ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚಾ ಸಮೀಪ ಬಿಲ್ಲೇಶ್ವರದ ಉಮರಸಾಬ್ ಮನೆಯ ಸಮೀಪ ಅಪರೂಪದ ಜೀವಿ "ಹಾರುವ ಓತಿ" ಕಂಡುಬಂದಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
ಮರದ ಕೊಂಬೆಯಲ್ಲಿದ್ದ ಇದನ್ನು ಕಂಡ ಉಮರಸಾಬ್ ಮಕ್ಕಳಾದ ಆಶ್ಪಕ್ ಮತ್ತು ಅಲ್ತಾಫ್ "ಹಾರುವ ಓತಿ" ಎಂದು ಗಮನಕ್ಕೆ ಬರುತ್ತಲೇ ಪುಳಕಗೊಂಡು ಹೇಗಾದರೂ ಮಾಡಿ ಹಿಡಿಯಲೇ ಬೇಕೆಂದು ಹಠತೊಟ್ಟರು. ಮರದಿಂದ ಮರಕ್ಕೆ ಹಾರುವ ಓತಿಯನ್ನು ಹಿಡಿಯುವುದು ಅಷ್ಟು ಸುಲಭವೇ..? ಆದರು ಗಂಟೆಯ ಹೊತ್ತು ಅದರ ಹಿಂದೆ ಬಿದ್ದು ಅಂತೂ..ಇಂತೂ ಸೆರೆಹಿಡಿಯುವ ಹೊತ್ತಿಗೆ ಹೈರಾಣಾಗಿ ಹೋಗಿದ್ದರು.
ತೇಜಸ್ವಿಯವರ ಕಾರ್ವಾಲೋ ಕಾದಂಬರಿಯಲ್ಲಿ ಈ ಜೀವಿಯ ಬಗ್ಗೆ ತಿಳಿದಿದ್ದ ಹುಡುಗರು ಆ ಓತಿಯನ್ನು ಮನೆಗೆ ತಂದು ತಮ್ಮದೇ ರೀತಿಯಲ್ಲಿ ಅಧ್ಯಯನ ನಡೆಸಿದ್ದು ಆಯಿತು. ಸರಿ ರಾತ್ರಿಯಾಯಿತು ವಿಶ್ವದ ಅಪರೂಪದ ಪ್ರಾಣಿ ಕೈತಪ್ಪ ಬಾರದು ಎಂದು ಬಾಲ ಕಟ್ಟಿದರು. ಆದರೆ ಬೆಳಗಾಗಿ ನೋಡುವಷ್ಟರಲ್ಲಿ ಹಾರುವ ಓತಿ ತಪ್ಪಿಸಿಕೊಂಡು ಮತ್ತೆಲ್ಲೋ ಹಾರಿತ್ತು...