ಜು.30 ಹೊಸನಗರದಲ್ಲಿ ಪತ್ರಿಕಾ ದಿನಾಚರಣೆ:
ಹೊಸನಗರ:ತಾಲೂಕು ಕಾಯ೯ನಿರತ ಪತ್ರಕತ೯ರ ಸಂಘ ಕೊಡಚಾದ್ರಿ ಸಕಾ೯ರಿ ಪ್ರಥಮದಜೆ೯ ಕಾಲೇಜಿನಲ್ಲಿ ಜು.30ರಂದು ಪತ್ರಿಕಾದಿನಾಚರಣೆಯನ್ನು ಆಯೋಜಿಸಿದೆ.

ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಪಿ ಮತ್ತು ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ವೈ.ಕೆ.ಸೂಯ೯ನಾರಾಯಣ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸುವರು.
ಕಾಯ೯ಕ್ರಮದಲ್ಲಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರಬಂಧ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕಾಯ೯ಕ್ರಮ ಯಶಸ್ವಿಗೊಳಿಸಲು ಸಂಘದ ಪ್ರಕಟಣೆಯಲ್ಲಿ ಕೋರಲಾಗಿದೆ.
'ಕವಿ'ರಾಜ:
ಹೆಸರಿಗೆ ತಕ್ಕಂತೆ ಕವಿರಾಜನಾಗಿ ಗಾಂಧಿನಗರದಲ್ಲಿ ತನ್ನದೇ ಛಾಪು ಮೂಡಿಸಿರುವ ಕವಿರಾಜ್ ಇದೇ ಮೊದಲಬಾರಿ ಕೊಡಚಾದ್ರಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮುಳುಗಡೆಯ ಊರಿನಲ್ಲಿ ಹುಟ್ಟಿ, ಇಲ್ಲಿನ ಪರಿಸರದಲ್ಲಿ ಬದುಕಿ, ಇಂದು ಚಲನಚಿತ್ರ ರಂಗದಲ್ಲಿ ಬಹುಮನ್ನಣೆಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಕವಿರಾಜ್ ಸಾಧನೆ ಅನನ್ಯ.
No comments:
Post a Comment