ಆಗಲಷ್ಟೇ 3 ತರಗತಿಯಲ್ಲಿ ತೇಗ೯ಡೆ ಹೊಂದಿದ ಸಂತಸದಲ್ಲಿ ತೇಲುತ್ತಿದ್ದ ಬಾಲಕ ನಿಧಿಗೆ ಭಾನುವಾರ ಎಂಬುದು ಕರಾಳ ದಿನವಾಗಿ ಕಂಡಿದ್ದು ಮಾತ್ರವಲ್ಲ ಕಣ್ಣು ತೆರೆಯುವಷ್ಟರಲ್ಲೇ ತಬ್ಬಲಿಯಾಗಿದ್ದ.
ಸಂಜೆ ಆಯ್ತು ದನಕ್ಕೆ ಮುಸುರೆ ಕೊಡುತ್ತೇನೆ ಎಂದು ಕೊಟ್ಟಿಗೆಯತ್ತ ಹೆಜ್ಜೆ ಹಾಕಿದ್ದ ಅಮ್ಮನೊಂದಿಗೆ ನಿಧಿ ಕೂಡ ಹೊರಟಿದ್ದ. ಆದರೆ ಅಲ್ಲಿದ್ದ ಅಪ್ಪ ನೀನು ಇಲ್ಲೇ ಇರು. ಸ್ವಲ್ಪ ಮುಂಚೆಯಷ್ಟೇ ಕೊಟ್ಟಿಗೆಗೆ ಹಾವು ಬಂದಿತ್ತು ಎಂದು ಗದರಿಸಿ ಅಮ್ಮನೊಂದಿಗೆ ಅಪ್ಪ ಕೂಡ ಕೊಟ್ಟಿಗೆ ಹೋಗಿದ್ದ. ಅಷ್ಟರಲ್ಲೇ ಹೊಂಚು ಹಾಕಿದ್ದ ರೀತಿಯಲ್ಲಿ ಅಪ್ಪಳಿಸಿದ ಸಿಡಿಲಿಗೆ ನೋಡ ನೋಡುತ್ತಲೇ ಅಪ್ಪ ಅಮ್ಮ ಇಬ್ಬರೂ ಶವವಾಗಿದ್ದರು.
ಇದು ತಾಲೂಕಿನ ಖೈರಗುಂದ ಗ್ರಾಪಂ ವ್ಯಾಪ್ತಿಯ, ನಿಡಗೋಡು ಗ್ರಾಮದ ಅಮ್ಮನುಗುಡ್ಡೆಯ ಕೖಷ್ಣಮೂತಿ೯ ಮತ್ತು ಪತ್ನಿ ಸುಜಾತ ಸಿಡಿಲಿಗೆ ಬಲಿಯಾದ ದುರಂತ ಘಟನೆ. ಅಪ್ಪ ಅಮ್ಮನೊಂದಿಗೆ ಸಾವಿನ ಮನೆ ಸೇರಬೇಕಿದ್ದ ಬಾಲಕ ನಿಧಿ ಅದೖಷ್ಟವಶಾತ್ ಪಾರಾಗಿದ್ದಾನೆ. ಆದರೆ ತಾಯಿ ತಂದೆಯನ್ನು ಕಳೆದುಕೊಂಡು ಅನಾಥವಾಗಿರುವ ಬಾಲಕನ ರೋಧನೆ ಮುಗಿಲು ಮುಟ್ಟಿದೆ ಮಾತ್ರವಲ್ಲ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಹಾವು ಬಂದಿತ್ತು:
ನಿಡಗೋಡಿನ ಸಾವುಕಂಡ ಮನೆಯಲ್ಲಿ ಸಿಡಿಲು ದುರಂತ ಸಂಭವಿಸಿದ ಗಂಟೆ ಮೊದಲು ನಾಗರಹಾವೊಂದು ಕೊಟ್ಟಿಗೆಯಲ್ಲಿ ಪ್ರತ್ಯಕ್ಷಗೊಂಡು ಕೋಳಿಯೊಂದನ್ನು ಹಿಡಿದು ಕ್ಷಣಮಾತ್ರದಲ್ಲಿ ಕಣ್ಮರೆಯಾಗಿತ್ತು. ಇದೇ ಕಾರಣಕ್ಕಾಗಿ ಜಾನುವಾರುಗಳಿಗೆ ಆಸರೆ ನೀಡಲು ಹೊರಟ ಸುಜಾತನೊಂದಿಗೆ ಕೊಟ್ಟಿಗೆ ದಾರಿ ಹಿಡಿದ ಕೖಷ್ಣಮೂತಿ೯ ಕೂಡ ಸಾವಿನಮನೆ ದಾರಿ ಹಿಡಿದಿದ್ದಾನೆ.
ವಿದ್ಯುತ್ ಬಲ್ಫ್ವೊಂದು ಸಿಡಿಲಿಗೆ ಕಳಚಿ ಬಿದ್ದಿದೆಯಷ್ಟೆ. ಇವರಿಬ್ಬರನ್ನು ಸಾಯಿಸಲು ಮಾತ್ರ ಸಿಡಿಲು ಹೊಂಚುಹಾಕಿ ಹೊಡೆದಂತೆ ಕಾಣುತ್ತಿತ್ತು.
ಕೖಷ್ಣಮೂತಿ೯ ಮತ್ತು ಸುಜಾತ ದಂಪತಿಗೆ ನಿಧಿಯೊಬ್ಬನೆ ಮಗ. ಹೇಳುವಷ್ಟು ಶ್ರೀಮಂತರಲ್ಲದಿದ್ದರೂ ಮಗನ ಬೆಳವಣಿಗೆ ಬಗ್ಗೆ ತುಂಬ ಗಮನ ಕೇಂದ್ರಿಕರಿಸಿದ್ದರು. ಇರುವುದು ಕುಗ್ರಾಮದಲ್ಲಾದರೂ ಮಾಸ್ತಿಕಟ್ಟೆ ಇಂಗ್ಲೀಷ ಕಾನ್ವೆಂಟ್್ನಲ್ಲಿ ನಿಧಿ ವ್ಯಾಸಾಂಗ ಮಾಡುತ್ತಿದ್ದ. ಅಪ್ಪ ಅಮ್ಮನ ಮುದ್ದಿನ ಮಗನಾಗಿ ಬೆಳೆಯುತ್ತಿದ್ದ ನಿಧಿಗೆ ಈ ದುರಂತ ಬರಸಿಡಿಲಿನಂತೆ ಅಪ್ಪಳಿಸಿದೆ.
ಓದಿನ ಹೊಣೆ ಹೊತ್ತ ಸಂಸದ:
ಸಿಡಿಲಿನ ದುರಂತದಿಂದ ಅನಾಥನಾದ ಬಾಲಕ ನಿಧಿಯ ಮುಂದಿನ ಶಿಕ್ಷಣದ ಸಂಪೂಣ೯ ವೆಚ್ಚವನ್ನು ಹೋರುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ. ಶಾಸಕ ಕಿಮ್ಮನೆ ರತ್ನಾಕರ್, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಎಪಿಎಂಸಿಯ ನಿವಣೆ ಸೀತಾರಾಂಭಟ್, ವಾಟಗೋಡು ಸುರೇಶ್, ಜಿಪಂ ಅಧ್ಯಕ್ಷೆ ಶುಭಾ, ತಾಪಂ ಅಧ್ಯಕ್ಷೆ ಸುಮಾಸುಬ್ರಹ್ಮಣ್ಯ ಸೇರಿದಂತೆ ಜನಪ್ರತಿನಿಧಿಗಳೇ ದಂಡೇ ಇಲ್ಲಿಗೆ ಧಾವಿಸಿದ್ದು ಮುಗ್ಧ ಬಾಲಕನ ನೆರವಿಗೆ ಭರವಸೆಯ ಮಾತಾಡಿದ್ದಾರೆ. ಆದರೆ ಅಪ್ಪ ಅಮ್ಮನ ಪ್ರೀತಿಯಿಂದ ವಂಚಿತನಾದ ಮಗು ಒಂದೇ ಸಮನೆ ರೋಧಿಸುತ್ತಿದ್ದು ಎಂತವರ ಕರುಳು ಚುಚ್ಚುವಂತಿದೆ.
ಸ್ಮಶಾನಮೌನ:
ದಂಪತಿಗಳಿಬ್ಬರನ್ನು ಬಲಿ ತೆಗೆದುಕೊಂಡ ಸಿಡಿಲು ದುರಂತದಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ದುರಂತ ಸಂಭವಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಇಲ್ಲಿ ಸಿಡಿಲು ಹೆಚ್ಚು:
ಯಡೂರು, ಸುಳುಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿವಷ೯ ಒಂದಲ್ಲ ಒಂದು ಸಿಡಿಲಿನ ದುರಂತ ಇದ್ದೆ ಇರುತ್ತದೆ. ಇಲ್ಲೇ ಸಮೀಪ ಮನೆಯೊಂದಕ್ಕೆ ಸತತ ಮೂರು ಬಾರಿ ಸಿಡಿಲು ಹೊಡೆದದ್ದು ಇದೆ. ಅದರಲ್ಲಿ ಮಹಿಳೆಯೋವ೯ಳು ದೇಹದ ಸ್ವಾದೀನ ಕಳೆದುಕೊಂಡಿದ್ದಳು. ಕಳೆದ ವಷ೯ ಕೊಡಚಾದ್ರಿಯಲ್ಲಿ ಸಿಡಿಲಿಗೆ ಉಡುಪಿಯ ವ್ಯಕ್ತಿಯೋವ೯ ಮಡತಪಟ್ಟಿದ್ದ. ಇನ್ನು ಜಾನುವಾರು ಸಾವು, ಸಿಡಿಲಿಗೆ ಮನೆ, ಬೆಳೆ ಅನಾಹುತಗಳು ಆಗಾಗ ಘಟಿಸುತ್ತಲೇ ಇರುತ್ತದೆ. ಸಿಡಿಲು ಬಂತೆಂದರೆ ಈ ಭಾಗದ ಜನ ಭಯಗೊಳ್ಳುವಂತ ವಾತಾವರಣ ನಿಮಾ೯ಣವಾಗಿದೆ.
( ಇಂದು " ಕನ್ನಡಪ್ರಭ (12.4.11)ದಲ್ಲಿ ಈ ಲೇಖನ ಪ್ರಕಟಗೊಂಡಿದೆ)
No comments:
Post a Comment