 17, 2011

ಪ್ರಶಸ್ತಿ...

ನವದೆಹಲಿಯಲ್ಲಿ ನಡೆದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 27ನೇ ರಾಷ್ಟ್ರೀಯ ಸಮ್ಮೇಳನದಲ್ಲಿ "ಮಹಾತ್ಮ ಜ್ಯೋತಿಬಾ ಪುಲೆ ನ್ಯಾಷನಲ್ ಫೆಲೋಶಿಪ್ ಅವಾರ್ಡ್ "ನ್ನು ಸ್ವೀಕರಿಸಿದ ಕ್ಷಣ..
ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಸುಮನಾಕ್ಷರ್ ಪ್ರಶಸ್ತಿ ನೀಡಿ ಗೌರವಿಸಿದರು.
....ರವಿ ಬಿದನೂರು,

Friday, May 20, 2011

ಮನೆಗೆ ಬಂದ ಅಪರೂಪದ ಅತಿಥಿ "ಹಾರುವ ಓತಿ"....... ಇಂದಿನ "ಕನ್ನಡಪ್ರಭ"ದಲ್ಲಿ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚಾ ಸಮೀಪ ಬಿಲ್ಲೇಶ್ವರದ ಉಮರಸಾಬ್ ಮನೆಯ ಸಮೀಪ ಅಪರೂಪದ ಜೀವಿ "ಹಾರುವ ಓತಿ" ಕಂಡುಬಂದಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
ಮರದ ಕೊಂಬೆಯಲ್ಲಿದ್ದ ಇದನ್ನು ಕಂಡ ಉಮರಸಾಬ್ ಮಕ್ಕಳಾದ ಆಶ್ಪಕ್ ಮತ್ತು ಅಲ್ತಾಫ್ "ಹಾರುವ ಓತಿ" ಎಂದು ಗಮನಕ್ಕೆ ಬರುತ್ತಲೇ ಪುಳಕಗೊಂಡು ಹೇಗಾದರೂ ಮಾಡಿ ಹಿಡಿಯಲೇ ಬೇಕೆಂದು ಹಠತೊಟ್ಟರು. ಮರದಿಂದ ಮರಕ್ಕೆ ಹಾರುವ ಓತಿಯನ್ನು ಹಿಡಿಯುವುದು ಅಷ್ಟು ಸುಲಭವೇ..?  ಆದರು ಗಂಟೆಯ ಹೊತ್ತು ಅದರ ಹಿಂದೆ ಬಿದ್ದು ಅಂತೂ..ಇಂತೂ ಸೆರೆಹಿಡಿಯುವ ಹೊತ್ತಿಗೆ ಹೈರಾಣಾಗಿ ಹೋಗಿದ್ದರು.
ತೇಜಸ್ವಿಯವರ ಕಾರ್ವಾಲೋ ಕಾದಂಬರಿಯಲ್ಲಿ ಈ ಜೀವಿಯ ಬಗ್ಗೆ ತಿಳಿದಿದ್ದ ಹುಡುಗರು ಆ ಓತಿಯನ್ನು ಮನೆಗೆ ತಂದು ತಮ್ಮದೇ ರೀತಿಯಲ್ಲಿ ಅಧ್ಯಯನ ನಡೆಸಿದ್ದು ಆಯಿತು. ಸರಿ ರಾತ್ರಿಯಾಯಿತು ವಿಶ್ವದ ಅಪರೂಪದ ಪ್ರಾಣಿ ಕೈತಪ್ಪ ಬಾರದು ಎಂದು ಬಾಲ ಕಟ್ಟಿದರು. ಆದರೆ ಬೆಳಗಾಗಿ ನೋಡುವಷ್ಟರಲ್ಲಿ ಹಾರುವ ಓತಿ ತಪ್ಪಿಸಿಕೊಂಡು ಮತ್ತೆಲ್ಲೋ ಹಾರಿತ್ತು...

Sunday, April 17, 2011

3 ತಿಂಗಳಿಂದ ರಸ್ತೆ ಪಕ್ಕದಲ್ಲೇ "ಕಾಳಿಂಗ"ನ ಸರಸ .......ಇಂದಿನ "ಕನ್ನಡಪ್ರಭ"ದಲ್ಲಿ ಈ ಕುರಿತು ಲೇಖನ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಬ್ರಾಹ್ಮಣತರುವೆ ಗ್ರಾಮ ಚಕ್ರೆ ಬಳಿಯಲ್ಲಿ ಈ ಘಟನೆ ನಡೆಯುತ್ತಿದ್ದು ಭಯಭೀತಗೊಂಡ ಗ್ರಾಮಸ್ಥರು ತಮ್ಮ ಎಂದಿನ ಓಡಾಟದ ದಾರಿಯನ್ನೆ ಬದಲಿಸಿದ್ದಾರೆ.

Monday, April 11, 2011

ಅನಾಥ ಮಗುವಾದೆ.. ಅಪ್ಪಾನೂ.. ಅಮ್ಮಾನೂ.. ಇಲ್ಲ....... ಸಿಡಿಲು ದುರಂತದಲ್ಲಿ ತಂದೆತಾಯಿ ಕಳೆದು ಕೊಂಡ ನಿಧಿಯ ಆಕ್ರಂದನ



ಆಗಲಷ್ಟೇ 3 ತರಗತಿಯಲ್ಲಿ ತೇಗ೯ಡೆ ಹೊಂದಿದ ಸಂತಸದಲ್ಲಿ ತೇಲುತ್ತಿದ್ದ ಬಾಲಕ ನಿಧಿಗೆ ಭಾನುವಾರ ಎಂಬುದು ಕರಾಳ ದಿನವಾಗಿ ಕಂಡಿದ್ದು ಮಾತ್ರವಲ್ಲ ಕಣ್ಣು ತೆರೆಯುವಷ್ಟರಲ್ಲೇ ತಬ್ಬಲಿಯಾಗಿದ್ದ.
ಸಂಜೆ ಆಯ್ತು ದನಕ್ಕೆ ಮುಸುರೆ ಕೊಡುತ್ತೇನೆ ಎಂದು ಕೊಟ್ಟಿಗೆಯತ್ತ ಹೆಜ್ಜೆ ಹಾಕಿದ್ದ ಅಮ್ಮನೊಂದಿಗೆ ನಿಧಿ ಕೂಡ ಹೊರಟಿದ್ದ. ಆದರೆ ಅಲ್ಲಿದ್ದ ಅಪ್ಪ ನೀನು ಇಲ್ಲೇ ಇರು. ಸ್ವಲ್ಪ ಮುಂಚೆಯಷ್ಟೇ ಕೊಟ್ಟಿಗೆಗೆ ಹಾವು ಬಂದಿತ್ತು ಎಂದು ಗದರಿಸಿ ಅಮ್ಮನೊಂದಿಗೆ ಅಪ್ಪ ಕೂಡ ಕೊಟ್ಟಿಗೆ ಹೋಗಿದ್ದ. ಅಷ್ಟರಲ್ಲೇ ಹೊಂಚು ಹಾಕಿದ್ದ ರೀತಿಯಲ್ಲಿ ಅಪ್ಪಳಿಸಿದ ಸಿಡಿಲಿಗೆ ನೋಡ ನೋಡುತ್ತಲೇ ಅಪ್ಪ ಅಮ್ಮ ಇಬ್ಬರೂ ಶವವಾಗಿದ್ದರು.
ಇದು ತಾಲೂಕಿನ ಖೈರಗುಂದ ಗ್ರಾಪಂ ವ್ಯಾಪ್ತಿಯ, ನಿಡಗೋಡು ಗ್ರಾಮದ ಅಮ್ಮನುಗುಡ್ಡೆಯ ಕೖಷ್ಣಮೂತಿ೯ ಮತ್ತು ಪತ್ನಿ ಸುಜಾತ ಸಿಡಿಲಿಗೆ ಬಲಿಯಾದ ದುರಂತ ಘಟನೆ. ಅಪ್ಪ ಅಮ್ಮನೊಂದಿಗೆ ಸಾವಿನ ಮನೆ ಸೇರಬೇಕಿದ್ದ ಬಾಲಕ ನಿಧಿ ಅದೖಷ್ಟವಶಾತ್ ಪಾರಾಗಿದ್ದಾನೆ. ಆದರೆ ತಾಯಿ ತಂದೆಯನ್ನು ಕಳೆದುಕೊಂಡು ಅನಾಥವಾಗಿರುವ ಬಾಲಕನ ರೋಧನೆ ಮುಗಿಲು ಮುಟ್ಟಿದೆ ಮಾತ್ರವಲ್ಲ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಹಾವು ಬಂದಿತ್ತು:
ನಿಡಗೋಡಿನ ಸಾವುಕಂಡ ಮನೆಯಲ್ಲಿ ಸಿಡಿಲು ದುರಂತ ಸಂಭವಿಸಿದ ಗಂಟೆ ಮೊದಲು ನಾಗರಹಾವೊಂದು ಕೊಟ್ಟಿಗೆಯಲ್ಲಿ ಪ್ರತ್ಯಕ್ಷಗೊಂಡು ಕೋಳಿಯೊಂದನ್ನು ಹಿಡಿದು ಕ್ಷಣಮಾತ್ರದಲ್ಲಿ ಕಣ್ಮರೆಯಾಗಿತ್ತು.  ಇದೇ ಕಾರಣಕ್ಕಾಗಿ ಜಾನುವಾರುಗಳಿಗೆ ಆಸರೆ ನೀಡಲು ಹೊರಟ ಸುಜಾತನೊಂದಿಗೆ ಕೊಟ್ಟಿಗೆ ದಾರಿ ಹಿಡಿದ ಕೖಷ್ಣಮೂತಿ೯ ಕೂಡ ಸಾವಿನಮನೆ ದಾರಿ ಹಿಡಿದಿದ್ದಾನೆ.
ವಿದ್ಯುತ್ ಬಲ್ಫ್ವೊಂದು  ಸಿಡಿಲಿಗೆ ಕಳಚಿ ಬಿದ್ದಿದೆಯಷ್ಟೆ. ಇವರಿಬ್ಬರನ್ನು ಸಾಯಿಸಲು ಮಾತ್ರ ಸಿಡಿಲು ಹೊಂಚುಹಾಕಿ ಹೊಡೆದಂತೆ ಕಾಣುತ್ತಿತ್ತು.
ಕೖಷ್ಣಮೂತಿ೯ ಮತ್ತು ಸುಜಾತ ದಂಪತಿಗೆ ನಿಧಿಯೊಬ್ಬನೆ ಮಗ. ಹೇಳುವಷ್ಟು ಶ್ರೀಮಂತರಲ್ಲದಿದ್ದರೂ ಮಗನ ಬೆಳವಣಿಗೆ ಬಗ್ಗೆ ತುಂಬ ಗಮನ ಕೇಂದ್ರಿಕರಿಸಿದ್ದರು. ಇರುವುದು ಕುಗ್ರಾಮದಲ್ಲಾದರೂ ಮಾಸ್ತಿಕಟ್ಟೆ ಇಂಗ್ಲೀಷ ಕಾನ್ವೆಂಟ್್ನಲ್ಲಿ ನಿಧಿ ವ್ಯಾಸಾಂಗ ಮಾಡುತ್ತಿದ್ದ. ಅಪ್ಪ ಅಮ್ಮನ ಮುದ್ದಿನ ಮಗನಾಗಿ ಬೆಳೆಯುತ್ತಿದ್ದ ನಿಧಿಗೆ ದುರಂತ ಬರಸಿಡಿಲಿನಂತೆ ಅಪ್ಪಳಿಸಿದೆ.
ಓದಿನ ಹೊಣೆ ಹೊತ್ತ ಸಂಸದ:
ಸಿಡಿಲಿನ ದುರಂತದಿಂದ ಅನಾಥನಾದ ಬಾಲಕ ನಿಧಿಯ ಮುಂದಿನ ಶಿಕ್ಷಣದ ಸಂಪೂಣ೯ ವೆಚ್ಚವನ್ನು ಹೋರುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ. ಶಾಸಕ ಕಿಮ್ಮನೆ ರತ್ನಾಕರ್, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಎಪಿಎಂಸಿಯ ನಿವಣೆ ಸೀತಾರಾಂಭಟ್, ವಾಟಗೋಡು ಸುರೇಶ್, ಜಿಪಂ ಅಧ್ಯಕ್ಷೆ ಶುಭಾ, ತಾಪಂ ಅಧ್ಯಕ್ಷೆ ಸುಮಾಸುಬ್ರಹ್ಮಣ್ಯ ಸೇರಿದಂತೆ ಜನಪ್ರತಿನಿಧಿಗಳೇ ದಂಡೇ ಇಲ್ಲಿಗೆ ಧಾವಿಸಿದ್ದು ಮುಗ್ಧ ಬಾಲಕನ ನೆರವಿಗೆ ಭರವಸೆಯ ಮಾತಾಡಿದ್ದಾರೆ. ಆದರೆ ಅಪ್ಪ ಅಮ್ಮನ ಪ್ರೀತಿಯಿಂದ ವಂಚಿತನಾದ ಮಗು ಒಂದೇ ಸಮನೆ ರೋಧಿಸುತ್ತಿದ್ದು ಎಂತವರ ಕರುಳು ಚುಚ್ಚುವಂತಿದೆ.
ಸ್ಮಶಾನಮೌನ:
ದಂಪತಿಗಳಿಬ್ಬರನ್ನು ಬಲಿ ತೆಗೆದುಕೊಂಡ ಸಿಡಿಲು ದುರಂತದಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ದುರಂತ ಸಂಭವಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಇಲ್ಲಿ ಸಿಡಿಲು ಹೆಚ್ಚು:
ಯಡೂರು, ಸುಳುಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿವಷ೯ ಒಂದಲ್ಲ ಒಂದು ಸಿಡಿಲಿನ ದುರಂತ ಇದ್ದೆ ಇರುತ್ತದೆ. ಇಲ್ಲೇ ಸಮೀಪ ಮನೆಯೊಂದಕ್ಕೆ ಸತತ ಮೂರು ಬಾರಿ ಸಿಡಿಲು ಹೊಡೆದದ್ದು ಇದೆ. ಅದರಲ್ಲಿ ಮಹಿಳೆಯೋವ೯ಳು ದೇಹದ ಸ್ವಾದೀನ ಕಳೆದುಕೊಂಡಿದ್ದಳು. ಕಳೆದ ವಷ೯ ಕೊಡಚಾದ್ರಿಯಲ್ಲಿ ಸಿಡಿಲಿಗೆ ಉಡುಪಿಯ ವ್ಯಕ್ತಿಯೋವ೯ ಮಡತಪಟ್ಟಿದ್ದ. ಇನ್ನು ಜಾನುವಾರು ಸಾವು, ಸಿಡಿಲಿಗೆ ಮನೆ, ಬೆಳೆ ಅನಾಹುತಗಳು ಆಗಾಗ ಘಟಿಸುತ್ತಲೇ ಇರುತ್ತದೆ. ಸಿಡಿಲು ಬಂತೆಂದರೆ ಭಾಗದ ಜನ ಭಯಗೊಳ್ಳುವಂತ ವಾತಾವರಣ ನಿಮಾ೯ಣವಾಗಿದೆ.
( ಇಂದು " ಕನ್ನಡಪ್ರಭ (12.4.11)ದಲ್ಲಿ ಈ ಲೇಖನ ಪ್ರಕಟಗೊಂಡಿದೆ)

Saturday, April 9, 2011

ಅರಳಿದೆ... ಅರಳಿದೆ...


ಹೂವೂ... ಚಲುವೆಲ್ಲಾ.. ನಂದೆಂತಿತು...










ನಮ್ಮಮನೆ ಅಂಗಳದಿ ಅರಳಿದ ಹೂಗಳು

Friday, April 8, 2011

ಸರ್ಜಾ ರವರ "ಬೆಚ್ಚಿ ಬೀಳಿಸಿದ ಬೆಂಗಳೂರು"

ಅಂಕಣಕಾರ, ಲೇಖಕ ಶಿವಮೊಗ್ಗದ ದೇಸಿ ಸಂಸ್ಕೃತಿಯ ಸರ್ಜಾಶಂಕರ್ ಹರಳೀಮಠ ಅವರ "ಬೆಚ್ಚಿ ಬೀಳಿಸಿದ ಬೆಂಗಳೂರು" ಕೃತಿಯ ಬಿಡುಗಡೆ ಸಮಾರಂಭ ಇದೇ ಏಪ್ರಿಲ್ ೧೬ ರ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ. ದಯವಿಟ್ಟು ಎಲ್ಲರೂ ಬನ್ನಿ.. ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಬನ್ನಿ..
ಅಂದಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ, ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್, ಲೇಖಕ ಡಾ.ರಂಗನಾಥ್ ಇರುತ್ತಾರೆ.
ಹೆಚ್ಚಿನ ಮಾಹಿತಿಗೆ ೯೮೪೫೯೫೨೫೬೩, ೯೪೪೮೭೮೦೧೪೪, ೯೭೩೧೫೯೨೮೭೩ ಕ್ಕೆ ಫೋನಾಯಿಸಿ...

Wednesday, April 6, 2011

ಗಿಣಿಕಲ್ ನ ಈ ಬೆಟ್ಟದ ಹೆಸರೇ "ಚಿನ್ನದ ಗುಡ್ಡ" * http://bidanooru.blogspot.com

ದಟ್ಟ ಕಾಡಿನಿಂದ ಕೂಡಿದ ಬೆಟ್ಟದ ಹೆಸರೇ ಚಿನ್ನದ ಗುಡ್ಡ. ಅನಾದಿಕಾಲದಿಂದರೂ ಬೆಟ್ಟಕ್ಕೆ ಹೆಸರೇ ಇದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸುಳುಗೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಿಣಿಕಲ್ ಗ್ರಾಮದಲ್ಲಿ ಬೆಟ್ಟವಿದ್ದು ಇದರ ಗಭ೯ದಲ್ಲಿ ಚಿನ್ನದ ನಿಕ್ಷೇಪವಿದೆ ಎಂಬ ಮಾತು ಕಳೆದ 2 ದಶಕಗಳ ಹಿಂದಿನಿಂದ ಗ್ರಾಮಸ್ಥರು ಆಡುತ್ತಿದ್ದಾರೆ.

ವೈಮಾನಿಕ ಪರಿಶೀಲನೆ: ಬೆಟ್ಟದಲ್ಲಿ ಚಿನ್ನವಿರುವುದರಿಂದಲೇ ಇದಕ್ಕೆ ಚಿನ್ನದಗುಡ್ಡ ಎಂಬ ಹೆಸರು ಬಂದಿರಬಹುದು ಎಂತಲ್ಲ. ಇದು ಕಾಕತಾಳೀಯವಷ್ಟೆ ತಲತಲಾಂತರದಿಂದಲೂ ಇದೇ ಹೆಸರಿನಿಂದ ಬೆಟ್ಟವನ್ನು ಗುರುತಿಸಲಾಗಿದೆ. ಆದರೆ 10-15 ವಷ೯ಗಳ ಹಿಂದೆ ಗುಡ್ಡದ ಸುತ್ತ ವೈಮಾನಿಕ ಸಮೀಕ್ಷೆ ನಡೆಸಿದ ಮೇಲೆ ಸುದ್ದಿಚಾಲ್ತಿಯಲ್ಲಿದೆ. ಅದರ ಬಳಿಕ ಅಧಿಕಾರಿಗಳ ತಂಡವೊಂದು ಬೇಟಿ ನೀಡಿ ಗುಡ್ಡದ ಮೇಲ್ಭಾಗದಲ್ಲಿ ಮಾಕ್೯ ಮಾಡಿ ಪ್ರದೇಶದ ಬಗ್ಗೆ ಮಾಹಿತಿ ಪಡೆದುಕೊಂಡ ಮೇಲೆ ಇಲ್ಲಿ ಚಿನ್ನದ ನಿಕ್ಷೇಪವಿದೆ ಎಂಬ ಅಂಶ ಗಮನಕ್ಕೆ ಬಂತು ಎನ್ನುತ್ತಾರೆ ತಪ್ಪಲಿನ ನಿವಾಸಿಗಳು.

ಚಿನ್ನದ ಅಂಶವಿದೆ: ಚಿನ್ನದ ನಿಕ್ಷೇಪವಿರುವ ಗುಡ್ಡದ ಕಾಲು ಸಮೀಪದಲ್ಲೇ ಮಾಣಿ(ವರಾಹಿ) ವಿದ್ಯುದಾಗಾರ, ವಾರಾಹಿ ಭೂಗಭ೯ ವಿದ್ಯುದಾಗಾರದ ಸುರಂಗ ಮಾಗ೯ ಮತ್ತು ಕವಲೇದುಗ೯ ಕೋಟೆವರೆಗೂ ವ್ಯಾಪಿಸಿದೆ. ಅಂದು ಸುರಂಗಮಾಗ೯ ನಿಮಾ೯ಣ ಮಾಡುವ ಸಂದಭ೯ದಲ್ಲೇ ಪ್ರದೇಶದ ವ್ಯಾಪ್ತಿಯಲ್ಲಿ ಚಿನ್ನದ ಅಂಶವಿರುವ ಮಾತು ಕೇಳಿಬಂದಿತ್ತು. ಅಲ್ಲದೇ ಇಲ್ಲಿಯ ಅದಿರು ಅಂಶವನ್ನು ಡಾಟಾಗೋಲ್ಡ್ ಮಿಷನ್್ನ ಪ್ರಯೋಗಕ್ಕೊಳಪಡಿಸಿದಾಗ ಚಿನ್ನದ ಅಂಶವಿರುವುದನ್ನು ಖಾತ್ರಿ ಪಡಿಸಿದ್ದರು ಎಂದು ಸ್ಥಳೀಯ ರಾಜಾರಾಂ ಹೇಳುತ್ತಾರೆ.

ವಿಶಿಷ್ಟ ಕಲ್ಲುಗಳು: ಚಿನ್ನದಗುಡ್ಡದ ಸುತ್ತಲೂ ಬೖಹದಾಕಾರರ ಮರಗಳು ಸೇರಿದಂತೆ ಸಮೖದ್ಧ ಸಸ್ಯಕಾಶಿಯಿಂದ ಕೂಡಿದ್ದು ತುದಿಮಾತ್ರ ಬೋಳಾಗಿದೆ. ಜಾಗದಲ್ಲಿ ಚಿಕ್ಕೆದುಗಿ೯ ಎಂಬ ಸಣ್ಣಗಿಡಗಳು ಮಾಚ್ರ ಹರಡಿಕೊಂಡಿವೆ. ಅಲ್ಲದೇ ಮೇಲ್ಭಾಗದಲ್ಲಿ ಆಯುತಾಕಾರದ ಸಣ್ಣಸಣ್ಣ ಕಲ್ಲುಗಳು ಕಂಡುಬರುತ್ತದೆ. ಮಾತ್ರವಲ್ಲ ಅಲ್ಲಲ್ಲಿ ಕಲ್ಲುಗಳಿಟ್ಟು ಪ್ರದೇಶವನ್ನು ಗುರುತು ಮಾಡಲಾಗಿದೆ.

ಪ್ರದೇಶಕ್ಕೆ ಬೇಟಿಇಟ್ಟು ಪರಿಶೀಲನೆ ಮಾಡಿದ ಅಧಿಕಾರಿಗಳ ತಂಡ, ಚಿನ್ನದಗುಡ್ಡ ಪ್ರದೇಶದಲ್ಲಿ ಮಣ್ಣನ್ನು ಅಗೆಯುವುದಾಗಲಿ ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದ್ದರು ಎನ್ನುತ್ತಾರೆ ತಪ್ಪಲಿನ ನಿವಾಸಿ ಬಾಳೇಹಕ್ಲು ಪುರೋಶೋತ್ತಮ. ಇತ್ತೀಚೆಗಷ್ಟೇ ಸಾಗರದ ಸುತ್ತಮುತ್ತ ನಿಕ್ಷೇಪವಿದೆ ಎಂದು ಪತ್ತೆಹಚ್ಚಲಾಗಿತ್ತು. ಈಗ ಚಿನ್ನದಗುಡ್ಡದ ಸರದಿ. ಗುಡ್ಡದ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮಾಣಿ ಜಲಾಶಯ ವಿದ್ದು ಪ್ರದೇಶ ಸಂತ್ರಸ್ತರ ಬೀಡಾಗಿದೆ ಅಲ್ಲದೇ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೇಪಟ್ಟಿಯೂ ಗ್ರಾಮಕ್ಕಿದೆ. ಹಿಂದೆ ಇಲ್ಲಿ ಚಿನ್ನವಿದೆ ಎಂದಾಗ ಸಂತಸವಾಗಿತ್ತು. ಕೇಂದ್ರದ ತಂಡವೇ ಬಂದು ಪರಿಶೀಲನೆ ಮಾಡಿರುವುದು ಖಚಿತ ಎಂದು ಭಾವಿಸಿರುವ ಸ್ಥಳೀಯರಿಗೆ ಇಂದಲ್ಲನಾಳೆ ಗಣಿಗಾರಿಕೆ ನಡೆಯಬಹುದು ಎಂಬ ಭೀತಿ 15 ವಷ೯ಗಳಿಂದಲೂ ಕಾಡುತ್ತಿದೆ.

(ಈಗಾಗಲೇ ಕನ್ನಡಪ್ರಭದಲ್ಲಿ ಈ ಲೇಖನ ಪ್ರಕಟಗೊಂಡಿದೆ)


ಸೂರ್ಯಾಸ್ತ...........



ಸಂಜೆ ಕೆಂಪು-ಕಂಪಿನ ಚಿತ್ತಾರ
ಬಿದನೂರು ಕ್ಲಿಕ್....

ಶ್ರೀಗಳ ರಾಮಕಥಾ ಮಾಲಿಕೆಯೇ ರಾಮೋತ್ಸವದ ಹೈಲೈಟ್ಸ್ !

ಶ್ರೀಮಠದಲ್ಲಿ ಶ್ರೀರಾಮೋತ್ಸವ

ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಏಪ್ರಿಲ್ 8 ರಿಂದ 13ರವರೆಗೆ ಸಂಪನ್ನಗೊಳ್ಳಲಿರುವ ರಾಮೋತ್ಸವ ಕಾಯ೯ಕ್ರಮಕ್ಕೆ ಭರದ ಸಿದ್ದತೆ ಆರಂಭಗೊಂಡಿದೆ. ಪ್ರತಿವಷ೯ದಂತೆ ವಿವಿಧ ಧಾಮಿ೯ಕ, ಸಾಂಸ್ಕೖತಿಕ ಕಾಯ೯ಕ್ರಮ, ಪ್ರತಿಷ್ಠಿತ ಪ್ರಶಸ್ತಿಗಳ ವಿತರಣೆ ಜೊತೆಗೆ ಸಲದ ಉತ್ಸವಕ್ಕೆ ಹಲವು ವೈಶಿಷ್ಠತೆಯ ಮೆರಗು ನೀಡಲು ಶ್ರೀಮಠ ಉದ್ದೇಶಿಸಿದೆ.

ಶ್ರೀರಾಮಚಂದ್ರಾಪುರ ಮಠಕ್ಕೆ ದಿನಂಪ್ರತಿ ನೂರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಕಾ೯ರ ಪರಿಸರದಲ್ಲಿ ಯಾತ್ರಿನಿವಾಸ ನಿಮಿ೯ಸಲು ಉದ್ದೇಶಿಸಿದೆ. ಸುಮಾರು ರು.4.5 ಕೋಟಿ ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ಯಾತ್ರಿನಿವಾಸಕ್ಕೆ ಶಂಕುಸ್ಥಾಪನೆ ನೆರವೇರಲಿದೆ.

ರಾಮಕಥಾ ಮಾಲಿಕೆ:

ಇದು ಬಾರಿಯ ವಿಶೇಷ ಕಾಯ೯ಕ್ರಮ ಅಂತಲೇ ಬಣ್ಣಿಸಲಾಗುತ್ತಿದೆ. ಕಾರಣ ಪ್ರತಿದಿನ ಮದ್ಯಾಹ್ನ 2.30 ರಿಂದ 5.30ರವರೆಗೆ ರಾಮಕಥಾ ಮಾಲಿಕೆ ಹರಿದು ಬರಲಿದೆ. ವಾಲ್ಮೀಕಿಗಳ ತಪಸ್ಸಿನ ದಿವ್ಯ ಕೊಡುಗೆಯಾಗಿರುವ ವಾಲ್ಮೀಕಿ ರಾಮಾಯಣದ ಪಠಣ ಖುದ್ದು ರಾಘವೇಶ್ವರ ಸ್ವಾಮೀಜಿಗಳಿಂದಲೇ ನೆರವೇರಲಿದೆ. ವೇದವೇ ರಾಮಾಯಣವಾಗಿ, ವೇದಪುರುಷನೇ ಶ್ರೀರಾಮನಾಗಿ ಮನುಜನಿಗೆ ಬದುಕಿನ ಶಿಕ್ಷಣಕೊಟ್ಟ ಕಥೆಯೊಂದಿಗೆ ಸಂಗೀತ, ನೖತ್ಯ ರೂಪಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಮಾತ್ರವಲ್ಲದೇ ಶ್ರೀಗಳಿಂದ ವಚನಾಮೖತಧಾರೆ ಹರಿಯುತ್ತಿದ್ದಂತೆ ಅದಕ್ಕೆ ತಕ್ಕಂತೆ ಸನ್ನೀವೇಶವನ್ನು ವೇದಿಕೆಯಲ್ಲಿ ಮೂಡಿಸುವ ಇಂಗಿತ ಶ್ರೀಮಠದ್ದು.

ಭಕ್ತರು ಭಕ್ತಿಭಾವದ ಪರಕಾಷ್ಠೆ ತಲುಪಿ ಗತಿಸಿದ ರಾಮಾಯಣದ ಚಿತ್ರಣವನ್ನು ಮತ್ತೆ ಕಾಣುವಂತಾಗಬೇಕು. ಹಲವಾರು ಕವಿಗಳು ರಾಮಾಯಣವನ್ನು ತಮ್ಮದೇ ರೀತಿಯಲ್ಲಿ ಚಿತ್ರಿಸಿದ್ದಾರೆ. ಅದಕ್ಕೆಲ್ಲಾ ಮೇರುಕೖತಿ ವಾಲ್ಕೀಕಿ ರಾಮಾಯಣ. ಜನರ ಸ್ವಚ್ಚಂದ ಮತ್ತು ನೆಮ್ಮದಿಯ ಬದುಕಿಗೆ ಚೈತನ್ಯ ನೀಡುವ ಶಕ್ತಿ ಇದರಲ್ಲಿದೆ. ಮಾತ್ರವಲ್ಲ ಮಯಾ೯ದ ಪುರುಶೋತ್ತಮ ಶ್ರೀರಾಮನ ನಡೆನುಡಿ, ಶಿಸ್ತು, ಸಂಯಮದ ಮೇಲೆ ಬೆಳಕು ಚೆಲ್ಲುವ ರಾಮಾಯಣ ದೖಶ್ಯಕಾವ್ಯದೊಂದಿಗೆ ಮಿಳಿತಗೊಂಡು ಶ್ರೀಗಳ ಪ್ರವಚನದೊಂದಿಗೆ ಭಕ್ತರ ಭಾವಪರವಶಕ್ಕೆ ಕಾರಣವಾಗಬೇಕು ಎಂಬ ಹಿನ್ನಲೆಯಲ್ಲಿ ಕಾಯ೯ಕ್ರಮಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಉತ್ಸವದಲ್ಲಿ ಪ್ರತಿವಷ೯ ಶ್ರೀಮಠದಿಂದ ಕೊಡಮಾಡುವ ಪ್ರತಿಷ್ಠಿತ ಶ್ರೀಮಾತಾ. ಪುರುಶೋತ್ತಮ, ಧನ್ಯಸೇವಕ ಪ್ರಶಸ್ತಿ ಶ್ರೀಗಳಿಂದ ಅನುಗ್ರಹವಾಗಲಿದೆ. ರಾಘವೇಶ್ವರ ಸ್ವಾಮೀಜಿಗಳು ದೀಕ್ಷೆ ಹಿಡಿದ ಸ್ಮರಣಾಥ೯ವಾಗಿ ಸಂಕಷ್ಟ ವ್ಯಕ್ತಿ ಅಥವಾ ಕುಟುಂಬವೊಂದಕ್ಕೆ ಹೊಸಬದುಕು ನೀಡಲಾಗುತ್ತದೆ. ಅಲ್ಲದೇ ಬಾಲ ಶ್ರೀರಾಮನಿಗೆ ರಜತ ತುಲಾಭಾರ, ರಥೋತ್ಸವ, ರಾಮಜನ್ಮೋತ್ಸವ, ಸೀತಾಕಲ್ಯಾಣೋತ್ಸವ, ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಗುರುಪಾದುಕಾ ಪೂಜೆ, ಸಾಮೂಹಿಕ ದೀಪಮಾಲಿಕೆ, ಶ್ರೀಮಠದಲ್ಲಿ ನೂತನವಾಗಿ ನಿಮಾ೯ಣಗೊಳ್ಳುತ್ತಿರುವ ಚಂದ್ರಮೌಳೀಶ್ವರ ದೇಗುಲದ ಷಡಾಧಾರ ಪ್ರತಿಷ್ಠಾಪನೆ, ಲಂಕಾದಹನ ಸೇರಿದಂತೆ ವೈವಿಧ್ಯಮಯ ಕಾಯ೯ಕ್ರಮಗಳು ವಿಶಿಷ್ಠವಾಗಿ ಸಂಪನ್ನಗೊಳ್ಳಲಿದೆ. ವೈಶಿಷ್ಠಪೂಣ೯ ಕಾಯ೯ಕ್ರಮಕ್ಕೆ ಭಕ್ತಸಾಗರ ಹರಿದು ಬರಲಿ ಎಂಬುದು ಶ್ರೀಗಳ ಆಶಯವಾಗಿದೆ.

Monday, April 4, 2011

ಸಂಪಾದಕೀಯ: ಈ ಎಲ್ಲ ಥ್ಯಾಂಕ್ಸ್‌ಗಳೂ ನಿಮಗೇ ಸೇರುತ್ತವೆ...

ವಿಭಿನ್ನ ಆಲೋಚನೆ... ಪ್ರೋತ್ಸಾಹ ಬರಹ

ನಗರಕ್ಕೆ ಹೋಗೋದು ಹೆಣ ಹೋರಲಿಕ್ಕಾ...?


ಶಿವಮೊಗ್ಗ ಜಿಲ್ಲೆ ಹೊಸನಗರ ದಿಂದ ಕೊಲ್ಲೂರಿಗೆ ಹೋಗುವ ಮಾರ್ಗದ ೧೬ ಕಿಮೀ ಅಂತರದಲ್ಲಿ ಕಾಣಬಹುದಾದ "ನಗರ"ವನ್ನು ಉಲ್ಲೀಖಿಸಿ ಆಡುವ ಮಾತಿದೆ. ಒಂತರಾ.. ಜೋಕ್ ಅನ್ನಿಸಿದರೂ ಈ ಪ್ರದೇಶದ ಐತಿಹಾಸಿಕ ಮಹತ್ವ.. ಗತಿಸಿದ ವೈಭವ.. ಪರೋಪಕಾರಕ್ಕಾಗಿ ದುರಂತ ಅಂತ್ಯ ಕಂಡ.. ಜನತಂತ್ರ ವ್ಯವಸ್ಥೆ ಕಾಲಿಟ್ಟ ಮರುಗಳಿಗೆಯಲ್ಲೇ ನಾಡಿನ ಬೆಳಕಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿ ತನ್ನನ್ನು ಬರಿದು ಮಾಡಿಕೊಂಡ... ಕೇವಲ ಹೆಸರಿಗಷ್ಟೆ ನಗರವಾಗಿ ಇಂತಹ ಅಣಕು ಮಾತುಗಳನ್ನು ಸಾಕ್ಷೀತ್ಕರಿಸುತ್ತಿದೆ.

ಕೆಳದಿ ಸಾಮ್ರಾಜ್ಯವನ್ನು ಉತ್ತುಂಗಕ್ಕೇರಿಸಿದ ಹೆಗ್ಗಳಿಕೆ ಹೊಂದಿ.. ೧೨೫ ವರ್ಷಗಳ ಕಾಲ ಹೆಮ್ಮೆಯ ರಾಜಧಾನಿಯಾಗಿ ಮೆರೆದ ಅಂದಿನ "ಬಿದನೂರು" ಇಂದಿನ "ನಗರ" ವಾಗಿ ಪ್ರಚಲಿತದಲ್ಲಿದೆ. ಆಶ್ರಯಕ್ಕಾಗಿ ಓಡೋಡಿ ಬಂದ ಶಿವಾಜಿ ಮಗ ರಾಜಾರಾಮನಿಗೆ.. ನಾನಿದ್ದೇನೆ ಎಂದು ತಬ್ಬಿಕೊಂಡು ಆಶ್ರಯ ನೀಡಿದ ಒಂದೇ.. ಒಂದು ಕಾರಣಕ್ಕಾಗಿ ಹೈದರಾಲಿ ಆಕ್ರಮಣಕ್ಕೆ ತುತ್ತಾದ ವೈಭವದ ಬಿದನೂರು ಸಂಪೂರ್ಣ ಧ್ವಂಸವಾಗಿ ಮಾಡಿದ ಪರೋಪಕಾರಕ್ಕಾಗಿ ದುರಂತ ಅಂತ್ಯ ಕಂಡಿದ್ದು ಈಗ ಇತಿಹಾಸ.

ಶಿಸ್ತಿನ ಶಿವಪ್ಪ ನಾಯಕನ ಶಿಸ್ತು.. ಕೆಳದಿ ಚನ್ನಮ್ಮನ ಶೌರ್ಯ.. ಹೀಗೆ ಕೆಳದಿ ಸಾಮ್ರಾಜ್ಯದ ಬಹುತೇಕ ಅರಸರು ರಾಜ ಗಾಂಭೀರ್ಯದಿಂದ ಆಡಳಿತ ನಡೆಸಿದ ಈ ಬಿದನೂರಲ್ಲಿ... ಅಂದು ೨ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ.. ಮನೆ, ಗುಡಿ..ಗೋಪುರ ಸೇರಿದಂತೆ ೧ ಲಕ್ಷ ಕಟ್ಟಡ ಹೊಂದಿದ್ದು ಸಾಗರದಾಚೆಯು ಗಮನ ಸೆಳೆದಿತ್ತು. ಕೊನೆಗೂ ಇದರ ಅವನತಿ ಯಾಗಿದ್ದು ಪರೋಪಕಾರ ಎಂಬ ಉದಾತ್ತ ಧ್ಯೇಯದಿಂದಾಗಿ..

ಇಂದು...
ಹೈದರ್ ಆಕ್ರಮಣದ ನಂತರ ಹೈದರ್ ನಗರ ವಾಗಿ ನಾಮಕರಣ ಗೊಂಡ ಬಿದನೂರು ಪ್ರಸ್ತುತ ನಗರ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಗತವೈಭವ ದೊಂದಿಗೆ.. ಚಿದ್ರಗೊಂಡ ಬಿದನೂರು.. ಜನತಂತ್ರ ವ್ಯವಸ್ಥೆ ಬಂದ ಮೇಲೂ ತನ್ನ ಅತಿಕ್ರಮಣ.. ಆಕ್ರಮಣಕ್ಕೆ ಒಳಗಾಗುತ್ತಲೇ ಬಂದಿದೆ.
ನಗರ ಹೋಬಳಿ ಪ್ರಾಕೃತಿಕವಾಗಿ ಅತ್ಯಂತ ಸಮೃದ್ಧ ತಾಣ. ಅಪೂರ್ವ ವನ್ಯಜೀವಿಗಳನ್ನು ಸೆರಗಿನಲ್ಲಿ ಹೊದ್ದ ಈ ಪ್ರದೇಶದಲ್ಲಿ ಮಳೆ ಬಂತೆಂದರೆ ದಿನವೊಂದಕ್ಕೆ ೨೦ ರಿಂದ ೨೫ ಸೆಂಮೀ ಸುರಿಯುತ್ತದೆ. ಇದನ್ನು ಮನಗಂಡ ಸರ್ಕಾರದ ದೃಷ್ಠಿ ಇತ್ತ ಹರಿಯಿತು. ಅಭಿವೃದ್ಧಿಗಾಗಿ ಅಲ್ಲ.. ಬದಲಿಗೆ ನಾಡಿನ ಬೆಳಕಿಗಾಗಿ ಇಲ್ಲಿಯ ಪ್ರದೇಶದಲ್ಲಿ ನೀರು ನಿಲ್ಲಿಸಲು. ನಗರ ಹೋಬಳಿ ಒಂದರಲ್ಲೇ ಲಿಂಗನಮಕ್ಕಿ, ಮಾಣಿ, ಚಕ್ರಾ, ಸಾವೇಹಕ್ಲು ಡ್ಯಾಂಗಳು ನಿರ್ಮಾಣಗೊಂಡಿದ್ದು ಸುತ್ತಲೂ ಹಿನ್ನೀರು ತನ್ನ ಕಬಂಧಬಾಹುವನ್ನು ಚಾಚಿಕೊಂಡಿದೆ.
ಬೇರೆ ಅಭಿವೃದ್ಧಿಯಿಲ್ಲ. ಹೆಚ್ಚು ಮಳೆ ಹಾಗಾಗಿ ಫಲವತ್ತತೆ ಕೊಚ್ಚಿ ಹೋಗುವುದರಿಂದ ಇಲ್ಲಿಯ ಕೃಷಿಕು ತಮ್ಮ ಉಳುಮೆಯಲ್ಲಿ ಒಂದು ಬೆಳೆ ತೆಗೆದರೆ ಹೆಚ್ಚು.. ಇಳುವರಿಯೋ ತುಂಬಾ ಕಮ್ಮಿ. ಇನ್ನು ಅಣೇಕಟ್ಟಿಗಾಗಿ ತಮ್ಮ ಮನೆ, ಜಮೀನು, ಸರ್ವಸ್ವ ಕಳೆದು ಕೊಂಡ ಇಲ್ಲಿಯ ಜನತೆಗೆ ಸಮರ್ಪಕ ಪರಿಹಾರ ಇಂದಿಗು ಮರೀಚಿಕೆಯಾಗಿದೆ.
ಇನ್ನು ಇಲ್ಲಿಯ ಬೆಳವಣಿಗೆಗೆ ಇರುವ ಏಕೈಕ ಆಶಾಕಿರಣ ವೆಂದರೆ.. ಪ್ರವಾಸಿ ಸ್ಥಳಗಳ ಅಭಿವೃದ್ಧಿ ಪಡಿಸುವುದು. ಐತಿಹಾಸಿಕ ಕೋಟೆ, ದೇವಗಂಗೆ ಸಪ್ತಕೊಳಗಳು, ಬರೇಕಲ್ಲಿನ ಬತೇರಿ, ನೀಲಕಂಠೇಶ್ವರನ ದೇಗುಲ, ಅಪರೂಪದ ಪಂಚಮುಖಿ ವಿಗ್ರಹ, ಅರಸರ ಗದ್ದುಗೆಗಳು, ದಿಲ್ಲಿಬಾಗಿಲು, ಹೀಗೆ ಅತೀ ಮಹತ್ವದ ಸ್ಮಾರಕಗಳಿದ್ದು ಪ್ರವಾಸೋಧ್ಯಮದ ಅಭಿವೃದ್ಧಿಯ ಕನಸು ಇಲ್ಲಿಯ ಬಡಜನತೆಯದು.
ಒಟ್ಟಾರೆ ಇತಿಹಾಸದಲ್ಲಿ.. ಜನತಂತ್ರ ವ್ಯವಸ್ಥೆಯಲ್ಲಿ.. ಬರಿದಾಗಿ ಹೋದ ಅಂದಿನ ಬಿದನೂರು... ಇಂದಿನ ನಗರಕ್ಕೆ ಯಾರಾದರು ಏಕಾಗಿ ಬರಬೇಕು ನೀವೇ.. ಹೇಳಿ, ಹಾಗಾಗಿಯೇ "ನಗರಕ್ಕೆ ಹೋಗೋದು ಹೆಣ ಹೋರಲಿಕ್ಕಾ...?! ಎಂಬ ನಾಣ್ಣುಡಿ ಚಾಲ್ತಿಯಲ್ಲಿ ಇದು ಗತಿಸಿದ ವೈಭವವನ್ನು ನೆನಪಿಸುತ್ತದೆ. ಮಾತ್ರವಲ್ಲ ಶೋಷಣೆಗೊಳಗಾಗಿ ಎಲ್ಲವನ್ನು ಕಳಕೊಂಡಿದೆ ಎಂತಲೂ ಬಿಂಬಿಸುತ್ತದೆ.
ಹೇಗಿದೆ ಬಿದನೂರಿನ ದುರಂತ ಕತೆ....?!!!