Wednesday, February 5, 2014

ಮುಂಬಾರಿಗೆ ಸಕಾ೯ರಿ ಪ್ರೌಢಶಾಲೆ ಮಂಜೂರು:ಸಚಿವ ಕಿಮ್ಮನೆ ಭರವಸೆ


ಮುಂಬಾರು ಗ್ರಾಮಸ್ತರಿಂದ ಅಹವಾಲು ಸ್ವೀರಿಸಿದ ಸಚಿವರು
ಹೊಸನಗರ: ಬಹುದಿನಗಳ ಗ್ರಾಮಸ್ಥರ ಬೇಡಿಕೆಯಂತೆ ಮುಂಬಾರು ಗ್ರಾಮಕ್ಕೆ ಸಕಾ೯ರಿ ಪ್ರೌಢಶಾಲೆ ಮಂಜೂರು ಮಾಡಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭರವಸೆ ನೀಡಿದರು.
ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯ್ತಿ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ, ವಜ್ರಮಹೋತ್ಸವ ಸಂಭ್ರಮದಲ್ಲಿರುವ ಮುಂಬಾರು ಸಕಾ೯ರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ದುರಸ್ತಿಗೆ ರೂ. 6 ಲಕ್ಷ ಮಂಜೂರು ಮಾಡುವುದಾಗಿ ಹೇಳಿದರು.
ಅಹವಾಲು ಸ್ವೀಕರಿಸುತ್ತಿರುವ ಸಚಿವ ಕಿಮ್ಮನೆ
ಹುಂಚಾ-ಮುಂಬಾರು ರಸ್ತೆ ಅಭಿವೃದ್ಧಿ ಹಾಗೂ ಮರು ಡಾಂಬರೀಕರಣ, ಹಿರಿಯೋಗಿ-ಸಾವಂತರು-ಮೈಥಳ್ಳಿ ರಸ್ತೆ ಜೆಲ್ಲಿ ಬಿಚಾವಣೆ, ಡಾಂಬರೀಕರಣ ಮಾಡಿಸಲಾಗುವುದು. ಬೇಹಳ್ಳಿ ಸೇತುವೆಗೆ ಒಂದು ಕೋಟಿಗೂ ಮೀರಿ ಅನುದಾನ ಬೇಕಿರುವುದರಿಂದ ನಬಾಡ೯ ಯೋಜನೆಯಲ್ಲಿ ಮಂಜೂರು ಮಾಡಿಸುವುದಾಗಿ ತಿಳಿಸಿದರು.ಮುಂಬಾರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಎನ್ಎಂ ವಸತಿ ಗೃಹ ಮಂಜೂರಾತಿ ಕುರಿತಂತೆ ಸಂಬಂಧಪಟ್ಟ ಸಚಿವರ ಹಾಗೂ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ತುರಗೋಡು ನಾಗರಾಜ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ತಾ.ಪಂ.ಮಾಜಿ ಅಧ್ಯಕ್ಷ ಅಬ್ಬಿ ಮಲ್ಲೇಶಪ್ಪ ಹಾಗೂ ಮುಂಬಾರು ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು. ಲೇಖನಮೂತಿ೯ ಸ್ವಾಗತಿಸಿದರು. ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂತಿ೯ ವಂದಿಸಿದರು.

ಹೊಂಬುಜಮಠಕ್ಕೆ ಅರಣ್ಯ ಸಚಿವ ರಮಾನಾಥ ರೈ ಬೇಟಿ


ಪದ್ಮಾವತಿದೇವಿ ದರ್ಶನದಲ್ಲಿರುವ ಸಚಿವ ರೈ
ಶ್ರೀಮಠದ ಆಡಳಿತ ಮಂಡಳಿ ವತಿಯಿಂದ ಸಚಿವರಿಗೆ ಸನ್ಮಾನ
ಹೊಸನಗರ:ತಾಲೂಕಿನ ಇತಿಹಾಸ ಪ್ರಸಿದ್ಧ ಹೊಂಬುಜಮಠಕ್ಕೆ ಅರಣ್ಯ ಸಚಿವ ರಮಾನಾಥರೈ ಬುಧವಾರ ಬೇಟಿ ಪದ್ಮಾವತಿದೇವಿಗೆ ಪೂಜೆ ಸಲ್ಲಿಸಿದರು.
ಶ್ರೀಮಠಕ್ಕೆ ಬೇಟಿ ನೀಡಿದ ಸಂದಭ೯ದಲ್ಲಿ ಹೊಂಬುಜ ಮಠದ ದೇವೇಂದ್ರ ಕೀತಿ೯ ಸ್ವಾಮೀಜಿಗಳು ಬೆಂಗಳೂರು ಕಾಯ೯ಕ್ರಮಕ್ಕೆ ತೆರಳಿದ್ದು ಮಠದಲ್ಲಿ ಉಪಸ್ಥಿತಿ ಇರಲಿಲ್ಲ.
ಸಚಿವ ರೈಗೆ ಶ್ರೀಮಠದಿಂದ ಸನ್ಮಾನ
ಖಾಸಗಿಯಾಗಿ ಬೇಟಿ ನೀಡಿದ್ದು ಹೊಂಬುಜ ಮಠಕ್ಕೆ ಬರಬೇಕೆಂದು ಹಿಂದೆಯೆ ಸಂಕಲ್ಪ ಮಾಡಿದ್ದು ಅದರಂತೆ ಬೇಟಿ ನೀಡಿದ್ದಾರೆ. ಸಂದಭ೯ದಲ್ಲಿ ಮಠದ ಆಡಳಿತದ ವತಿಯಿಂದ ಸಚಿವರವನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮಠದ ಆಡಳಿತಾಧಿಕಾರಿ ಜಿ.ಜೆ.ಪದ್ಮನಾಭಯ್ಯ, ಮಾಜಿ ಶಾಸಕ ಪಟಮಕ್ಕಿ ರತ್ನಾಕರ್, ವ್ಯವಸ್ಥಾಪಕ ಧನ್ಯಕುಮಾರ್, ತೀಥ೯ಹಳ್ಳಿ ಡಾ.ಜೀವಂಧರ್, ಗ್ರಾಪಂ ಸದಸ್ಯ ದೇವೇಂದ್ರ ಮಠದ ಪ್ರತಿನಿಧಿಗಳು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Tuesday, February 4, 2014

'ಕನ್ನಡಪ್ರಭ' ವರದಿಗೆ ಸ್ಪಂದನೆ : ಪಟಗುಪ್ಪ ಸೇತುವೆ ಕಾಮಗಾರಿ ಪರಿಶೀಲಿಸಿದ ಸ್ಪೀಕರ್ ಕಾಗೋಡು


ಪಟಗುಪ್ಪ ಸೇತುವೆಗೆ ರು.3 ಕೋಟಿ ಹೆಚ್ಚುವರಿ ಹಣ| ಅಗತ್ಯವಿದ್ದರೆ ಆಧುನಿಕ ತಂತ್ರಜ್ಞಾನ ಬಳಸಿ| 3 ತಿಂಗಳಲ್ಲಿ ಬಹುತೇಕ ಕಾಮಗಾರಿ ಪೂಣ೯ಗೊಳಿಸಿ: ಕಾಗೋಡು ಸೂಚನೆ
ಹೊಸನಗರ:ಮುಂಬರುವ 3 ತಿಂಗಳಲ್ಲಿ ಪಟಗುಪ್ಪ ಸೇತುವೆಯ ಬಹುತೇಕ ಕಾಮಗಾರಿ ಮುಗಿಸಬೇಕು. ಹೆಚ್ಚುವರಿ ರು.3ಕೋಟಿ ಹಣ ಅಗತ್ಯವಿದ್ದು ಅದನ್ನು ಒದಗಿಸುತ್ತೇನೆ. ಅಗತ್ಯವಿದ್ದರೆ ಆಧುನಿಕ ತಂತ್ರಜ್ಞಾನ ಬಳಸಿ. ಒಟ್ಟಿನಲ್ಲಿ ವಷ೯ದೊಳಗೆ ಕಾಮಗಾರಿ ಮುಗಿಸಬೇಕು ಎಂದು ಸ್ಥಳೀಯ ಶಾಸಕ, ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಕಟ್ಟಪ್ಪಣೆ ನೀಡಿದ್ದಾರೆ.
ಪಟಗುಪ್ಪ ಸೇತುವೆ ಕಾಮಗಾರಿ ಪರಿಶೀಲಿಸುತ್ತಿರುವ ಸ್ಪೀಕರ್ ಕಾಗೋಡು.
ಕನ್ನಡಪ್ರಭದಲ್ಲಿ ಫೆ.4ರಂದು ಪ್ರಕಟಗೊಂಡ 'ಪಟಗುಪ್ಪ ಸೇತುವೆ ಕಾಮಗಾರಿಗೆ ಮುಕ್ತಿ ಎಂದು?' ವರದಿಗೆ ಸ್ಪಂದಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಂಗಳವಾರ ಪಟಗುಪ್ಪದ ಹಿನ್ನೀರು ಪ್ರದೇಶಕ್ಕೆ ಬೇಟಿ ನೀಡಿ ಕಾಮಗಾರಿ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದ ಕಾಗೋಡು, ಕಾಮಗಾರಿಯಲ್ಲಿ ವಿಳಂಬ ಧೋರಣೆ ಸಲ್ಲ. ಕಾಮಗಾರಿ ಚುರುಕುಗೊಳಿಸಲು ನಿಮಗೇನಾದರು ಸಮಸ್ಯೆ ಇದ್ದರೆ ಸರಕಾರದೊಂದಿಗೆ ಮಾತುಕತೆ ನಡೆಸಿ ಬಗೆಹರಿಸುತ್ತೇನೆ. ವಷ೯ದೊಳಗೆ ಕಾಮಗಾರಿ ಮುಗಿಯಬೇಕು ಹೆಚ್ಚಿನ ವಿಳಂಬ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಂಸ್ಥೆಯ ಅದ್ಯಕ್ಷರೊಂದಿಗೆ ಮಾತುಕತೆ
ಪಟಗುಪ್ಪ ಸೇತುವೆ ಕಾಮಗಾರಿ ಕೈಗೆತ್ತಿಕೊಂಡಿರುವ ಕೆಎಸ್ಆರ್್ಡಿಸಿಎಲ್ ಸಂಸ್ಥೆ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರಿಗೆ ಖುದ್ದು ಬೇಟಿ ಮಾಡಿ ಪರಿಶೀಲಿಸಿ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸದ್ಯದಲ್ಲೆ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡುತ್ತಾರೆ ಎಂದರು. ಹಿನ್ನೀರು ಇರುವಾಗ ಮತ್ತು ಮಳೆ ಬರುವ ಸಂದಭ೯ದಲ್ಲು ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಲು ಸಾಧ್ಯವಿದ್ದರೆ ಕೂಡಲೇ ಅದನ್ನು ಕೂಡ ಅಳವಡಿಸಿಕೊಳ್ಳಿ. ಹಿನ್ನೀರುತೀರದ ದಂಡೆಗೆ ಪಿಚ್ಚಿಂಗ್ ಬದಲಿಗೆ ಕಾಂಕ್ರೀಟ್ ವಾಲ್ ನಿಮಿ೯ಸುವ ಬಗ್ಗೆ ಯೋಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆಯ 3 ತಿಂಗಳಲ್ಲಿ ಕಾಮಗಾರಿಯನ್ನು ತ್ವರಿತವಾಗಿ ನಡೆಸುವ ಅವಕಾಶ ಇದ್ದರೂ ಕೂಡ ಕಾಮಗಾರಿ ನಿವ೯ಹಿಸುತ್ತಿಲ್ಲ ಎಂಬ ಸಾವ೯ಜನಿಕರ ಅಸಮಧಾನಕ್ಕೆ, ಸರಿ ಬಿಡಿ ಇವತ್ತಿಂದ ಲೆಕ್ಕ ಇನ್ಮುಂದೆ ಕಾಮಗಾರಿ ಸರಿಯಾದ ದಾರಿಯಲ್ಲಿ ನಡೆಯುತ್ತದೆ ಎಂದು ಕಾಗೋಡು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಕನ್ನಡಪ್ರಭದೊಂದಿಗೆ ಮಾತನಾಡಿ ಈಗಾಗಲೆ ರು.29.3ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು ರು.3 ಕೋಟಿ ಹೆಚ್ಚುವರಿ ಬೇಕಾಗಲಿದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು. ವಷ೯ದೊಳಗೆ ಕಾಮಗಾರಿ ಮುಗಿಸುವ ಸಂಬಂಧ ತುತು೯ಕ್ರಮ ಕೈಗೊಳ್ಳುತ್ತೇನೆ. ನಿಟ್ಟಿನಲ್ಲಿ ಸಕಾ೯ರ ಮತ್ತು ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆ ಮಾಡಲಿ
ಪಟಗುಪ್ಪ ಸೇತುವೆ ಮತ್ತು ರಸ್ತೆ ಕಾಮಗಾರಿ ಸಂಬಂಧ ನಡೆಸಿದ ಪ್ರತಿಭಟನೆಯಲ್ಲಿ ಸೊರಬದ ಮಾಜಿ ಶಾಸಕರು ಭಾಗವಹಿಸಿದ್ದರಲ್ಲ ಎಂಬ ಪ್ರಶ್ನೆಗೆ ಪ್ರತಿಭಟನೆಗೆ ನಾನಾಕಾರಣಗಳಿವೆ ಎಂದು ಚುಟುಕಾಗಿ ಉತ್ತರಿಸಿ, ಸೊರಬದಿಂದ ಇಲ್ಲಿಗೆ ಬರುವುದು ಹಳೇ ಬೇರುಗಳ ಹುಡುಕಾಟಕ್ಕೆ ಇರಬಹುದು ಎಂದು ವ್ಯಂಗ್ಯವಾಡಿದರು.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಎಪಿಎಂಸಿ ಅಧ್ಯಕ್ಷ ಗುಬ್ಬಿಗಾ ಅನಂತರಾವ್, ಸದಸ್ಯ ಹೆಚ್.ಬಿ.ಕಲ್ಯಾಣಪ್ಪಗೌಡ, ಬಗರ್್ಹುಕುಂ ಸಮಿತಿ ಅಧ್ಯಕ್ಷ ಏರಗಿ ಉಮೇಶ್, ತಾಲೂಕು ಪ್ರಮುಖರು, ಊರಿನ ಗ್ರಾಮಸ್ತರು ಪಾಲ್ಗೊಂಡಿದ್ದರು.
  

ಹೊಸನಗರ-ಪಟಗುಪ್ಪ ಸಕಾ೯ರಿ ಬಸ್ಸಿಗೆ ಸ್ಪೀಕರ್ ಕಾಗೋಡು ಚಾಲನೆ


ಈಡೇರಿದ ಪಟಗುಪ್ಪ ವಾಸಿಗಳ ಬಹುದಿನದ ಕನಸು
ಹೊಸನಗರ:ಪಟ್ಟಣದ ಪ್ರಮುಖ ಬಸ್ ನಿಲ್ದಾಣದ ಆವರಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪಟಗುಪ್ಪ-ಹೊಸನಗರ ಕೆಎಸ್ಆರ್ ಟಿಸಿ ಬಸ್ಸು ಸಂಚಾರಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಂಗಳವಾರ ಚಾಲನೆ ನೀಡಿದರು.
ಪಟಗುಪ್ಪ ಮಾಗ೯ಕ್ಕೆ ಸಕಾ೯ರಿ ಬಸ್ಸಿಗೆ ಕಾಗೋಡರಿಂದ ಚಾಲನೆ
ತಾಲೂಕಿನ ಬಹುತೇಕ ಗ್ರಾಮಾಣಪ್ರದೇಶಗಳಲ್ಲಿ ಬಸ್ಸಿನ ಸೌಲಭ್ಯ ಇರದಿರುವುದು ನನ್ನ ಗಮನದಲ್ಲಿದ್ದು ಹೆಚ್ಚಿನ ಬಸ್ಸನ್ನು ಒದಗಿಸುವ ಬಗ್ಗೆ ಗಮನಹರಿಸುತ್ತೇನೆ ಎಂದರು.
ಸಕಾ೯ರಿ ಬಸ್ಸನ್ನು ಒದಗಿಸಿದರೂ ಕೂಡ ಟೈಮಿಂಗ್ಸ್ ಪಮಿ೯ಟ್ ದೊಡ್ಡ ಸಮಸ್ಯೆ. ಬಗ್ಗೆ ಕೂಡ ಅಧಿಕಾರಿಗಳಿಗೆ ಎಚ್ಚಿರಿಸಿದ್ದು ಯಾವುದೆ ಲಾಭಿಗೆ ಮಣಿಯದೆ ಕೆಎಸ್ಆರ್ ಟಿಸಿ ಬಸ್ಸಿನ ಸಂಚಾರಕ್ಕೆ ಸಹಕರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಎಪಿಎಂಸಿ ಅಧ್ಯಕ್ಷ ಅನಂತರಾವ್, ಸದಸ್ಯ ಕಲ್ಯಾಣಪ್ಪಗೌಡ, ಪಪಂ ಸದಸ್ಯರಾದ ರತ್ನಾಕರಶೆಟ್ಟಿ, ಚಂದ್ರಶೇಖರ್ ಶೇಟ್, ಪ್ರಮುಖರಾದ ಪಟೇಲ್ ಗರುಡಪ್ಪಗೌಡ, ಬಾಬುಕಾಮತ್, ಜಯನಗರ ಗುರು, ಪಟ್ಟಣದ ಪ್ರಮುಖರು ಮತ್ತು ಪಟಗುಪ್ಪದ ನಿವಾಸಿಗಳು ಪಾಲ್ಗೊಂಡಿದ್ದರು.