ಗುಜರಿ ಹುಡುಗಿ

ಘೋರಿಯ ಮೇಲೊಂದು ಈಚಲ ಗಿಡ
ನಾನೆ ನೀರು ಹಾಕಿ ಬೆಳೆಸಿದ್ದು,
ಬುಡದಲ್ಲಿದ್ದ ಅದ್ಯಾರದೋ ಹೆಣ
ಗೊಬ್ಬರವಾಗಿತ್ತು.
ಗೊತ್ತಿಲ್ಲ, ಮತ್ತೆ ಮತ್ತೆ ಅದೇ ಈಚಲ ಗಿಡದ ಬುಡಕ್ಕೆ
ಮೈ ಆನಿಸಿಕೊಂಡು ಒರಗುತ್ತೇನೆ.
ಬುದ್ದ ನ ನೆನಪಿನಲ್ಲಿ.
ಗೋಣಿ ತಾಟಿನೊಳಕ್ಕೆ ಕೈ-ಕಾಲು ತುರುಕಿಕೊಂಡು
ಅದೇ ನೀಳ ಹಾಸುಗಲ್ಲಿನ ಘೋರಿಯ ಮೇಲೆ
'ಹಸಿವು' -'ಕಾಲ'ವನ್ನು ತಬ್ಬಿಕೊಂಡು ಮಲಗಿದ್ದೆ
ಒಂದು ದಿನವೂ ಹೆಣಗಳು ಕನಸಿಗೆ ಬರಲಿಲ್ಲ
ಯಾವ ಸೈತಾನ್ಗಳು ನನ್ನ ಎಬ್ಬಿಸಿ ಬೆಚ್ಚಿಬೀಳಿಸಲಿಲ್ಲ
ಈ ಖಬರ್ರಸ್ಥಾನ್ ಗೆ ನಾನೆ ಸಾರೇ ದಿನ್ ಕಾ ಸುಲ್ತಾನ್
ಅಲ್ಲೆ, ಈಚಲ ಗಿಡಕ್ಕೆ ತಟ್ಟಿ ಕಟ್ಟಿಕೊಂಡು
ತಕ್ಕಡಿ ತೂಗಿದ್ದ ಗುಜರಿ
ಗುಜರಿ ಸಾಹುಕಾರನ ಎದೆಗೆ 'ನೂರಿ' (ನೂರ್ಜಹಾನ್)
ಪ್ರೀತಿಯ ಬೀಜ ಭಿತ್ತಿದ ಜಾಗ
ಈಚಲು ಮರದಲ್ಲಿ ಈಚಾಗಿ, ಹೂವಾಗಿ, ಕಾಯಾಗಿ,
ಹಣ್ಣ ಗೊಂಚಲು ತೂಗುತ್ತಿತ್ತು.
ಚೆಗೆವಾರ ನ ಬಂದೂಕಿನ ಮೊನೆಯ ಗುಲಾಬಿ ಹೊವಂತೆ.!!!!!!
ಕಾಫೀರರ ಹುಡುಗಿ 'ನೂರಿ'
ಹೆಗಲ ಮೇಲೊಂದು ಗೋಣಿ ಚೀಲ
ಊರ ಕಸವೆಲ್ಲಾ ಅದರೊಳಗೆ
ಬರಿಗಾಲ ಸ್ನಿಗ್ದ ಸುಂದರಿ ಕಣ್ತುಂಬ ಕನಸಿನ ಕುಸರಿ
ಪ್ರೇಮ್ ರೋಗ್ ಪಿಚ್ಚರಿನ ಬೆಚ್ಚನೆಯ ಹಾಡುಗಳು
ಅವರದ್ದು, ಗದ್ದರ್ ರ 'ಲಾಲ್ ಸಲಾಂ'
ಸಿದ್ದಗಲಿಂಗಯ್ಯರ 'ಮೆರವಣಿಗೆ' ಯ ಪದ್ಯಗಳು ನನ್ನವು
ದಗರ್ಾ, ಮಾರಿಗುಡಿಗೆ ಅವರಿಟ್ಟ ಮೊರೆ,ಕಟ್ಟಿದ ಮುಡುಪು,
ಮಸಣದ ಪಾಲು
ಯಾವ ಮಸೀದಿಯ ಬುರುಜುಗಳ ಮೇಲೂ
ಗುಜರಿ ಹುಡುಗಿಯ ಪ್ರೀತಿ ನಿಲ್ಲಲ್ಲಿ
ಇತಿಹಾಸ ವಿರಲಿ, ವರ್ತಮಾನದಲ್ಲೂ........
ಅವಳು ಕೆರೆ ಅಂಗಳದ ಜೋಪಡಿಯ ಕುಸುಮಬಾಲೆ
ಈಚಲ ಮರ ಎತ್ತರಕ್ಕೆ ಬೆಳೆದಿದೆ...ಮಾಗಿದೆ
ಜೊತೆ ಜೊತೆಗೆ ನೀಲಗಿರಿ ತೋಪು ಮೈನೆರೆದು ಮೈತುಂಬಿಕೊಂಡಿವೆ
ಘೋರಿಯನ್ನೆಲ್ಲಾ ಮೈದಡವಿ ಮುದ್ದಿಸಿದೆ
ಎಂದೋ ಮಣ್ಣಾಗಿರುವ ಗೋಣಿ ತಾಟಿಗೆ ತಡಕಾಡಿದೆ....
ಈಚಲ ಮರವನ್ನು ಬಳಸಿ ತಬ್ಬಿಕೊಂಡೆ
ಕಥೆ ಕೇಳಿದ ಭಾಸ............ಸಸಸ
ಬುದ್ದನ, ಷೇಕ್ಸ್ಪೀಯರ್ನ, ತಾಜ್ ಕಟ್ಟಿದ ದೊರೆಯ ..ನೂರಿಯ......!
ಅದೊಂದು ದಿನ,
ಕಸದ ರಾಶಿಯ ನಡುವೆ ಕಂಡಂಗಾಯ್ತು
ಹೆಗಲ ಮೇಲೆ ಅದೇ ಹಳೆಯ ಗೋಣಿ ಚೀಲವಿತ್ತು
ಅದರಲ್ಲಿ ಊರ ಕಸವಿತ್ತು
ಅವಳ ಕಣ್ಣ ಪಾಪೆಯಲ್ಲಿ ತಾಜ್ ಕುಸಿದ ಅವಶೇಷವಿತ್ತು
ಹಾ...! ಅವಳೆ ಅನಾರ್ಕಲಿ...,
ಪ್ರೇಮ್ರೋಗ್ ಪಿಚ್ಚರಿನ ಮನೋರಮಾ!
ಪಕ್ಕದಲ್ಲೆ ಗುಜರಿ ಸಾಹುಕಾರನ
ಕಾರು ಧೂಳೆಬ್ಬಿಸಿಕೊಂಡು ಹೋದಂತಾಯಿತು
ಅದೇ ಬುರುಜಿನ ಮೇಲೆ ಅಜಃ ಕೊಗುತ್ತಿತ್ತು
ದೂರದಿಂದೆಲ್ಲೂ ಹಾಡು ಕೇಳುತ್ತಿತ್ತು......
'ಮುಜೇ ತೇರಿ ಮೊಹಬತ್ ಕಾ ಸಹರಾ
ಮಿಲ್ ಗಯಾ ಹೋತಾ.......:
..............................................................
.........................ಕವಿ................................
-ಎನ್ .ರವಿಕುಮಾರ್, ಶಿವಮೊಗ್ಗ
ಪತ್ರಕರ್ತರು, ತಿಲಕ್ ನಗರ 2ನೇ ತಿರುವು
'ಪರಮಹಂಸ' ನಿಲಯ, ಶಿವಮೊಗ್ಗ, 9008034597
...............................................................

No comments:
Post a Comment