Wednesday, January 15, 2014

ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ : ಡಾ.ಆರ್.ಎಂ.ಮುಂಜುನಾಥ ಗೌಡ


ಕಾಯ೯ಕತ೯ರ ಸಮ್ಮುಖದಲ್ಲಿ ಮನಬಿಚ್ಚಿದ ರಾಜ್ಯ ಅಪೆಕ್ಸ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ
ಹೊಸನಗರ:ಕೆಜೆಪಿ ಬಿಜೆಪಿ ವಿಲೀನಗೊಂಡಿದ್ದರೂ ಕೂಡ ನಾನು ಮಾತ್ರ ಬಿಜೆಪಿ ಹೋಗು ಮಾತೆ ಇಲ್ಲ. ಬೆನ್ನಿಗೆ ಚೂರಿ ಹಾಕುವವರೊಂದಿಗೆ ಹೊಂದಾಣಿಕೆ ಹೇಗೆ ಸಾಧ್ಯ ಎಂದು ರಾಜ್ಯ ಅಪೆಕ್ಸ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಕರಿಮನೆ ಚಂಡಿಕೇಶ್ವರಿ ಸಭಾಂಗಣದಲ್ಲಿ ಮುಂದಿನ ರಾಜಕೀಯ ನಿಧಾ೯ರದ ಬಗ್ಗೆ ಕಾಯ೯ಕತ೯ರಿಂದ ಅಭಿಪ್ರಾಯ ಪಡೆದ ಅವರು, ಮುಂದಿನ ಹೆಜ್ಜೆ ಬಗ್ಗೆ ಶೀಘ್ರದಲ್ಲೆ ತೀಮಾ೯ನ ಪ್ರಕಟಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಜೆ.ಹೆಚ್.ಪಟೇಲ್್ರನ್ನು ಅತ್ಯಂತ ಗೌರವದಿಂದ ಕಂಡಿದ್ದೇನೆ ಮತ್ತು ಬೆರೆತಿದ್ದೇನೆ. ಅದೆ ರೀತಿ ಬಿ.ಎಸ್.ಯಡಿಯೂರಪ್ಪರ ಬಗ್ಗೆ ಕೂಡ ಗೌರವ ಹೊಂದಿದ್ದು, ಕೆಜೆಪಿ ಕಟ್ಟಿದಾಗ ಅವರ ಬೆಂಬಲಕ್ಕೆ ನಿಂತಿದ್ದೆ. ಆದರೆ ಬಿಜೆಪಿಯೊಂದಿಗೆ ವಿಲೀನ ನನಗೆ ಯಾಕೊ ಸರಿ ಕಾಣುತ್ತಿಲ್ಲ ಎನ್ನುವ ಮೂಲಕ ಬಿಜೆಪಿ ಬಗ್ಗೆ ತಮ್ಮ ನಿಲುವನ್ನು ಬಹಿರಂಗಗೊಳಿಸಿದ್ದಾರೆ.
 ಕೆಜೆಪಿ ಕಟ್ಟಿದ ಕಾಯ೯ಕತ೯ರು ಮತ್ತು ಬೆಂಬಲಿಗರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇನೆ. ಬಿಜೆಪಿಗೆ ಹೋದಲ್ಲಿ ಕಿರುಕುಳ ತಪ್ಪಿದ್ದಲ್ಲ. ಹಾಗಾಗಿ ವಿಭಿನ್ನವಾಗಿ ಆಲೋಚಿಸುತ್ತಿದ್ದು ಶೀಘ್ರದಲ್ಲಿ ತೀಮಾ೯ನ ಕೈಗೊಳ್ಳುತ್ತೇನೆ. ಬೆಂಬಲಿಗರಾರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.
ಹಾಗಂತ ಕಾಂಗ್ರೆಸ್, ಜೆಡಿಎಸ್ ಬಗ್ಗೆ ಉತ್ತಮ ಭಾವನೆ ಇಲ್ಲ. ದೆಹಲಿಯಲ್ಲಿ ಆಮ್ ಆದ್ಮಿ ಸಕಾ೯ರ ರಚನೆಯಾಗಿರುವುದು ನೋಡಿದರೆ ರಾಜಕೀಯ ದಿಕ್ಸೂಚಿ ಬದಲಾಗುತ್ತಿದೆ. ಬಿಜೆಪಿ ಮೋದಿಯನ್ನು ಪ್ರಧಾನಿ ಅಭ್ಯಥಿ೯ ಎಂದು ಬಿಂಬಿಸಿದರೂ ರಾಜಧಾನಿಯಲ್ಲಿ ಸಕಾ೯ರ ರಚಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇನ್ನು ಅತ್ಯಧಿಕ ಸ್ಥಾನ ಹೊಂದಿರುವ ಉತ್ತರಪ್ರದೇಶದಲ್ಲೂ ಕಾಂಗ್ರೆಸ್ ಬಿಜೆಪಿ ಆಟ ನಡೆಯುವ ಸಾಧ್ಯತೆ ಇಲ್ಲ. ಅಲ್ಲೇನಿದ್ದರೂ ಎಸ್.ಪಿ ಮತ್ತು ಬಿಎಸ್್ಪಿ ನಡುವೆ ಸ್ಪಧೆ೯ ಕಂಡುಬರುತ್ತಿದೆ ಎಂದರು.
ವಿಭಿನ್ನ ಅಭಿಪ್ರಾಯ:
ಇದಕ್ಕು ಮುನ್ನ ತಮ್ಮ ಅಭಿಪ್ರಾಯ ತಿಳಿಸಿದ ಕಾಯ೯ಕತ೯ರಲ್ಲಿ ಕೆಲವರು ಯಾವುದೆ ಪಕ್ಷ ಹೋಗೋದು ಬೇಡ. ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಬೆಂಬಲಿಸೋಣ, ಇನ್ನು ಕೆಲವರು ತಟಸ್ಥವಾಗಿರಿ ಎಂದರೆ ಬಹುತೇಕ ಕಾಯ೯ಕತ೯ರು ನಿಮ್ಮ ನಿಧಾ೯ರಕ್ಕೆ ನಾವು ಬದ್ದರಾಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಪ್ರಮುಖರಾದ ಸಚೀಂದ್ರಹೆಗಡೆ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ದೊಡ್ಲೆಪಾಲ್ ಚಂದ್ರಶೇಖರ್, ಡಿ.ಟಿ.ಸತ್ಯನಾರಾಯಣ, ಸುಧೀರ್, ದೇವೇಂದ್ರ, ಸುಮಾ ಸುಬ್ರಹ್ಮಣ್ಯ, ಸುಷ್ಮಾ ಸಂಜಯ್, ವಿದ್ಯಾಧರ್, ಗುರುಶಂಕರ್ ಶ್ರೀಧರಶೆಟ್ಟಿ ಉಪಸ್ಥಿತರಿದ್ದರು.

ಸ್ಪೀಕರ್ ಕಾಗೋಡು ನೇತೃತ್ವದಲ್ಲಿ ಯಶಸ್ವಿ ಬಗರ್ ಹುಕುಂ ರೈತರ ಸಮಾವೇಶ


 ಎಪಿಎಂಸಿ ಸದಸ್ಯ ಸಿ ರಾಮಚಂದ್ರರಾವ್ ಬಿದನೂರು ನಗರದಲ್ಲಿ ಆಯೋಜಿಸಿದ ಬಗರ್ ಹುಕುಂ ರೈತರ ಸಮಾವೇಶ
ಹೊಸನಗರ:2 ವಷ೯ದ ಹಿಂದೆ ಸಾಗುವಳಿ ಚೀಟಿ ನೀಡಿ ಇನ್ನು ಪಾಣಿಯಲ್ಲಿ ದಾಖಲಾಗಿಲ್ಲ ಎಂದರೆ ಏನಥ೯. ಸಕಾ೯ರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಅಧಿಕಾರಿಗಳಿಗೆ ಸಕಾ೯ರ ಚುರುಕು ಮುಟ್ಟಿಸಬೇಕಿದ್ದು ಇದಕ್ಕೆ ಮೀನಾಮೇಷ ಸಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಕಾ೯ರಕ್ಕೆ ಕಿವಿ ಹಿಂಡಿದ್ದಾರೆ.

ತಾಲೂಕಿನ ನಗರ ಗುಜರಿಪೇಟೆ ಆವರಣದಲ್ಲಿ ಕಾಗೋಡು ಅಭಿಮಾನಿ ಬಳಗ ಆಯೋಜಿಸಿದ್ದ, ಬಗರ್್ಹುಕುಂ, ವಸತಿ ರಹಿತರು ಮತ್ತು ಅರಣ್ಯ ಮೂಲನಿವಾಸಿಗಳ ಬೖಹತ್ ಸಮಾವೇಶ ಉದ್ಘಾಟಿಸಿ, ಸಿಎಂ ಸಿದ್ದರಾಮಯ್ಯ ಸದನದಲ್ಲಿ ನ್ಯಾಯಸಮ್ಮತ ಮತ್ತು ಕ್ರಿಯಾಶೀಲ ಸಕಾ೯ರ ನೀಡುವುದಾಗಿ ಹೇಳಿದ್ದು ಅದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದಿದ್ದಾರೆ.
ಸಕಾ೯ರ ಬಂದು ಹಲವು ತಿಂಗಳು ಕಳೆದಿದೆ. ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮಾತ್ರ ಬಗರ್್ಹುಕುಂ ಸಮಿತಿ ರಚನೆಯಾಗಿದ್ದು ಹೊರತು ಪಡಿಸಿ ಮತ್ತೆಲ್ಲು ಇನ್ನು ರಚನೆಯಾಗಿಲ್ಲ. ಈ ಬಗ್ಗೆ ಆಯಾಯ ಭಾಗದ ಶಾಸಕರು ಉತ್ಸುಕತೆ ತೋರಬೇಕಿದೆ ಎಂದರು.
ಸ್ಪೀಕರ್ ಆಗಿ ಬಾಯಿ ಕಟ್ಟಿದೆ:
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಡರೈತ, ಕೂಲಿಕಾಮಿ೯ಕರಿಂದ ಹರಿದುಬಂದ ನೂರಾರು ಸಮಸ್ಯೆಗಳ ಅಹವಾಲು ಸ್ವೀಕರಿಸಿದ ಅವರು, ಸ್ಪೀಕರ್ ಆಗಿ ದೊಡ್ಡ ಸ್ಥಾನದಲ್ಲಿದ್ದು ಬಾಯಿ ಕಟ್ಟಿದೆ. ಬಡವರ, ರೈತರ ನೋವು ಕಂಡು ಮರುಕವಾಗುತ್ತಿದೆ ಎಂದು ಭಾವುಕರಾದ ಅವರು ಈ ಅಧಿಕಾರಿಗಳಿಗೆ ಏನಾಗಿದೆ ಸಣ್ಣ ಕೆಲಸ ಮಾಡಲು ಕೂಡ ಯಾಕೆ ಸತಾಯಿಸುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದು ನುಡಿದರು.
ವಿರಮಿಸುವುದಿಲ್ಲ:
ನಾನೀಗ ಕಾಂಗ್ರೆಸ್ ಪಕ್ಷದವನಲ್ಲ. ಸ್ಪೀಕರ್ ಆದರೆ ಸಮಸ್ಯೆ ಬಗ್ಗೆ ಯಾರಿಗೆ ಎಲ್ಲಿ ಏನು ಹೇಳಬೇಕು ಎಂಬುದನ್ನು ಹೇಳುತ್ತೇನೆ. ಬಗರ್ ಹುಕುಂ, ವಸತಿ ರಹಿತರ ಮತ್ತು ಅರಣ್ಯ ಮೂಲನಿವಾಸಿಗಳ ಸಮಸ್ಯೆಗಳಿಗೆ ಇಂತಹ ಸಮಯದಲ್ಲೂ ಸ್ಪಂದಿಸಿಲ್ಲ ಎಂದು ನಾನು ಇದ್ದು ಸತ್ತಂತೆ. ನನಗೆ ಅಧಿಕಾರದ ಆಸೆಯಿಲ್ಲ ಸಮಸ್ಯೆ ಪರಿಹಾರದವರೆಗೆ ವಿರಮಿಸುವುದಿಲ್ಲ. ಯಾರು ಕೂಡ ಹೆದರಬೇಕಿಲ್ಲ. ಸಂಘಟನೆ ಮೂಲಕ ನ್ಯಾಯ ಪಡೆದುಕೊಳ್ಳುವುದೆ ನಿಜವಾದ ಶಕ್ತಿ. ಅದಕ್ಕೆ ನನ್ನ ಸಂಪೂಣ೯ ಬೆಂಬಲವಿದೆ ಎಂದು ಘೋಷಿಸಿದರಲ್ಲದೆ ಸಮಸ್ಯೆ ನಿವಾರಣೆಗೆ ಪ್ರತಿ ಗ್ರಾಮಮಟ್ಟದಲ್ಲು ಸಭೆ ನಡೆಸಲು ಸಿದ್ದ ಎಂದು ಘೋಷಿಸಿದರು.
ಬೇಡಿಕೆಗಳು:
ಕನಾ೯ಟಕ ಭೂಕಂದಾಯ ಕಾಯ್ದೆ 94 ಎ ಅಂತೆ, ರಚಿತವಾದ ಸಮಿತಿಯಿಂದ ಫಾರಂ 50, 53 ರಲ್ಲಿ ನೀಡಿದ ಅಜಿ೯ಗಳನ್ನು ಕೂಡಲೇ ವಿಲೇವಾರಿ ಮಾಡುವುದು. ಕನಾ೯ಟಕ ಭೂಕಂದಾಯ ಕಾಯ್ದೆ 94 ಬಿ ಪ್ರಕಾರ ಫಾರಂ 50, 53 ರಲ್ಲಿ ಅಜಿ೯ ಇಲ್ಲದಿದ್ದರೆ 1990ನೇ ಇಸವಿಗಿಂತ ಮೊದಲು ಕೃಷಿ ಮಾಡಿರುವುದು ಕಂಡು ಬಂದರೆ ಅದನ್ನು ಮಂಜೂರು ಮಾಡಿಸುವುದು.
ಕನಾ೯ಟಕ ಭೂ ಕಂದಾಯ ಕಾಯ್ದೆ 94 ಸಿ ಯಂತೆ ಸಕರ್ಾರಿ ಜಾಗದಲ್ಲಿ 2012 ಇಸವಿಯೊಳಗೆ ಮನೆ ನಿಮಿ೯ಸಿದವರಿಗೆ ತಕ್ಷಣ ಹಕ್ಕುಪತ್ರ ನೀಡಲು ಕೋರುವುದು.
ಕೇಂದ್ರ ಸಕಾ೯ರ ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರಣ್ಯ ಮೂಲ ನಿವಾಸಿಗಳಿಗೆ ಹಕ್ಕನ್ನು ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳುವುದು.
ಮಾಸ್ತಿಕಟ್ಟೆ (ಖೈರಗುಂದ ಗ್ರಾ ಪಂ) ಯಲ್ಲಿರುವ ಕೆಪಿಸಿ ನಿರ್ವಹಣಾ ಕಚೇರಿಗಳನ್ನು ಸ್ಳಳಾಂತರಿಸಿರುವುದನ್ನು ಸಮಗ್ರವಾಗಿ ಪರಿಶೀಲಿಸಿ, ಅವೈಜ್ಞಾನಿಕ ಸ್ಥಳಾಂತರವನ್ನು ರದ್ದು ಪಡಿಸಿ ಸಂತ್ರಸ್ಥ ಪ್ರದೇಶಕ್ಕೆ ಜೀವ ತುಂಬುವುದು.
ಎಪಿಎಂಸಿ ಅಧ್ಯಕ್ಷ, ಕಾಗೋಡು ಅಭಿಮಾನಿ ಬಳಗದ ಅಧ್ಯಕ್ಷ ಸಿ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದಭ೯ದಲ್ಲಿ ಹಿರಿಯರಾದ ಹಾಜಿಸಾಬ್, ಚಂದ್ರಶೇಖರಶೆಟ್ಟಿ, ಅತ್ತಿಕೊಡಿಗೆ ನಾಗಪ್ಪಗೌಡ ಕಾಗೋಡರವರನ್ನು ಸನ್ಮಾನಿಸಿದರು.
ಪ್ರಮುಖರಾದ ಕಲಗೋಡು ರತ್ನಾಕರ್, ಏರಗಿ ಉಮೇಶ್, ಪಟೇಲೆ ಗರುಡಪ್ಪಗೌಡ, ರಮೇಶಹೆಗ್ಡೆ, ಗುಬ್ಬಿಗ ಅನಂತರಾವ್, ಹೆಚ್.ಬಿ.ಕಲ್ಯಾಣಪ್ಪಗೌಡ,  ಯಡೂರು ರಾಜಾರಾಂ, ಗೋಪಾಲಶೆಟ್ಟಿ, ಕರುಣಾಕರಶೆಟ್ಟಿ ಮತ್ತು ನಗರ ಹೋಬಳಿಯ ಮೂಲೆಗಳಿಂದ ರೈತರು ಭಾಗವಹಿಸಿದ್ದರು.

Friday, December 20, 2013

ಬಸವಳಿದ ಬಿದನೂರಿಗೆ ಕಾಯಕಲ್ಪ ಎಂದು?


ಮೂಲಸೌಕಯ೯ ವಂಚಿತ ಐತಿಹಾಸಿಕ ಸ್ಮಾರಕಗಳು
ಸಚಿವ ಕಿಮ್ಮನೆ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಹೊಸನಗರ:ಐತಿಹಾಸಿಕ ಹಲವು ಸ್ಮಾರಕಗಳ ಕೇಂದ್ರ ಬಿದನೂರು ಬಸವಳಿಯುತ್ತಿದ್ದು ಪ್ರವಾಸಿ ಕೇಂದ್ರವಾಗಿ ಅಭಿವೖದ್ಧಿಯ ನಿರೀಕ್ಷೆ ಇಂದಿಗು ನಿರೀಕ್ಷೆಯಾಗಿಯೆ ಉಳಿದೆ.
ಕೆಳದಿ ಅರಸರ ರಾಜಧಾನಿಯಾಗಿ ಮಹತ್ವ ಪಡೆದು ಕೊಂಡ ಬಿದನೂರು ಇಂದಿನ ನಗರದಲ್ಲಿ ಸದೖಢ ಕೋಟೆ, ದೇವಗಂಗೆ ಕೊಳ, ಅರಸರ ಸಮಾಧಿಗಳು, ಬರೇಕಲ್ಲಿನ ಬತೇರಿ ಸೇರಿಂದತೆ ನೂರಾರು ಪಳಯುಳಿಕೆಗಳಿವೆ. ಆದನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು ಅವರಿಗೆ ಸೂಕ್ತ ಮೂಲಸೌಕಯ೯ಗಳು ಸಿಗದೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ.
ಸ್ಮಾರಕಗಳ ಧ್ವಂಸ:
ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಇಲ್ಲಿಯ ಸ್ಮಾರಕಗಳ ಕೆಳಗೆ ನಿಧಿ ಇದೆ ಪುಕಾರು ಹಬ್ಬುತ್ತಲೆ ಇದ್ದು ಅದನ್ನು ಬಗೆದು ಸ್ಮಾರಕಗಳನ್ನು ಹಾಳುಗೆಡವುವ ಕೆಲಸ ಕೂಡ ಆಗಾಗ್ಗೆ ಘಟಿಸುತ್ತಲೆ ಇದ್ದು ಸಂರಕ್ಷಣೆ ಇಲ್ಲದಂತಾಗಿದೆ. ಹಿಂದೆ ಶ್ರೀಧರಪುರದಲ್ಲಿರುವ ಅರಸರ ಸಮಾಧಿಗಳಲ್ಲಿ ಒಂದನ್ನು ನಿಧಿಯಾಸೆಗಾಗಿ ಬುಡಮೇಲು ಮಾಡಿದ್ದರು. ಬೆನ್ನಲೆ ಹೆಂಡಗದ್ದೆ ಸಮೀಪವಿರುವ ಗಳಿಗೆ ಬಟ್ಟಲು ಎಂಬ ವಿಶಾಲವಾದ ಕಲ್ಲಿನ ಮಂಚವನ್ನು ಕೂಡ ಇದೆ ಕಾರಣಕ್ಕೆ ಧ್ವಂಸ ಮಾಡಿದ್ದರು ಮಾತ್ರವಲ್ಲ ಬಸವನಬ್ಯಾಣ, ಬರೇಕಲ್ಲಿನ ಬತೇರಿ, ದುಬ್ಬಾರತಟ್ಟಿ ಸೇರಿದಂತೆ ಸ್ಮಾರಕಗಳಿರುವ ಹಲವು ಪ್ರದೇಶದಲ್ಲಿ ನಿಧಿ ಶೋಧ ನೆಡಸಿದ ವರದಿಯಾಗಿತ್ತು.
ಮುಳುಗಡೆ ತವರು:
ಹೇಳಿ ಕೇಳಿ ನಗರ ಹೋಬಳಿ ಮುಳುಗಡೆ ತವರು. ಚಕ್ರಾ, ಸಾವೇಹಕ್ಲು, ಮಾಣಿ ಅಣೇಕಟ್ಟುಗಳು ನಿಮಾ೯ಣ ಕಂಡಿದ್ದು ಹಿನ್ನೀರು ವ್ಯಾಪಿಸುತ್ತದೆ. ಮಾತ್ರವಲ್ಲ ಲಿಂಗನಮಕ್ಕಿ ಜಲಾಶಯದ ಜೀವನಾಡಿಯಾಗಿರುವ ಇಲ್ಲಿ ವಿಶಾಲವಾಗಿ ಹಿನ್ನೀರು ತುಂಬಿಕೊಳ್ಳುತ್ತದೆ. ಅಭಿವೖದ್ದಿ ಯೋಜನೆಗಾಗಿ ಸಕಲವನ್ನು ಬರಿದು ಮಾಡಿಕೊಂಡ ಸಾಕಷ್ಟು ಸಂತ್ರಸ್ತರ ಬದುಕು ಇಂದಿಗೂ ಮೂರಾಬಟ್ಟೆಯಾಗಿದೆ. ಕುಟುಂಬಕ್ಕೊಂದು ಉದ್ಯೋಗ ನೀಡುವ ಭರವಸೆ ಕೂಡ ಮರೀಚಿಕೆಯಾಗಿದ್ದು ಐಟಿಐ ತರಬೇತಿ ಪಡೆದುಕೊಂಡು ನೂರಾರು ಯುವಕರ ವಯಸ್ಸು ಮೀರುತ್ತಿದೆ ಹೊರತು ಕೆಲಸ ಮಾತ್ರ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮುಳುಗಡೆಯಿಂದ ಜನರು ಅತಂತ್ರರಾಗಿದ್ದು ಒಂದಡೆಯಾದರೆ ಇಲ್ಲಿಯ ಪ್ರದೇಶ ಬಹುತೇಕ ನೀರಿಗಾಹುತಿಯಾಗಿದ್ದು ಈಗ ಇತಿಹಾಸ. ಆದರೆ ಅಲ್ಲಿಂದ ಈ ಪ್ರದೇಶದ ಅಭಿವೖದ್ಧಿಗು ಕೂಡ ಪೂರಕವಾಗಿದ್ದ ಅಂಶಗಳು ಕೂಡ ಹಿನ್ನೀರಿನಲ್ಲಿ ಹುದುಗಿ ಹೋಗಿದ್ದು ಈ ಪ್ರದೇಶದ ಪಾಲಿಗೆ ನುಂಗಲಾರದ ಬಿಸಿತುಪ್ಪ.
ಪ್ರವಾಸಿಸ್ಥಳವಾಗಿ ಅಭಿವೖದ್ಧಿಯಾಗಲಿ:
ನಗರ ಹೋಬಳಿಯ ಆಭಿವೖದ್ಧಿಗೆ ಇರುವ ಏಕೈಕ ಆಶಾಕಿರಣ ಇಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಕೖತಿಕ ರಮಣೀಯತೆ. ಅದನ್ನು ಹಾಳುಗೆಡವದೆ ಪ್ರವಾಸೋಧ್ಯಮವಾಗಿ ಅಭಿವೖದ್ಧಿಯಾಗಬೇಕು ಎಂಬುದು ಸ್ಥಳೀಯರ ಹಲವು ವಷ೯ದ ಬೇಡಿಕೆ ಆದರೆ ಅದು ಮಾತ್ರ ಇಂದಿಗೂ ಮರೀಚಿಕೆ.
ಬಿದನೂರಿನ ಅಭಿವೖದ್ಧಿಗಾಗಿ ನಾಲ್ಕು ವಷ೯ಗಳ ಹಿಂದೆ ಸಕಾ೯ರದ ಮಟ್ಟದಲ್ಲಿ ಬಿದನೂರು ಅಭಿವೖದ್ಧಿ ವೇದಿಕೆ ರಚಿಸಿಲಾಗಿದ್ದು ಅಭಿವೖದ್ಧಿ ಬಗ್ಗೆ ಚಚಿ೯ಸಲಾಗಿತ್ತು. ಡಿಸಿ ಅಧ್ಯಕ್ಷರಾಗಿದ್ದ ಆ ವೇದಿಕೆ ಎರಡು ಸಭೆಗೆ ಮಾತ್ರ ಸೀಮಿತವಾಗಿದ್ದು ಮತ್ತೊಂದು ದುರಂತ. ನಂತರ ಶಿವಮೊಗ್ಗ ಜಿಲ್ಲೆ ಪ್ರವಾಸೋಧ್ಯಮ ಅಭಿವೖದ್ಧಿ ಪ್ಯಾಕೇಜ್್ನಲ್ಲಿ ಬಿದನೂರನ್ನು ಸೇರಿಸಲಾಗಿದೆ ಎಂಬ ಸಬೂಬು ನೀಡಿ ಬಿದನೂರು ಅಭಿವೖದ್ದಿ ವೇದಿಕೆಗೆ ಎಳ್ಳುನೀರು ಬಿಡಲಾಗಿತ್ತು.
ಸಚಿವರ ಮೇಲೆ ನಿರೀಕ್ಷೆ:
ಕ್ಷೇತ್ರ ತೀಥ೯ಹಳ್ಳಿ ತಾಲೂಕು ಹೊಸನಗರಕ್ಕೆ ಅವಲಂಬಿಸಿದ್ದ ನಗರ ಹೋಬಳಿಯ ತ್ರಿಶಂಕು ಸ್ಥಿತಿಗೆ ಮುಕ್ತಿ ಸಿಗುವುದು ದೂರದ ಮಾತು. ಆದರೆ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಕಿಮ್ಮನೆ ರತ್ನಾಕರ್ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಶಿಕ್ಷಣ ಖಾತೆ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ನಗರ ಹೋಬಳಿಯ ಜನತೆಯ ಹೊಂಗನಸುಗಳಿಗೆ ಜೀವ ಬಂದಂತಾಗಿದೆ. ನಗರ ಹೋಬಳಿಯಲ್ಲಿರುವ ದಕ್ಷಿಣದ ಚಿರಾಪುಂಜಿ ಹುಲಿಕಲ್, ಬಾಳೆಬರೆ, ಮಾಣಿ ಜಲಾಶಯ, ಚಕ್ರಾ ಸಾವೇಹಕ್ಲು ಡ್ಯಾಂ, ನಗರ, ಸಂಪೇಕಟ್ಟೆ, ನಿಟ್ಟೂರು ಭಾಗದ ಪ್ರಾಕೖತಿಕ ಮತ್ತು ಐತಿಹಾಸಿಕ ಶ್ರೀಮಂತಿಕೆಗೆ ಸಾಕ್ಷಿಯಾದ ಪ್ರದೇಶಗಳ ಅಭಿವೖದ್ಧಿ ಅದಕ್ಕು ಮುಖ್ಯವಾಗಿ ಪ್ರವಾಸಿಗರಿಗೆ ಪೂರಕವಾಗಿ ಮೂಲಸೌಕಯ೯ ಒದಗಿಸುವ ನಿಟ್ಟಿನಲ್ಲಿ ಸಚಿವರು ಗಮನ ಹರಿಸಲಿ ಎಂಬ ಆಶಯ ಪ್ರವಾಸಿಗರದ್ದಾಗಿದೆ.
ಬಿದನೂರು ಉತ್ಸವ:
ಕೆಳದಿ ಅರಸರ ಮೂರನೇ ರಾಜಧಾನಿಯಾಗಿ ಮಹತ್ವ ಪಡೆದ ಬಿದನೂರು ಉತ್ಸವ ನಡೆಸಬೇಕು ಎಂಬ ಬೇಡಿಕೆ ನಿರಂತರವಾಗಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳ ಉತ್ಸವ ಅದ್ದೂರಿಯಿಂದ ನಡೆಯುತ್ತಿರಬೇಕಾದರೆ ಬಿದನೂರನ್ನು ಈ ನಿಟ್ಟಿನಲ್ಲಿ ಸಕಾ೯ರ ಗಮನ ಹರಿಸಲಿ ಎಂಬುದು ಇತಿಹಾಸ ಪ್ರೀಯರ ಆಶಯ

Saturday, January 26, 2013

 ನೂಲಿಗ್ಗೇರಿ ಸರ್ಕಾರಿ ಶಾಲೆಯ ಸುವರ್ಣ ಸಂಭ್ರಮ
ಸುವರ್ಣ ಸಂಭ್ರಮದ ಯಶಸ್ಸು ನಿಮ್ಮದು
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪುಟ್ಟ ಗ್ರಾಮ ನೂಲಿಗ್ಗೇರಿ ಶಾಲೆ ಸುವರ್ಣ ಸಂಭ್ರಮ ಆಚರಿಸಲು ಮುಂದಡಿ ಇಟ್ಟಾಗ.. ಪ್ರತಿ ಕಾರ್ಯಕ್ರಮದಂತೆ ಸರ್ಕಾರಿ ಕಾರ್ಯಕ್ರಮ ಕೇವಲ ನಾಮಕಾವಾಸ್ತೆ ಎಂಬ ಉದ್ಘಾರ ಬಂದಿದ್ದು ಹೊಸತೇನು ಆಗಿರಲಿಲ್ಲ.
ಆದರೆ ದಿಟ್ಟ ಹೆಜ್ಜೆ.. ಹೊಸತನದ ಮೆರುಗು..ಸರ್ವರ ಸಹಕಾರ.. ಬಡವ ಬಲ್ಲಿದ ಎಂಬ ತಾರತಮ್ಯ ಕಂಡುಬರದ ಶ್ರಮದಾನ.. ಗ್ರಾಪಂ, ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ, ಸ್ತ್ರೀ ಶಕ್ತಿ ಸ್ವಹಾಯ ಸಂಘಗಳು.. ಹೀಗೆ ಇಡೀ ಊರಿಗೆ ಊರೇ ಪಾಲ್ಗೊಂಡು ನೀಡಿದ ತಮ್ಮದೆ ಕೊಡುಗೆ ಸಂಭ್ರಮದ ಯಶಸ್ಸಿಗೆ ಮುನ್ನುಡಿ ಬರೆಯಿತು.
ಇದೆ ಮೊದಲಬಾರಿಗೆ ವಿದ್ಯಾದೇವತೆ ಶಾರದಾಂಬೆಯ ರಾಜಬೀದಿಯ ಭವ್ಯ ಮೆರವಣಿಗೆ ಸಂಭ್ರಮ.. ಮೆರುಗು ನೀಡಿದ ಜನಪದ ಕಲರವ.. ಎಲ್ಲ ಜನಪ್ರತಿನಿಧಿಗಳು ಒಂದಡೆ ಸೇರಿಸಿದ ಉದ್ಘಾಟನಾ ಸಂಭ್ರಮ.. ಸಂಗೀತಪ್ರೀಯರನ್ನು ಮೋಡಿ ಮಾಡಿದ ಶಶಿಕಾರಂತರ ಗಾನ ಸಂಭ್ರಮ.. ಸ್ಥಳೀಯ ಕಲಾವಿದ ಸೀತಾರಾಮ ಆಚಾರ್ ತಂಡದ ಜನಪದ ಗೀತ ಸಂಭ್ರಮ.. ಶಾಲಾ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ.. ಅಂತರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ್ ವಿಸ್ಮಯ ಜಾದೂ ಸಂಭ್ರಮ.. ಜನರ ಮೋಡಿ ಮಾಡಿದ್ದು ಸುಳ್ಳಲ್ಲ.
ಇನ್ನು ಮರುದಿನದ ನಮ್ಮೂರು ರಾಜಶೇಖರ್ ಸಾರಥ್ಯದ ನಮ್ಮೂರು ಸಂಭ್ರಮ.. ವಿದ್ಯಾರ್ಥಿ ಜೀವನದ ತಲ್ಲಣಗಳ ಗೋಷ್ಠಿ ಸಂಭ್ರಮ.. ವಿದುಷಿ ಅರುಂಧತಿ ತಂಡ ಪ್ರಸ್ತುತ ಪಡಿಸಿದ ವೈವಿಧ್ಯಮಯ ನೃತ್ಯ ಸಂಭ್ರಮ.. ಅಕ್ಷರ ಕಲಿಸಿದ ಗುರುಗಳಿಗೆ ಗುರುವಂದನೆ ಸಂಭ್ರಮ.. ಸಂಭ್ರಮದ ಕೊಡುಗೆ ನೀಡಿದವರ ಸನ್ಮಾನ ಸಂಭ್ರಮ.. ಮೂರುಮುತ್ತು ಖ್ಯಾತಿ ತಂಡದ ನಾಟಕ ಸಂಭ್ರಮ.. ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದು ಮಾತ್ರ ಸತ್ಯ.
ಇನ್ನು ಇಡೀ ಸಂಭ್ರಮಕ್ಕೆ ಕಳಶಪ್ರಾಯ ಎಂಬಂತೆ ರುಚಿಕಟ್ಟಾದ ವನಬೋಜನದ ಸಂಭ್ರಮ ಮಾತ್ರ ಜನರ ಮನಸ್ಸನ್ನು ಬಹುಕಾಲ ಆವರಿಸುವುದು ಖಂಡಿತ..
ಸಂಭ್ರಮದ ಯಶಸ್ಸಿಗೆ ನಾನು ಎಂಬುದು ನೆಪ.. ನಾವು ಎಂಬುದೇ ದಿಟ.. ಮಕ್ಕಳಿಲ್ಲದೆ ಸರ್ಕಾರಿ ಶಾಲೆ ಮುಚ್ಚುತ್ತಿರುವ ಇಂದಿನ ದಿನದಲ್ಲಿ ಸರ್ಕಾರಿ ಪುಟ್ಟ ಶಾಲೆಯೊಂದು ಸುವರ್ಣ ಸಂಭ್ರಮದ ಯಶೋಗಾಥೆ ಬರೆದಿದ್ದು ಮಾತ್ರ ಮಾದರಿ.. ಅಷ್ಟೆ ಅಲ್ಲ ಹಬ್ಬದಲ್ಲು ಇಷ್ಟೊಂದು ಸಡಗರ ಪಡದ ಸ್ಥಳೀಯರು ಹೊಸಬಟ್ಟೆ ತೊಟ್ಟು.. ಮನೆಯನ್ನು ತಳಿರು ತೋರಣದಿಂದ ಸಿಂಗರಿಸಿ.. ಶಾರದಾಂಬೆ ಸಾಗುವ ಹಾದಿಯಲ್ಲಿ ರಂಗೋಲಿಯ ಚಿತ್ತಾರ ಮೂಡಿಸಿ ಸಡಗರದಿಂದ ಪಾಲ್ಗೊಂಡಿದ್ದು ಮಾತ್ರ ಸರ್ಕಾರಿ ಶಾಲೆಯ ಮೇಲೆ ಅವರಿಗಿರುವ ಕಾಳಜಿಯನ್ನು ಬಿಂಬಿಸುವಂತಾಯಿತು.
ಸಂಭ್ರಮದ ಯಶಸ್ಸಿಗೆ ಕೈಜೊಡಿಸಿದ.. ಸಹಕರಿಸಿದ.. ಕೊಡುಗೆ ನೀಡಿದ ನಿಮಗೆಲ್ಲರಿಗು ಸಾಷ್ಟಾಂಗ ನಮಸ್ಕಾರಗಳು....
ರವಿ ಬಿದನೂರು