Sunday, July 13, 2014

ಹುಲಿಕಲ್ ಘಾಟ್ ಮಡಿಲಲ್ಲಿ... ಕಣ್ಣುಕುಕ್ಕುತ್ತಿರುವ ಬಾಳೆಬರೆ ಜಲಧಾರೆ....



ಮಳೆಯ ಬರ ನೀಗಿಸಿದ ಪುನವ೯ಸು ವಷ೯ಧಾರೆ : ಶರಾವತಿ, ವಾರಾಹಿ ಹಿನ್ನೀರ ಪ್ರದೇಶದಲ್ಲಿ ಧಾರಾಕಾರ ಮಳೆ
 
ಬಿದನೂರು:ಜೂನ್ ತಿಂಗಳಿಂದ ಎದುರಿಸಿದ್ದ ಮಳೆಯ ಬರಕ್ಕೆ ಪುನವ೯ಸು ಬ್ರೇಕ್ ಹಾಕಿದ್ದು ಕಳೆದ ಮೂರು ದಿನಗಳಿಂದ ಲಿಂಗನಮಕ್ಕಿ ಶರಾವತಿ ಮತ್ತು ವಾರಾಹಿ ಹಿನ್ನೀರ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ನೀರಿಲ್ಲದೆ ಬಣಗುಟ್ಟಿದ್ದ ಹಿನ್ನೀರು ಪ್ರದೇಶ ಮತ್ತೆ ಜೀವಕಳೆ ಪಡೆದುಕೊಂಡಿದೆ. ನಾಟಿ ಕೖಷಿ ಚಟುವಟಿಕೆಗೆ ನೀರಿಗಾಗಿ ಹಾತೊರೆಯುತ್ತಿದ್ದ ಕೖಷಿ ಜಮೀನುಗಳು ನೀರು ತುಂಬಿಕೊಂಡಿದ್ದು ಕೖಷಿಯಲ್ಲಿ ರೈತರು ಬಿರುಸಾಗುವಂತೆ ಮಾಡಿದೆ.
ಮಳೆಯ ವಿವರ:
ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಹುಲಿಕಲ್ ನಲ್ಲಿ ಅತೀಹೆಚ್ಚು 131 ಮಿಮೀ ಮಳೆಯಾಗಿದೆ. ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 122, ಯಡೂರಿನಲ್ಲಿ 101 ಮಿಮೀ, ಮಾಸ್ತಿಕಟ್ಟೆಯಲ್ಲಿ 117 ಮಿಮೀ ಮಳೆ ಸುರಿದಿದೆ. ಇನ್ನು ಶರಾವತಿ ಹಿನ್ನೀರು ಪ್ರದೇಶವಾದ ಮತ್ತಿಮನೆಯಲ್ಲಿ 103 ಮಿಮೀ, ಶಂಕಣ್ಣ ಶ್ಯಾನುಬೋಗ್ ಗ್ರಾಪಂ ವ್ಯಾಪ್ತಿಯಲ್ಲಿ 71 ಮಿಮೀ, ತುಮರಿ ಭಾಗದಲ್ಲಿ 82 ಮಿಮೀ, ಖೈರಗುಂದ್ ಗ್ರಾಪಂ ವ್ಯಾಪ್ತಿಯಲ್ಲಿ 197 ಮಿಮೀ, ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ 99 ಮಿಮೀ ಮಳೆ ಸುರಿದಿದೆ.
ನಗರ, ಕಾರಗಡಿ ಅರೋಡಿ ಬಹುತೇಕ ಕಡೆ  ಸರಾಸರಿ 100 ಮಿಮೀ ಮಳೆ ಸುರಿದೆ. ಮಳೆ ಮತ್ತು ಗಾಳಿಯ ತೀವ್ರತೆಗೆ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬಂದಿದೆ. ಒಟ್ಟಾರೆ ಪುನವ೯ಸು ತಿಂಗಳಿಂದ ಮಳೆಯಿಲ್ಲದೆ ತತ್ತರಿಸಿದ್ದ ಜನರಿಗೆ ವರವಾಗಿ ಪರಿಣಮಿಸಿದೆ.
ಧುಮ್ಮಿಕ್ಕಿದ ಬಾಳೆಬರೆ:

ಮೂರುದಿನಗಳಿಂದ ಸುರಿಯುತ್ತಿರ ಮಳೆಯಿಂದಾಗಿ ಹುಲಿಕರ್ ಘಾಟ್್ನಲ್ಲಿ ಬರುವ ಬಾಳೆಬರೆ ಜಲಪಾತ ಧುಮ್ಮಿಕ್ಕುತ್ತಿದೆ. ನೇರವಾಗಿ ಹೆದ್ದಾರಿಗೆ ಧುಮುಕುವ ಜಲಧಾರೆ ಪ್ರತಿವಷ೯ದಂತೆ ಮತ್ತೆ ಪ್ರಯಾಣಿಕರ ಮನಸೂರೆಗೊಳ್ಳುತ್ತಿದೆ. ಸುಮಾರು 300 ಅಡಿಯಿಂದ ಬಂಡೆಕಲ್ಲುಗಳ ನಡುವೆ ಕೆಳಗೆ ಹರಿಯುವ ಜಲಧಾರೆ ಮತ್ತೆ ಜೀವಕಳೆ ಕಂಡುಗೊಂಡಿದ್ದು ಮಳೆಯ ತೀವ್ರತೆಗೆ ಸಾಕ್ಷಿ ಎನಿಸಿದೆ.
ಮರಣ ಕಂಡ ಮಂಗ:
ತಾಲೂಕಿನಾಧ್ಯಂತ ಸುರಿಯುತ್ತಿರುವ ವಷ೯ಧಾರೆಗೆ ಮಾರುತಿಪುರ ಅಂಬೇಡ್ಕರ್ ಕಾಲೋನೀ ಬಳಿಯ ಬೖಹತ್ ಮಾವಿನಮರವೊಂದು ಧರೆಗುರುಳಿದೆ. ಮರದಲ್ಲಿ ಮಂಗವೊಂದು ಇದ್ದು ಮರ ಬೀಳುವ ರಭಸಕ್ಕೆ ಅಲ್ಲೆ ಸಾವು ಕಂಡಿದೆ. ನಂತರ  ಭಾಸ್ಕರ ಶೆಟ್ಟಿ ನೇತೖತ್ವದಲ್ಲಿ ಸ್ಥಳೀಯರು ಮರವನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ ಪುರೋಹಿತ ಸುಬ್ರಹ್ಮಣ್ಯ ಭಟ್ ನೇತೖತ್ವದಲ್ಲಿ ಸಾವನಪ್ಪಿದ ಮಂಗವನ್ನು ವಿಧಿವಿತ್ತಾಗಿ ಅಂತ್ಯಕ್ರಿಯೆ ನೆಡಸಲಾಯಿತು.



2 comments: